Mansi Joshi: ಮಾನ್ಸಿ ಅರಿಶಿನ ಶಾಸ್ತ್ರದಲ್ಲಿ ಮೋಕ್ಷಿತಾ; ಅಭಿಮಾನಿಗಳಿಂದ ಪಾರುಗೆ ಸ್ಪೆಷಲ್ ಡಿಮ್ಯಾಂಡ್

By ಎಸ್ ಸುಮಂತ್

ಸ್ಯಾಂಡಲ್‌ವುಡ್‌ನಲ್ಲಿ ಮದುವೆ ಸಂಭ್ರಮ ಜೋರಾಗಿದೆ. ಅತ್ತ ಜಯಮಾಲ ಮಗಳು ಸೌಂದರ್ಯಾ ಮದುವೆ. ಇತ್ತ ರಕ್ಷಿತಾ ಸಹೋದರ ರಾಣ ಮದುವೆ. ಸೆಲೆಬ್ರೆಟಿಗಳಂತೂ ಎರಡು ಮದುವೆಗೂ ಓಡಾಡಿದ್ದೆ ಆಯ್ತು. ಇದರ ನಡುವೆ ಕಿರುತೆರೆ ನಟಿಯ ಮನೆಯಲ್ಲೂ ಮದುವೆ ಸಂಭ್ರಮ ಮನೆ ಮಾಡಿದೆ. ಅದುವೇ ಮಾನ್ಸಿ ಜೋಶಿ ಮನೆಯಲ್ಲಿ.

ಇತ್ತೀಚೆಗಷ್ಟೇ ಮಾನ್ಸಿ ಜೋಶಿ ತಮ್ಮ ಹುಡುಗನನ್ನು ಪರಿಚಯ ಮಾಡಿಕೊಟ್ಟಿದ್ದರು. ಎಂಗೇಜ್ಮೆಂಟ್ ಆದ ಮೇಲೆ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಭಾವಿ ಪತಿಯ ಬಗ್ಗೆ ಸಾಕಷ್ಟು ವಿಚಾರಗಳನ್ನ, ಫೋಟೋಗಳನ್ನ ಹಂಚಿಕೊಳ್ಳುತ್ತಾ ಇದ್ದರು. ಇದೀಗ ಇಂದು ಅರಶಿನ ಶಾಸ್ತ್ರ ಶುರುವಾಗಿದೆ. ಕುಟುಂಬಸ್ಥರೆಲ್ಲ ಸಂಭ್ರಮದಲ್ಲಿ ಮುಳುಗೆದ್ದರೆ, ಗೆಳತಿಯ ಮದುವೆ ಸಂಭ್ರಮದಲ್ಲಿ 'ಪಾರು' ಕೂಡ ಭಾಗಿಯಾಗಿದ್ದಾರೆ.

Kannada Tv actress Mansi joshi and Raghav pre-wedding festivities begin with haldi

ಅರಶಿನ ಶಾಸ್ತ್ರದಲ್ಲಿ ಮಿಂಚಿದ ಮಾನ್ಸಿ

ಮಾನ್ಸಿ ಜೋಶಿ ಕಳೆದ ಅಕ್ಟೋಬರ್‌ನಲ್ಲಿ ಎಂಗೇಜ್ಮೆಂಟ್ ಮಾಡಿಕೊಂಡಿದ್ದರು. ಇದೀಗ ಮನೆಯಲ್ಲಿ ಮದುವೆ ಸಂಭ್ರಮ ಜೋರಾಗಿದೆ. ಇಂದಿನಿಂದ ಮದುವೆ ಶಾಸ್ತ್ರಗಳು ಶುರುವಾಗಿದ್ದು, ಹಳದಿ ಶಾಸ್ತ್ರ ಶುರುವಾಗಿದೆ. ಪ್ರೀವೆಡ್ಡಿಂಗ್ ಫೋಟೋಶೂಟ್ ಕೂಡ ಮಾಡಿಸಿ ಗಮನ ಸೆಳೆದಿದ್ದರು. ರಾಘವ್ ಹಾಗೂ ಮಾನ್ಸಿ ಜೋಶಿಯದ್ದು ಅರೆಂಜ್ ಕಮ್ ಲವ್ ಮ್ಯಾರೇಜ್ ಆಗಿದೆ. ಈಗ ಕುಟುಂಬಸ್ಥರು, ಸ್ನೇಹಿತರು ಸೇರಿ ಅರಶಿನ ಶಾಸ್ತ್ರದಲ್ಲಿ ಭಾಗಿಯಾಗಿದ್ದಾರೆ. ಮಾನ್ಸಿಗೆ ಅರಿಶಿನ ಹಚ್ಚಿ ಸಂಭ್ರಮಿಸಿದ್ದಾರೆ. ಮಾನ್ಸಿ ಈ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಅಭಿಮಾನಿಗಳಿಂದ ಶುಭ ಹಾರೈಕೆ

