Prakrithi prasad: ನಟಿ ಪ್ರಕೃತಿ ಪ್ರಸಾದ್ ಹುಚ್ಚಿಯ ಪಾತ್ರ ಮಾಡಬೇಕಂತೆ, ವಿಚಿತ್ರ ಕನಸುಗಳಿವೆ?
ನಮ್ಮನೆ ಯುವರಾಣಿ ಧಾರಾವಾಹಿ ಮೂಲಕ ಜನಪ್ರಿಯತೆ ಗಳಿಸಿರುವ ಪ್ರಕೃತಿ ಪ್ರಸಾದ್ ಈಗ 'ಬೆಟ್ಟದ ಹೂ' ಧಾರಾವಾಹಿಯಲ್ಲಿ ಮಾಲಿನಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಫೆಬ್ರವರಿ 3ರಿಂದ ಆರಂಭವಾಗಿರುವ ಬೆಟ್ಟದ ಹೂ ಧಾರಾವಾಹಿ ಈಗಷ್ಟೆ ಎರಡು ತಿಂಗಳು ಕಂಪ್ಲೀಟ್ ಮಾಡಿದೆ. ಸದ್ಯ ಧಾರಾವಾಹಿಯಲ್ಲಿ ಮಾಲಿನಿ ಹಾಗೂ ರಾಹುಲ್ ಮದುವೆ ಸಂಭ್ರಮ ಮನೆ ಮಾಡಿದೆ.
ಮಾಲಿನಿ ಪಾತ್ರದಲ್ಲಿ ನಟಿಸಿರುವ ಪ್ರಕೃತಿ ಪ್ರಸಾದ್ ಕಳೆದ ಆರು ವರ್ಷಗಳಿಂದ ಕಿರುತೆರೆಯಲ್ಲಿದ್ದಾರೆ. ಕಿರುತೆರೆಯಲ್ಲಿ ವಿಭಿನ್ನ ಪಾತ್ರಗಳ ಮೂಲಕ ಮೋಡಿ ಮಾಡಿದ್ದಾರೆ. 'ಸೌಭಾಗ್ಯವತಿ' ಧಾರಾವಾಹಿ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದ ಪ್ರಕೃತಿ, ನೆಗೆಟಿವ್ ಹಾಗೂ ಪಾಸಿಟಿವ್ ಪಾತ್ರಕ್ಕೆ ಜೀವ ತುಂಬಿ ಸೈ ಎನಿಸಿಕೊಂಡಿದ್ದಾರೆ.
ಮೈಸೂರಿನಲ್ಲಿ ಹುಟ್ಟಿದ ಪ್ರಕೃತಿ ಪ್ರಸಾದ್, ಓದಿದ್ದೆಲ್ಲಾ ಬೆಂಗಳೂರಿನಲ್ಲೇ. ಕಿರುತೆರೆಗೆ ಎಂಟ್ರಿ ಕೊಟ್ಟ ಹೊಸತರಲ್ಲಿ ಓದುತ್ತಿದ್ದ ಇವರು ಈಗ ಎಜುಕೇಷನ್ ಮುಗಿಸಿದ್ದಾರೆ. ಪ್ರಕೃತಿ ಪ್ರಸಾದ್ ಅವರು ಸೈಕಾಲಜಿಯಲ್ಲಿ ಎಂಎಸ್ ಸಿ ಮುಗಿಸಿದ್ದಾರೆ. ಓದಿನ ಜೊತೆಗೆ ನಟನೆಯನ್ನೂ ಬ್ಯಾಲೆನ್ಸ್ ಮಾಡಿದ್ದರು.
ಎಂಟು ವರ್ಷಗಳಲ್ಲಿ ಏಳು ಧಾರಾವಾಹಿಗಳಲ್ಲಿ ನಟನೆ!
