ಹೊಸ ಬಿಸಿನೆಸ್ ಶುರು ಮಾಡಿದ ನಟಿ ಧನ್ಯಾ ದೀಪಿಕಾ
ಈಗ ಮೇಕಪ್ ಆರ್ಟಿಸ್ಟ್‌ಗಳಿಗೆ ಇರುವ ಡಿಮ್ಯಾಂಡ್ ಮತ್ಯಾರಿಗೂ ಇಲ್ಲ. ಅದರಲ್ಲೂ ನಮ್ಮ ಭಾರತದಲ್ಲಿ ಪ್ರತಿಯೊಬ್ಬ ಹೆಣ್ಣು ಮಗು ಕೂಡ ಸಿಂಗಾರ ಮಾಡಿಕೊಂಡು ಸುಂದರವಾಗಿ ಕಾಣಬೇಕು ಎಂದೇ ಬಯಸುತ್ತಾರೆ. ಮೇಕಪ್ ಇಲ್ಲದೇ ಎಷ್ಟೋ ಹೆಣ್ಣು ಮಕ್ಕಳು ಮನೆಯಿಂದ ಹೊರಗೆ ಹೋಗಲು ಬಯಸುವುದಿಲ್ಲ. ಹೀಗಿರುವಾಗ ಹಬ್ಬ-ಹರಿ ದಿನಗಳಲ್ಲಿ, ಮತ್ತು ಯಾವುದಾದರೂ ಮುಖ್ಯವಾದ ಕಾರ್ಯಕ್ರಮಗಳಿದ್ದರೆ ಹೇರ್ ಸ್ಟೈಲ್, ಮೇಕಪ್ ಮಾಡಿಕೊಂಡು ಹೋಗಲು ಬಯಸುತ್ತಾರೆ.
ಕೆಲವರು ತಾವೇ ಮೇಕಪ್ ಮಾಡಿಕೊಂಡರೆ, ಹೆಚ್ಚು ಜನ ಮೇಕಪ್ ಆರ್ಟಿಸ್ಟ್‌ಗಳ ಮೇಲೆ ಅವಲಂಬನೆ ಆಗುತ್ತಾರೆ. ಮದುವೆ, ನಾಮಕರಣ, ಗೃಹಪ್ರವೇಶ ಹೀಗೆ ಯಾವುದೇ ಫಂಕ್ಷನ್ ಇದ್ದರೂ ಅಲ್ಲಿಗೆ ಮೇಕಪ್ ಆರ್ಟಿಸ್ಟ್‌ಗಳಿಗೆ ಮೊದಲ ಆಹ್ವಾನವಿರುತ್ತದೆ.

ಆಕ್ಟಿಂಗ್ ಕಮ್ ಮೇಕಪ್ ಆರ್ಟಿಸ್ಟ್
ಎಲ್ಲಾ ಕಡೆಗಳಲ್ಲೂ ಮೇಕಪ್, ಹೇರ್ ಸ್ಟೈಲ್, ಸೀರೆ ಪ್ರಿ ಪ್ಲೀಟ್‌ಗಳಿಗೆ ಕೋರ್ಸ್‌ಗಳು ಕೂಡ ಇವೆ. ಹೆಣ್ಣು ಮಕ್ಕಳು ಮಾತ್ರವಲ್ಲದೇ, ಗಂಡಸರು ಕೂಡ ಈ ಕೋರ್ಸ್‌ಗಳನ್ನು ಇಷ್ಟ ಪಟ್ಟು ಕಲಿಯುತ್ತಾರೆ. ಮೇಕಪ್‌ನಲ್ಲಿ ಈಗಂತೂ ತರಹೇವಾರಿ ರೀತಿಗಳಿವೆ, ಗ್ಲಾಸ್ ಲುಕ್, ಸಿಂಪಲ್, ಲುಕ್, ರಿಚ್ ಲುಕ್ ಎಂದೆಲ್ಲಾ ಇದ್ದು, ಮೇಕಪ್ ಆರ್ಟಿಸ್ಟ್‌ಗಳಿಗೆ ಡಿಮ್ಯಾಂಡ್ ಇರುವುದಂತೂ ನಿಜ. ಮೇಕಪ್ ಆರ್ಟಿಸ್ಟ್ ಆಗಿರುವ ನಟಿ ಕಾವೇರಿ ಬಾಗಲಕೋಟೆ ಅವರು ಕೋರ್ಸ್ ಕೂಡ ಮಾಡುತ್ತಾರೆ. ತಮ್ಮದೇ ಸ್ವಂತ ಬಿಸಿನೆಸ್ ಅನ್ನು ನಡೆಸಿಕೊಂಡು ಹೋಗುತ್ತಿದ್ದಾರೆ.
