ಮಗಳ ಕಿವಿ ಚುಚ್ಚುವ ವೇಳೆ ಭಾವುಕರಾದ ನಟ ಚಂದು ಗೌಡ

By ಪ್ರಿಯಾ ದೊರೆ

ನಟ ಚಂದು ಅವರಿಗೆ ನಟನೆ ಎಂದರೆ ತುಂಬಾ ಇಷ್ಟ ಹಾಗಾಗಿ ಗೃಹಲಕ್ಷ್ಮೀ ಧಾರಾವಾಹಿ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟರು. ಅಲ್ಲಿಂದ ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಚಂದು ಪಾತ್ರದಲ್ಲಿ ಮಿಂಚಿದರು. ಇದಾದ ಬಳಿಕ ಒಂದೊಂದೇ ಸೀರಿಯಲ್ ಗಳಲ್ಲಿ ಕಾಣಿಸಿಕೊಂಡ ಚಂದು ಅವರು, ಪರಭಾಷೆಗೂ ಪಾದಾರ್ಪಣೆ ಮಾಡಿದರು. ಇದಷ್ಟೇ ಅಲ್ಲದೇ, ಸಿನಿಮಾಗಳಲ್ಲೂ ಕೂಡ ಚಂದು ಅವರು ನಟಿಸಿದ್ದಾರೆ.

ಸದ್ಯ ಕನ್ನಡ ಕಿರುತೆರೆಯಲ್ಲಿ ಬ್ಯುಸಿಯಾಗಿರುವ ಚಂದು ಅವರು ಕುಟುಂಬಕ್ಕೆ ಹೆಚ್ಚು ಸಮಯವನ್ನು ಕೊಡುತ್ತಿದ್ದಾರೆ. ಮುದ್ದಾದ ಮಗಳ ಜೊತೆಗೆ ಕಾಲ ಕಳೆಯುತ್ತಿರುತ್ತಾರೆ. ನಟನೆ ಬಗ್ಗೆ ಚಿಕ್ಕ ವಯಸ್ಸಿನಿಂದಲೂ ಆಸಕ್ತಿ ಹೊಂದಿದ್ದ ಚಂದು ಗೌಡ 'ಗೃಹಲಕ್ಷ್ಮೀ' ಧಾರಾವಾಹಿಯಲ್ಲಿ ಮನೆಯ ಯಜಮಾನನಾಗಿ, ಮಡದಿಯ ಮುದ್ದಿನ ಪತಿಯಾಗಿ ಎಲ್ಲರ ಗಮನ ಸೆಳೆದಿದ್ದರು. ಅದಾದ ಬಳಿಕ 'ಲಕ್ಷ್ಮೀ ಬಾರಮ್ಮ' ಧಾರಾವಾಹಿ ಕೂಡ ಅಷ್ಟೇ ಖ್ಯಾತಿಯನ್ನು ತಂದುಕೊಟ್ಟಿತ್ತು.

Kannada Tv Actor Chandu Gowda spends quality time with daughter

'ತ್ರಿನಯನಿ' ಧಾರಾವಾಹಿಯಲ್ಲಿ ಚಂದು ಲೀಡ್ ರೋಲ್‌ನಲ್ಲಿ ಕಾಣಿಸಿಕೊಂಡರು. ಇದೀಗ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಮೂಡಿ ಬರುತ್ತಿರುವ 'ಕಥೆಯೊಂದು ಶುರುವಾಗಿದೆ' ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಇದರಲ್ಲಿ ಪ್ರಮುಖ ಪಾತ್ರವಾದ ಯುವರಾಜನ ಪಾತ್ರವೂ ಕಾರಾಣಾಂತರಗಳಿಂದ ಬದಲಾಗಿದ್ದು, ಈ ಪಾತ್ರಕ್ಕೆ ಈಗ ಚಂದು ಅವರು ಜೀವ ತುಂಬುತ್ತಿದ್ದಾರೆ.

