ಸಿಂಪಲ್ ಆಗಿ ಸಲ್ವಾರ್ ಧರಿಸಿ ಫೋಟೋಗೆ ಪೋಸ್ ಕೊಟ್ಟ ನಟಿ

By ಪ್ರಿಯಾ ದೊರೆ

Article desc: ಕಿರುತೆರೆ ಆಗಲೀ ಹಿರಿತೆರೆ ಆಗಲೀ ನಟಿಯರು ಫೋಟೋಶೂಟ್ ಮಾಡಿಸಿಕೊಳ್ಳುವುದು ಹೊಸ ವಿಚಾರವಂತೂ ಖಂಡಿತಾ ಅಲ್ಲವೇ ಅಲ್ಲ. ಇನ್ನು ಒಮ್ಮೆ ಬಣ್ಣದ ಲೋಕಕ್ಕೆ ಎಂಟ್ರಿಕೊಟ್ಟ ನಟ-ನಟಿಯರು ಮಾಡೆಲ್ ಆಗಲು ಕೂಡ ಬಯಸುತ್ತಾರೆ. ಕೆಲವರಷ್ಟೇ ಮಾಡೆಲ್ ಆಗಿ ಹೆಚ್ಚು ಕಾಲ ಉಳಿಯುತ್ತಾರೆ. ಮೊದಲೆಲ್ಲಾ ಮಾಡೆಲ್ ಎಂದರೆ ಆ ಕ್ಷೇತ್ರಕ್ಕೆ ತೆರಳುವುದೇ ಕಷ್ಟ ಎನ್ನಲಾಗುತ್ತಿತ್ತು. ಈಗಂತೂ ಬಿಡಿ, ಬಹಳ ಸುಲಭ.

ಬಟ್ಟೆ ಅಂಗಡಿಗಳ ಜಾಹೀರಾತಿಗೆ, ಚಿಕ್ಕ ಚಿಕ್ಕ ಒಡವೆ ಅಂಗಡಿಗಳು ಸೇರಿದಂತೆ ಹಲವು ವಸ್ತುಗಳ ಜಾಹೀರಾತುಗಳಿಗೂ ಮಾಡೆಲ್‌ಗಳ ಅಗತ್ಯವಿರುತ್ತದೆ. ಅದರಲ್ಲೂ ಬಟ್ಟೆ ಹಾಗೂ ಒಡವೆ ಅಂಗಡಿಗಳು ಆಗಾಗ ಮಾಡೆಲ್ ಮತ್ತು ಕಲಾವಿದರಿಂದ ತಮ್ಮ ಅಂಗಡಿಯ ಜಾಹೀರಾತು ಶೂಟ್ ಮಾಡಿಸುತ್ತಾರೆ.

Bhargavi LLB serial heroine Radha Bagavati new photoshoot

ಪ್ರೊಮೋಷನ್ ವೀಡಿಯೋಗಳು

ಸುದರ್ಶನ್ ಸಿಲ್ಕ್ಸ್, ಬೈರಪ್ಪ ಆಂಡ್ ಸನ್ಸ್, ಸಾಯಿ ಗೋಲ್ಡ್ ಪ್ಯಾಲೆಸ್, ಲಲಿತಾ ಜ್ಯುವೆಲ್ಸ್, ಭೀಮಾ ಹೀಗೆ ಸಾಲು ಸಾಲು ಮಳಿಗೆಗಳ ಜಾಹೀರಾತಿಗಾಗಿ ಮಾಡೆಲ್‌ಗಳ ಮೇಲೆ ಡಿಪೆಂಡ್ ಆಗುತ್ತಾರೆ. ಇನ್ನು ಈಗಂತೂ ಸೋಶಿಯಲ್ ಮೀಡಿಯಾ ಖಾತೆಯ ಮೂಲಕವೇ ನಟ ಮತ್ತು ನಟಿಯರು ಕೊಲಾಬರೇಷನ್ ಮಾಡಿಕೊಂಡು ಕೆಲ ಪ್ರಾಡಕ್ಟ್‌ಗಳನ್ನು ಪ್ರಮೋಟ್ ಮಾಡುತ್ತಿರುತ್ತಾರೆ. ಆನ್‌ಲೈನ್ ಶಾಪಿಂಗ್‌ಗಾಗಿ ಪ್ರಮೋಟ್ ಮಾಡುವವರ ಸಂಖ್ಯೆ ಹೆಚ್ಚಿದೆ. ಫಾರ್ಮ್ ಹೌಸ್, ರೆಸಾರ್ಟ್‌ಗಳಿಗೆ, ಟ್ರಾವೆಲ್ಸ್, ಮೇಕಪ್ ಬಗ್ಗೆ ಹೀಗೆ ಪ್ರತಿಯೊಂದರ ಬಗ್ಗೆಯೂ ನಟ ಮತ್ತು ನಟಿಯರು ಪ್ರಮೋಷನ್ ವೀಡಿಯೋ ಮಾಡುತ್ತಲೇ ಇರುತ್ತಾರೆ.

