For Quick Alerts
  ALLOW NOTIFICATIONS  
  For Daily Alerts

  ಚಿತ್ರಗಳು: ಹ್ಯಾಪಿ ಮ್ಯಾರೀಡ್ ಲೈಫ್ 'ಕುಲವಧು' ದೀಪಿಕಾ ಮತ್ತು ಆಕರ್ಷ್

  |

  ಕನ್ನಡ ಕಿರುತೆರೆ ಮತ್ತು ಸಿನಿ ಲೋಕದಲ್ಲಿ ಮದುವೆ ಸಂಭ್ರಮ ಜೋರಾಗಿದೆ. ಸಾಲು ಸಾಲು ಕಿರುತೆರೆ ಕಲಾವಿದರು, ಸಿನಿ ನಟರು ವೈವಾಹಿಕ ಬದುಕಿಗೆ ಕಾಲಿಡುತ್ತಿದ್ದಾರೆ. ಮೊನ್ನೆಮೊನ್ನೆಯಷ್ಟೇ 'ಅಗ್ನಿಸಾಕ್ಷಿ' ಧಾರಾವಾಹಿಯ ಮಾಯಾ ಪಾತ್ರಧಾರಿ ನಟಿ ಇಶಿತಾವರ್ಷ ಹೊಸ ಜೀವನ ಆರಂಭಿಸಿದರು.

  ಇದೀಗ 'ಕುಲವಧು' ಧಾರಾವಾಹಿಯ ಧನ್ಯ ಖ್ಯಾತಿಯ ನಟಿ ದೀಪಿಕಾ ವಿವಾಹ ಮಹೋತ್ಸವ ಗ್ರ್ಯಾಂಡ್ ಆಗಿ ನಡೆದಿದೆ. ತಮ್ಮ ಬಹುಕಾಲದ ಗೆಳೆಯ ಆಕರ್ಷ್ ಕೈಹಿಡಿದಿದ್ದಾರೆ ನಟಿ ದೀಪಿಕಾ. 'ವಧು' ದೀಪಿಕಾ ಮತ್ತು ಆಕರ್ಷ್ ಮದುವೆಯ ಫೋಟೋ ಆಲ್ಬಂ ಇಲ್ಲಿದೆ ನೋಡಿ...

  ಹ್ಯಾಪಿ ಮ್ಯಾರೀಡ್ ಲೈಫ್

  ಹ್ಯಾಪಿ ಮ್ಯಾರೀಡ್ ಲೈಫ್

  ಕಿರುತೆರೆ ನಟಿ ದೀಪಿಕಾ ಮತ್ತು ಆಕರ್ಷ್ ಮದುವೆ ಶಾಸ್ತ್ರೋಕ್ತವಾಗಿ ಅಷ್ಟೇ ಕಲರ್ ಫುಲ್ ಆಗಿ ನೆರವೇರಿದೆ. ತಾಳಿ ಕಟ್ಟುವ ಶುಭ ವೇಳೆಯಲ್ಲಿ ವರ ಆಕರ್ಷ್ ಮತ್ತು ವಧು ದೀಪಿಕಾ ಖುಷಿ ಖುಷಿಯಾಗಿದ್ದರು. ಆ ವೇಳೆ ಕ್ಲಿಕ್ ಆಗಿರುವ ಫೋಟೋ ಇದು. ಬಿಳಿ ಮತ್ತು ತಿಳಿ ಕೆಂಪು ಬಣ್ಣದ ರೇಶ್ಮೆ ಸೀರೆಯಲ್ಲಿ ನಟಿ ದೀಪಿಕಾ ಮಿಂಚಿದರೆ, ವರ ಆಕರ್ಷ್ ರೇಶ್ಮೆ ಪಂಚೆ-ಶಲ್ಯ ತೊಟ್ಟಿದ್ದರು.

