ಎಂಗೇಜ್ ಆದ್ರು ದೇವ್ ಅಲಿಯಾಸ್ ಶೌರ್ಯ ಶಶಾಂಕ್: ಹುಡುಗಿ ಯಾರು ಗೊತ್ತಾ?

By ಪ್ರಿಯಾ ದೊರೆ

ನಿಮಗೆಲ್ಲಾ ದೇವ್ ನೆನಪಿದ್ದಾನಾ..? 'ಹಿಟ್ಲರ್ ಕಲ್ಯಾಣ' ಧಾರಾವಾಹಿಯಲ್ಲಿ ಪವಿತ್ರಾಳನ್ನು ಮದುವೆಯಾಗಿದ್ದರೂ ಕೂಡ ಚುಕ್ಕಿ ಹಿಂದೆ ಬಿದ್ದವನು. ಕರ್ತವ್ಯದಲ್ಲಿ ಪೊಲೀಸ್ ಆಗಿದ್ದರೂ ನಡೆದುಕೊಳ್ಳುತ್ತಿದ್ದದ್ದು ಮಾತ್ರ ವಿಲನ್‌ನಂತೆ. ಎಜೆಗೆ ಹೆದರುವ ದೇವ್ ಪವಿತ್ರಾಳನ್ನು ಕೊಂದು ಚುಕ್ಕಿಯನ್ನು ಮದುವೆಯಾಗಲು ಪ್ಲಾನ್ ಮಾಡಿದ್ದ. ಈಗ ಅದೇ ದೇವ್ ಮತ್ತೊಬ್ಬ ಹುಡುಗಿಯ ಹಿಂದೆ ಬಿದ್ದಿದ್ದಾನೆ. ಮದುವೆಯಾಗಲು ಸಜ್ಜಾಗಿದ್ದು, ಹುಡುಗಿ ಕೈ ಬೆರಳಿಗೆ ಉಂಗುರವನ್ನೂ ತೊಡಿಸಿದ್ದಾಗಿದೆ.

ಹೌದು 'ಹಿಟ್ಲರ್ ಕಲ್ಯಾಣ' ಧಾರಾವಾಹಿಯಲ್ಲಿ ದೇವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ನಟ ಶೌರ್ಯ ಶಶಾಂಕ್. ಖಡಕ್ ಪೊಲೀಸ್ ಆಫೀಸರ್ ಆಗಿಯೂ ಪಕ್ಕಾ ವಿಲನ್ ಪಾತ್ರದಲ್ಲಿ ಮಿಂಚಿದ್ದರು.

Kannada Tv Actor Shourya Shashank gets engaged

ಬಳಿಕ ಕ್ಯಾಮರಾ ಎದುರು ಕಾಣಿಸಿಕೊಳ್ಳದಿದ್ದರೂ ಇಂದಿಗೂ ಬ್ಯಾಕ್ ಗ್ರೌಂಡ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಫಿಲ್ಮ ಮೇಕರ್ ಆಗಿರುವ ಶೌರ್ಯ ಶಶಾಂಕ್ ಅವರು ಫೋಟೋಗ್ರಫಿ ಕೂಡ ಮಾಡುತ್ತಾರೆ.

ಹಿಟ್ಲರ್ ಕಲ್ಯಾಣ ನಟ ಶೌರ್ಯ

ಇನ್ನು ನಟನೆ ಆರಂಭಿಸುವ ಮುನ್ನ ಶೌರ್ಯ ಅವರು ಮಾಡೆಲಿಂಗ್ ಕ್ಷೇತ್ರದಲ್ಲಿ ಮಿಂಚಿದವರು. ತಮಿಳು ಸೀರಿಯಲ್‌ನಲ್ಲೂ ಬಣ್ಣ ಹಚ್ಚಿರುವ ಶೌರ್ಯ ಸೀರಿಯಲ್ ತಂಡಗಳ ಜೊತೆಗೆ ರೀಲ್ಸ್‌ಗಳನ್ನೂ ಮಾಡುತ್ತಿರುತ್ತಾರೆ. ಸದ್ಯ ಶೌರ್ಯ ಶಶಾಂಕ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಶೌರ್ಯ ಅವರು ನಿಶ್ಚಿತಾರ್ಥ ಮಾಡಿಕೊಂಡ ಫೋಟೋಗಳು ವೈರಲ್ ಆಗಿವೆ. ಫಿಟ್ನೆಸ್‌ ಕಾಯ್ದುಕೊಳ್ಳಬೇಕು ಎನ್ನವವರಿಗೆ ಒಂದು ರೀತಿಯ ಸ್ಫೂರ್ತಿಯೇ ಸರಿ. ಫಿಟ್ನೆಸ್ ಚೆನ್ನಾಗಿಯೇ ಮೆಂಟೈನ್ ಮಾಡಿದ್ದಾರೆ. ಜಿಮ್‌ನಲ್ಲಿ ಸಾಕಷ್ಟು ಕಸರತ್ತು ನಡೆಸುವ ಶೌರ್ಯ ಅವರು ವರ್ಕೌಟ್ ಮಾಡುವ ಹಲವು ಫೋಟೋಗಳನ್ನು ಶೌರ್ಯ ಹಂಚಿಕೊಂಡಿದ್ದಾರೆ. ಶೌರ್ಯ ಸದ್ಯಕ್ಕೆ ನಟನಾ ಕ್ಷೇತ್ರದಲ್ಲಿ ಹೆಚ್ಚು ಕಾಣಿಸಿಕೊಂಡಿಲ್ಲ. ಆದರೂ ಅಭಿಮಾನಿಗಳ ಬಳಗವೇನು ಕಡಿಮೆಯಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ಆದರೆ ಅವರನ್ನು ತುಂಬಾ ಜನ ಫಾಲೋ ಮಾಡುತ್ತಾರೆ. ಅವರ ಫೋಟೋಗಳಿಗೆ ಲೈಕ್ಸ್ ಮತ್ತು ಕಮೆಂಟ್ ಗಳ ಸುರಿಮಳೆಯೇ ಸಿಗುತ್ತಿದೆ. ಅವರ ಸೋಶಿಯಲ್ ಮೀಡಿಯಾಗೆ ಒಮ್ಮೆ ವಿಸಿಟ್ ಹಾಕಿದರು ಅವರ ಲೈಫ್ ಸ್ಟೈಲ್ ಹೇಗಿದೆ ಎಂಬುದು ತಿಳಿಯದೇ ಇರುವುದಿಲ್ಲ.

