ಕೆಂಗುಲಾಬಿ ಉಡುಗೆಯಲ್ಲಿ ಬಾರ್ಬಿ ಡಾಲ್ ಆದ ನಟಿ ರಜಿನಿ

By ಪ್ರಿಯಾ ದೊರೆ

ಧಾರಾವಾಹಿಗಳಷ್ಟೇ ಅಲ್ಲದೇ, ರಿಯಾಲಿಟಿ ಶೋಗಳಲ್ಲೂ ಕಮಾಲ್ ಮಾಡಿರುವ ನಟಿ ರಜಿನಿ ಸದ್ಯ 'ಹಿಟ್ಲರ್ ಕಲ್ಯಾಣ' ಧಾರಾವಾಹಿಯಲ್ಲಿ ಬ್ಯುಸಿಯಾಗಿದ್ದಾರೆ.

ಸದಾ ನಾಯಕಿ ಅಥವಾ ಪಾಸಿಟಿವ್ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ನಟಿ ರಜಿನಿ, ಮೊದಲ ಬಾರಿಗೆ 'ಹಿಟ್ಲರ್ ಕಲ್ಯಾಣ' ಧಾರಾವಾಹಿಯಲ್ಲಿ ವಿಲನ್ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.

Kannada TV actress Rajini Looks Flawless In A Pink Gown

ಧಾರಾವಾಹಿ ಅಷ್ಟೇ ಅಲ್ಲದೇ, ಸಿನಿಮಾಗಳಲ್ಲಿ ನಟಿಸಿರುವ ನಟಿ ರಜಿನಿ ಕೆಲ ರಿಯಾಲಿಟಿ ಶೋಗಳಲ್ಲೂ ಭಾಗವಹಿಸಿರುವುದುಂಟು. ಇತ್ತೀಚೆಗೆ ನಟಿ ರಜಿನಿ ಬೊಂಬೆಯಂತೆ ಕಂಗೊಳಿಸುತ್ತಿದ್ದಾರೆ.

ರಜಿನಿ ನಟಿಸಿದ ಧಾರಾವಾಹಿಗಳು

'ಅಮೃತವರ್ಷಿಣಿ' ಧಾರಾವಾಹಿ ಮೂಲಕ ಕಿರುತೆರೆ ಲೋಕಕ್ಕೆ ಪಾದಾರ್ಪಣೆ ಮಾಡಿದ ನಟಿ ರಜಿನಿ ಇಂದಿಗೂ ಅಮೃತಾ ಎಂದೇ ಚಿರಪರಿಚಿತರಾಗಿದ್ದಾರೆ. ಮೂರು ವರ್ಷಕ್ಕೂ ಹೆಚ್ಚು ಕಾಲ ಮೂಡಿ ಬಂದ 'ಅಮೃತವರ್ಷಿಣಿ' ಧಾರಾವಾಹಿಯಲ್ಲಿ ರಜಿನಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರು. ನಂತರ 'ಆತ್ಮ ಬಂಧನ' ಧಾರಾವಾಹಿಯಲ್ಲಿ ನಟಿಸಿದರು. ಭಿನ್ನ ಪಾತ್ರಗಳನ್ನೇ ಆರಿಸಿಕೊಳ್ಳುತ್ತಿದ್ದ ರಜಿನಿ ಅವರಿಗೆ ಅವಕಾಶಗಳು ಕಡಿಮೆಯಾದವು. ನಂತರದ ದಿನಗಳಲ್ಲಿ ಕೆಲ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡರು. 'ಸ್ಟಾರ್ ಸಿಂಗರ್', 'ಡ್ಯಾನ್ಸಿಂಗ್ ಸ್ಟಾರ್ಸ್', 'ಮಜಾ ಟಾಕೀಸ್', 'ಸೂಪರ್ ಕ್ವೀನ್' ಶೋಗಳಲ್ಲಿ ಭಾಗವಹಿಸಿದ್ದರು. ಕುಕ್ಕರಿ ಶೋ ಒಂದನ್ನು ರಜಿನಿ ಹೋಸ್ಟ್ ಮಾಡಿದ್ದರು ಕೂಡ. ಸದ್ಯ ಕಿರುತೆರೆ, ಬೆಳ್ಳಿತೆರೆ ಎರಡರಲ್ಲೂ ನಟಿ ರಜಿನಿ ಬ್ಯುಸಿಯಾಗಿದ್ದಾರೆ.

ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ನಟನೆ

ರಜಿನಿ ಚೊಚ್ಚಲ ಸಿನಿಮಾ 'ಅಂಬುಜ'. ಖಡಕ್ ಹೆಂಗಸಿನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಬಳಿಕ 'ಅಸುರನ ಕೈಯಲ್ಲಿ ಪಾರಿಜಾತ' ಎಂಬ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾದಲ್ಲೂ ರಜಿನಿ ನಾಯಕಿ ಪಾರಿಜಾತ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ 'ಡವ್ ಮಂಜ' ಎಂಬ ಸಿನಿಮಾದಲ್ಲೂ ಬಣ್ಣ ಹಚ್ಚಿದ್ದಾರೆ. ಹೀಗೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿ ರಜಿನಿ ಕಾಣಿಸಿಕೊಳ್ಳುತ್ತಿದ್ದಾರೆ.

Kannada TV actress Rajini Looks Flawless In A Pink Gown

ವಿಲನ್ ಪಾತ್ರಕ್ಕೆ ಬಣ್ಣ ಹಚ್ಚಿದ ನಟಿ

ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿರುವ 'ಹಿಟ್ಲರ್ ಕಲ್ಯಾಣ' ಧಾರಾವಾಹಿಯಲ್ಲಿ ಪ್ರಾರ್ಥನಾ ಅಲಿಯಾಸ್ ಡುಪ್ಲಿಕೇಟ್ ಅಂತರಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಮೂಲಕ ರಜಿನಿ ಅವರು ತಮ್ಮ ಟ್ಯಾಲೆಂಟ್ ಅನ್ನು ತೋರಿಸುತ್ತಿದ್ದಾರೆ. ಧಾರಾವಾಹಿಯಲ್ಲಿ ಹೆಚ್ಚಾಗಿ ಪಾರ್ಟಿ ವೇರ್ ಸೀರೆಗಳನ್ನೇ ಉಡುತ್ತಿರುವ ಆಕೆ ಹೊಸ ಹೊಸ ಫೋಟೋಶೂಟ್‌ ಮಾಡಿಸುತ್ತಿರುತ್ತಾರೆ. ಇತ್ತೀಚೆಗಂತೂ ಥೇಟ್ ಗೊಂಬೆಯಂತೆಯೇ ಕಂಗೊಳಿಸುತ್ತಿರುತ್ತಾರೆ.

ಬಾರ್ಬಿ ಡಾಲ್ ಆದ ನಟಿ ರಜಿನಿ

'ಹಿಟ್ಲರ್ ಕಲ್ಯಾಣ' ಧಾರಾವಾಹಿಯ ಜೊತೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಮೂಡಿ ಬರುತ್ತಿರುವ 'ಉದೋ ಉದೋ ಶ್ರೀರೇಣುಕಾ ಯಲ್ಲಮ್ಮ' ಧಾರಾವಾಹಿಯಲ್ಲೂ ನಟಿಸುತ್ತಿದ್ದಾರೆ. ಒಟ್ಟಾರೆಯಾಗಿ ರಜಿನಿ ಅವರು ಕಿರುತೆರೆ ಹಾಗೂ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ಇದರ ನಡುವೆ ಸಮಯ ಸಿಕ್ಕಾಗಲೆಲ್ಲಾ ಫೋಟೋಶೂಟ್ ಮಾಡಿಸುತ್ತಿರುತ್ತಾರೆ. ಕಳೆದ ವಾರ ಹಳದಿ ಬಣ್ಣದ ಬಟ್ಟೆಯಲ್ಲಿ ಮಿಂಚಿದ್ದರು. ಈಗ ಕೆಂಗುಲಾಬಿ ಬಣ್ಣದ ಗೌನ್ ಧರಿಸಿ ಬಾರ್ಬಿ ಡಾಲ್‌ನಂತೆ ಕಂಡಿದ್ದಾರೆ. ಫೋಟೋ ನೋಡಿದ ಅಭಿಮಾನಿಗಳು ರಜಿನಿ ಅಂದಕ್ಕೆ ಮನಸೋತಿದ್ದಾರೆ. ಊಫ್.. ನಿಮ್ಮ ಸೌಂದರ್ಯಕ್ಕೆ ಸರಿಸಾಟಿ ಯಾರೂ ಇಲ್ಲ ಎಂದು ಅಭಿಮಾನಿಯೊಬ್ಬರು ಹೊಗಳಿದ್ದರೆ, ಉಳಿದವರು ಆಕೆಯ ಅಂದಕ್ಕೆ ಬೆರಗಾಗಿದ್ದಾರೆ.

More from Filmibeat

English summary
Actor Rajini busy in serials and films. Rajini now uploaded new photos;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X