ತಮ್ಮ ಕನಸಿನ ಗೂಡಿನಲ್ಲೊಂದು ಗೋಪುರ ನಿರ್ಮಿಸಿ ಸಂತಸ ಪಟ್ಟ ನಟಿ ರಾಧಿಕಾ
ಈಗೆಲ್ಲಾ ಮನೆ ಖರೀದಿಸುವುದು ಸುಲಭದ ಮಾತಂತೂ ಅಲ್ಲವೇ ಅಲ್ಲ. ಅದರ ಸಾಲವನ್ನು ತೀರಿಸಿ ಮನೆಯನ್ನು ತಮಗೆ ಇಷ್ಟದಂತೆ ಇಂಟಿರಿಯರ್ ಲುಕ್ ಬದಲಿಸಿಕೊಳ್ಳುವುದು ದೊಡ್ಡ ಸಾಹಸವೇ ಸರಿ. ಯಾಕೆಂದರೆ ಈಗಂತೂ ಇಂಟಿರಿಯರ್ ಮಾಡಿಸಬೇಕು ಎನ್ನುವುದೇ ಕಷ್ಟದ ಕೆಲಸ. ಅದರಲ್ಲೂ ತಮ್ಮ ಆಲೋಚನೆಯಂತೆಯೇ ಇರಬೇಕು ಎಂದರೆ ಬಹಳ ಕಷ್ಟವಾಗುತ್ತದೆ.
ಕಿರುತೆರೆ ನಟ-ನಟಿಯರು ಬಹಳ ಕಷ್ಟಪಟ್ಟು ಆಸೆಯಿಂದ ಮನೆಯನ್ನು ಖರೀದಿಸಿ ಗೃಹಪ್ರವೇಶ ಮಾಡಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಖುಷಿಯ ಸಂಗತಿಯನ್ನು ಹಂಚಿಕೊಳ್ಳುತ್ತಿರುತ್ತಾರೆ.

'ಶಾರದೆ' ಧಾರಾವಾಹಿಯಲ್ಲಿ ಶೋಭಾ ಪಾತ್ರಕ್ಕೆ ಜೀವ ತುಂಬಿರುವ ನಟಿ ರಾಧಿಕಾ ಅಚ್ಯುತ್ ರಾವ್ ಅವರು ಹೊಸ ಮನೆಯನ್ನು ಖರೀದಿ ಮಾಡಿದ್ದಾರೆ. ಈ ಬಗ್ಗೆ ನಟಿ ರಾಧಿಕಾ ರಾವ್ ಅವರೇ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ.
ತಮ್ಮಿಷ್ಟದ ದೇವರ ಮನೆ
ನಟಿ ರಾಧಿಕಾ ಅಚ್ಯುತ್ ರಾವ್ ಅವರು ಕೂಡ ತಮ್ಮ ಕನಸಿನ ಮನೆಯನ್ನು ಖರೀದಿ ಮಾಡಿದ್ದಾರೆ. ತಮ್ಮ ನೆಚ್ಚಿನ ಮನೆಗೆ ನಮ್ಮ ಗೂಡು ಅಯೋದ್ಯೆ ಎಂದು ಬರೆದುಕೊಂಡಿದ್ದಾರೆ. ಬಹಳ ಎಫರ್ಟ್ ಹಾಕಿ ತಮ್ಮ ಹೊಸ ಮನೆಯ ದೇವರ ಮನೆಗೆ ಹೊಸ ಲುಕ್ ಅನ್ನು ಕೂಡ ನೀಡಿದ್ದಾರೆ. ತಮ್ಮ ಮನೆಯ ಇಂಟಿರಿಯರ್ ಡಿಸೈನ್ ಅನ್ನು ಕೂಡ ತಮ್ಮಿಷ್ಟದಂತೆ ಮಾಡಿಸಿದ್ದಾರೆ. ನಟಿ ರಾಧಿಕಾ ಅಚ್ಯುತ್ ರಾವ್ ಅವರು ಅವರ ತಾಯಿ ಬಯಸಿದಂತೆ ದೇವರ ಗೂಡನ್ನು ನರ್ಮಿಸಿದ್ದು, ಇದರ ವೀಡಿಯೋವನ್ನು ಹಂಚಿಕೊಂಡು ಖುಷಿ ಪಟ್ಟಿದ್ದಾರೆ.