ದರ್ಶನ್ ಸಿನಿಮಾದಲ್ಲಿ ನಟನೆ

ಕಿರುತೆರೆ ಜೊತೆಗೆ ಸಿನಿಮಾಗಳಲ್ಲೂ ಚಂದು ಮಿಂಚಿದ್ದಾರೆ. ಬೇರೆ ಭಾಷೆಯಲ್ಲೂ ಬೇಡಿಕೆಯ ನಟನಾಗಿ ಗುರುತಿಸಿಕೊಂಡಿದ್ದಾರೆ. ಅಲ್ಲದೆ ಚಾಟ್ ಕಾರ್ನರ್ ಎಂಬ ಟಾಕ್ ಶೋ ಮೂಲಕ ನಿರೂಪಕರಾಗಿ ಕಾಣಿಸಿಕೊಂಡಿದ್ದರು. ಧಾರಾವಾಹಿ ಮತ್ತು ಸಿನಿಮಾ ಎರಡನ್ನು ಬ್ಯಾಲೆನ್ಸ್ ಮಾಡುತ್ತಿದ್ದಾರೆ. ಅಲ್ಲದೇ, ದರ್ಶನ್ ನಟನೆಯ 'ರಾಬರ್ಟ್' ಸಿನಿಮಾದಲ್ಲಿ ಚಂದು ಅಭಿನಯಿಸಿದ್ದರು. ಮೊದಲ ಬಾರಿಗೆ ಚಂದು ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇನ್ನೂ 'ಕುಷ್ಕ', 'ಜಾಕ್ ಪಾಟ್', 'ಕಮರೊಟ್ಟು ಚಕ್ ಪೋಸ್ಟ್', 'ಶ್ರೀ' ಸೇರಿದಂತೆ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಬೈಕ್ ರೇಸ್ ಎಂದರೆ ಕ್ರೇಜ್

ಸಿನಿಮಾಗಳಲ್ಲಿ ನಟಿಸುವ ಆಫರ್‌ಗಳು ಬರುತ್ತಿವೆ. ಆದರೆ ಚಂದುಗೆ ಸಿನಿಮಾಗಿಂತಲೂ ಕಿರುತೆರೆಯಲ್ಲಿರುವುದೇ ಇಷ್ಟವಂತೆ. ಇನ್ನು ಚಂದು ಅವರಿಗೆ ನಟನೆಗೆ ಬರುವುದಕ್ಕೂ ಮುಂಚೆಯಿಂದಲೂ ಬೈಕ್ ಕ್ರೇಜ್. ರೇಸ್‌ಗಳಲ್ಲಿ ಭಾಗಿಯಾಗುತ್ತಿರುತ್ತಾರೆ. ಹಾರ್ಡ್ ಕೋರ್ ಬೈಕ್ ರೇಸರ್ ಕೂಡ. ಆಗಾಗ ಬೈಕ್ ರೇಸ್‌ಗಳಲ್ಲಿ ಭಾಗವಹಿಸುತ್ತಾರೆ. ಅವರ ಬಳಿ ಬೈಕು, ಕಾರುಗಳೇ ಹೆಚ್ಚಿವೆ. ಚಂದು ಗೌಡ ಅವರು ಬಹುಕಾಲದ ಗೆಳತಿ ಶಾಲಿನಿ ಜೊತೆಗೆ ವಿವಾಹವಾಗಿದ್ದಾರೆ. ಕಳೆದ ವರ್ಷ ಶಾಲಿನಿ ಅವರು ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.

Kannada Tv Actor Chandu Gowda spends quality time with daughter

ಮಗಳಿಗೆ ಕಿವಿ ಚುಚ್ಚಿಸುವ ಶಾಸ್ತ್ರ

ಇದೀಗ ಮಗುವಿಗೆ ಕಿವಿ ಚುಚ್ಚಿಸುವ ಶಾಸ್ತ್ರ ನಡೆದಿದೆ. ಚಂದು ಅವರು ತಮ್ಮ ಮಗಳಿಗೆ ಒಂಭತ್ತು ತಿಂಗಳಾದ ಕಾರಣ ಕಿವಿ ಚುಚ್ಚಿಸಿದ್ದಾರೆ. ತೊಡೆಯ ಮೇಲೆ ಕೂರಿಸಿಕೊಂಡು ಮಗುವಿಗೆ ಕಿವಿ ಚುಚ್ಚಿಸಿದ್ದು, ಚಂದು ಅವರು ತಮ್ಮ ಕಿವಿಯನ್ನೇ ಚುಚ್ಚಿಸಿಕೊಂಡಂತೆ ಕಣ್ಣು ಮುಚ್ಚಿ ಮುದುರಿಕೊಂಡಿದ್ದಾರೆ. ಈ ವೀಡಿಯೋವನ್ನು ಇನ್ ಸ್ಟಾಗ್ರಾಂ ಪೇಜ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ.

ಈ ವೀಡಿಯೋ ಈಗ ವೈರಲ್ ಆಗಿದೆ. ಇನ್ನು ಚಂದು ಅವರು ತಮ್ಮ ಬ್ಯುಸಿ ಶೆಡ್ಯೂಲ್‌ ನಡುವೆಯೂ ಕುಟುಂಬಕ್ಕೆ ಸಾಕಷ್ಟು ಸಮಯ ಕೊಡುತ್ತಿರುತ್ತಾರೆ. ಇನ್ನು ಮಗಳ ಮೇಲೆ ಬಹಳಷ್ಟು ಪ್ರೀತಿಯನ್ನು ಇಟ್ಟುಕೊಂಡಿದ್ದಾರೆ.

More from Filmibeat

English summary
Kannada Tv Actor Chandu Gowda spends quality time with daughter. he shares video of daughter's ear piercing in instagram. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X