For Quick Alerts
  ALLOW NOTIFICATIONS  
  For Daily Alerts

  Kavya Shastry Boyfriend : 15 ವರ್ಷದ ಬಳಿಕ ಸಿಕ್ಕ ಕ್ಯಾವ್ಯಾ ಶಾಸ್ತ್ರಿ ಬಾಯ್ ಫ್ರೆಂಡ್ ಇವರೇ ನೋಡಿ!

  By ಪ್ರಿಯಾ ದೊರೆ
  |

  ಕಾವ್ಯಾ ಶಾಸ್ತ್ರಿ ಅವರ ಬಾಯ್ ಫ್ರೆಂಡ್ ತಮಗೆ ಸಿಕ್ಕಿದ್ದೇ ಪವಾಡ ಎಂದು ಸೋಶಿಯಲ್ ಮೀಡಿಯಾದ ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 15 ವರ್ಷಗಳ ನಂತರ ಪವಾಡದಲ್ಲಿ ನಂಬಿಕೆ ಬರುವಂತೆ ಕಾವ್ಯಾ ಶಾಸ್ತ್ರಿಗೆ ತಮ್ಮ ಬಾಯ್ ಫ್ರೆಂಡ್ ಸಿಕ್ಕಿದ್ದಾರೆ. ತಮ್ಮ ಕಾಲೇಜು ಸ್ನೇಹಿತನನ್ನು ಮತ್ತೆ ಪಡೆದಿರುವುದಕ್ಕೆ ಕಾವ್ಯಾ ಕೂಡ ಸಂತಸ ಪಟ್ಟಿದ್ದಾರೆ. ಅವರೊಂದಿಗೆ ಮುಂದಿನ ಜೀವನವನ್ನೂ ನಡೆಸಲು ಮುಂದಾಗಿದ್ದಾರೆ. ಈ ಬಗ್ಗೆ ಸ್ವತಃ ಕಾವ್ಯಾ ಅವರೇ ತಿಳಿಸಿದ್ದಾರೆ. ಕಳೆದ ವರ್ಷ ಸ್ನೇಹಿತ ಸಿಕ್ಕಿದ್ದು, ಈ ಬಗ್ಗೆ ಸಂತಸ ಹಂಚಿಕೊಂಡಿದ್ದರು.

  ಕಾವ್ಯಾ ಶಾಸ್ತ್ರಿ ಬಾಯ್ ಫ್ರೆಂಡ್ ಹೆಸರು ಸೂರಜ್ ರಾಧಾಕೃಷ್ಣನ್ ಪಿಳ್ಳೈ. ಸೂರಜ್ ಹಾಗೂ ಕಾವ್ಯಾ ಕಾಲೇಜು ದಿನಗಳಾದ ಮೇಲೆ ಬರೋಬ್ಬರಿ 15 ವರ್ಷಗಳ ಕಾಲ ಸಂಪರ್ಕವಿರಲಿಲ್ಲ. ಆದರೆ ಇದ್ದಕ್ಕಿದ್ದಂತೆ ಕಾವ್ಯಾ ಹಾಗೂ ಸೂರಜ್ ಸಂಪರ್ಕಕ್ಕೆ ಸಿಕ್ಕಿದ್ದು, ಕಳೆದ ವರ್ಷ ಮೊದಲ ಬಾರಿಗೆ ಒಟ್ಟಿಗೆ ಯುಗಾದಿ ಹಬ್ಬವನ್ನೂ ಆಚರಿಸಿದ್ದರು. ಸೂರಜ್ ಹಾಗೂ ಕಾವ್ಯಾ ಮುಂದಿನ ದಿನಗಳಲ್ಲೂ ಹೀಗೆ ಒಟ್ಟಿಗೆ ಬಾಳುವ ಆಸೆಯನ್ನು ಹೊಂದಿದ್ದಾರೆ. ಆದರೆ ಇವರಿಬ್ಬರ ಮದುವೆ ಯಾವಾಗ ಎಂಬ ಬಗ್ಗೆ ಮುಂದಿನ ದಿನಗಳಲ್ಲಿ ತಿಳಿದು ಬರಲಿದೆ.

