ಬೆಳ್ಳಿ ತೊಟ್ಟಿಲಿನಲ್ಲಿ ಮಗುವಿಗೆ ಶಾಸ್ತ್ರ ಮಾಡಿದ ನಟಿ ಕಾವ್ಯ ಗೌಡ
ಇತ್ತೀಚೆಗಷ್ಟೇ ಕಿರುತೆರೆ ನಟಿ ಕಾವ್ಯ ಗೌಡ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಇದೀಗ ಕಾವ್ಯ ಗೌಡ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ತನ್ನ ಮುದ್ದಾದ ಮಗಳಿಗೆ ಇದೀಗ ತೊಟ್ಟಿಲು ಶಾಸ್ತ್ರವನ್ನು ಮಾಡಿ ಮುಗಿಸಿದ್ದಾರೆ. ಹೆಣ್ಣು ಮಗಳು ಹುಟ್ಟಿರುವುದು ಕಾವ್ಯ ಗೌಡಗೆ ಬಹಳ ಸಂತಸ ತಂದಿದೆ ಕೂಡ.
ತೊಟ್ಟಿಲು ಶಾಸ್ತ್ರ ಮಾಡುವ ವೇಳೆ ಮೊದಲು ಕ್ಯಾಮರಾ ಕಣ್ಣಿಗೆ ಬಿದ್ದಿದ್ದು ಬೆಳ್ಳಿಯ ತೊಟ್ಟಿಲು. ಹೌದು ಕಾವ್ಯ ಗೌಡ ಮಗುವಿಗಾಗಿ ಬೆಳ್ಳಿ ತೊಟ್ಟಿಲು ತರಿಸಿದ್ದಾರೆ. ಬೆಳ್ಳಿ ತೊಟ್ಟಿಲ ಡಿಸೈನ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ.

ಈಗಾಗಲೇ ತೊಟ್ಟಿಲ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜನವರಿ 22ರಂದು ರಾಮಮಂದಿರ ಲೋಕಾರ್ಪಣೆ ದಿನವೇ ಕಾವ್ಯ ಮನೆಗೆ ಮಹಾಲಕ್ಷ್ಮಿಯನ್ನು ಸ್ವಾಗತಿಸಿದ್ದರು. ತಾಯಿ ಮಗು ಆರೋಗ್ಯವಾಗಿ ಇದ್ದಾರೆ ಕೂಡ. ಇದರಿಂದ ಕಾವ್ಯ ಗೌಡ ಮನೆಯಲ್ಲಿ ಸಂಭ್ರಮ ಮನೆ ಕಳೆಗಟ್ಟಿದೆ.
ತೊಟ್ಟಿಲು ಶಾಸ್ತ್ರದ ಹೈಲೆಟ್
ಫೆಬ್ರವರಿ 1ರಂದು ಮನೆಯಲ್ಲಿ ಮಗುವಿಗೆ ತೊಟ್ಟಿಲು ಶಾಸ್ತ್ರ ನಡೆದಿದ್ದು ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್ ಆಗಿದೆ.
ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ. ನಿನ್ನಷ್ಟು ನೆಮ್ಮದಿಯ ಎಲ್ಲಿಹುದೋ ರಾಮ' ಎಂದು ರಾಮನ ಹಾಡಿನ ಪ್ರತಿಯೊಂದು ಸಾಲುಗಳನ್ನು ಕಾವ್ಯ ಬರೆದುಕೊಂಡಿದ್ದಾರೆ. ಇನ್ನು ಕಾವ್ಯ ಗೌಡ ರಾಧಾ ರಮಣ ಧಾರವಾಹಿ ಮೂಲಕ ಎಲ್ಲರ ಮನಸ್ಸನ್ನೂ ಕೂಡ ಗೆದ್ದಿದ್ದರು.
ವೀಕ್ಷಕರ ನೆಚ್ಚಿನ ಕಾವ್ಯ
'ಗಾಂಧಾರಿ', 'ಶುಭ ವಿವಾಹ' ಸೇರಿದಂತೆ ಹಲವು ದೊಡ್ಡ ದೊಡ್ಡ ಧಾರಾವಾಹಿಗಳಲ್ಲಿ ಕಾವ್ಯ ನಟಿಸಿದ್ದಾರೆ. ಫೋಟೋ ಟ್ಯಾಗ್ ಮಾಡುವ ಮೊದಲು ಇಲ್ಲಿಂದ ನಮ್ಮ ಜೀವನದ ಮೊದಲ ಚಾಪ್ಟರ್ ಆಫ್ ಫೇರಿ ಟೈಲ್' ಎಂದಿದ್ದಾರೆ ಕಾವ್ಯಾ ಗೌಡ. ಇನ್ನು ಕಾವ್ಯ ಗೌಡ ಅವರ ಮನೆಯಲ್ಲಿ ಈಗಾಗಲೇ ಸಂತಸ ಮನೆ ಮಾಡಿದೆ.
ಕಂದನಿಗೆ ಬಟ್ಟೆ ಡಿಸೈನ್ ಮಾಡಿದ ದೊಡ್ಡಮ್ಮ
ಕಾವ್ಯ ಗೌಡ ಮಗಳಿಗೆ ಕಾವ್ಯ ಅಕ್ಕ ಭವ್ಯ ಗೌಡ ಫ್ರಾಕ್ ಡಿಸೈನ್ ಮಾಡಿದ್ದಾರೆ. ಹಾಗೆಯೇ ಬೆಳ್ಳಿ ತೊಟ್ಟಿಲಿನಲ್ಲಿ ತೊಟ್ಟಿಲು ಶಾಸ್ತ್ರ ಮಾಡಿದ್ದಾರೆ. ಬಳಿಕ ಮಗುವಿಗೆ ಕಾಲು ಗೆಜ್ಜೆ ದೃಷ್ಠಿ ಬಳೆ ಹಾಕಿದ್ದಾರೆ. ಮಗು ನೋಡಲು ಕೂಡ ಬಹಳ ಕ್ಯೂಟ್ ಆಗಿ ಇದೆ. ಬೆಳ್ಳಿಯ ತೊಟ್ಟಿಲಿಗೆ ಬಿಳಿ ಹಾಗೂ ಕೆಂಪು ಹೂವಿನಿಂದ ಅಲಂಕಾರ ಮಾಡಲಾಗಿದೆ . ಆ ತೊಟ್ಟಿಲು ಹೈಲೆಟ್ ಆಗಿತ್ತು.

ಅದ್ಧೂರಿ ಸಮಾರಂಭ
ಉದ್ಯಮಿ ಸೋಮಶೇಖರ್ ಜೊತೆ 2021 ರಲ್ಲಿ ಕಾವ್ಯಾ ಗೌಡ ಮದುವೆ ಆಗಿತ್ತು. ಇದೀಗ 2024 ರಲ್ಲಿ ಕಾವ್ಯ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಸೀಮಂತ ಶಾಸ್ತ್ರದ ಫೋಟೋ ಶೂಟ್ ಬಹಳ ಅದ್ಭುತವಾಗಿ ಮೂಡಿ ಬಂದಿತ್ತು. ಇದೀಗ ಮಗುವಿನ ತೊಟ್ಟಿಲು ಶಾಸ್ತ್ರ ಕೂಡ ಅಷ್ಟೇ ಅದ್ಭುತವಾಗಿ ಅದ್ದೂರಿಯಾಗಿ ಮಾಡಿದ್ದಾರೆ.


Click it and Unblock the Notifications











