ಹೊಸ ಫೋಟೋಶೂಟ್ ಮಾಡಿಸಿ ಫ್ಯಾನ್ಸ್ ಕಣ್ಣು ಕುಕ್ಕುವಂತೆ ಮಾಡಿದ ನಟಿ ಅಭಿಜ್ಞಾ ಭಟ್

By ಪ್ರಿಯಾ ದೊರೆ

ಕಿರುತೆರೆಯಲ್ಲಿ ಕಿರಿ ಹುಡುಗಿಯಾಗಿ ಎಲ್ಲಾ ಕಡೆ ಓಡಾಡಿಕೊಂಡಿದ್ದ ನಟಿ ಅಭಿಜ್ಞಾ ಭಟ್, ಬಳಿಕ 'ಸ್ನೇಹದ ಕಡಲಲ್ಲಿ' ಸೀರಿಯಲ್‌ನಲ್ಲಿ ನಟಿಸುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. ಸದ್ಯ ಭರ್ಜರಿ ಬ್ಯಾಚುಲರ್ಸ್‌ನಲ್ಲಿ ಮಿಂಚುತ್ತಿರುವ ಅಭಿಜ್ಞಾ ಭಟ್ ಸೋಶಿಯಲ್ ಮೀಡಿಯಾ ಖಾತೆಗೆ ಎಲ್ಲರೂ ಒಮ್ಮೆ ಭೇಟಿ ಕೊಡಬೇಕಿದೆ. ಯಾಕೆಂದರೆ ನಟಿ ಅಭಿಜ್ಞಾ ಭಟ್ ಅವರ ಡಿಫರೆಂಟ್ ಲುಕ್ ಎಲ್ಲರನ್ನೂ ಮೋಡಿ ಮಾಡುತ್ತಿದೆ.

ನಟಿ ಅಭಿಜ್ಞಾ ಭಟ್ ಆಗಾಗ ತಮ್ಮ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಪೋಸ್ಟ್‌ಗಳನ್ನು ಹಾಕುತ್ತಲೇ ಇರುತ್ತಾರೆ. ಈಗ ಹೊಸ ರೀತಿಯಲ್ಲಿ ಫೋಟೋಶೂಟ್ ಮಾಡಿಸಿದ್ದಾರೆ.

Kannada Tv Actress Abhijna bhat trendy Photoshoot goes viral

ಇದರಲ್ಲಿ ಮುದ್ದಾಗಿ ಕಾಣಿಸಿಕೊಂಡಿರುವ ನಟಿ ಅಭಿಜ್ಞಾ ಭಟ್ ಅವರು ಯಾವ ಹಾಲಿವುಡ್ ನಟಿಯರಿಗೂ ಕಡಿಮೆ ಇಲ್ಲ ಎಂದು ಪ್ರೂವ್ ಮಾಡಿದ್ದಾರೆ.

ಕಲರ್‌ಫುಲ್ ಫೋಟೊಶೂಟ್

ಸೀರೆ, ಲಂಗ-ದಾವಣಿಯಲ್ಲಿ ಹೆಚ್ಚು ಫೋಟೋಗಳನ್ನು ಶೇರ್ ಮಾಡುತ್ತಿದ್ದ ನಟಿ ಅಭಿಜ್ಞಾ ಭಟ್ ಮೊದಲ ಬಾರಿಗೆ ಡಿಫರೆಂಟ್ ಆಗಿ ಫೋಟೋಸ್ ತೆಗೆಸಿಕೊಂಡಿದ್ದಾರೆ. ಫೋಟೋಗಳನ್ನು ನೋಡಿದ ಅಭಿಮಾನಿಗಳಂತೂ ಫುಲ್ ಫಿದಾ ಆಗಿದ್ದಾರೆ. ಚಂದನದ ಗೊಂಬೆ, ಬಾಲಿವುಡ್ ಹೀರೋಯಿನ್, ಯುವರಾಣಿ, ಕ್ಯೂಟ್ ಗೊಂಬೆ, ಯಾರ್ ಗುರು ಹಿಂಗ್ ಅವ್ಳೇ, ಹಂಸ, ಬೆಂಕಿ, ಏಂಜೆಲ್, ಸೂಪರ್, ಬ್ಯೂಟಿಫುಲ್ ಎಂದು ಹೇಳಿ ಕಮೆಂಟ್ ಮಾಡಿದ್ದಾರೆ.

