ರಗಡ್ ಲುಕ್ ಕೊಟ್ಟು ಕಿರುತೆರೆಯಲ್ಲಿ ಮಿಂಚುತ್ತಿರೋ ಅಭಿಷೇಕ್ ಶ್ರೀಕಾಂತ್ ಹಿನ್ನೆಲೆಯೇನು?
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಲಕ್ಷಣ' ಧಾರಾವಾಹಿಯ ಮೌರ್ಯ ಪಾತ್ರಧಾರಿ ಕನ್ನಡ ಪ್ರೇಕ್ಷಕರ ಮನವನ್ನು ಈಗಾಗಲೇ ಗೆದ್ದಿದ್ದಾರೆ. ನಾಯಕನಿಗೆ ಸಮನಾಗಿ ಮಿಂಚುತ್ತಿರುವ ಈ ನಟ ಕನ್ನಡ ಕಿರುತೆರೆಗೆ ಹೊಸಬರೇನಲ್ಲ.
ಅಂದ ಹಾಗೆ 'ಲಕ್ಷಣ' ಧಾರಾವಾಹಿಯಲ್ಲಿ ಮೌರ್ಯ ಪಾತ್ರವನ್ನು ನಿರ್ವಹಿಸುತ್ತಿರುವ ಈ ನಟನ ಹೆಸರು ಅಭಿಷೇಕ್ ಶ್ರೀಕಾಂತ್. ಈ ಹಿಂದೆಯೂ ಅಭಿಷೇಕ್ ಕನ್ನಡ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದರು. ಅವರು ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ "ಯಜಮಾನಿ" ಎನ್ನುವ ಧಾರಾವಾಹಿಯಲ್ಲಿ ನಟಿಸಿದ್ದರು.

ಉಷಾಭಂಡಾರಿ ಗರಡಿಯಲ್ಲಿ ಪಳಗಿದ ಹುಡುಗ
ನಟನೆಗೆ ಆಗಮಿಸುವ ಮೊದಲೇ ಶ್ರೀಕಾಂತ್ ನಟಿಯಾದ ಉಷಾ ಭಂಡಾರಿ ಅವರ ಬಳಿ ನಟನೆಯ ಕೋರ್ಸನ್ನು ಪೂರ್ಣಗೊಳಿಸಿದ್ದರು.ಅಲ್ಲದೆ ಕೆಲವು ಸಿನಿಮಾಗಳಲ್ಲೂ ಶ್ರೀಕಾಂತ್ ಕಾಣಿಸಿಕೊಂಡಿದ್ದಾರೆ. ವಸಿಷ್ಠ ಎನ್ ಸಿಂಹ ನಟನೆಯ 'ತಲ್ವಾರ್‌ಪೇಟೆ' ಸಿನಿಮಾದಲ್ಲಿ ಅಭಿಷೇಕ್ ಶ್ರೀಕಾಂತ್ ನಟಿಸಿದ್ದಾರೆ. ಇದರೊಂದಿಗೆ 'ಕೆಟಿಎಂ' ಎನ್ನುವ ಕನ್ನಡ ಸಿನಿಮಾದಲ್ಲೂ ಶ್ರೀಕಾಂತ್ ಬಣ್ಣ ಹಚ್ಚಿದ್ದಾರೆ. ಇವರಿಗೆ ಫಿಟ್ನೆಸ್ ಕ್ರೇಜ್ ಕೂಡ ತುಂಬಾ ಇದೆ. ಹೌದು, ಫಿಟ್‌ನೆಸ್‌ಗೆ ಸಿಕ್ಕಾಪಟ್ಟೆ ಮಹತ್ವ ಕೊಡುವ ನಟ. ಈ ಹಿಂದೆ ಸಿಕ್ಸ್ ಪ್ಯಾಕ್ ಮಾಡಿ ಬೇರ್ ಬಾಡಿ ಫೋಟೋಶೂಟ್ ಕೂಡ ಮಾಡಿಸಿಕೊಂಡಿದ್ದರು.
ಪ್ರಯಾಣವೆಂದರೆ ಅಭಿಷೇಕ್‌ಗೆ ತುಂಬಾ ಇಷ್ಟ
ಪ್ರಯಾಣವೆಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಅವರಲ್ಲಿ ಶ್ರೀಕಾಂತ್ ಕೂಡ ಒಬ್ಬರು. ಆಗಾಗ ಸೋಲೋ ಟ್ರಿಪ್ ಮಾಡುತ್ತಾ, ನಟನೆಯನ್ನೂ ಆಸ್ವಾದಿಸುತ್ತಾ ಸಖತ್ ಬಿಂದಾಸ್ ಆಗಿದ್ದಾರೆ. ಪ್ರವಾಸವನ್ನು ಇಷ್ಟ ಪಡುವ ಇವರಿಗೆ ಬೈಕ್‌ಗಳೆಂದರೂ ಪಂಚಪ್ರಾಣ. ಹಾಗಾಗಿ ಆಗಾಗ ರೈಡ್‌ಗೆ ಬೈಕುಗಳನ್ನು ಹೆಚ್ಚಾಗಿ ಉಪಯೋಗಿಸುತ್ತಾರೆ.

