Malaika Vasupal: ಉಪಾಧ್ಯಕ್ಷೆ ತೊಟ್ಟ ಈ ಲೆಹೆಂಗಾ ಬೆಲೆ ಎಷ್ಟು?

By ಎಸ್ ಸುಮಂತ್

ಮಲೈಕಾ ವಸುಪಾಲ್ ಈಗ ಸಿಕ್ಕಾಪಟ್ಟೆ ಬ್ಯುಸಿ ಆಗೋಗಿದ್ದಾರೆ. ಜೀ ಕನ್ನಡದ 'ಹಿಟ್ಲರ್ ಕಲ್ಯಾಣ' ಧಾರಾವಾಹಿ‌ ಮೂಲಕ ಮನೆ ಮಾತಾದವರು ಮಲೈಕಾ.

ಆ ಧಾರಾವಾಹಿಯಲ್ಲಿ ಎಡವಟ್ಟು ಲೀಲಾ ಅಂತಾನೇ ಖ್ಯಾತನಾಮರಾಗಿದ್ದರು. ಎಲ್ಲದರಲ್ಲೂ ಶಿಸ್ತನ್ನು ಪಾಲಿಸುತ್ತಿದ್ದ ಎಜೆಗೆ ಮುಟ್ಟಿದ್ದೆಲ್ಲವನ್ನು ಯಡವಟ್ಟು ಮಾಡುವ ಲೀಲಾ ಗಂಟು ಬಿದ್ದರೆ ಹೇಗಿರುತ್ತೆ ಹೇಳಿ. ಸಣ್ಣ ಸಣ್ಣದಕ್ಕೂ ಆ ಕಡೆಯಿಂದ ಗಂಡನಿಂದ ಬೈಸಿಕೊಳ್ಳುತ್ತಲೇ ಇದ್ದಂಗೆ ಆಗುತ್ತೆ.

Kannada Tv Actress Malaika vasupal in Pink lehenga

ಸೀರಿಯಲ್ ಸ್ಟಾರ್ ಆಗ್ಬೇಕು ಅಂತ 'ಹಿಟ್ಲರ್ ಕಲ್ಯಾಣ'ದಲ್ಲಿ ಕನಸು ಕಾಣುತ್ತಿದ್ದ ಲೀಲಾ ಕೈನಲ್ಲಿ ಈಗ ಎರಡು ಸಿನಿಮಾಗಳಿವೆ ಇದರ ಜೊತೆಗೆ ಹೊಸ ಹೊಸ ಕಥೆಯನ್ನು ಕೇಳುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಂತೂ ಸಿಕ್ಕಾಪಟ್ಟೆ ಮಿಂಚುತ್ತಿರುವ ಮಲೈಕಾ ವಸುಪಾಲ್ ಹಾಕುವ ಡ್ರೆಸ್ ಒಂದೊಂದು ಬೆಲೆ ಎಷ್ಟಿರುತ್ತೆ ಗೊತ್ತಾ..?

ಸೋಷಿಯಲ್ ಮೀಡಿಯಾದಲ್ಲಿ ಮಿಂಚಿಂಗ್

ಕಲರ್ ಫುಲ್ ಸೀರೆಯಲ್ಲಿ ಶೈನಿಂಗ್

ಮಲೈಕಾ ವಸುಪಾಲ್ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಬ್ಯುಸಿ. ಹೊಸ ಹೊಸ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕುತ್ತಾ ಇರುತ್ತಾರೆ. ಟ್ರೆಡಿಷನಲ್ ಆಗಿ ಫೋಟೋಶೂಟ್ ಮಾಡಿಸುತ್ತಾರೆ. ದಿನೇ ದಿನೇ ಫಾಲೋವರ್ಸ್ ಕೂಡ ಹೆಚ್ಚಾಗುತ್ತಾ ಇದ್ದಾರೆ. ಪ್ರಸ್ತುತ 389 ಸಾವಿರ ಫಾಲೋವರ್ಸ್ ಅನ್ನ ಹೊಂದಿದ್ದಾರೆ. ಮಲೈಕಾ ಒಂದು ಫೋಟೋ ಹಾಕಿದರು ಅದಕ್ಕೆ ಸೂಪರ್ ಡೂಪರ್ ಕಮೆಂಟ್ಸ್ ಗಳು ಬರುತ್ತವೆ.

