ಅಭಿಮಾನಿಗಳಿಗೆ ಶನಿವಾರ ಶಾಕಿಂಗ್ ಸರ್ಪ್ರೈಸ್ ನೀಡಲಿರುವ ನಟಿ ಭುವನಾ ಮುರಳಿ
ಹೆಣ್ಮಕ್ಕಳು ಅಂದರೆ ಸುಮ್ನೇನಾ? ಎಲ್ಲಾ ಕ್ಷೇತ್ರದಲ್ಲೂ ಹೆಣ್ಣು ಮಕ್ಕಳದ್ದೇ ಕಾರುಬಾರು ಎಂದರೂ ತಪ್ಪಾಗುವುದಿಲ್ಲ. ಜಗತ್ತು ಸಾಕಷ್ಟು ಬದಲಾಗಿದೆ. ಮೊದಲೆಲ್ಲಾ ಹೆಣ್ಣು ಮಕ್ಕಳು ಮನೆಯಿಂದ ಹೊರಗಡೆ ಕಾಲಿಡುತ್ತಿರಲಿಲ್ಲ. ಮನೆಯೊಳಗೆ ಅಡುಗೆ ಮನೆಯಲ್ಲೇ ಉಳಿದು ಬಿಡುತ್ತಿದ್ದರು. ಜೊತೆಗೆ ಸಣ್ಣ-ಪುಟ್ಟ ಕಸೂತಿ ಕೆಲಸಗಳನ್ನು ಮಾಡುತ್ತಾ ತಮ್ಮ ಟ್ಯಾಲೆಂಟ್ ಅನ್ನು ನಿಧಾನವಾಗಿ ಹೊರ ಹಾಕುತ್ತಿದ್ದರು. ಆದರೆ ಈಗ ಭೂಮಿಯಲ್ಲಿ ಮಾತ್ರವಲ್ಲದೇ ಬಾಹ್ಯಕಾಶದಲ್ಲೂ ಹೆಣ್ಣು ಮಕ್ಕಳೇ ಮುಂದಿದ್ದಾರೆ.
ಎಲ್ಲಾ ಕ್ಷೇತ್ರದಲ್ಲಿಯೂ ತಮ್ಮ ಪ್ರತಿಭೆಯನ್ನು ಹೊರ ಹಾಕಿರುವ ಹೆಣ್ಮಕ್ಕಳಿಗೆ ಬಟ್ಟೆ ಹೊಲಿಗೆ ಹಾಕುವುದು ಬಹಳ ಹಳೆಯ ವಿದ್ಯೆ. ಮೊದಲೆಲ್ಲಾ ಕೇವಲ ಗಂಡಸರು ಮಾತ್ರವೇ ಬಟ್ಟೆಗಳನ್ನು ಸ್ಟಿಚ್ ಮಾಡುತ್ತಿದ್ದರು.

ಈಗ ಹೆಣ್ಣು ಮಕ್ಕಳು ತಮ್ಮದೇ ಸ್ವಂತ ಬೋಟಿಕ್‌ಗಳನ್ನು ಕೂಡ ಹೊಂದಿದ್ದಾರೆ. ಇನ್ನು ಮನೆಯಲ್ಲಿ ಅದೆಷ್ಟೋ ಜನ ಹೆಣ್ಣು ಮಕ್ಕಳು ತಾವು ಧರಿಸುವ ಉಡುಗೆಯನ್ನು ತಾವೇ ಸ್ಟಿಚ್ ಮಾಡಿಕೊಳ್ಳುತ್ತಾರೆ.
ಭುವನಾ ಹಿಡೆನ್ ಟ್ಯಾಲೆಂಟ್
ಇದೇನು ಹೊಸ ವಿಚಾರ ಅಲ್ಲ ಆದರೂ ಯಾಕೆ ಹೇಳುತ್ತಿದ್ದೀನಿ ಎನಿಸುತ್ತಿದೆಯಾ. ಸಾಮಾನ್ಯ ಜನರು ತಮ್ಮ ಬಟ್ಟೆಯನ್ನು ತಾವೇ ಸ್ಟಿಚ್ ಮಾಡಿಕೊಳ್ಳುವುದು ಓಕೆ. ಆದರೆ, ನಟ-ನಟಿಯರು ಕೂಡ ತಮ್ಮ ಬಟ್ಟೆಯನ್ನು ತಾವೇ ಸಿದ್ಧಪಡಿಸುತ್ತಾರೆ ಎಂದರೆ ಎಲ್ಲರಿಗೂ ಯಾರದು ಎಂದು ನೋಡಬೇಕು ಎಂದು ಅನಿಸುತ್ತಿದೆ ಅಲ್ವಾ..? ಹೌದು ಇಲ್ಲೊಬ್ಬರು ನಟಿ ತಮ್ಮ ಬಟ್ಟೆಯನ್ನು ತಾವೇ ಸ್ಟಿಚ್ ಮಾಡಿಕೊಳ್ಳುತ್ತಾರೆ. ಅದೂ ಕೂಡ ತಮ್ಮ ಮನೆಯಲ್ಲೇ ಇರುವ ಹಳೆಯ ಸೀರೆಗಳನ್ನು ಬಳಸಿಕೊಂಡು ಹೊಸ ಡ್ರೆಸ್ ರೆಡಿ ಮಾಡುತ್ತಾರೆ. ಈಗಾಗಲೇ ಈ ನಟಿ ತಮ್ಮ ತಾಯಿಯ ಸೀರೆಯನ್ನು ಕದ್ದು ತಮಗೆ ಬೇಕಾದ ರೀತಿಯಲ್ಲಿ ಬಟ್ಟೆಗೆ ಆಕಾರ ಕೊಟ್ಟಿದ್ದಾರೆ. ಇದೀಗ ಹೊಸ ಸರ್ಪ್ರೈಸ್ ಒಂದನ್ನು ನೀಡಲು ಮುಂದಾಗಿದ್ದಾರೆ.