ಡ್ಯಾನ್ಸರ್ ಕೂಡಾ ಹೌದು
ಅಭಿಷೇಕ್ ಶ್ರೀಕಾಂತ್‌ಗೆ ಡ್ಯಾನ್ಸ್ ಅಂದರೂ ಪ್ರೀತಿ. ಸಮಯ ಸಿಕ್ಕಾಗಲೆಲ್ಲಾ ಡ್ಯಾನ್ಸ್ ಕ್ಲಾಸ್ ಅಟೆಂಡ್ ಮಾಡುವ ಇವರು ಸೂಪರ್ ಡ್ಯಾನ್ಸರ್ ಕೂಡ ಹೌದು. ಶ್ರೀಕಾಂತ್ ಆಗಾಗ ವಿಭಿನ್ನ ರೀತಿಯಲ್ಲಿ ಫೋಟೋಶೂಟ್ ಮಾಡಿಸಿಕೊಳ್ಳುವುದು ಕೂಡ ಅದೆಷ್ಟೋ ಜನರ ಮೆಚ್ಚುಗೆಯನ್ನು ಪಡೆದುಕೊಳ್ಳುತ್ತದೆ.
ನೆಗೆಟಿವ್ ಪಾತ್ರದಿಂದ ಪಾಸಿಟಿವ್‌ಗೆ
ಇನ್ನು ಸೀರಿಯಲ್ ವಿಷಯಕ್ಕೆ ಬರುವುದಾದರೆ 'ಲಕ್ಷಣ' ಧಾರಾವಾಹಿಯಲ್ಲಿ ಮೊದಲಿಗೆ ನೆಗೆಟಿವ್ ರೋಲ್ ಮಾಡಿದ್ದ ನಟ, ಈಗ ಪಾಸಿಟಿವ್ ಪಾತ್ರವನ್ನು ನಿಭಾಯಿಸುತ್ತಿದ್ದಾರೆ. ಮೌರ್ಯ ಪಾತ್ರದ ಎಂಟ್ರಿಯೇ ಟ್ರೆಂಡಿಂಗ್‌ನಲ್ಲಿತ್ತು. ಪ್ರೇಕ್ಷಕರಿಗೆ ಕುತೂಹಲ ಮೂಡಿಸಿದ್ದ ಇವರ ಪಾತ್ರ ಇಂದಿಗೂ ಶೈನಿಂಗ್ ಆಗುತ್ತಲೇ ಇದೆ.
ರಗಡ್ ಲುಕ್ ಮೂಲಕ ಫೇಮಸ್ಸು!
ಅಲ್ಲದೆ ಲಕ್ಷಣ ಧಾರಾವಾಹಿಯಲ್ಲಿ ಅಭಿಷೇಕ್ ಶ್ರೀಕಾಂತ್ ಅವರು ಧರಿಸುತ್ತಿರುವ ಕಾಸ್ಟ್ಯೂಮ್ ಬಗ್ಗೆಯೂ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಅಭಿಷೇಕ್ ಶ್ರೀಕಾಂತ್ ರಗಡ್ ಲುಕ್‌ನಲ್ಲಿ ಕಾಣಿಸಿಕೊಳ್ಳುವುದು ಅನೇಕರಿಗೆ ಇಷ್ಟವೇ. ಆದರೆ, ಪಾಸಿಟಿವ್ ಪಾತ್ರದ ಮೂಲಕವೂ ವೀಕ್ಷಕರನ್ನು ಮೆಚ್ಚಿಸಲಿ ಅನ್ನೋ ಆಸೆ ಕೂಡ ಇದೆ.


Click it and Unblock the Notifications











