Neha Gowda & Shastri: ರಿಯಲ್ ಲೈಫ್‌ನಲ್ಲೂ ನೇಹಾ-ಶಾಸ್ತ್ರೀ ಅಣ್ಣ-ತಂಗಿ; ಫೋಟೋ ನೋಡಿದವರು ಏನಂದ್ರು?
ಕಿರುತೆರೆ ನಟಿ ನೇಹಾ ಗೌಡ ಈಗ ತುಂಬು ಗರ್ಭಿಣಿ. ಕೆಲವೇ ದಿನಗಳಲ್ಲಿ ಆಕೆಗೆ ಡೆಲಿವರಿಯಾಗಲಿದೆ. ಇತ್ತೀಚೆಗೆ ಸೀಮಂತ ಶಾಸ್ತ್ರ ನಡೆದಿದೆ. ನೇಹಾ ಕಿರುತೆರೆ ನಟ-ನಟಿಯರ ಜೊತೆಗೂ ಒಳ್ಳೆಯ ಬಾಂಧವ್ಯ ಹೊಂದಿದ್ದಾರೆ. ಹೀಗಾಗಿಯೇ ಆಕೆಗೆ ಹರಸಲು ಹಲವರು ಬಂದಿದ್ದರು. ನೇಹಾ ಜೊತೆಗಿರುವ ನಂಟು ಫೋಟೋದಲ್ಲಿ ಎದ್ದು ಕಾಣುತ್ತಿತ್ತು.
ಮನೆಯಲ್ಲಿ ಸಾಂಪ್ರಾದಾಯಿಕ ಸೀಮಂತ ಮಾಡಿ, ಎಲ್ಲರನ್ನು ಕರೆದಿದ್ದರು. ತುಂಬು ಗರ್ಭಿಣಿಯನ್ನು ಎಲ್ಲರು ಹರಸಿ, ಹೆರಿಗೆ ಸುಸೂತ್ರವಾಗಲೆಂದು ಹಾರೈಸಿದರು. ಇದರ ನಡುವೆ ಫೋಟೋ ಒಂದು ಜನಮನ್ನಣೆ ಗಳಿಸಿದೆ. ಅದುವೇ ಗೋಪಾಲ ಹಾಗೂ ಗಿರಿಜಾಳ ಫೋಟೋ. ಇದ್ದರೆ ಹಿಂಗಿರಬೇಕು ಅಂತಿದ್ದಾರೆ.

ನೇಹಾ ಸೀಮಂತಕ್ಕೆ ಹೋಗಿದ್ದ ಶಾಸ್ತ್ರಿ
ನೇಹಾ ಗೌಡ ಸೀಮಂತ ಶಾಸ್ತ್ರಕ್ಕೆ ಅವರ ಜೊತೆಗೆ ಕೆಲಸ ಮಾಡಿದ, ಒಳ್ಳೆಯ ಬಾಂಧವ್ಯ ಇರುವವರೆಲ್ಲರೂ ಬಂದಿದ್ದರು. ಹಾಗೇ ಶಾಸ್ತ್ರಿ ಕೂಡ ಬಂದಿದ್ದರು. ನೇಹಾ ಹೊಟ್ಟೆಯಲ್ಲಿರುವ ಮಗುವಿನ ಶಬ್ದವನ್ನು ಕೇಳಿಸಿಕೊಳ್ಳುವ ರೀತಿಯಲ್ಲಿ ಫೋಟೋ ಹಂಚಿಕೊಂಡಿದ್ದಾರೆ. ತಂಗಿ ಗರ್ಭೀಣಿ ಆಗಿದ್ದು, ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಫೋಟೋ ಎಲ್ಲರ ಮೆಚ್ಚಗೆಗೆ ಪಾತ್ರವಾಗಿದೆ. ನೇಹಾ ಸೀಮಂತಕ್ಕೆ ಸ್ವಲ್ಪ ತಡವಾಗಿ ಹೋಗಿದ್ದರೋ ಏನೋ. ಕಾರ್ಯಕ್ರಮದಲ್ಲಿ ಎಲ್ಲಿಯೂ ಶಾಸ್ತ್ರಿ ಕಂಡಿರಲಿಲ್ಲ.