  ನಿಶ್ಚಿತಾರ್ಥ ಮಾಡಿಕೊಂಡ ಕುಲವಧು ಖ್ಯಾತಿಯ ಧನ್ಯಾನಿಶ್ಚಿತಾರ್ಥ ಮಾಡಿಕೊಂಡ ಕುಲವಧು ಖ್ಯಾತಿಯ ಧನ್ಯಾ

  ಲವ್ ಕಮ್ ಅರೇಂಜ್ಡ್ ಮ್ಯಾರೇಜ್

  ಲವ್ ಕಮ್ ಅರೇಂಜ್ಡ್ ಮ್ಯಾರೇಜ್

  'ಧನ್ಯ' ಪಾತ್ರದ ಮೂಲಕ ಎಲ್ಲರ ಮನಗೆದ್ದಿದ್ದ ದೀಪಿಕಾ, ಬಹುಕಾಲದ ಗೆಳೆಯ ಆಕರ್ಷ್ ಜೊತೆಗೆ ಹೊಸ ಬಾಳಿಗೆ ಅಡಿಯಿಟ್ಟಿದ್ದಾರೆ. ಹಾಗ್ನೋಡಿದ್ರೆ, ದೀಪಿಕಾ ಮತ್ತು ಆಕರ್ಷ್ ರದ್ದು ಇದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್. ವರ್ಷಗಳಿಂದ ಪ್ರೀತಿ ಮಾಡುತ್ತಿದ್ದ ದೀಪಿಕಾ ಮತ್ತು ಆಕರ್ಷ್ ಪ್ರೇಮಕ್ಕೆ ಇದೀಗ ಅಧಿಕೃತ ಮುದ್ರೆ ಬಿದ್ದಿದೆ.

  ಮದುವೆ ಸಂಭ್ರಮದಲ್ಲಿ ಕಿರುತೆರೆಯ ಖ್ಯಾತ ನಟಿ ದೀಪಿಕಾಮದುವೆ ಸಂಭ್ರಮದಲ್ಲಿ ಕಿರುತೆರೆಯ ಖ್ಯಾತ ನಟಿ ದೀಪಿಕಾ

  'ಮಿಸ್ ಸೌತ್ ಇಂಡಿಯಾ ಗ್ಲಾಮರ್'

  'ಮಿಸ್ ಸೌತ್ ಇಂಡಿಯಾ ಗ್ಲಾಮರ್'

  ಕನ್ನಡ ಕಿರುತೆರೆಯಲ್ಲಿ ಮಿಂಚುತ್ತಿರುವ ದೀಪಿಕಾ ಮಿಸ್ ಸೌತ್ ಇಂಡಿಯಾ ಗ್ಲಾಮರ್ 2019 ಕಿರೀಟ ತೊಟ್ಟಿದ್ದಾರೆ. 'ಕುಲವಧು' ಸೇರಿದಂತೆ ಕೆಲ ಧಾರಾವಾಹಿಗಳಲ್ಲಿ ಮಿಂಚಿರುವ ದೀಪಿಕಾ ಬೆಳ್ಳಿಪರದೆ ಮೇಲೂ ರಾರಾಜಿಸಿದ್ದಾರೆ. 'ನನ್ ಮಗಳೇ ಹೀರೋಯಿನ್' ಮತ್ತು 'ಚಿಟ್ಟೆ' ಚಿತ್ರಗಳಲ್ಲೂ ದೀಪಿಕಾ ಕಾಣಿಸಿಕೊಂಡಿದ್ದಾರೆ.

  ಆಶೀರ್ವಾದ ಮಾಡಿದ ಶ್ರೀನಾಥ್

  ಆಶೀರ್ವಾದ ಮಾಡಿದ ಶ್ರೀನಾಥ್

  ದೀಪಿಕಾ ಮದುವೆ ಆಗಿರುವ ಹುಡುಗ ಆಕರ್ಷ್ ಕೂಡ ಕಿರುತೆರೆ ಕಲಾವಿದ. ಉದಯ ಟಿವಿಯಲ್ಲಿ ಪ್ರಸಾರ ಆಗುತ್ತಿರುವ 'ಮಾನಸ ಸರೋವರ' ಧಾರಾವಾಹಿಯಲ್ಲಿ ಆಕರ್ಷ್ ನಟಿಸುತ್ತಿದ್ದಾರೆ. ನವ ವಧು-ವರ ದೀಪಿಕಾ-ಆಕರ್ಷ್ ಗೆ ಪ್ರಣಯ ರಾಜ ಶ್ರೀನಾಥ್ ದಂಪತಿ ಆಶೀರ್ವಾದ ಮಾಡಿದ್ದಾರೆ.

  English summary
  Kannada TV Actress Deepika got married to Akarsh.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X