Priyanka Shivanna: 'ನಾಗಿಣಿ' ಅವತಾರ ತಾಳಿದ ಪ್ರಿಯಾಂಕ ಶಿವಣ್ಣ

By ಪ್ರಿಯಾ ದೊರೆ

ಹಲವು ವರ್ಷಗಳಿಂದ ಕನ್ನಡ ಸೀರಿಯಲ್ ಲೋಕದಲ್ಲಿ ನಟಿ ಪ್ರಿಯಾಂಕ ಶಿವಣ್ಣ ಸಕ್ರಿಯರಾಗಿದ್ದಾರೆ. 'ಅಗ್ನಿಸಾಕ್ಷಿ' ಧಾರಾವಾಹಿಯ ಚಂದ್ರಿಕಾ ಪಾತ್ರದಿಂದ ಫೇಮಸ್ ಆದರು. ಕಿರುತೆರೆ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಅವರು ಯಶಸ್ವಿಯಾದರು.

ಧಾರಾವಾಹಿಗಳು ಮಾತ್ರವಲ್ಲದೇ ರಿಯಾಲಿಟಿ ಶೋ ಮೂಲಕವೂ ಪ್ರಿಯಾಂಕಾ ಶಿವಣ್ಣ ಅವರು ಪ್ರೇಕ್ಷಕರಿಗೆ ಹತ್ತಿರವಾಗಿದ್ದಾರೆ. ಪ್ರಿಯಾಂಕಾ ಶಿವಣ್ಣ ಅವರಿಗೆ ಅಭಿಮಾನಿ ಬಳಗ ದೊಡ್ಡದಿದೆ.

ಸದ್ಯ 'ಸತ್ಯ' ಸೀರಿಯಲ್‌ನಲ್ಲಿ ನಾಯಕಿಯ ಅಕ್ಕನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಪ್ರಿಯಾಂಕ ಶಿವಣ್ಣ, ಸದಾ ಸ್ಟೈಲಿಶ್ ಸ್ಯಾರಿಗಳಿಂದಲೇ ಕಂಗೊಳಿಸುತ್ತಿರುತ್ತಾರೆ.

ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳುವ ನಟಿ

ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳುವ ನಟಿ

ಬೆಂಗಳೂರಿನ ಬೆಡಗಿಯಾಗಿರುವ ಪ್ರಿಯಾಂಕ ಶಿವಣ್ಣ ಅವರು, ತಮ್ಮ 19ನೇ ವಯಸ್ಸಿಗೆ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟರು. ಮಾಡೆಲಿಂಗ್ ಜೊತೆಗೆ ಸಾಫ್ಟ್‌ವೇರ್ ಇಂಜಿನಿಯರಿಂಗ್ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿ ನಟನಾ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದರು. ಮೊದಮೊದಲು ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಪ್ರಿಯಾಂಕಾ, 'ಅಗ್ನಿಸಾಕ್ಷಿ' ಧಾರಾವಾಹಿಯಲ್ಲಿ ಚಂದ್ರಿಕಾ ಪಾತ್ರಧಾರಿ ಬದಲಾದಾಗ ಪ್ರಿಯಾಂಕಾ ಅವರನ್ನು ಆ ಜಾಗಕ್ಕೆ ಕರೆ ತರಲಾಯ್ತು. ಮೊದಲ ಧಾರಾವಾಹಿಯಲ್ಲೇ ತಮ್ಮ ನಟನೆಯಿಂದ ಅಭಿಮಾನಿಗಳ ಮನಸನ್ನು ಗೆಲ್ಲುವಲ್ಲಿ ಯಶಸ್ವಿಯಾದರು.

ರಿಯಾಲಿಟಿ ಶೋಗಳಲ್ಲೂ ಭಾಗಿ

ರಿಯಾಲಿಟಿ ಶೋಗಳಲ್ಲೂ ಭಾಗಿ

ಇದಾದ ಬಳಿಕ 'ಅವನು ಮತ್ತೆ ಶ್ರಾವಣಿ', 'ಕಥೆಯ ರಾಜಕುಮಾರಿ', 'ಒಂದೂರಲ್ಲಿ ರಾಜ-ರಾಣಿ', 'ಪರಿಣಯ' ಧಾರಾವಾಹಿಗಳಲ್ಲಿ ಮಿಂಚಿದರು. ಅಷ್ಟೇ ಅಲ್ಲದೇ, ತೆಲುಗಿನ ಕಿರುತೆರೆಯಲ್ಲೂ ಮಿಂಚುತ್ತಿದ್ದಾರೆ. 'ಕೃಷ್ಣ ಸುಂದರಿ' ಸೇರಿದಂತೆ ಹಲವು ಸೀರಿಯಲ್‌ಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಎಲ್ಲಾ ಧಾರಾವಾಹಿಗಳಲ್ಲೂ ಹೆಚ್ಚಾಗಿ ಖಳನಾಯಕಿ ಪಾತ್ರಗಳಲ್ಲೇ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯ 'ಸತ್ಯ' ಧಾರಾವಾಹಿಯಲ್ಲಿ ನಟಿಸುತ್ತಿರುವ ಪ್ರಿಯಾಂಕಾ ಶಿವಣ್ಣ ಅವರು, ತಮ್ಮ ಪಾತ್ರದಿಂದಲೇ ಕಿರುತೆರೆ ವೀಕ್ಷಕರಿಗೆ ಸಖತ್ ಇಷ್ಟ ಆಗಿದ್ದಾರೆ.