ಆಫ್ ಸೀರೆ ತೊಟ್ಟು ಡಿಫ್ರೆಂಟ್ ಪೋಸ್

ಇತ್ತೀಚೆಗೆ ಮಲೈಕಾ ಒಂದು ಆಫ್ ಸೀರೆ ಹಾಕಿ ಕ್ಯಾಮಾರಾಗೆ ಪೋಸ್ ನೀಡಿದ್ದಾರೆ. ಮುಗ್ಧ ಹುಡುಗಿಯಂತೆ ಪೋಸ್ ಕೊಟ್ಟು ವಿಡಿಯೋ ಕೂಡ ಹಂಚಿಕೊಂಡಿದ್ದಾರೆ. ಟಿಶ್ಯೂ ರೀತಿಯ ಲೆಹೆಂಗಾ ಅದಾಗಿದೆ. ಮಲೈಕಾ ಆ ಡ್ರೆಸ್ ನಲ್ಲಿ ತುಂಬಾನೇ ಮುದ್ದಾಗಿ ಕಾಣಿಸುತ್ತಿದ್ದಾರೆ. ಆ ವಿಡಿಯೋಗೆ 99 ಸಾವಿರ ಜನ ಲೈಕ್ ಮಾಡಿದ್ರೆ 293 ಕಮೆಂಟ್ಸ್ ಬಂದಿದೆ. ಈ ಕಮೆಂಟ್ಸ್ ನಲ್ಲೆಲ್ಲಾ ನಿನ್ನ ಅಂದವಾ ಹೇಗೆ ಹೊಗಳಲಿ ಎಂದೇ ಕಾಂಪ್ಲಿಮೆಂಟ್ಸ್ ನೀಡಿದ್ದಾರೆ. ಆಲ್ಮೋಸ್ಟ್ ಕವನಗಳ ಮೂಲಕವೇ ಮಲೈಕಾ ಅಂದವನ್ನು ಹೊಗಳಿದ್ದಾರೆ.

ನಿಮ್ಮ ಊಹೆಗೂ ಮೀರಿದ ಬೆಲೆ

ಗೋಲ್ಡನ್ ಕಲರ್ ಲೆಹೆಂಗಾ ಬಾರ್ಡರ್ ಪಿಂಕ್ ಕಲರ್ ಇದೆ. ಬ್ಲೌಸ್ ಹಾಗೂ ದುಪ್ಪಟ್ಟ ಎರಡು ಕೂಡ ಪಿಂಕ್ ಕಲ. ಬ್ಲೌಸ್ ಅನ್ನು ಸ್ಟೋನ್‌ಗಳಿಂದ ಡಿಸೈನ್ ಮಾಡಲಾಗಿದೆ. ಲೆಹೆಂಗಾದ ಬಾರ್ಡರ್ ಕೂಡ ನೋಡುವುದಕ್ಕೆ ಆಕರ್ಷಣೀಯವಾಗಿದೆ. ಮುದ್ದಾದ ಮಲೈಕಾರ ಅಂದವನ್ನು ಈ ಆಫ್ ಸ್ಯಾರಿ ಇನ್ನಷ್ಟು ಹೆಚ್ಚಿಸಿದೆ. ಇದರ ಬೆಲೆ 28,400 ರೂಪಾಯಿ ಆಗಿದೆ. ಬ್ಲೌಸ್ ಡಿಸೈನ್ ಸೇರಿ. ಮಾಯಾ ಔಟ್ ಫಿಟ್‌ನಲ್ಲಿಯೇ ಒದು ರೆಡಿಯಾಗಿದ್ದು, ನಿಮಗೂ ಬೇಕಾದಲ್ಲಿ ಸಂಪರ್ಕಿಸಬಹುದು.

ಡ್ಯಾನ್ಸ್‌ನಲ್ಲೂ ಮಲೈಕಾ ಸೈ

'ಉಪಾಧ್ಯಕ್ಷ' ಸಿನಿಮಾ ಹಿಟ್ ಆದ ಮೇಲೆ ಮಲೈಕಾಗೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ಸಿಗುತ್ತಿವೆ. ಈಗಾಗಲೇ 'ವಿಧ್ಯಾಪತಿ' ಸಿನಿಮಾ ಮಾಡುತ್ತಿರುವ ಮಲೈಕಾಗೆ 'ಕಲ್ಟ್' ಆಫರ್ ಕೂಡ ಸಿಕ್ಕಿದೆ. ಒಳ್ಳೆ ಡ್ಯಾನ್ಸರ್ ಕೂಡ ಹೌದು. ಇತ್ತಿಚೆಗಷ್ಟೇ 'ನನಗೂ ಒಬ್ಬ ಗೆಳೆಯ ಬೇಕು' ಹಾಡಿಗೆ ಡ್ಯಾನ್ಸ್ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ನಟನೆ ಮಾತ್ರವಲ್ಲ ಡ್ಯಾನ್ಸ್‌ನಲ್ಲೂ ಮಲೈಕಾ ಕ್ಯೂಟ್ ಕ್ಯೂಟ್ ಅಂತಾರೆ ಫ್ಯಾನ್ಸ್.

More from Filmibeat

English summary
Here is the details about Malaika vasupal wearing an expensive Lehenga;
Read more about: filmibeat news sumanth tv
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X