Bigg Boss Kannada 11 ; ಎರಡೇ ವರ್ಷದಲ್ಲಿ ತಂದೆ ತಾಯಿ ನಿಧನ, ಬಿಗ್ ಬಾಸ್ ಮನೆಗೆ ಭಾವುಕರಾಗಿ ಬಂದ ಐಶ್ವರ್ಯ ಸಿಂಧೋಗಿ..!

ಈ ಅದೃಷ್ಟ ಅನ್ನೋದು ಎಂಥವರ ಬದುಕನ್ನೂ ಬದಲಾಯಿಸಿಬಿಡುತ್ತೆ. ಇದಕ್ಕೆ ಮತ್ತೊಂದು ಉದಾಹರಣೆ ಐಶ್ವರ್ಯ ಸಿಂಧೋಗಿ. ಹೌದು, ಬೆಳ್ಳಿ ತೆರೆ ಮತ್ತು ಕಿರುತೆರೆ ಮೂಲಕ ಕನ್ನಡಿಗರ ಹೃದಯ ಗೆಲ್ಲುವ ಪ್ರಯತ್ನವನ್ನು ಮಾಡುತ್ತಾನೇ ಬಂದ ಐಶ್ವರ್ಯ ಸಿಂಧೋಗಿ ಯಾವತ್ತೂ ನಾಯಕಿಯಾಗಬೇಕೆಂಬ ಕನಸು ಕಂಡಿರಲಿಲ್ಲ. ಆದರೆ, ಆಗಲೇ ಹೇಳಿದಂತೆ ಅದೃಷ್ಟ ಇವರನ್ನು ಚಿತ್ರರಂಗಕ್ಕೆ ಕರೆದುಕೊಂಡು ಬಂತು. ಇಂಥಾ ಐಶ್ವರ್ಯ ಸಿಂಧೋಗಿ ಈಗ ಕನ್ನಡದ ಪ್ರಸಿದ್ಧ ಬಿಗ್ ಬಾಸ್ ಮನೆಗೆ ಬಂದಿದ್ದಾರೆ.

ಸುದೀಪ್ ಸಾರಥ್ಯದ ಬಿಗ್ ಬಾಸ್ ಮನೆಗೆ ಇಂದು ಬಲಗಾಲಿಟ್ಟು ಬಂದ ಐಶ್ವರ್ಯ ಸಿಂಧೋಗಿ, ಇದೇ ವೇಳೆ ಭಾವುಕರಾಗಿದ್ದಾರೆ. ತಂದೆ ತಾಯಿಯನ್ನೂ ನೆನೆದು ಕಣ್ಣೀರು ಹಾಕಿದ್ದಾರೆ. ತುಂಬಾ ಮುದ್ದಾಗಿ ಬೆಳೆದವಳು ನಾನು, ಅಪ್ಪ-ಅಮ್ಮನ ಪಾಲಿಗೆ ಒಬ್ಬಳೇ ಮಗಳು ಎಂದಿರುವ ಐಶ್ವರ್ಯ ಸಿಂಧೋಗಿ ನನಗೆ ಅವಿಭಕ್ತ ಕುಟುಂಬದ ಅರ್ಥವೇ ಗೊತ್ತಿರಲಿಲ್ಲ ಎಂದು ಹೇಳಿದ್ದಾರೆ. ತಂದೆ-ತಾಯಿ ಈಗ ಇಬ್ಬರು ನನ್ನ ಜೊತೆ ಇಲ್ಲ ನನಗೆ ಮಾರ್ಗದರ್ಶನ ನೀಡಲು ಯಾರು ಕೂಡ ಇರಲಿಲ್ಲ ಎಂದು ಹೇಳಿದ್ದಾರೆ

Kannada TV actress Aishwarya Shindogi has entered Bigg Boss Kannada Season 11 Here are her details

ಮುಂದುವರೆದು ನನ್ನ ತಂದೆಗೆ ಹೃದಯಾಘಾತವಾಯಿತು ಎಂದಿರುವ ಐಶ್ವರ್ಯ, ಅವರನ್ನು ಕೊನೆ ಕ್ಷಣದಲ್ಲಿ ನನ್ನಿಂದ ನೋಡಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ. ಹೈದ್ರಾಬಾದ್‌ನಲ್ಲಿ ಅವರು ಕೊನೆಯುಸಿರೆಳೆದರು ಎಂದು ಕಣ್ಣೀರು ಹಾಕಿದ್ದಾರೆ. ಇನ್ನೂ ಅಮ್ಮನಿಗೆ ಅನಾರೋಗ್ಯ ಇತ್ತು, ತಂದೆ 2018ರಲ್ಲಿ ನಿಧನರಾದರೆ ಅಮ್ಮ 2020ರಲ್ಲಿ ನನ್ನ ಬಿಟ್ಟು ಹೋದರು ಎಂದು ಬಿಗ್ ಬಾಸ್ ವೇದಿಕೆಯಲ್ಲಿ ಭಾವುಕರಾಗಿದ್ದಾರೆ ಐಶ್ವರ್ಯ ಸಿಂಧೋಗಿ

