KCC,CCL ಬಳಿಕ ಮೈದಾನಕ್ಕಿಳಿದ ಕಿರುತೆರೆ ಕಲಾವಿದರು: ನಾಲ್ಕು ದಿನ ಕಲರ್‌ಫುಲ್ ಟಿಪಿಎಲ್

By ಫಿಲ್ಮಿಬೀಟ್ ಡೆಸ್ಕ್

ಕಳೆದೊಂದು ತಿಂಗಳಿನಿಂದ ಸ್ಯಾಂಡಲ್‌ವುಡ್‌ನಲ್ಲಿ ಕ್ರಿಕೆಟ್ ಪಂದ್ಯಾವಳಿಗಳು ನಡೆಯುತ್ತಿವೆ. ಕಿಚ್ಚ ಸುದೀಪ್ ನೇತೃತ್ವದಲ್ಲಿ ಕೆಸಿಸಿ ಪಂದ್ಯ ಇತ್ತೀಚೆಗಷ್ಟೇ ನಡೆದಿತ್ತು. ಈ ಪಂದ್ಯಕ್ಕಾಗಿ ಇಡೀ ಸ್ಯಾಂಡಲ್‌ವುಡ್ ಒಟ್ಟಿಗೆ ಸೇರಿತ್ತು. ಎರಡು ದಿನಗಳ ಕಾಲ ನಡೆದ ಪಂದ್ಯದಲ್ಲಿ ಕನ್ನಡದ ಕಲಾವಿದರು ಭಾಗವಹಿಸಿ ಎಂಜಾಯ್ ಮಾಡಿದ್ದರು.

ಕೆಸಿಸಿ ಜೊತೆಗೆ ಸೆಲೆಬ್ರೆಟಿ ಕ್ರಿಕೆಟ್ ಲೀಗ್(CCL) ಕೂಡ ಆರಂಭ ಆಗಿದೆ. ಸದ್ಯಕ್ಕೀಗ ಸೆಲೆಬ್ರೆಟಿ ಕ್ರಿಕೆಟ್ ಲೀಗ್ ಪಂದ್ಯಗಳು ವೀಕೆಂಡ್‌ನಲ್ಲಿ ಸಖತ್ ಮನರಂಜನೆಯನ್ನು ನೀಡುತ್ತಿವೆ. ಈ ಗ್ಯಾಪ್‌ನಲ್ಲಿಯೇ 'ಟೆಲಿವಿಷನ್ ಪ್ರೀಮಿಯರ್ ಲೀಗ್ ಸೀಸನ್ 2' ಆರಂಭ ಆಗಿದೆ. ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಫೋಟೊಗೆ ನಮಸ್ಕರಿಸಿ, ಆ ಬಳಿಕ ಪಂದ್ಯವನ್ನು ಆರಂಭ ಮಾಡಲಾಗಿದೆ.

Kannada Small Screen Artists Television Premier League Season 2 Launched

ಎನ್ 1 ಕ್ರಿಕೆಟ್ ಅಕಾಡೆಮಿ ಟಿಪಿಎಲ್ ಅನ್ನು ಕಳೆದ ವರ್ಷದಿಂದ ಆಯೋಜನೆ ಮಾಡುತ್ತಿದೆ. ಕಿರುತೆರೆ ತಾರೆಯರಿಗೆಂದೇ ಟೆಲಿವಿಷನ್ ಪ್ರೀಮಿಯರ್ ಲೀಗ್ ಶುರುಮಾಡಿದ್ದು, ಮೊದಲ ಸೀಸನ್ ಭರ್ಜರಿ ಪ್ರತಿಕ್ರಿಯೆ ಸಿಕ್ಕಿತ್ತು. ಹೀಗಾಗಿ ಸೀಸನ್ 2 ಅನ್ನು ಆರಂಭ ಮಾಡಿದೆ. ಈ ಹಿಂದೆ ಜೆರ್ಸಿ, ಟ್ರೋಫಿ ಅನಾವರಣ ಮಾಡಿ ಕಿರುತೆರೆ ವೀಕ್ಷಕರ ಗಮನ ಸೆಳೆದಿತ್ತು. ಇಂದಿನಿಂದ (ಮಾರ್ಚ್ 12) ಟಿಪಿಎಲ್ ಸೀಸನ್ -2 ಆರಂಭವಾಗಿದೆ. ಕಿರುತೆರೆ ಕಲಾವಿದರು ಮೈದಾನಕ್ಕಿಳಿದು ಎಂಜಾಯ್ ಮಾಡುತ್ತಿದ್ದಾರೆ.