ಬಟ್ಟೆ ಸ್ಟಿಚ್ ಮಾಡುವ ಅಭ್ಯಾಸ
ಅದು ಬೇರೆ ಯಾರೂ ಅಲ್ಲ ನಟಿ ಭುವನಾ ಮುರಳಿ. ಹೌದು ನಟಿ ಭುವನಾ ಮುರಳಿ ಅವರಿಗೆ ನಟನೆ ಅಷ್ಟೇ ಅಲ್ಲದೇ ಬೇರೆ ಬೇರೆ ಟ್ಯಾಲೆಂಟ್ ಕೂಡ ಇವೆ. ಭುವನಾ ಮುರಳಿ ಅವರು ತಾವು ಧರಿಸುವ ಕೆಲ ಉಡುಗೆಗಳನ್ನು ತಾವೇ ತಯಾರಿಸುತ್ತಾರೆ. ಅಂದರೆ ಬಿಡುವಿನ ವೇಳೆ ಹೊಸ ಹೊಸ ಡಿಸೈನ್‌ನಲ್ಲಿ ಬಟ್ಟೆಗಳನ್ನು ಸ್ಟಿಚ್ ಮಾಡಿಕೊಳ್ಳುತ್ತಾರೆ. ಈ ಬಗ್ಗೆ ಈಗಾಗಲೇ ನಟಿ ಭುವನಾ ಅವರು ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ತಾವೇ ಹೊಲಿಗೆ ಹಾಕಿಕೊಂಡ ಸುಂದರವಾದ ಉಡುಗೆಗಳನ್ನು ತೋರಿಸಿದ್ದಾರೆ. ಅದೂ ಕೂಡ ಭುವನಾ ಅವರು ತಮಗೆ ಹೊಸ ಬಟ್ಟೆ ಬೇಕು ಎಂದಾಗ ಅವರ ತಾಯಿಯ ಸೀರೆಯನ್ನು ಕದ್ದು ಸ್ಟಿಚ್ ಮಾಡಿಕೊಳ್ಳುತ್ತಾರೆ. ಪಿಂಕ್, ವೈಟ್ ಮತ್ತು ಬ್ಲ್ಯಾಕ್ ಕಲರ್ ಇರುವ ತಮ್ಮ ತಾಯಿಯ ಸೀರೆಯಲ್ಲಿ ಮುದ್ದಾದ ಉಡುಗೆಯನ್ನು ತಯಾರಿಸಿಕೊಂಡಿದ್ದಾರೆ.
ಫಾಲೋವರ್ಸ್‌ಗೆ ಸರ್ಪ್ರೈಸ್
ಇನ್ನೊಂದು ಯುಗಾದಿ ಹಬ್ಬಕ್ಕಾಗಿ ಅವರ ತಾಯಿಯ ಹಳದಿ ಬಣ್ಣದ ಸೀರೆಯನ್ನು ಕದ್ದ ನಟಿ ಭುವನಾ ಅವರು ಅದರಲ್ಲಿ ಅನಾರ್ಕಲಿ ಮಾದರಿಯ ಗೌನ್ ಅನ್ನು ಸಿದ್ಧಪಡಿಸಿದ್ದು, ಇದು ಕೂಡ ಭುವನಾ ಅವರಿಗೆ ಮುದ್ದಾಗಿ ಕಾಣುತ್ತದೆ. ಇದೀಗ ನಟಿ ಭುವನಾ ಮುರಳಿ ಅವರು ಮತ್ತೊಂದು ಹೊಸ ಬಟ್ಟೆಯನ್ನು ಸ್ಟಿಚ್ ಮಾಡಿಕೊಳ್ಳುತ್ತಿದ್ದಾರೆ ಈ ಬಗ್ಗೆ ವೀಡಿಯೋ ಅಪ್ ಲೋಡ್ ಮಾಡಿರುವ ಭುವನಾ ಅವರು ಶನಿವಾರದವರೆಗೂ ಸರ್ಪ್ರೈಸ್ ಗಾಗಿ ಕಾಯಿಸಿ ಎಂದು ಹೇಳಿದ್ದಾರೆ. ಆದರೆ ಇದೂ ಕೂಡ ಅವರ ತಾಯಿಯ ಸೀರೆನಾ, ಯಾವ ರೀತಿಯ ಉಡುಗೆಯನ್ನು ಸ್ಟಿಚ್ ಮಾಡಿಕೊಳ್ಳುತ್ತಿರಬಹುದು ಎಂಬುದನ್ನು ಕಾದು ನೋಡಬೇಕಿದೆ.


Click it and Unblock the Notifications