ತಂದೆಯ ನಿಧನದ ನಂತರ ಆರ್ಥಿಕವಾಗಿ ತುಂಬಾ ತೊಂದರೆ ಅನುಭವಿಸಿರುವುದಾಗಿ ಕೂಡ ಹೇಳಿರುವ ಐಶ್ವರ್ಯ ಸಿಂಧೋಗಿ, ಅಪ್ಪ ಹೋದ ನಂತರ ಅವರ ಬಿಸ್ನೆಸ್‌ನಲ್ಲಿ ನನಗೆ ತುಂಬಾ ಮೋಸ ಮಾಡಿದರು ಎಂದು ತಮ್ಮ ಮನದ ನೋವು ಹಂಚಿಕೊಂಡಿದ್ದಾರೆ. ನನ್ನ ಅಪ್ಪ ಅಮ್ಮ ನನ್ನನ್ನೂ ತುಂಬಾ ಕಷ್ಟಪಟ್ಟು ಸಾಕಿದ್ದಾರೆ. ಅವರು ಆ ಸ್ವರ್ಗದಿಂದ ನೋಡ್ತಿದ್ದಾರೆ ಎಂದಿದ್ದಾರೆ. ಸಂಬಂಧಿಕರು ಯಾರು ನನ್ನ ಸುತ್ತ ಮುತ್ತ ಆಪ್ತವಾಗಿ ಇಲ್ಲ ಎಂದು ಕೂಡ ಹೇಳಿದ್ದಾರೆ ಐಶ್ವರ್ಯ ಸಿಂಧೋಗಿ

ಇನ್ನೂ.. ಬಣ್ಣದ ಬದುಕು ಒಬ್ಬಳೇ ಇರಲು ಬಿಡಲ್ಲ, ಹೀಗಾಗಿ ನನಗೆ ಧೈರ್ಯ ಇರಲಿಲ್ಲ ಎಂದು ಹೇಳಿದ ಐಶ್ವರ್ಯ ಸಿಂಧೋಗಿ, ಆದರೂ ಧೈರ್ಯ ಮಾಡಿ ಇಲ್ಲಿಯವರೆಗೆ ನಾನು ಬಂದಿದ್ದೇನೆ ಎಂದು ಹೇಳಿದ್ದಾರೆ. ಇದು ನನ್ನ ಬದುಕಿನ ಬಹುದೊಡ್ಡ ಘಟ್ಟ ಎಂದಿರುವ ಐಶ್ವರ್ಯ ಎಲ್ಲದಕ್ಕೂ ಅಪ್ಪ - ಅಮ್ಮನ ಆಶೀರ್ವಾದ ಕಾರಣ ಎಂದು ಹೇಳಿದ್ದಾರೆ.

ಅಂದ್ಹಾಗೇ ಬಿಗ್ ಬಾಸ್ ಮನೆಗೆ ಹದಿಮೂರನೇ ಸ್ಫರ್ಧಿಯಾಗಿ ಎಂಟ್ರಿ ನೀಡಿರುವ ಐಶ್ವರ್ಯ ಸಿಂಧೋಗಿ ಅವರನ್ನು ಸ್ವರ್ಗಕ್ಕೆ ಕಳುಹಿಸಲಾಗಿದೆ. ಇನ್ನೂ ಐಶ್ವರ್ಯ ಸಿಂಧೋಗಿ ನಮ್ಮ ಲಚ್ಚಿ, ಮಂಗಳ ಗೌರಿ ಧಾರಾವಾಹಿಯಲ್ಲಿ ವಿಲನ್ ಪಾತ್ರ ಮಾಡಿದ್ದು ನಿಮಗೆ ಗೊತ್ತಿರಬೇಕು. ಇವೆರಡು ಧಾರಾವಾಹಿಯಲ್ಲದೇ ಶಾಂಭವಿ ಎಂದ ಧಾರಾವಾಹಿಯಲ್ಲಿ ಕೂಡ ಆಕ್ಟ್ ಮಾಡಿರುವ ಐಶ್ವರ್ಯ ಸಿಂಧೋಗಿ ಆಶಿಕಿ 2 ಸೇರಿ ಕನ್ನಡದ ಹಲವಾರು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ನಾಯಕಿಯ ಪಾತ್ರವನ್ನು ನಿರ್ವಹಿಸಿದ್ದಾರೆ.

More from Filmibeat

Read more about: bigg boss biggboss sudeep
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X