ತೆಲುಗು ಕಿರುತೆರೆ ಅಂಗಳದಲ್ಲಿ ಅಂಧನಾದ 'ನಮ್ಮ ಲಚ್ಚಿ' ಹಾಡುಗಾರ
ನಮ್ಮ ಕನ್ನಡದ ಮತ್ತೊಬ್ಬ ಪರಭಾಷೆಯಲ್ಲಿ ಕಮಾಲ್ ಮಾಡಲು ಮುಂದಾಗಿದ್ದಾರೆ. ಈಗಾಗಲೇ ಪ್ರೋಮೊ ಕೂಡ ರಿಲೀಸ್ ಆಗಿದ್ದು, ತೆಲುಗು ವೀಕ್ಷಕರನ್ನು ರಂಜಿಸುವುದರಲ್ಲಿ ಡೌಟೇ ಇಲ್ಲ. 'ಅಗ್ನಿಸಾಕ್ಷಿ' ಧಾರಾವಾಹಿಯಲ್ಲಿ ಸಿದ್ದಾರ್ಥ್ ಪಾತ್ರಕ್ಕೆ ದೊಡ್ಡ ಮಟ್ಟದ ಅಭಿಮಾನಿ ಬಳಗವಿತ್ತು. ಅದರಲ್ಲೂ ಸಿದ್ದಾರ್ಥ್ - ಸನ್ನಿಧಿ ಜೋಡಿಯನ್ನು ಮರೆಯಲು ಸಾಧ್ಯವೇ ಇಲ್ಲ.
ಸಿದ್ದಾರ್ಥ್ ಪಾತ್ರದ ಮೂಲಕ ಚಿರಪರಿಚಿತರಾದ ನಟ ವಿಜಯ್ ಸೂರ್ಯ ಅವರು ಹೊಸ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಅವರ ಹೊಸ ಧಾರಾವಾಹಿ ಶುರುವಾಗಿದ್ದು, ಈಗ ತೆಲುಗಿನಲ್ಲೂ ಮಿಂಚಲು ಮುಂದಾಗಿದ್ದಾರೆ. ಗುಳಿಕೆನ್ನೆ ಚಲುವ ನಟ ವಿಜಯ್ ಸೂರ್ಯ ಅವರು ಎಜುಕೇಶನ್ ಮುಗಿಯುತ್ತಿದ್ದಂತೆ ನಟನಾಗುವ ಆಸೆಯಿಂದ ಮುಂಬೈಗೆ ಹಾರಿದ್ದರು. ಅಲ್ಲಿ ಸುಭಾಷ್ ಘಾಯ್ ಸ್ಕೂಲ್ ನಲ್ಲಿ ಡೈರೆಕ್ಷನ್ ಕೋರ್ಸ್ ಮಾಡಿದರು. ಬೆಂಗಳೂರು ಮೆಗಾ ಮಾಡೆಲ್ ಹಂಟ್ - 2011 ನ ವಿಜೇತರಾದವರು. ಅಲ್ಲಿಂದ ಮರಳಿದ ಮೇಲೆ ಸಿಹಿ ಕಹಿ ಗೀತಾರವರ ಪಾರ್ವತಿ ಪರಮೇಶ್ವರ' ಸೀರಿಯಲ್ ನಲ್ಲೂ ಒಂದು ಚಿಕ್ಕ ಪಾತ್ರದಲ್ಲಿ ಅಭಿನಯಿಸಿದರು.

'ಅಗ್ನಿಸಾಕ್ಷಿ' ಧಾರಾವಾಹಿಯಲ್ಲಿ ನಾಯಕನ ಪಾತ್ರದಲ್ಲಿ ಮಿಂಚಿದರು. ಸತತ ಏಳು ವರ್ಷಗಳ ಕಾಲ ಆ ಧಾರಾವಾಹಿಯಲ್ಲಿ ಛಾಪು ಮೂಡಿಸಿದ ವಿಜಯ್ ಸೂರ್ಯ, ಮದುವೆಯಾದ ಮೇಲೆ ಕಿರುತೆರೆಯಿಂದ ಮಾಯವಾದರು. ನಂತರ ವಿಜಯ್ ಸೂರ್ಯ ಕೆಲ ಚಿತ್ರಗಳಿಗೆ ಬಣ್ಣ ಹಚ್ಚಿದರು. ಕ್ರೇಜಿಲೋಕ', 'ಇಷ್ಟಕಾಮ್ಯ', 'ಸ', 'ಕದ್ದುಮುಚ್ಚಿ', 'ಲಕ್ನೌ ಟು ಮುಂಬೈ' ಎಂಬ ಚಿತ್ರಗಳಲ್ಲಿ ನಟಿಸಿದರು.
ವಿಜಯ್ ಸೂರ್ಯ ಮತ್ತು ಚೈತ್ರಾ ಅವರು 14-2-2019 ರಲ್ಲಿ ವಿವಾಹವಾಗಿದ್ದರು. ಈಗ ಸರಿಯಾಗಿ ಒಂದು ವರ್ಷ ತುಂಬಿದೆ. ಮೊದಲನೇ ವರ್ಷದ ವಿವಾಹ ವಾರ್ಷಿಕೋತ್ಸವದಲ್ಲಿ ಸಂಭ್ರಮದಲ್ಲಿರುವ ವಿಜಯ್ ಸೂರ್ಯ ದಂಪತಿ ಇದೇ ದಿನ ತಾವು ತಂದೆ-ತಾಯಿ ಆಗಿರುವ ವಿಷಯದ ಸಂತಸದ ಸುದ್ದಿ ಬಹಿರಂಗಪಡಿಸಿದರು. ಸ್ಟಾರ್ ಸುವರ್ಣದಲ್ಲಿ ಪ್ರಸಾರವಾದ 'ಪ್ರೇಮಲೋಕ' ಧಾರಾವಾಹಿಯಲ್ಲಿ ಲೀಡ್ ರೋಲ್ ಮೂಲಕ ಮಿಂಚಿದ್ರು. ಆದರೆ ಕಾರಣಾಂತರದಿಂದ ಆ ಧಾರಾವಾಹಿ ಬೇಗ ವೈಂಡಪ್ ಆಯ್ತು.
'ಪ್ರೇಮಲೋಕ' ನಂತರ ವಿಜಿ ಆಗಾಗ ಗೆಸ್ಟ್ ರೋಲ್ ಮೂಲಕ ವೀಕ್ಷಕರಿಗೆ ದರ್ಶನ ಕೊಡುತ್ತಿದ್ದರು. ಲಕ್ಷ್ಮೀ ಬಾರಮ್ಮ, ಜೊತೆ ಜೊತೆಯಲಿ ಸೇರದಂತೆ ಹಲವು ಧಾರಾವಾಹಿಗಳಲ್ಲಿ ಕಾಣಿಸಿಕೊಂಡರು. ಸಿದ್ಧಾರ್ಥ್ ಎಲ್ಲಿ ಹೋದರು ಎಂದು ತಡಕಾಡ್ತಿದ್ದ ನಮಗೆ ಸಿಕ್ಕ ಸುದ್ದಿ ಹೊಸ ಧಾರಾವಾಹಿ.ಅದೇ 'ನಮ್ಮ ಲಚ್ಚಿ' ಧಾರಾವಾಹಿ.

