ಮೇಘಾ ಶೆಟ್ಟಿ ಮಹೇಶ್ ಬಾಬು ಭೇಟಿ ಹಿಂದಿನ ರಹಸ್ಯ ಬಯಲು!
ತೆಲುಗಿನ ಸೂಪರ್ ಸ್ಟಾರ್ ಮಹೇಶ್ ಬಾಬು ಜೊತೆಗೆ ಕನ್ನಡ ಕಿರುತೆರೆ ನಟಿ ಮೇಘಾ ಶೆಟ್ಟಿ ಕಾಣಿಸಿಕೊಂಡಿದ್ದರೆ. ಹಾಗಾಗಿ ಈ ಜೋಡಿ ಸಿನಿಮಾ ಮಾಡುತ್ತಾರಾ..? ಅನ್ನುವ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿತ್ತು. ಇದೇ ವಿಚಾರಕ್ಕೆ ಕಳೆದೆರಡು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ತಲೆ ಕೆಡಿಸಿಕೊಂಡಿದ್ದಾರೆ.
ಜೊತೆ ಜೊತೆಯಲಿ ನಟಿ ಮೇಘಾ ಶೆಟ್ಟಿ ಕೆಂಪು ಸೀರೆಯುಟ್ಟು, ತೆಲುಗಿನ ಸೂಪರ್ ಸ್ಟಾರ್ ಮಹೇಶ್ ಬಾಬು ಜೊತೆಗೆ ಫೋಟೊ ತೆಗೆಸಿಕೊಂಡಿದ್ದಾರೆ. ಈ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಮಹೇಶ್ ಬಾಬು ಹಾಗೂ ಮೇಘಾ ಶೆಟ್ಟಿ ಸಿನಿಮಾ ಮಾಡುತ್ತಾರೆ ಎನ್ನುವ ಚರ್ಚೆ ಶುರುವಾಗಿದೆ.
ನಟಿ ಮೇಘಾ ಶೆಟ್ಟಿ ನಟಿಸಿದ ಮೊದಲ ಧಾರಾವಾಹಿಯೇ ಹಿಟ್ ಆಗಿದ್ದು, ಮೇಘಾ ಶೆಟ್ಟಿಗೆ ಸಿನಿಮಾಗಳಲ್ಲಿ ನಟಿಸುವ ಆಫರ್‌ಗಳು ಬರುತ್ತಿವೆ. ಈ ನಡುವೆ ಮೇಘಾ ಶೆಟ್ಟಿ ಧಾರಾವಾಹಿಯೊಂದಕ್ಕೆ ಪ್ರೊಡ್ಯೂಸರ್ ಕೂಡ ಆಗಿದ್ದಾರೆ. ಈಗ ಈ ಫೋಟೊದಿಂದ ಮೇಘಾ ತೆಲುಗಿಗೆ ಹಾರಿದ್ದಾರೆ ಎನ್ನುವ ಪ್ರಶ್ನೆ ಹುಟ್ಟು ಹಾಕಿತ್ತು. ಆದರೆ ಮೇಘಾ ಶೆಟ್ಟಿ ಭೇಟಿಯಾಗಿದ್ದು, ಚಿತ್ರದ ವಿಚಾರಕ್ಕೆ ಅಲ್ಲ. ಕಾರಣ ಇಲ್ಲಿದೆ ಮುಂದೆ ಓದಿ...

ಮಹೇಶ್ ಬಾಬು ಜೊತೆ ಮೇಘಾ ಕಾಣಿಕೊಂಡಿದ್ದು ಜಾಹೀರಾತಿಗಾಗಿ!
ಮೇಘಾ ಶೆಟ್ಟಿ ತೆಲುಗಿನ ಸೂಪರ್ ಸ್ಟಾರ್ ಮಹೇಶ್ ಬಾಬು ಜೊತೆ ಕಾಣಿಸಿಕೊಂಡಿದ್ದಾರೆ. ಇವರ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮೇಘಾ ಶೆಟ್ಟಿ, ಪ್ರಿನ್ಸ್ ಮಹೇಶ್ ಬಾಬು ಜೊತೆ ತೆಲುಗಿನ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೆ, ಮೇಘಾ ಶೆಟ್ಟಿ ಈ ಕುತೂಹಲಕ್ಕೆ ಬ್ರೇಕ್ ಹಾಕಿದ್ದಾರೆ. ಮಹೇಶ್ ಬಾಬು ಜೊತೆಗೆ ಜಾಹೀರಾತು ಒಂದರಲ್ಲಿ ನಟಿಸಿದ್ದು, ಈ ವೇಳೆ, ಫೋಟೊಗೆ ಪೋಸ್ ಕೊಟ್ಟಿರುವುದಾಗಿ ತಿಳಿಸಿದ್ದಾರೆ. ಅಭಿಮಾನಿಗಳು ಮೇಘಾರನ್ನು ಮಹೇಶ್ ಬಾಬು ಜೊತೆ ನೋಡಿ ಖುಷಿ ಪಟ್ಟಿದ್ದಾರೆ.