  Mahanayaka Serial: 'ಮಹಾನಾಯಕ' ಧಾರಾವಾಹಿಗೆ ಬೆದರಿಕೆ ಹಾಕಿದಾಗ ಬೆನ್ನೆಲುಬಾಗಿ ನಿಂತಿದ್ದ ಯಶ್!Mahanayaka Serial: 'ಮಹಾನಾಯಕ' ಧಾರಾವಾಹಿಗೆ ಬೆದರಿಕೆ ಹಾಕಿದಾಗ ಬೆನ್ನೆಲುಬಾಗಿ ನಿಂತಿದ್ದ ಯಶ್!

  ಉದಯ ಟಿವಿಯಲ್ಲಿ ಇತ್ತೀಚೆಗೆ ಹೊಸ ಹೊಸ ಧಾರಾವಾಹಿಗಳು ಮೂಡಿ ಬರುತ್ತಿವೆ. ಮಾರ್ಚ್ ತಿಂಗಳಿನಲ್ಲೇ 'ರಾಧಿಕಾ', 'ಮಧು ಮಗಳು' ಸೀರಿಯಲ್ ಆರಂಭವಾಗಿದೆ. 'ರಾಧಿಕಾ' ಧಾರಾವಾಹಿಯಲ್ಲಿ ನಾಯಕಿ ಪಾತ್ರದಲ್ಲಿ ಕಾವ್ಯಾ ಶಾಸ್ತ್ರಿ ನಟಿಸುತ್ತಿದ್ದಾರೆ. ಹಲವು ವರ್ಷಗಳಿಂದ ಕಿರುತೆರೆಯಲ್ಲಿರುವ ಕಾವ್ಯಾಶಾಸ್ತ್ರಿ ಹಲವು ಧಾರಾವಾಹಿಗಳಿಗೆ ಬಣ್ಣ ಹಚ್ಚಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಶುಭ ವಿವಾಹ ಹಾಗೂ ಉದಯ ಟಿವಿಯಲ್ಲಿ ಮೂಡಿ ಬಂದ ನಂದಿನಿ ಧಾರಾವಾಹಿಗಳಲ್ಲಿ ನಟಿಸಿದ್ದರು.

  ಇನ್ನು ತಮಿಳಿನ ಧಾರಾವಾಹಿಗಳಲ್ಲೂ ಕಾವ್ಯಾ ಶಾಸ್ತ್ರಿ ನಟಿಸಿದ್ದಾರೆ. ಕೇವಲ ಧಾರಾವಾಹಿಗಳಲ್ಲಿ ನಟಿಸುವುದಲ್ಲದೇ ಕಾವ್ಯಾ ಶಾಸ್ತ್ರಿ ನಿರೂಪಣೆಯನ್ನು ಸಹ ಮಾಡಿದ್ದಾರೆ. ಕಾವ್ಯಾ ಶಾಸ್ತ್ರಿ ಕೆಲ ದಿನಗಳ ಕಾಲ ಸೈಲೆಂಟ್ ಆಗಿದ್ದರು. ಇದೀಗ ಮತ್ತೆ ಕಿರುತೆರೆಗೆ ರಾಧಿಕಾ ಧಾರಾವಾಹಿ ಮೂಲಕ ಕಮ್ ಬ್ಯಾಕ್ ಮಾಡಿದ್ದಾರೆ.

   Hitler Kalyana: ಲೀಲಾ ಮತ್ತೊಂದು ಎಡವಟ್ಟು: ಎಜೆ ಮಂಗಳೂರಿಂದ ಬಂದ ಮೇಲೆ ಏನಾಗುತ್ತೆ? Hitler Kalyana: ಲೀಲಾ ಮತ್ತೊಂದು ಎಡವಟ್ಟು: ಎಜೆ ಮಂಗಳೂರಿಂದ ಬಂದ ಮೇಲೆ ಏನಾಗುತ್ತೆ?