ಗೋಪುರದಂತಿದೆ ದೇವರ ಮನೆ
ನಟ ರಾಜೇಶ್ ಧ್ರುವ ಅವರಿಗೆ ಕ್ರೆಡಿಟ್ ಕೊಟ್ಟಿದ್ದು, ನಿಮ್ಮಿಂದಲೇ ನನ್ನ ಕನಸು ನನಸಾಯ್ತು. ಧನ್ಯವಾದಗಳು ಎಂದು ತಿಳಿಸಿದ್ದಾರೆ. ನಟಿ ರಾಧಿಕಾ ಅಚ್ಯುತ್ ರಾವ್ ಅವರು ತಮ್ಮ ಮನೆಯ ದೇವರ ಮನೆಯಲ್ಲಿ ಗೋಪುರದಂತೆ ನಿರ್ಮಾಣ ಮಾಡಿದ್ದಾರೆ. ಇದನ್ನು ನೋಡಲು ನಿಜವಾಗಿಯೂ ದೊಡ್ಡ ದೇವಸ್ಥಾನದ ಗೋಪುರದಂತೆ ಕಂಡಿದ್ದು, ಅದರಲ್ಲಿ ತಮ್ಮ ನೆಚ್ಚಿನ ದೇವರ ಫೋಟೋವನ್ನು ಇರಿಸಿದ್ದಾರೆ. ಗೋಪುರಕ್ಕೆ ಲೈಟಿಂಗ್ಸ್ ನೀಡಿದ್ದಾರೆ. ನೋಡಲು ಎರಡು ಕಣ್ಣುಗಳು ಸಾಲದು ಅಷ್ಟು ಮುದ್ದಾಗಿ ದೇವರ ಮನೆಯ ಡಿಸೈನ್ ಮಾಡಿಸಿದ್ದಾರೆ. ಹೀಗೆ ಡಿಸೈನ್ ಮಾಡಿಸಲು ಪಟ್ಟ ಶ್ರಮಕ್ಕೆ ಸಪರೇಟ್ ಆದ ಪೋಸ್ಟ್ ಬೇಕೇ ಬೇಕು ಎಂದು ವೀಡಿಯೋ ಹಂಚಿಕೊಂಡಿದ್ದಾರೆ. ಅಲ್ಲದೇ ಮಾಮ್ಸ್, ಮಾಮ್ಸ್ ಎಂದು ವೀಡಿಯೋದಲ್ಲಿ ಬರೆದಿದ್ದು, ತಮ್ಮ ತಾಯಿಯ ಬಯಕೆ ಎಂದು ಹೇಳಿದ್ದಾರೆ.
ರಾಧಿಕಾ ಪ್ರಾಜೆಕ್ಟ್ ಗಳು
ಇನ್ನು ನಟಿ ರಾಧಿಕಾ ಅಚ್ಯುತ್ ಅವರು ಕಿರುತೆರೆಗೆ ಹೊಸ ಮುಖವೇ ಸರಿ. ಪ್ರಶರ್ ಕುಕ್ಕರ್ ಸೇರಿದಂತೆ ಹಲವು ಶಾರ್ಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿರುವ ಇವರು ನಟ ರಾಜೇಶ್ ಧ್ರುವ ಅವರಿಗೆ ಜೋಡಿಯಾಗಿ ಮೀಮಚಿದ್ದಾರೆ. ಇನ್ನು ಜಾಜಿ ಆಲ್ಬಂ ಹಾಡಿಗೆ ನಟ ಸಾಗರ್ ಬಿಳಿಗೌಡ ಅವರ ಜೊತೆಗೆ ಹೆಜ್ಜೆ ಹಾಕಿದ್ದಾರೆ. ಸದ್ಯ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಮೂಡಿ ಬರುತ್ತಿರುವ ಶಾರದೆ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ನಾಯಕನ ಎರಡನೇ ಪತ್ನಿ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಶ್ರೀಲಂಕಾ ಸೇರಿದಂತೆ ಕೆಲವೆಡೆ ಪ್ರವಾಸ ಕೈಗೊಂಡಿದ್ದಾರೆ. ನಟಿ ರಾಧಿಕಾ ಅಚ್ಯುತ್ ರಾವ್ ಅವರಿಗೆ ಪ್ರಾಣಿಗಳೆಂದರೆ ಪ್ರೀತಿ. ಹಾಗಾಗಿ ಸದಾ ಪ್ರಾಣಿಗಳನ್ನು ಮಕ್ಕಳು ಎಂದು ಕರೆಯಲು ಬಯಸುತ್ತಾರೆ.


Click it and Unblock the Notifications