ಫೋಟೋ ನೋಡಿ ಎಲ್ಲರಿಂದ ಮೆಚ್ಚುಗೆ
ಶಾಸ್ತ್ರಿ ಅವರು ನೇಹಾ ಜೊತೆಗೆ ತೆಗೆಸಿಕೊಂಡ ಈ ಫೋಟೋವನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಫೋಟೋಗೆ ಸಾಕಷ್ಟು ಪಾಸಿಟಿವ್ ಕಮೆಂಟ್ಸ್ ಬಂದಿವೆ. ಶಾಸ್ತ್ರಿ ಹಾಗೂ ನೇಹಾ ಫೋಟೋಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿದೆ. ಆರಾರಿರಾರೊ ರಾರೋ.. ರಾರೋ ಹಾಡಿನ್ನು ಮಿಕ್ಸ್ ಮಾಡಲಾಗಿದೆ. ಅಣ್ಣ ತಂಗಿಯ ಬಾಂಧವ್ಯ ಅದ್ಭುತವಾಗಿದೆ. ಈ ಬಾಂಧವ್ಯ ಹೀಗೆ ಮುಂದುವರೆಯಲಿ ಎಂದು ಕಮೆಂಟ್ಸ್ ಹಾಕಿದ್ದಾರೆ. ತೆರೆ ಮೇಲಿನ ಬಾಂಧವ್ಯವನ್ನು ಹಾಗೇಯೇ ಉಳಿಸಿಕೊಳ್ಳುವುದು ನಿಜಕ್ಕೂ ಸವಾಲಿನ ಕೆಲಸವೇ ಸರಿ. ಆದರೆ ನೇಹಾ ಆಲ್ಮೋಸ್ಟ್ ಎಲ್ಲರ ಜೊತೆಗೂ ಒಳ್ಳೆಯ ಒಡನಾಟ ಇಟ್ಟುಕೊಂಡಿದ್ದಾರೆ.
ನಮ್ಮ ಲಚ್ಚಿಯ ಅಣ್ಣ ತಂಗಿ
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಈ ಹಿಂದೆ 'ನಮ್ಮ ಲಚ್ಚಿ' ಎಂಬ ಧಾರಾವಾಹಿ ಪ್ರಸಾರವಾಗಿತ್ತು. ಈ ಧಾರಾವಾಹಿಯಲ್ಲಿ ಗಿರಿಜಾ ಮುಖ್ಯ ಪಾತ್ರಧಾರಿ. ಆ ಪಾತ್ರವನ್ನು ನೇಹಾ ನಿಭಾಯಿಸಿದ್ದರು. ಹಾಗೇ ಗಿರಿಜಾಳ ಅಣ್ಣ ಗೋಪಾಲ. ತನ್ನ ತಂಗಿ ಎಂದರೆ ಪ್ರಾಣ ಬಿಡುತ್ತಿದ್ದ. ಗೋಪಾಲನ ಪಾತ್ರದಲ್ಲಿ ಶಾಸ್ತ್ರಿ ಕಾಣಿಸಿಕೊಂಡಿದ್ದರು. ಅಂದು ತೆರೆಯ ಮೇಲೆ ಇಬ್ಬರ ಬಾಂಡಿಂಗ್ ಹೇಗಿತ್ತೋ ಈಗ ಧಾರಾವಾಹಿ ಮುಗಿದರು ಆ ಬಾಂಧವ್ಯ ಹಾಗೇ ಉಳಿದಿದೆ. ಸೀರಿಯಲ್ ಮಾತ್ರವಲ್ಲ ರಿಯಲ್ ಲೈಫ್‌ನಲ್ಲೂ ಅಣ್ಣ- ತಂಗಿಯಂತೆ ಇರುವುದಕ್ಕೆ ವೀಕ್ಷಕರು ಹೊಗಳಿದ್ದಾರೆ.
ಲಕ್ಷ್ಮೀ ನಿವಾಸದಲ್ಲಿ ಶಾಸ್ತ್ರಿ ಈಗ ವೆಂಕಿ
ಶಾಸ್ತ್ರಿ ಅವರು ಈಗ 'ಲಕ್ಷ್ಮೀ ನಿವಾಸ' ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ. ವೆಂಕಿ ಎಂಬ ಪಾತ್ರ ಅದು. ಮಾತು ಬಾರದ ಮೂಗನಾದರೂ ಎಲ್ಲರ ಭಾವನೆಗಳನ್ನು, ಎಲ್ಲರ ಕಷ್ಟಗಳಿಗೂ ಸ್ಪಂದಿಸುವ ಗುಣವದು. ವೆಂಕಿಯ ಮುಗ್ಧತೆಗೆ ಮಾರು ಹೋಗದವರು ಯಾರಿಲ್ಲ. ಅವರ ನಟನೆಗೂ ಫ್ಯಾನ್ಸ್ ಆಗಿದ್ದಾರೆ. ಕಮೆಂಟ್ ಬಾಕ್ಸ್‌ನಲ್ಲೂ ಲಕ್ಷ್ಮೀ ನಿವಾಸದ ವೆಂಕಿಯೇ ಬಲು ಇಷ್ಟ ಎನ್ನುತ್ತಿದ್ದಾರೆ ಜನ. ಸದ್ಯ ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಚೆಲ್ವಿಯನ್ನು ಮದುವೆಯಾಗಿ ಬಂದಿದ್ದಾನೆ.


Click it and Unblock the Notifications











