ನಡೆಯದ ಕರ್ಣನ ಕರಾಮತ್ತು, ಅಮೃತಧಾರೆಯ ರೋಚಕ ತಿರುವುಗಳಿಗೆ ಮನ ಸೋತ ಕನ್ನಡಿಗರು

ಪ್ರತಿಯೊಂದು ಕ್ಷೇತ್ರದಲ್ಲಿಯೂ ಸ್ಫರ್ಧೆ ಇದ್ದೇ ಇರುತ್ತೆ. ಕಿರುತೆರೆ ಕೂಡ ಇದರಿಂದ ಹೊರತಾಗಿಲ್ಲ. ಪ್ರತಿ ವಾರ ಇಲ್ಲಿಯೂ ಕೂಡ ಹಾವು ಏಣಿಯ ಆಟ ನಡೆಯುತ್ತಲೇ ಇರುತ್ತೆ. ಈ ವಾರ ಮೇಲೆ ಇರುವ ಧಾರಾವಾಹಿ ಮುಂದಿನ ವಾರ ಪ್ರೇಕ್ಷಕರ ಅವಕೃಪೆಗೆ ಪಾತ್ರವಾದರೆ.. ನಿರಾಸೆ ಮಾಡಿದ ಧಾರಾವಾಹಿಯಲ್ಲಿ ಏಕಾಏಕಿ ಬದಲಾವಣೆಯಾಗುತ್ತೆ. ಹಣೆಬರಹ ಬದಲಾಗುತ್ತೆ. ಎಲ್ಲವೂ ಇಲ್ಲಿ ಅನಿಶ್ಚಿತತೆ.

ಪ್ರತಿ ವಾರ ಹೀಗೆ ಇರುತ್ತೆ ಎಂದು ಹೇಳಲು ಸಾಧ್ಯ ಇಲ್ಲ. ಈ ಧಾರಾವಾಹಿಯೇ ಮೊದಲ ಸ್ಥಾನ ಬರಬಹುದು ಎಂದು ನಿಖರವಾಗಿ ಹೇಳಲು ಆಗುವುದಿಲ್ಲ. ಹಿಂದೆಯೆಲ್ಲ ಪ್ರೇಕ್ಷಕರಿಂದ ಕಡೆಗಣಿಸಲಾದ ಧಾರಾವಾಹಿ ಕೆಲವೊಮ್ಮೆ ಅಚ್ಚರಿ ಎಂಬಂತೆ ಅದೇ ಪ್ರೇಕ್ಷಕರ ಹೃದಯವನ್ನು ಗೆಲ್ಲುತ್ತೆ. ಮೊದಲನೇ ಸ್ಥಾನವನ್ನು ಕೂಡ ಅಲಂಕರಿಸುತ್ತೆ. ಉದಾಹರಣೆಗೆ ''ಅಮೃತಧಾರೆ''.

kannada-trp-war-amruthadhare-topples-all-claims-no-1-spot-in-week-38

ಹೌದು, ''ಅಮೃತಧಾರೆ'' ಕನ್ನಡಿಗರ ಸದ್ಯದ ಮೊದಲ ಆಯ್ಕೆ. ಕಳೆದ ಹಲವು ದಿನಗಳಿಂದ ದಿನಕ್ಕೊಂದು ತಿರುವು ಪಡೆಯುತ್ತಿರುವ ಈ ಧಾರಾವಾಹಿಯನ್ನು ಪ್ರೇಕ್ಷಕರು ಮೆಚ್ಚಿದ್ದಾರೆ. ತಮ್ಮೆಲ್ಲಾ ಕೆಲಸವನ್ನು ಮರೆತು ಗೌತಮ್ ಮತ್ತು ಭೂಮಿಕಾ ಅಮೃತ ಘಳಿಗೆಗೆ ಕಾದು ಕುಳಿತಿದ್ದಾರೆ. ದಿನ ನಿತ್ಯ ತಪ್ಪದೇ ಈ ಕಾರ್ಯಕ್ರಮವನ್ನು ನೋಡುತ್ತಿದ್ದಾರೆ.

ಇದಕ್ಕೆ ಪುರಾವೆ ಎನ್ನುವಂತೆ 38ನೇ ವಾರದ ಟಿಆರ್​ಪಿಯಲ್ಲಿ ''ಅಮೃತಧಾರೆ'' ಧಾರಾವಾಹಿ ಸೀದಾ ಮೊದಲನೇ ಸ್ಥಾನಕ್ಕೇರಿದೆ. ಅರ್ಬನ್ ಮತ್ತು ರೂರಲ್ ಮಾರುಕಟ್ಟೆಯಲ್ಲಿ 9.4 ಟಿವಿಆರ್ ಪಡೆದಿರುವ ''ಅಮೃತಧಾರೆ'' ಈ ವಾರು ಕರುನಾಡು ಮೆಚ್ಚಿದ ನಂಬರ್ ಒನ್ ಧಾರಾವಾಹಿ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.