ಕನ್ನಡದ 'ಪಾರು' ಧಾರಾವಾಹಿಯ ಮೂಲಕ ಖ್ಯಾತಿ ಪಡೆದಿದ್ದ ಮಾನ್ಸಿ ಜೋಶಿ, ತಮಿಳಿ, ತೆಲುಗು, ಮಲಯಾಳಂ ಭಾಷೆಯಲ್ಲೂ ಧಾರಾವಾಹಿಯಲ್ಲೂ ಮಿಂಚಿದ್ದರು. ಎಲ್ಲಾ ಭಾಷೆಯ ಅಭಿಮಾನಿಗಳು ಶುಭ ಹಾರೈಸಿದ್ದಾರೆ. ರಾಘವ್ ಎಂಬುವವರ ಜೊತೆಗೆ ಮದುವೆಯಾಗುತ್ತಿದ್ದಾರೆ. ರಾಘವ್ ಮ್ಯಾಟ್ರಿಮೋನಿಯಲ್ಲಿ ಪರಿಚಯ ಆದವರು. ಆರಂಭದಲ್ಲಿ ರಾಘವ್ ಮನೆಯವರು ಈ ಮದುವೆಗೆ ಒಪ್ಪಿರಲಿಲ್ಲವಂತೆ. ಆದರೆ ಅದಾಗಲೇ ಪ್ರೀತಿಯಲ್ಲಿ ಬಿದ್ದಿದ್ದ ಈ ಜೋಡಿ ಮನೆಯವರನ್ನೆಲ್ಲ ಒಪ್ಪಿಸಿವ ಪ್ರಯತ್ನ ಮಾಡಿದ್ದಾರೆ. ಅದು ಯಶಸ್ವಿಯೂ ಆಗಿದ್ದು, ಇದೀಗ ಮದುವೆಯಾಗುತ್ತಿದ್ದು, ಅಭಿಮಾನಿಗಳು ಕೂಡ ಖುಷಿಯಾಗಿದ್ದಾರೆ.

ಅರಿಶಿನ ಹಚ್ಚಿದ ಮೋಕ್ಷಿತಾ

ಮೋಕ್ಷಿತಾ ಹಾಗೂ ಮಾನ್ಸಿ ಧಾರಾವಾಹಿ ಮೂಲಕ ಪರಿಚಯ ಆದವರು. 'ಪಾರು' ಧಾರಾವಾಹಿಯಲ್ಲಿ ಮಾನ್ಸಿ ನಟಿಸಿದ್ದರು. ಆದರೆ ಮಾನ್ಸಿ ಅದರಲ್ಲಿ ವಿಲನ್ ಆಗಿ ಕಾಣಿಸಿಕೊಂಡಿದ್ದರು. ಪಾರು ಆ ವಿಲನ್ ಅನ್ನು ಕಂಡು ಹಿಡಿದು ಮನೆಗೆ ಕೆಟ್ಟದಾಗುವುದನ್ನು ತಡೆದಿದ್ದಳು. ಅದು ಸೀರಿಯಲ್ ನಲ್ಲಿ ಮಾತ್ರ. ಆದರೆ ರಿಯಲ್ ಲೈಫ್ ನಲ್ಲಿ ಇಬ್ಬರು ತುಂಬಾನೇ ಬೆಸ್ಟ್ ಫ್ರೆಂಡ್ಸ್ ಆಗಿದ್ದಾರೆ. ಆಗಾಗ ಟ್ರಿಪ್ ಅಂತ ಸುತ್ತಾಡುತ್ತಾ ಇರುತ್ತಾರೆ. ಇಂದು ಹಳದಿ ಶಾಸ್ತ್ರಕ್ಕೆ ಪಾರು ಬಂದಿದ್ದು, ಮಾನ್ಸಿಗೆ ತುಂಬಾನೇ ಖುಷಿಯಾಗಿದೆ.

ಮೋಕ್ಷಿತಾ ಮದುವೆ ನೋಡುವಾಸೆ

ಪಾರು ಅರಿಶಿನ ಶಾಸ್ತ್ರದಲ್ಲಿ ಭಾಗಿಯಾಗಿ ಅರಿಶಿನ ಹಚ್ಚಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಮೋಕ್ಷಿತಾಗೆ ಮೊದಲೇ ಅಭಿಮಾನಿಗಳು ಇದ್ದರು. ಈಗ ಬಿಗ್ ಬಾಸ್ ನಿಂದ ಬಂದ ಮೇಲೆ ಅಭಿಮಾನಿಗಳ ಸಂಖ್ಯೆ ಜಾಸ್ತಿಯಾಗಿದೆ. ಎಲ್ಲೆ ಹೋದ್ರೂ ಎಲ್ಲಿಯೇ ಬಂದ್ರು ಜೈಕಾರ ಹಾಕುತ್ತಾ ಇರುತ್ತಾರೆ. ಇದೀಗ ಅರಿಶಿನ ಶಾಸ್ತ್ರದ ಫೋಟೋಗಳನ್ನು ನೋಡಿದ ಅಭಿಮಾನಿಗಳು ಮೋಕ್ಷಿತಾಗೆ ಡಿಮ್ಯಾಂಡ್ ಒಂದನ್ನ ಇಟ್ಟಿದ್ದಾರೆ. ನಿಮ್ಮ ಅರಿಶಿನದ ಶಾಸ್ತ್ರವನ್ನ ನೋಡಬೇಕು ಅನ್ನಿಸ್ತಾ ಇದೆ ಎಂದಿದ್ದಾರೆ. ಬೇಗ ಸಿಹಿ ಸುದ್ದಿ ಕೊಡಿ ಎಂದು ಕೇಳುತ್ತಿದ್ದಾರೆ.

More from Filmibeat

English summary
Actress Mansi joshi and Raghav's pre-wedding celebrations begin;
Read more about: tv serial kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X