ಮುದ್ದಾದ ಮಗುವಿಗೆ ಜನ್ಮ ನೀಡಿದ ಗೊಂಬೆ ನೇಹಾ ಗೌಡ

ಕಿರುತೆರೆ ನಟಿ ನೇಹಾ ಗೌಡ ಅಭಿಮಾನಿಗಳ ಜೊತೆ ಸಿಹಿಸುದ್ದಿ ಹಂಚಿಕೊಂಡಿದ್ದಾರೆ. ನೇಹಾ- ಚಂದನ್ ಗೌಡ ದಂಪತಿ ಮನೆಗೆ ಹೊಸ ಅತಿಥಿಯನ್ನು ಸ್ವಾಗತಿಸಿದ್ದಾರೆ. ಈ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಅಭಿಮಾನಿಗಳು ಅಭಿನಂದನೆ ತಿಳಿಸುತ್ತಿದ್ದಾರೆ.

'ಲಕ್ಷ್ಮಿ ಬಾರಮ್ಮ' ಧಾರಾವಾಹಿಯ ಮೂಲಕ ನೇಹಾ ಗೌಡ ಕಿರುತೆರೆ ಪ್ರವೇಶಿಸಿದ್ದರು. ಶ್ರುತಿ ಅಲಿಯಾಸ್ ಗೊಂಬೆ ಪಾತ್ರದಲ್ಲಿ ಮೋಡಿ ಮಾಡಿದ್ದರು. ವೀಕ್ಷಕರ ಮನಗೆದ್ದಿದ್ದರು. ನೇಹಾ ಗೌಡ ತಂದೆ ರಾಮಕೃಷ್ಣ ಕನ್ನಡ ಚಲನಚಿತ್ರರಂಗದ ಖ್ಯಾತ ಮೇಕಪ್ ಕಲಾವಿದನಾಗಿ ಸೇವೆ ಸಲ್ಲಿಸಿದ್ದಾರೆ. ಸಹೋದರಿ ಸೋನು ಗೌಡ ಕೆಲ ಸಿನಿಮಾಗಳಲ್ಲಿ ನಟಿಸಿದ್ದಾರೆ. ಚಿಕ್ಕಂದಿನಿಂದ ಚಂದನ್ ಗೌಡ ಅವರನ್ನು ಪ್ರೀತಿಸಿ ನೇಹಾ ಮದುವೆ ಆಗಿದ್ದರು.

kannada tv actress Neha Ramakrishna husband Chandan Gowda blessed with a baby girl

ನೇಹಾ ಗೌಡ ಬಳಿಕ ಪತಿ ಚಂದನ್ ಕೂಡ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದರು. 'ಅಂತರಪಟ' ಧಾರಾವಾಹಿಯ ಲೀಡ್ ರೋಲ್‌ನಲ್ಲಿ ಚಂದನ್ ಮಿಂಚಿದ್ದರು. ಮದುವೆಯಾಗಿ 6 ವರ್ಷಗಳ ಬಳಿಕ ದಂಪತಿ ಮನೆಗೆ ಹೊಸ ಅತಿಥಿಯ ಆಗಮನದ ನಿರೀಕ್ಷೆಯಲ್ಲಿದ್ದರು. ಮೇ ತಿಂಗಳಲ್ಲಿ ತಾವು ಗರ್ಭಿಣಿ ಆಗಿರುವ ವಿಚಾರವನ್ನು ಹಂಚಿಕೊಂಡಿದ್ದರು.

ಸೀಮಂತ ಶಾಸ್ತ್ರ, ಬೇಬಿ ಬಂಪ್ ಫೋಟೊಶೂಟ್ ಅಂತೆಲ್ಲಾ ನೇಹಾ ಗೌಡ ಗಮನ ಸೆಳೆದಿದ್ದರು. ಶಾಕುಂತಲೆ ಅವತಾರದಲ್ಲಿ ಇತ್ತೀಚೆಗೆ ನೇಹಾ ಮಾಡಿಸಿದ್ದ ಪ್ರಗ್ನೆನ್ಸಿ ಫೋಟೊಶೂಟ್ ಸಖತ್ ವೈರಲ್ ಆಗಿತ್ತು. ಇದೀಗ ನೇಹಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದ್ದಾರೆ.

ಅಕ್ಟೋಬರ್ 29, 2024 ರಂದು ಹೆಣ್ಣು ಮಗು ಜನಿಸಿತು. ಈ ವಿಚಾರ ಹಂಚಿಕೊಳ್ಳಲು ನಾವು ತುಂಬಾ ಸಂತೋಷಪಡುತ್ತೇವೆ. ನಿಮ್ಮೆಲ್ಲರ ಪ್ರೀತಿ ಹಾಗೂ ಆಶೀರ್ವಾದಕ್ಕೆ ಧನ್ಯವಾದಗಳು, ತಾಯಿ ಮತ್ತು ನಮ್ಮ ಕಂದಮ್ಮ ಇಬ್ಬರೂ ಆರೋಗ್ಯವಾಗಿ ಹಾಗೂ ಸಂತೋಷದಿಂದ ಇದ್ದಾರೆ. ಖುಷಿಯಲ್ಲಿ ತಂದೆ ಕೊಂಚ ಭಾವುಕರಾಗಿದ್ದಾರೆ ಎಂದು ಚಂದನ್ ಹಾಗೂ ನೇಹಾ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.