ಆರು ವರ್ಷಗಳಲ್ಲಿ ಆರು ಧಾರಾವಾಹಿಯಲ್ಲಿ ನಟಿಸಿರುವ ಪ್ರಕೃತಿ ಪ್ರಸಾದ್ ಅವರ ಮೊದಲ ಧಾರಾವಾಹಿ 'ಸೌಭಾಗ್ಯವತಿ'. ಆಗ ಅವರು ಪಿಯುಸಿ ಓದುತ್ತಿದ್ದರು. ನಂತರ ಆನಂದ ಭೈರವಿ, ಅರಮನೆ, ಗಂಗಾ, ನಮ್ಮನೆ ಯುವರಾಣಿ, ಮನಸಾರೆಯಲ್ಲಿ ನಟಿಸಿದ್ದಾರೆ. ಸದ್ಯ ಬೆಟ್ಟದ ಹೂ ಧಾರಾವಾಹಿಯಲ್ಲಿ ನಟಿಸುತ್ತಿದ್ದು, ಅವರಿಗೆ ವಿಚಿತ್ರವಾದ ಪಾತ್ರದಲ್ಲಿ ನಟಿಸುವ ಆಸೆ ಇದೆಯಂತೆ.
ಹುಚ್ಚಿ ರೀತಿ ವಿಲನ್ ಪಾತ್ರ ಮಾಡಬೇಕಂತೆ ಪ್ರಕೃತಿ!
ಪ್ರಕೃತಿ ಪ್ರಸಾದ್ ಅವರಿಗೆ ಇಂದೆಂದೂ ಮಾಡಿರದ ಪಾತ್ರದಲ್ಲಿ ನಟಿಸುವ ಕನಸು ಹೊತ್ತಿದ್ದಾರೆ. ಅದೇನೆಂದರೆ, ಹಳ್ಳಿ ಹುಡುಗಿಯಾಗಿ ನಾಚಿಕೊಳ್ಳುವ ಹಾಗೂ ಬಜಾರಿಯಾಗಿ ಗಯ್ಯಾಳಿಯಂತೆ ಹುಚ್ಚಿ ರೀತಿ ನೆಗೆಟಿವ್ ರೋಲ್ ನಲ್ಲಿ ನಟಿಸುವ ಆಸೆ ಇದೆಯಂತೆ. ಇವರಿಗೆ ನೆಗೆಟಿವ್ ಪಾತ್ರ ಅಷ್ಟು ಸೂಟ್ ಆಗುವುದಿಲ್ಲ ಎಂದು ಹಲವರು ಹೇಳಿದ್ದಾರೆ. ಆದರೂ ಕೂಡ ಇವರಿಗೆ ನೆಗೆಟಿವ್ ರೋಲ್ ಮಾಡಬೇಕಂತೆ. ನಟನೆಯಿಂದ ತಾಳ್ಮೆ ಕಲಿತಿರುವ ಪ್ರಕೃತಿ ಪ್ರಸಾದ್ ಅವರಿಗೆ ಒಳ್ಳೆಯ ಪಾತ್ರದ ಅವಕಾಶ ಸಿಕ್ಕರೆ, ಬೇರೆ ಭಾಷೆ ಹಾಗೂ ಸಿನಿಮಾಗಳಲ್ಲಿ ನಟಿಸುವ ಆಸೆ ಇದೆಯಂತೆ.
ಫಿಟ್ ಆಗಿರುವ ಪ್ರಕೃತಿ ಸೀಕ್ರೆಟ್ ಏನ್ ಗೊತ್ತಾ..?