ಇನ್ನೂ ಮೊದಲೆಲ್ಲಾ ''ಅಣ್ಣಯ್ಯ''ನ ಅಬ್ಬರ ಇತ್ತು. ಆದರೆ.. ಅದ್ಯಾಕೋ ಕೆಲ ದಿನಗಳಿಂದ ''ಕರ್ಣ''ನ ಕರಾಮತ್ತು ''ಅಣ್ಣಯ್ಯ'' ಕಳೆಗುಂದಿತ್ತು. ಆದರೆ ಈ ಬಾರಿ ''ಅಮೃತಧಾರೆ'' ನಂತರದ ಸ್ಥಾನ ಅಂದರೆ ಎರಡನೇ ಸ್ಥಾನ ''ಅಣ್ಣಯ್ಯ''ನ ಪಾಲಾಗಿದೆ. ''ಕರ್ಣ''ನಿಗೆ ಈ ಮೂಲಕ ಆಘಾತವೂ ಆಗಿದೆ.

kannada-trp-war-amruthadhare-topples-all-claims-no-1-spot-in-week-38

ಹೌದು, ಅಸಲಿಗೆ ''ಕರ್ಣ'' ಶುರುವಾದ ದಿನದಿಂದಲೇ ಕನ್ನಡಿಗರ ಹೃದಯ ಗೆದ್ದಿದ್ದ. ಕರ್ಣ.. ನಿತ್ಯಾ.. ನಿಧಿಯ ಕಥೆ ಪ್ರೇಕ್ಷಕರಿಗೆ ಇಷ್ಟವಾಗಿತ್ತು. ಇದಕ್ಕೆ ಕೈಗನ್ನಡಿ ಎಂಬಂತೆ ಒಂದೆರಡು ವಾರ ಅಲ್ಲ ಶುರುವಾದ ಆರಂಭದ ಕೆಲ ವಾರ ''ಕರ್ಣ'' ಮೊದಲ ಸ್ಥಾನದಲ್ಲಿದ್ದ. ಕಿರುತೆರೆಯ ಅಧಿಪತಿಯಾಗಿದ್ದ.

ಆದರೆ ಈ ವಾರ ''ಕರ್ಣ'' ನಿಂತ ನೆಲ ಕುಸಿದಿದೆ. ಪ್ರೇಕ್ಷಕರ ಆಸಕ್ತಿ ಕಡಿಮೆಯಾಗಿದೆ. ''ಅಮೃತಧಾರೆ''ಗೆ ಮೊದಲ ಸ್ಥಾನ ಮತ್ತು ''ಅಣ್ಣಯ್ಯ''ಗೆ ಎರಡನೇ ಸ್ಥಾನ ಬಿಟ್ಟು ಕೊಟ್ಟಿರುವ ''ಕರ್ಣ'' ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟಿದ್ದಾನೆ. ಇನ್ನು ನಾಲ್ಕನೇ ಸ್ಥಾನ ''ಬ್ರಹ್ಮಗಂಟು'' ಧಾರಾವಾಹಿಯ ಪಾಲಾದರೆ ''ಲಕ್ಷ್ಮೀ ನಿವಾಸ'' ಧಾರಾವಾಹಿಗೆ 7.6 ಟಿವಿಆರ್ ಸಿಕ್ಕಿದೆ. ಆ ನಂತರದ ಸ್ಥಾನಗಳು ''ನಾ ನಿನ್ನ ಬಿಡಲಾರೆ'' ಮತ್ತು ''ಪುಟ್ಟಕ್ಕನ ಮಕ್ಕಳು'' ಧಾರಾವಾಹಿಯ ಪಾಲಾಗಿವೆ.

ಇನ್ನು ಕಲರ್ಸ್ ಕನ್ನಡದಲ್ಲಿ '' ನಂದಗೋಕುಲ'' ಧಾರಾವಾಹಿ ಟಾಪ್​ನಲ್ಲಿದೆ. ಈ ಧಾರಾವಾಹಿಗೆ 4.7 ಟಿವಿಆರ್ ಲಭಿಸಿದೆ. ತಿಂಗಳ ಹಿಂದೆ ಶುರುವಾದ ''ಪ್ರೇಮಕಾವ್ಯ'' ಧಾರಾವಾಹಿ ''ನಂದಗೋಕುಲ''ಗೆ ತೀವೃ ಸ್ಫರ್ಧೆಯನ್ನೊಡ್ಡುತ್ತಿದೆ. ನಂ 1 ಸ್ಥಾನ ಹಂಚಿಕೊಂಡಿದೆ. ತ್ರಿವಿಕ್ರಮ್, ಪ್ರತಿಮಾ ಠಾಕೂರ್, ಮುನಿ, ಹರಿಣಿ, ಸಂಧ್ಯಾ ಗೌಡ, ಸೌಂದರ್ಯ ಗೌಡ ಅಭಿನಯದ ''ಮುದ್ದುಸೊಸೆ'' ಎರಡನೇ ಸ್ಥಾನದಲ್ಲಿದ್ದರೆ ರಾಧಾ ಭಗವತಿ ಅಭಿನಯದ '' ಭಾರ್ಗವಿ ಎಲ್​.ಎಲ್​.ಬಿ'' ಮತ್ತು ಸುಷ್ಮಾ ಕೆ ರಾವ್, ಸುದರ್ಶನ್ ರಂಗಪ್ರಸಾದ್, ಪದ್ಮಜಾ ರಾವ್, ಮುಂತಾದವರು ಅಭಿನಯಿಸಿರುವ ''ಭಾಗ್ಯಲಕ್ಷ್ಮೀ'' ಧಾರಾವಾಹಿಗಳು ನಂತರದ ಸ್ಥಾನಗಳಲ್ಲಿವೆ.

More from Filmibeat

English summary
TRP SHOCKER! See which Kannada serial lost the crown as Amruthadhaare or Annayya took the top rank in the intense Week 38 ratings battle. Full list inside!
Read more about: ಟಿವಿ trp zee kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X