ದರ್ಶನ್ ಜೊತೆಗೂ ಫೋಟೊ ಕ್ಲಿಕ್ಕಿಸಿಕೊಂಡಿದ್ದ ಮೇಘಾ!
ಇತ್ತೀಚೆಗೆ ದರ್ಶನ್ ಜೊತೆಗೂ ಫೋಟೊ ತೆಗೆಸಿಕೊಂಡು, ಸಾಮಾಜಿಕ ಜಾಲತಾಣದಲ್ಲಿ ಮೇಘಾ ಶೆಟ್ಟಿ ಹಂಚಿಕೊಂಡಿದ್ದರು. ಮೇಘಾ ಶೆಟ್ಟಿ ಹಾಗೂ ದರ್ಶನ್ ಜೊತೆ ನಟಿಸುತ್ತಿದ್ದಾರಾ ಎಂದು ಕಮೆಂಟ್‌ಗಳು ಬಂದಿದ್ದವು. ಆದರೆ ಮೇಘಾ ಶೆಟ್ಟಿಗೆ ದರ್ಶನ್ ಅಂದರೆ ಪಂಚಪ್ರಾಣ. ಮೇಘಾ,ದರ್ಶನ್ ಅಭಿಮಾನಿ ಹಾಗಾಗಿ 'ಕ್ರಾಂತಿ' ಸಿನಿಮಾದ ಶೂಟಿಂಗ್ ವೇಳೆ ಸೆಟ್‌ನಲ್ಲಿ ಫೋಟೊ ತೆಗೆಸಿಕೊಂಡಿದ್ದರು.
ಧಾರಾವಾಹಿ ಜೊತೆಗೆ ಸಿನಿಮಾಗಳಲ್ಲೂ ಬ್ಯುಸಿ
ನಟಿ ಮೇಘಾ ಶೆಟ್ಟಿ 'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ನಟಿಸುವ ಜೊತೆಗೆ ಕೆಂಡಸಂಪಿಗೆ ಎಂಬ ಹೊಸ ಸೀರಿಯಲ್ ನಿರ್ಮಾಣ ಕೂಡ ಮಾಡುತ್ತಿದ್ದಾರೆ. ಇದರ ಜೊತೆ ಜೊತೆಗೆ ಸಿನಿಮಾದಲ್ಲೂ ಮೇಘಾ ಶೆಟ್ಟಿ ಬ್ಯುಸಿಯಾಗಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ಜೊತೆಗೆ 'ತ್ರಿಬಲ್ ರೈಡಿಂಗ್' ಚಿತ್ರದಲ್ಲಿ ಮೇಘಾ ಶೆಟ್ಟಿ ನಟಿಸಿದ್ದಾರೆ. ಹಾಗೆ ಡಾರ್ಲಿಂಗ್ ಕೃಷ್ಣ ಜೊತೆ ದಿಲ್ ಪಸಂದ್ ಚಿತ್ರದಲ್ಲೂ ಬಣ್ಣ ಹಚ್ಚಿದ್ದಾರೆ.
ಸೀರಿಯಲ್ ಮೂಲಕ ಮೇಘಾ ಶೆಟ್ಟಿ ಅದೃಷ್ಟ
'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಅನು ಸಿರಿಮನೆಯಾಗಿ ಕಾಣಿಸಿಕೊಂಡ ಮೇಘಾ ಶೆಟ್ಟಿ ಈಗ ಸಿಕ್ಕಾಪಟ್ಟೆ ಫೇಮಸ್. ಸದಾ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಮೇಘಾ ಶೆಟ್ಟಿ, ತಾವು ಮಾಡುವ ಯೋಗ, ವರ್ಕೌಟ್, ರೀಲ್ಸ್ ಹಾಗೂ ಫೋಟೊಶೂಟ್, ಡ್ಯಾನ್ಸ್‌ಗಳ ವಿಡಿಯೋಗಳು ಹಾಗೂ ಪೋಸ್ಟ್‌ಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಈ ಮೂಲಕ ಆಗಾಗ ತಮ್ಮ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ.


Click it and Unblock the Notifications