ಪ್ರಕೃತಿ ಪ್ರಸಾದ್ ಅವರಿಗೆ ಜಿಮ್ ಗೆ ಹೋಗುವುದು, ವರ್ಕೌಟ್ ಮಾಡುವುದು ಎಂದರೆ ಬಹಳ ಇಷ್ಟವಂತೆ. ಪ್ರತಿ ನಿತ್ಯ ಪ್ರಕೃತಿ ಪ್ರಸಾದ್ ಅವರು ಜಿಮ್ ಗೆ ಹೋಗಿ ವರ್ಕೌಟ್ ಮಾಡುತ್ತಾರಂತೆ. ಡಯಟ್ ಮಾಡಿ ಫಿಟ್ ನೆಸ್ ಅನ್ನು ಕಾಪಾಡಿಕೊಂಡಿದ್ದಾರಂತೆ. ಇನ್ನು ಹೆಚ್ಚು ನೀರು ಕುಡಿಯುವ ಪ್ರಕೃತಿ ಪ್ರಸಾದ್ ಅವರು ಹೆಲ್ತ್ ಟಿಪ್ಸ್ ಅನ್ನು ಕೂಡ ನೀಡಿದ್ದಾರೆ. ಮೊದಲು ಪ್ರಕೃತಿ ಅವರ ಮುಖದಲ್ಲಿ ತುಂಬಾ ಮೊಡವೆಗಳಿದ್ದವಂತೆ. ಎಷ್ಟೇ ಟ್ರೀಟ್ ಮೆಂಟ್ ತೆಗೆದುಕೊಂಡರೂ ಹೋಗಿರಲಿಲ್ಲವಂತೆ. ಆದರೆ ಹೆಚ್ಚು ನೀರು ಕುಡಿಯಲು ಶುರು ಮಾಡಿದಾಗಿನಿಂದಲೂ ಅವರ ಮುಖದ ಮೇಲೆ ಮೊಡವೆಗಳೇ ಮೂಡುತ್ತಿಲ್ಲವಂತೆ. ಹಾಗಾಗಿ ಅಭಿಮಾನಿಗಳಿಗೂ ಹೆಚ್ಚು ನೀರು ಕುಡಿದು ಆರೋಗ್ಯವಂತರಾಗಿರುವಂತೆ ಹೇಳಿದ್ದಾರೆ.
ಪೇಂಟಿಂಗ್ ಮಾಡುವ ಪ್ರಕೃತಿ, ಪ್ರಾಣಿ ಪ್ರಿಯೆ!
ಬಾಲ್ಯದಲ್ಲಿಯೇ ನಾಟಕಗಳಲ್ಲಿ ಭಾಗವಹಿಸುತ್ತಿದ್ದ ಪ್ರಕೃತಿ ಪ್ರಸಾದ್, ತರಬೇತಿ ಕೇಂದ್ರಕ್ಕೆ ಹೋಗಿ ಅಭಿನಯ ಕಲಿತಿದ್ದಾರೆ. ರೂಪಾ ಪ್ರಭಾಕರ್ ಅವರ ನಟನಾ ತರಬೇತಿ ಕೇಂದ್ರದಲ್ಲಿ ಪ್ರಕೃತಿ ತರಬೇತಿ ಪಡೆದಿದ್ದಾರೆ. ಇದರ ಜೊತೆಗೆ ಪ್ರಕೃತಿ ಅವರು ರಜಾ ದಿನಗಳನ್ನು ವ್ಯರ್ಥ ಮಾಡದೆ, ಸಂಗೀತ, ಪೇಂಟಿಂಗ್ ಹಾಗೂ ಅಭಿನಯದ ತರಬೇತಿ ಪಡೆಯುತ್ತಿದ್ದರು. ಪ್ರಕೃತಿ ಅವರಿಗೆ ಪ್ರಾಣಿ ಎಂದರೆ ತುಂಬಾ ಇಷ್ಟ. ಇವರ ಹಾಟ್ ಫೇವರಿಟ್ ನಟಿ ಪ್ರಿಯಾಂಕ ಚೋಪ್ರಾ. ಫೇವರೇಟ್ ನಟ ಪ್ರಕಾಶ್ ರಾಜ್ ಎಂದು ಅವರೇ ಹೇಳಿದ್ದಾರೆ.


Click it and Unblock the Notifications