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಮೂಡಿ ಬರುತ್ತಿರುವ 'ಲಚ್ಚಿ' ಧಾರಾವಾಹಿಯಲ್ಲಿ ಸದ್ಯ ವಿಜಯ್ ಸೂರ್ಯ ಅವರು ಸಂಗಮ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದರಲ್ಲಿ ಸ್ಟಾರ್ ಹಾಡುಗಾರನಾಗಿದ್ದು, ಈಗ ಅಂಧನಾಗಿ ತೆಲುಗು ಅಂಗಳದಲ್ಲಿ ಕಾಣಿಸಿಕೊಳ್ಳಲು ಮುಂದಾಗಿದ್ದಾರೆ. ಈ ಬಗ್ಗೆ ಪ್ರೋಮೋ ಹಂಚಿಕೊಂಡಿರುವ ವಿಜಯ್ ಸೂರ್ಯ ಅವರು ಶೀಘ್ರದಲ್ಲೇ ತೆಲುಗಿನ ಕಿರುತೆರೆಯಲ್ಲಿ ಕಮಾಲ್ ಮಾಡಲಿದ್ದಾರೆ.
ವಿಜಯ್ ಸೂರ್ಯ ಅವರಿಗೆ ತೆಲುಗು ಹಾಗೂ ತಮಿಳಿನಿಂದ ಆನೇಕ ಆಫರ್‌ಗಳು ಬರುತ್ತಿದ್ದು, ತೆಲುಗಿನ ಧಾರಾವಾಹಿ ಕಥೆ ಇಷ್ಟವಾದ ಕಾರಣ ನಟಿಸುತ್ತಿದ್ದಾರೆ. ಇದರಲ್ಲೂ ನಾಯಕನಾಗಿರುವ ವಿಜಯ್ ಅವರು, ಕೃಷ್ಣಾ ನದಿಯ ಹಿನ್ನೆಲೆಯಲ್ಲಿ ನಡೆಯುವ ಪ್ರೇಮಕಥೆಯ ಭಾಗವಾಗಿದ್ದಾರೆ. ಇದರಲ್ಲಿ ನಾಯಕ ಅಂಧನಾಗಿ ನಟಿಸುತ್ತಿದ್ದು, ಹುಟ್ಟು ಅಂಧ ಅಲ್ಲ. ಕಾರಣಾಂತರಗಳಿಂದ ದೃಷ್ಟಿ ಹೋಗಿರುತ್ತದೆ. ನಂತರ ಆತನ ಜೀವನ ಹೇಗಿರುತ್ತದೆ ಎಂಬುದೇ ಧಾರಾವಾಹಿಯ ಕಥೆ.

ಒರಿಸ್ಸಾ ಚೆಲುವೆ ಜಾಸ್ಮಿನ್ ರತ್ ವಿಜಯ್ ಅವರಿಗೆ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಬೆಂಗಾಳಿಯ 'ಸಾಂಝೇರ್ ಬಾಟಿ' ಎಂಬ ಧಾರಾವಾಹಿಯ ರೀಮೇಕ್ ಇದಾಗಿದ್ದು, ಈಗಾಗಲೇ ಹಿಂದಿ, ತಮಿಳು ಹಾಗೂ ಕನ್ನಡದಲ್ಲಿ ರೀಮೇಕ್ ಆಗಿದೆ. ಕನ್ನಡದಲ್ಲಿ 'ಆಕಾಶ ದೀಪ' ಹೆಸರಿನಲ್ಲಿ ಪ್ರಸಾರವಾಗಿತ್ತು. ಇದೀಗ 'ಕೃಷ್ಣಮ್ಮ ಕಲಿಪಿಂದಿ ಇದ್ದರಿನಿ' ಎಂಬ ಹೆಸರಿನಲ್ಲಿ ಪ್ರಸಾರವಾಗಲಿದೆ. ಧಾರಾವಾಹಿಯ ಶೂಟಿಂಗ್ ವಿಜಯವಾಡದಲ್ಲಿ ನಡೆಯುತ್ತಿದೆ.


Click it and Unblock the Notifications