  ಪುಟಾಣಿ ಪಂಟ್ರು ಹಾಗೂ ಸ್ಟಾರ್ ಸಿಂಗರ್ ಸೇರಿದಂತೆ ಕೆಲ ಶೋಗಳ ನಿರೂಪಣೆಯನ್ನು ಕಾವ್ಯಾ ಶಾಸ್ತ್ರಿ ಮಾಡಿದ್ದರು. ಜೊತೆಗೆ ಐಫಾ ಹಾಗೂ ಮಿರ್ಚಿ ಪ್ರಶಸ್ತಿ ಸಮಾರಂಭಗಳಲ್ಲೂ ಕಾವ್ಯಾ ಶಾಸ್ತ್ರಿ ಆಂಕರಿಂಗ್ ಮಾಡಿದ್ದರು. ಅಲ್ಲದೇ ಒಟಿಟಿಯ ವೆಬ್ ಸೀರಿಸ್ ಒಂದರಲ್ಲೂ ಕಾವ್ಯಾ ಶಾಸ್ತ್ರಿ ನಟಿಸಿದ್ದರು. ಮಂಗಳ ಎಂಬ ವೆಬ್ ಸಿರೀಸ್ ನಲ್ಲಿ ಕಾವ್ಯಾ ಶಾಸ್ತ್ರಿ ನಟಿಸಿದ್ದರು. ನಿರೂಪಕಿಯಾಗಿ ಕನ್ನಡಿಗರಿಗೆ ಪರಿಚಿತರಾಗಿರುವ ಕಾವ್ಯಾ ಶಾಸ್ತ್ರಿ, ಸೀರಿಯಲ್‌ಗಳ ಕ್ಯಾರೆಕ್ಟರ್‌ಗಳ ಮೂಲಕ ಜನರಿಗೆ ಇನ್ನೂ ಹತ್ತಿರವಾಗಿದ್ದಾರೆ ಎಂದರೆ ತಪ್ಪಾಗಲಾರದು.

  ಕಾವ್ಯಾ ಶಾಸ್ತ್ರಿ ಕೇವಲ ಕಿರುತೆರೆಗಷ್ಟೇ ಸೀಮಿತವಾಗಿರದೇ ಕೆಲ ಚಿತ್ರಗಳಲ್ಲೂ ನಟಿಸಿದ್ದಾರೆ. ಕಾವ್ಯಾ ಶಾಸ್ತ್ರಿ ನಿರೂಪಕಿಯಾದ ಸಂದರ್ಭದಲ್ಲೇ 'ಯುಗ' ಎಂಬ ಸಿನಿಮಾದಲ್ಲಿ ನಟಿಸಿದ್ದರು. ದುನಿಯಾ ವಿಜಯ್ ಜೊತೆಗೆ ತೆರೆ ಹಂಚಿಕೊಂಡಿದ್ದರು. ಆದರೆ ಸಿನಿಮಾ ನೀರಿಕ್ಷಿಸಿದಷ್ಟು ಯಶಸ್ಸು ಕಂಡಿರಲಿಲ್ಲ. ಇನ್ನು ಕಾವ್ಯಾ ಶಾಸ್ತ್ರಿ ನಟಿಸಿದ ಕೊನೆಯ ಸಿನಿಮಾ 'ಚೆಲುವೆಯೇ ನಿನ್ನ ನೋಡಲು'. ಈ ಚಿತ್ರದಲ್ಲಿ ನಟಿಸಲು ಕಾರಣ ಅವರ ಸ್ನೇಹಿತ, ನಿರ್ದೇಶಕ ರಘುರಾಮ್. ಇದಾದ ಮೇಲೆ ಕಾವ್ಯಾ ಶಾಸ್ತ್ರಿ ಮತ್ಯಾವ ಸಿನಿಮಾದಲ್ಲೂ ನಟಿಸಲಿಲ್ಲ.

  English summary
  Kannada Tv Actress kavya Shastri Real Life Boy Friend Detail Is Here, know More
  Tuesday, March 22, 2022, 9:48
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X