ಎನ್ 1 ಕ್ರಿಕೆಟ್ ಅಕಾಡೆಮಿ ನಡೆಸುತ್ತಿರುವ ಟಿಪಿಎಲ್ ಪಂದ್ಯ ಅದ್ಧೂರಿಯಾಗಿ ಆರಂಭಗೊಂಡಿದೆ. ಇಂದಿನಿಂದ (ಮಾರ್ಚ್ 12) ಈ ಪಂದ್ಯಗಳು ಸುಮಾರು ನಾಲ್ಕು ದಿನಗಳ ಕಾಲ ಬೆಂಗಳೂರಿನ ಅಶೋಕ ರೈಸಿಂಗ್ ಸ್ಟಾರ್ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆಯಲಿದೆ. ಕಿರುತೆರೆ ಕಲಾವಿದರು ಒಂದಿಷ್ಟು ದಿನ ಅಭ್ಯಾಸ ನಡೆಸಿ ಅಖಾಡಕ್ಕೆ ಇಳಿಯುತ್ತಿದ್ದಾರೆ.

ಅಂದ್ಹಾಗೆ ಟಿಪಿಎಲ್‌ನಲ್ಲಿ 'ದಿ ಪರ್ಪಲ್ ರಾಕ್ ಪ್ಯಾಂಥರ್ಸ್','ಅಶ್ವಸೂರ್ಯ ರಿಯಾಲಿಟೀಸ್', 'ಎನಿಎಲ್ಪ್ ಟೂರ್ನಿವಲ್', 'ಇನ್ಸೇನ್ ಕ್ರಿಕೆಟ್ ಟೀಂ', 'ದಿ ಬುಲ್ ಸ್ಕ್ವಾಡ್', ಆಕ್ಸ್ ಫರ್ಡ್ ವಿನ್ ಟೀಂ' ಒಟ್ಟು ಆರು ತಂಡ ಅಖಾಡಕ್ಕೆ ಇಳಿಯುತ್ತಿವೆ. ಲೂಸ್ ಮಾದ ಯೋಗಿ, ಮಂಜು ಪಾವಗಡ, ಹರ್ಷ ಸಿ.ಎಂ ಗೌಡ, ರವಿಶಂಕರ್ ಗೌಡ, ಶರತ್ ಪದ್ಮನಾಭ್, ಸಾಗರ್ ಬಿಳಿಗೌಡ ಸೇರಿದಂತೆ ತಂಡದ ನಾಯಕರಾಗಿ ಮೈದಾನಕ್ಕೆ ಇಳಿದಿದ್ದಾರೆ.

Kannada Small Screen Artists Television Premier League Season 2 Launched

ಇಡೀ ಕಿರುತೆರೆ ಕಲಾವಿದರು ಅಶೋಕ ರೈಸಿಂಗ್ ಸ್ಟಾರ್ ಕ್ರಿಕೆಟ್ ಗ್ರೌಂಡ್‌ನಲ್ಲಿ ಬೀಡುಬಿಟ್ಟಿದೆ. ಇನ್ನು ಮೂರು ದಿನಗಳ ಕಾಲ ಮೈದಾನದಲ್ಲಿ ಕಲರ್‌ಫುಲ್ ಪಂದ್ಯಗಳು ನಡೆಯಲಿವೆ. ಕ್ರಿಕೆಟ್ ಜೊತೆ ಜೊತೆಗೆ ಮನರಂಜನೆ ಕೂಡ ನಡೆಯಲಿದ್ದು, ಪಂದ್ಯ ನೋಡಲು ಬರುವ ವೀಕ್ಷಕರಿಗೆ ಸಖತ್ ಮನರಂಜನೆ ಸಿಗೋದು ಗ್ಯಾರಂಟಿ.

More from Filmibeat

English summary
Kannada Small Screen Artists Television Premier League Season 2 Launched , Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X