ಮೇಕಪ್ ಟಿಪ್ಸ್
ಮೇಕಪ್ ಆರ್ಟಿಸ್ಟ್ ಆಗಲು ಬಯಸುವವರಿಗೆ ಕೋರ್ಸ್ ಮಾಡುತ್ತಿರುತ್ತಾರೆ. ಇದರ ಬಗ್ಗೆ ಕಾವೇರಿ ಅವರು ಆಗಾಗ್ಗೆ ವೀಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡುತ್ತಿರುತ್ತಾರೆ. ಕ್ಲಾಸ್ ಆರಂಭ ಆಗುವ ಬಗ್ಗೆ, ಟ್ರೈನಿಂಗ್ ಕೊಡುತ್ತಿರುವ ವೀಡಿಯೋಗಳು, ಹಾಗೂ ಮೇಕಪ್ ಕುರಿತಾದ ಕೆಲ ಟಿಪ್ಸ್ ಗಳನ್ನು ಕಾವೇರಿ ಬಾಗಲಕೋಟೆ ಅವರು ಹಂಚಿಕೊಳ್ಳುತ್ತಿರುತ್ತಾರೆ. ಈಗ ಈ ಸಾಲಿಗೆ ಮತ್ತೊಬ್ಬ ನಟಿ ಸೇರಿಕೊಳ್ಳಲಿದ್ದಾರೆ.
ಆರ್ಟಿಸ್ಟ್ ಜೊತೆ ಟೀಚರ್
ಅದೇ ರೀತಿಯಲ್ಲಿ ಈಗ ನಟಿ ಧನ್ಯಾ ದೀಪಿಕಾ ಅವರು ಕೂಡ ಮೇಕಪ್ ಆರ್ಟಿಸ್ಟ್ ಕೋರ್ಸ್ ಹೊಸ ಬಿಸಿನೆಸ್ ಅನ್ನು ಶುರು ಮಾಡಿದ್ದಾರೆ. ಇತ್ತೀಚೆಗಷ್ಟೇ ಚೈತ್ರಾ ಕುಂದಾಪುರ ಅವರಿಗೆ ಮೇಕಪ್ ಮಾಡಿದ್ದರು, ಇದರ ರೀಲ್ಸ್ ಅನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡಿದ್ದರು. ಮೇಕಪ್ ನಲ್ಲಿ ಸುಂದರವಾಗಿ ಕಾಣುವ ಚೈತ್ರಾ ಅವರನ್ನು ನೋಡಿದವರೆಲ್ಲಾ ಧನ್ಯಾ ಅವರಿಗೆ ಉತ್ತಮವಾದ ರೆಸ್ಪಾನ್ಸ್ ಸಿಕ್ಕಿತ್ತು. ಇದರಿಂದ ಧನ್ಯಾ ದೀಪಿಕಾ ಅವರಿಗೆ ಖುಷಿ ಕೂಡ ಆಗಿತ್ತು. ಎಲ್ಲರೂ ಧನ್ಯಾ ಅವರ ಮೇಕಪ್ ಅನ್ನು ಇಷ್ಟಪಟ್ಟಿದ್ದಾರೆ. ಹೀಗಾಗಿ ಧನ್ಯಾ ಅವರು ಕೂಡ ಮೇಕಪ್ ಟೀಚರ್ ಆಗಲು ಮುಂದಾಗಿದ್ದಾರೆ.
ನಾಳೆಯೇ ಕೊನೆಯ ದಿನ
ನಟಿ ಧನ್ಯಾ ದೀಪಿಕಾ ಅವರು ತಮ್ಮದೇ ಬಿಸಿನೆಸ್ ಆರಂಭಿಸಲು ಮುಂದಾಗಿದ್ದಾರೆ. ಮೇಕಪ್ ಕೋರ್ಸ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಪಾಶ್ ಪ್ಯಾಲೆಟ್ ಮೂಲಕ ಮೇಕಪ್ ಹೇಳಿಕೊಡುವುದಾಗಿ ತಿಳಿಸಿದ್ದು, ನಂಬರ್ ಕೂಡ ಕೊಟ್ಟಿದ್ದಾರೆ. ಸೇರಿಕೊಳ್ಳುವವರಿಗೆ ಸ್ಥಳ, ಸಮಯ ಹಾಗೂ ಫೀಸ್ ಬಗ್ಗೆ ಹೇಳುವುದಾಗಿ ತಿಳಿಸಿದ್ದಾರೆ. 7019966393 ನಂಬರ್‌ಗೆ ಕರೆ ಮಾಡಿ ಬೇಗನೇ ಜಾಯಿನ್ ಆಗಿ. ನಾಳೆಯೇ ಫಸ್ಟ್ ಬ್ಯಾಚ್‌ಗೆ ಸೇರಿಕೊಳ್ಳಲು ಕೊನೆಯ ದಿನವಾಗಿದೆ. ಇನ್ನು ಮೊದಲ ಬ್ಯಾಚ್ ನಲ್ಲಿ ಸ್ವತಃ ಧನ್ಯಾ ಅವರೇ ಇದ್ದು ಮೇಕಪ್ ಹೇಳಿಕೊಡಲಿದ್ದಾರೆ. ಮೇಕಪ್ ಬಗ್ಗೆ ಸಾಕಷ್ಟು ಟಿಪ್ಸ್ ನೀಡುತ್ತಾರಂತೆ.


Click it and Unblock the Notifications