ಟ್ರೆಂಡಿಂಗ್ ಫೋಟೋಶೂಟ್

ಈಗ ಯಾಕೆ ಈ ವಿಚಾರ ಅಂತೀರಾ ಹೌದು.. ನಟಿಯರು ಇತ್ತೀಚೆಗೆ ಚೆಂದವಾಗಿ ರೆಡಿಯಾಗಿ ಮಧುಮಗಳಂತೆ ಕಂಗೊಳಿಸುತ್ತಿರುತ್ತಾರೆ. ಇದಕ್ಕೆಲ್ಲಾ ಕಾರಣವೇ ಪ್ರಮೋಷನ್ ಎನ್ನಲು ಕೂಡ ಸಾಧ್ಯವಿಲ್ಲ. ಆದರೆ, ನಟಿಯರು ಕೂಡ ತಮಗಿಷ್ಟ ಬಂದಾಗ ಸೀರೆ ಉಟ್ಟು, ಮೇಕಪ್ ಮಾಡಿಸಿಕೊಂಡು ಫೋಟೋಶೂಟ್‌ಗಳನ್ನು ಮಾಡಿಸುತ್ತಿರುತ್ತಾರೆ. ಈಗಂತೂ ಟ್ರೆಂಡ್ ಎಂದರೆ, ಲಂಗ-ದಾವಣಿ ಇಲ್ಲವೇ ಲೆಹೆಂಗಾಗಳು. ಸಿಂಪಲ್ ಆಗಿ ಫೋಟೋಶೂಟ್ ಮಾಡಿಸುವ ಕಾಲ ಮುಗಿದೇ ಹೋಗಿದೆ. ಆದರೆ ಇಲ್ಲೊಬ್ಬ ನಟಿ ಸಿಂಪಲ್ ಆಗಿ ಸಲ್ವಾರ್ ಧರಿಸಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.

ಸಲ್ವಾರ್‌ನಲ್ಲಿ ಮುದ್ದಾಗಿ ಕಂಡ ನಟಿ

ಅದು ಬೇರೆ ಯಾರೂ ಅಲ್ಲ. ನಟಿ ರಾಧಾ ಭಾಗವತಿ. 'ಭಾರ್ಗವಿ LLB' ಧಾರಾವಾಹಿಯ ನಾಯಕಿ ರಾಧಾ ಅವರು ಸಿಂಪಲ್ ಆಗಿ ರೆಡಿಯಾಗಿ ಕ್ಯೂಟ್ ಆಗಿ ಫೋಟೋಶೂಟ್ ಅನ್ನು ಮಾಡಿಸಿಕೊಂಡಿದ್ದಾರೆ. ಎಂಬ್ರಾಯಿಡರಿ ವರ್ಕ್ ಇರುವ ನೀಲಿ ಬಣ್ಣದ ಚುಡಿದಾರ್‌ ಅನ್ನು ಧರಿಸಿರುವ ನಟಿ ರಾಧಾ ಕೈಯಲ್ಲಿ ಪುಸ್ತಕ ಮತ್ತು ಕಾಫಿ ಮಗ್ ಹಿಡಿದು ಸಿಂಪಲ್ ಫೋಟೋಗಳಿಗೆ ಪೋಸ್ ಕೊಟ್ಟಿದ್ದಾರೆ. ವೀಡಿಯೋ ಮಾಡದೇ ಕೇವಲ ಫೋಟೋಗಳನ್ನು ತೆಗೆಸಿಕೊಂಡಿದ್ದಾರೆ.

ಧಾರಾವಾಹಿಯಲ್ಲಿ ನಟಿ ಬ್ಯುಸಿ

ಗ್ರ್ಯಾಂಡ್ ಲುಕ್ ಕೊಡುವಂತೆ ರೇಷ್ಮೆ ಸೀರೆಯುಟ್ಟು, ಬ್ರೈಡಲ್ ಮೇಕಪ್ ಮಾಡಿಕೊಂಡು ಫೋಟೋಶೂಟ್ ಮಾಡಿಸುವ ನಡುವೆ ಇದೀಗ ಸಿಂಪಲ್ ಲುಕ್‌ನಲ್ಲಿ ನಟಿ ರಾಧಾ ಭಾಗವತಿ ಅವರು ಕಾಣಿಸಿಕೊಂಡಿರುವುದು ಅಚ್ಚರಿಯೇ ಸರಿ. ನೆಟ್ಟಿಗರು ಬ್ಯೂಟಿಫುಲ್, ಸೂಪರ್ ಎಂದೆಲ್ಲಾ ಕಮೆಂಟ್‌ ಮಾಡಿದ್ದಾರೆ. ಇನ್ನು ನಟಿ ರಾಧಾ ಭಾಗವತಿ ಅವರು ಸದ್ಯ 'ಭಾರ್ಗವಿ LLB' ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ನಾಯಕಿ ಭಾರ್ಗವಿ ಪಾತ್ರಕ್ಕೆ ಬಣ್ಣ ಹಚ್ಚಿದ್ದು, ನ್ಯಾಯಕ್ಕಾಗಿ ಹೋರಾಟ ನೆಡೆಸುವ ದಿಟ್ಟ ಮಹಿಳೆಯ ಪಾತ್ರ ಇದಾಗಿದೆ.

More from Filmibeat

English summary
Bhargavi LLB serial heroine Radha Bagavati new photoshoot;
Read more about: serial actress
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X