ಶ್ವೇತ ಸುಂದರಿಯಾಗಿ ಅಭಿಜ್ಞಾ

ಇನ್ನು ನಟಿ ಅಭಿಜ್ಞಾ ಭಟ್ ಬಿಳಿ ಅಂಗಿ ಧರಿಸಿ ನಾಚಿ ನೀರಾಗಿದ್ದಾರೆ. ಮರಗಳ ನಡುವೆ ನಿಂತು ಶ್ವೇತ ಸುಂದರಿಯಂತೆ ಕಂಗೊಳಿಸಿರುವ ನಟಿ ಅಭಿಜ್ಞಾ ಭಟ್ ಪುಸ್ತಕ ಹಿಡಿದಿದ್ದಾರೆ. ಜೊತೆಗೆ ಕುದುರೆಯೊಂದಿಗೂ ಫೋಟೋಗಳನ್ನು ತೆಗೆಸಿಕೊಂಡಿದ್ದಾರೆ. ಹೀಗೆ ವಿಭಿನ್ನವಾಗಿ ಪೋಸ್ ಕೊಟ್ಟಿರುವ ನಟಿ ಅಭಿಜ್ಞಾ ಭಟ್ ಅವರನ್ನು ಹಾಲಿವುಡ್ ಡೈರೆಕ್ಟರ್ಸ್ ನೋಡಿದರೆ, ಸಿನಿಮಾದಲ್ಲಿ ಚಾನ್ಸ್ ಸಿಗುವುದು ಪಕ್ಕಾ.

ರಿಯಾಲಿಟಿ ಶೋಗಳಲ್ಲಿ ಭಾಗಿ

ನಟಿ ಅಭಿಜ್ಞಾ ಭಟ್ ಕಿರುತೆರೆಗೆ ಹೊಸಬರಂತೂ ಅಲ್ಲವೇ ಅಲ್ಲ. ಈ ಹಿಂದೆಯೇ 'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು' ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದ ಇವರು, 'ರಾಮಾಚಾರಿ', 'ಗೌರಿಶಂಕರ' ಧಾರಾವಾಹಿಯಲ್ಲಿ ನಟಿಸಿದ್ದಾರೆ. ಪಾತ್ರಕ್ಕೆ ತಕ್ಕಂತೆ ಅಭಿನಯಿಸೋ ಈ ಬೆಡಗಿ 'ಹುಡುಗರು' ಸಿನಿಮಾದಲ್ಲೂ ಬಣ್ಣ ಹಚ್ಚಿದ್ದಾರೆ. ಅಲ್ಲದೇ, ಸುವರ್ಣ 'ಸೂಪರ್ ಸ್ಟಾರ್', 'ಕುಕ್ಕು ವಿತ್ ಕಿರಿಕ್ಕು' ಕಾರ್ಯಕ್ರಮಗಳಲ್ಲೂ ಭಾಗವಹಿಸಿದ್ದಾರೆ. ಸದ್ಯ ಭರ್ಜರಿ ಬ್ಯಾಚುಲರ್ಸ್‌ನಲ್ಲಿ ಕಾಣಿಸಿಕೊಂಡಿರುವ ನಟಿ ಅಭಿಜ್ಞಾ ಭಟ್ ಮುಂದೆ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗಲಿರುವ 'ಸ್ನೇಹದ ಕಡಲಲ್ಲಿ' ಸೀರಿಯಲ್‌ನಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ದೊಡ್ಡ ಆಸೆ ಹೊತ್ತ ನಟಿ

ಚಿಕ್ಕವಯಸ್ಸಿನಿಂದಲೂ ನಟಿ ಅಭಿಜ್ಞಾ ಭಟ್ ಇಂಡಿಪೆಂಡೆಂಟ್ ಹುಡುಗಿಯಂತೆ. ಕೇದಾರ್‌ನಾಥ್‌ಗೆ ಈಗಾಗಲೇ ಸೋಲೋ ಟ್ರಿಪ್ ಹೋಗಿರುವ ನಟಿ, ತಮ್ಮ ಪೋಷಕರಿಂದ ಸಹಾಯ ಪಡೆಯುವುದು ತೀರಾ ಕಡಿಮೆಯಂತೆ. ಅಲ್ಲದೇ, ಶೂಟಿಂಗ್ ಬಿಟ್ಟು ಬಿಡುವಿನ ಸಮಯದಲ್ಲಿ ಓದಲು ಬಯಸುವ ಈ ಬೆಡಗಿ ಮುಂದೆ ಐಪಿಎಸ್ ಆಫೀಸರ್ ಆಗುವ ಕನಸನ್ನು ಹೊತ್ತಿದ್ದಾರೆ. ಓದು ಮತ್ತು ನಟನೆ ಎರಡನ್ನೂ ಬ್ಯಾಲೆನ್ಸ್ ಮಾಡುತ್ತಿರುವ ನಟಿ ಅಭಿಜ್ಞಾ ಭಟ್ ಹೆಚ್ಚು ನೇಚರ್ ಅನ್ನು ಇಷ್ಟಪಡುತ್ತಾರೆ. ಹಾಗಾಗಿ ಪರಿಸರದ ನಡುವೆ ನಿಂತು ಅತೀ ಹೆಚ್ಚು ಫೋಟೋಗಳನ್ನು ತೆಗೆಸಿಕೊಂಡಿದ್ದಾರೆ ನಟಿ ಅಭಿಜ್ಞಾ ಭಟ್.

More from Filmibeat

English summary
Actress Abhijna Vishwanath stuns in new photoshoot.
Read more about: actress kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X