ನೆಗೆಟಿವ್ ರೋಲ್

ನಟ ಶೌರ್ಯ ಶಶಾಂಕ್ 'ಹಿಟ್ಲರ್ ಕಲ್ಯಾಣ' ಧಾರಾವಾಹಿಗೂ ಮುನ್ನ 'ಪುಟ್ಟ ಗೌರಿ ಮದುವೆ' ಹಾಗೂ 'ಹರಹರ ಮಹಾದೇವ್' ಧಾರಾವಾಹಿಗಳಲ್ಲಿ ನಟಿಸಿದ್ದಾರೆ. 'ಹರಹರ ಮಹಾದೇವ' ಸೀರಿಯಲ್‌ನಲ್ಲಿ ನಟ ಶೌರ್ಯ ಶಶಾಂಕ್ ಶಿವನಾಗಿ ಕಂಡಿದ್ದರೆ, 'ಪುಟ್ಟ ಗೌರಿ ಮದುವೆ'ಯಲ್ಲೂ ವಿಲನ್ ರೋಲ್‌ನಲ್ಲಿ ಅಬ್ಬರಿಸಿದ್ದರು. ಇನ್ನು ಸ್ಟಾರ್ ವಿಜಯ ವಾಹಿನಿಯಲ್ಲಿ ಮೆಗಾ ಧಾರಾವಾಹಿಯಲ್ಲಿ ಭದ್ರ ಪಾತ್ರಕ್ಕೆ ಬಣ್ಣ ಹಚ್ಚಿದ್ದ ನಟ ಶೌರ್ಯ ಅವರು ಇದರನ್ನೂ ನೆಗೆಟಿವ್ ಪಾತ್ರವನ್ನೇ ಆರಿಸಿಕೊಂಡಿದ್ದರು. ಇನ್ನು ನಟ ಶೌರ್ಯ ಶಶಾಂಕ್ ಅವರು ಶಾರ್ಟ್ ಮೂವಿಯಲ್ಲೂ ನಟಿಸಿದ್ದಾರೆ. 'ವಿಕ್ಟಿಮ್ ಎಕ್ಸ್' ಎಂಬ ಶಾರ್ಟ್ ಮೂವಿಯಲ್ಲಿ ಬಣ್ಣ ಹಚ್ಚಿದ್ದಾರೆ.

ಎಂಗೇಜ್‌ ಆದ ನಟ ಶೌರ್ಯ

ನಟ ಶೌರ್ಯ ಅವರು ಹೆಚ್ಚಾಗಿ ಕಾಣಿಸಿಕೊಂಡಿರುವುದು ಜಿಮ್‌ನಲ್ಲಿ ವರ್ಕೌಟ್ ಮಾಡುವ ಫೊಟೋಗಳೊಂದಿಗೆ. ಇನ್ನು ಇತ್ತೀಚೆಗೆ ಫೋಟೋ ಶೂಟ್ ಮಾಡಿಸಿರುವ ಶೌರ್ಯ ಅವರು ಸೂಪರ್ ಹೀರೋ ಲುಕ್‌ನಲ್ಲಿ ಮಿಂಚಿದ್ದಾರೆ. ನಟ ಶೌರ್ಯ ಅವರು ಇಷ್ಟಪಟ್ಟ ಹುಡುಗಿಯ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡು ಇನ್ನೂ ಫೋಟೋ ರಿವೀಲ್ ಮಾಡಿಲ್ಲ. ಆದರೆ D loves S ಎಂದು ಹಾಕಿದ್ದು ಹುಡುಗಿಯ ಹೆಸರು ದಿವ್ಯಾ, ಧನ್ಯಾ, ದೀಪಿಕಾ ಇರಬಹುದು ಎಂದು ಅಭಿಮಾನಿಗಳು ಗೆಸ್ ಮಾಡಿದ್ದಾರೆ.

More from Filmibeat

English summary
Hitler kalayana serial Actor shourya shashank got engaged;
Read more about: actor sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X