ತೆಲುಗು ಕಿರುತೆರೆಯಲ್ಲೂ ಪ್ರಿಯಾಂಕ ಮಿಂಚು

ತೆಲುಗು ಕಿರುತೆರೆಯಲ್ಲೂ ಪ್ರಿಯಾಂಕ ಮಿಂಚು

ಇನ್ನು ಧಾರಾವಾಹಿ ಮಾತ್ರವಲ್ಲದೇ ಪ್ರಿಯಾಂಕಾ ಸಿನಿಮಾಗಳಲ್ಲೂ ನಟಿಸಿದ್ದಾರೆ. 'ಮನೋರೂಪ' ಹಾಗೂ 'ಫ್ಯಾಂಟಸಿ' ಎಂಬ ಎರಡು ಚಿತ್ರಗಳಿಗೆ ಪ್ರಿಯಾಂಕಾ ಶಿವಣ್ಣ ಅವರು ಬಣ್ಣ ಹಚ್ಚಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸದಾ ರೀಲ್ಸ್‌ಗಳನ್ನು ಮಾಡುತ್ತಿರುತ್ತಾರೆ. ಫೋಟೋಶೂಟ್ ಮಾಡಿಸಿ ಫೋಟೋಗಳನ್ನು ಅಪ್ ಲೋಡ್ ಮಾಡುತ್ತಿರುತ್ತಾರೆ. ಇದೀಗ 'ನಾಗಿಣಿ' ವೇಷದಲ್ಲಿ ಕಾಣಿಸಿಕೊಂಡು ಪ್ರೇಕ್ಷಕರಿಗೆ ಶಾಕ್ ಕೊಟ್ಟಿದ್ದಾರೆ. ಹೊಸ ಧಾರಾವಾಹಿಯಲ್ಲಿ ನಟಿಸುತ್ತಿದ್ದು, ಅದರಲ್ಲಿ 'ನಾಗಿಣಿ' ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ನಾಗಿಣಿಯಾದ ಪ್ರಿಯಾಂಕ ಶಿವಣ್ಣ

ನಾಗಿಣಿಯಾದ ಪ್ರಿಯಾಂಕ ಶಿವಣ್ಣ

ಬಿಗ್ ಬಾಸ್ ಸೀಸನ್ 7ರಲ್ಲಿ ಭಾಗವಹಿಸಿ, ಜನರ ಮನಸ್ಸನ್ನು ಸೈಲೆಂಟ್ ಆಗಿ ಗೆದ್ದ ನಟಿ, ಈಗ ನಾಗಿಣಿ ರೂಪದಲ್ಲಿ ಮತ್ತಷ್ಟು ಅಭಿಮಾನಿಗಳ ಮನಸ್ಸನ್ನು ಗೆಲ್ಲಲು ಮುಂದಾಗಿದ್ದಾರೆ. ತೆಲುಗಿನ 'ನಾಗಪಂಚಮಿ' ಎಂಬ ಧಾರಾವಾಹಿಗೆ ವಿಶೇಷ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದರ ಪ್ರೋಮೋ ಈಗಾಗಲೇ ಬಿಡುಗಡೆಯಾಗಿದ್ದು, ಪ್ರಸಾರದ ದಿನಾಂಕ ಹಾಗೂ ಸಮಯದ ಬಗ್ಗೆ ಇನ್ನೂ ಮಾಹಿತಿ ತಿಳಿದು ಬಂದಿಲ್ಲ. ಈ ಪೋಮೋವನ್ನು ಪ್ರಿಯಾಂಕ ಶಿವಣ್ಣ ಅವರು ಕೂಡ ತಮ್ಮ ಇನ್ ಸ್ಟಾಗ್ರಾಂ ಪೇಜ್‌ನಲ್ಲಿ ಹಂಚಿಕೊಂಡಿದ್ದಾರೆ.

More from Filmibeat

English summary
Kannada TV actress priyanka shivanna to join Telugu Serial Nagapanchami, watch promo. She also Acted in Kannada movies. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X