'ಲಕ್ಷ್ಮಿ ಬಾರಮ್ಮ' ಧಾರಾವಾಹಿಯಲ್ಲಿ ನಟಿಸಿದ್ದ ನಟಿ ಕವಿತಾ ಗೌಡ ಇತ್ತೀಚೆಗೆ ಗಂಡು ಮಗುವಿಗೆ ಜನ್ಮ ನೀಡಿದ್ದರು. ನೇಹಾ- ಕವಿತಾ ಇಬ್ಬರಿಗೂ ಅನುಬಂಧ ಅವಾರ್ಡ್ಸ್ ವೇದಿಕೆಯಲ್ಲಿ ಸೀಮಂತ ಮಾಡಲಾಗಿತ್ತು. ಈ ವೇಳೆ ನೇಹಾ ಪತಿ ನನಗೆ ಹೆಣ್ಣು ಮಗು ಹುಟ್ಟಿದರೆ ಬಹಳ ಖುಷಿ ಆಗುತ್ತದೆ ಎಂದಿದ್ದರು. ಅದರಂತೆ ಈಗ ಹೆಣ್ಣು ಮಗು ಜನಿಸಿದೆ.

ಒಂದೇ ಧಾರಾವಾಹಿಯಲ್ಲಿ ನಟಿಸಿದ್ದ ಇಬ್ಬರು ನಟಿಯರು ಒಟ್ಟೊಟ್ಟಿಗೆ ಗರ್ಭಿಣಿ ಆಗಿ ಇದೀಗ ಮುದ್ದಾದ ಮಗುವನ್ನು ಬರಮಾಡಿಕೊಂಡಿದ್ದಾರೆ. 'ಲಕ್ಷ್ಮಿ ಬಾರಮ್ಮ' ಧಾರಾವಾಹಿಯಲ್ಲಿ ಇಬ್ಬರ ಪತಿಯ ಹೆಸರು ಚಂದನ್ ಆಗಿತ್ತು. ವಿಶೇಷ ಅಂದರೆ ನಿಜ ಜೀವನದಲ್ಲಿ ಇಬ್ಬರಿಗೂ ಚಂದನ್ ಹೆಸರಿನ ಪತಿ ಸಿಕ್ಕಿದ್ದಾರೆ. ಇನ್ನು ನೇಹಾ ಹಾಗೂ ಕವಿತಾ ಇಬ್ಬರು ಒಂದೇ ಆಸ್ಪತ್ರೆಯಲ್ಲಿ ಒಬ್ಬರೇ ವೈದ್ಯರ ಬಳಿ ತೋರಿಸಿಕೊಂಡಿದ್ದರು.

ನೇಹಾ ಗೌಡ ದಂಪತಿ ಪೋಸ್ಟ್‌ಗೆ ಅಭಿಮಾನಿಗಳು ಸೇರಿದಂತೆ ಸಾಕಷ್ಟು ಸೆಲೆಬ್ರೆಟಿಗಳು ಕಾಮೆಂಟ್ ಮಾಡಿ ಅಭಿನಂದನೆ ತಿಳಿಸಿದ್ದಾರೆ. ನಟಿಯರಾದ ಶ್ವೇತಾ ಚೆಂಗಪ್ಪ, ನಮ್ರತಾ ಗೌಡ, ದಿವ್ಯಾ ಉರುಡುಗ ಹೀಗೆ ಹಲವರು ಕಾಮೆಂಟ್ ಮಾಡಿ ಶುಭ ಹಾರೈಸಿದ್ದಾರೆ. ಶೀಘ್ರದಲ್ಲೇ ಮಗಳನ್ನು ನೇಹಾ- ಚಂದನ್ ಅಭಿಮಾನಿಗಳಿಗೆ ಪರಿಚಯಿಸಲಿದ್ದಾರೆ.

ಇತ್ತೀಚೆಗೆ ನಿರೂಪಕಿ ಅನುಪಮಾ ಗೌಡ ತಮ್ಮ ಮನೆಯ ಗೃಹಪ್ರವೇಶ ಮಾಡಿದ್ದರು. ಮನೆ ಸಂಪೂರ್ಣವಾಗಿ ಫಿನಿಶಿಂಗ್ ಆಗುವ ಮುನ್ನ ಮನೆಗೆ ಎಂಟ್ರಿ ಕೊಟ್ಟಿದ್ದರು. ಅದಕ್ಕೆ ಕಾರಣ ನೇಹಾ ಗೌಡ ಎನ್ನುವುದು ರಿವೀಲ್ ಆಗಿತ್ತು. ತಮ್ಮ ಆತ್ಮೀಯ ಸ್ನೇಹಿತೆ ಮನೆಗೆ ಗೃಹಪ್ರವೇಶ ಕಾರ್ಯಕ್ರಮದಲ್ಲಿ ಓಡಾಡಿಕೊಂಡು ಇರಬೇಕು. ಆಕೆಗೆ ಹೆರಿಗೆ ಆದರೆ ಕೆಲ ದಿನಗಳ ಅದು ಸಾಧ್ಯವಾಗುವುದಿಲ್ಲ. ಹಾಗಾಗಿ ಬೇಗನೇ ಮನೆಗೆ ಗೃಹ ಪ್ರವೇಶ ಮಾಡಿದ್ದರು ಎಂದು ಗೊತ್ತಾಗಿತ್ತು.

More from Filmibeat

English summary
Neha Ramakrishna, husband Chandan Gowda welcome baby girl;
Read more about: tv actress sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X