ಹಸಿರು ಸೀರೆಯಲ್ಲಿ ರಮೋಲಾ ಮಿಂಚಿಂಗ್: ಕಿರುತೆರೆಯಲ್ಲಿ ನಟಿಯನ್ನು ನೋಡಲು ಫ್ಯಾನ್ಸ್ ಕಾತರ
ಕಿರುತೆರೆಯಿಂದ ಮಾಯವಾಗಿ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುವ ನಟಿ ರಮೋಲಾ ಈಗ ಹೊಸ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ವಿಲನ್ ಆಗಿ ನಟಿಸಿ, ಕೆಲವೇ ಸಮಯದಲ್ಲಿ ದೊಡ್ಡ ಅಭಿಮಾನಿಗಳ ಬಳಗವನ್ನು ಹೊಂದಿದ ರಮೋಲಾ ಅವರು ಕಿರುತೆರೆಯನ್ನು ತೊರೆದು ವರ್ಷವೇ ಆಗಿ ಹೋಗಿದೆ.
ಹಾಗಿದ್ದರೂ ಕೂಡ ಪ್ರೇಕ್ಷಕರಲ್ಲಿ ಯಾರೊಬ್ಬರೂ ರಮೋಲಾ ಅವರನ್ನು ಮರೆತಿಲ್ಲ. ರಮೋಲಾ ಅವರು ಸೈಲೆಂಟ್ ಆಗಿ ಪ್ರೇಕ್ಷಕರ ಮನಸ್ಸನ್ನು ಗೆದ್ದು ಬಿಟ್ಟಿದ್ದಾರೆ. ಸದಾ ಡಿಫರೆಂಟ್ ಲುಕ್ ನಿಂದಲೇ ಕಾಣಿಸಿಕೊಳ್ಳುವ ನಟಿ ರಮೋಲಾ ಅವರು ಓದಿ ಬೆಳೆದಿದ್ದೆಲ್ಲಾ ಹಾಸ್ಟೆಲ್ ನಲ್ಲಿ. ಹಾಗಾಗಿ ರಮೋಲಾ ಅವರಿಗೆ ಜನರ ಜೊತೆಗೆ ಬೆರೆಯುವುದು ಸ್ವಲ್ಪ ಕಷ್ಟವಾಗುತ್ತಿತ್ತಂತೆ. ಇದೀಗ ಎಲ್ಲರ ಜೊತೆಗೆ ಬೆರೆಯುವುದನ್ನು ಕಲಿತಿದ್ದು, ಸ್ನೇಹಿತರ ಸಂಖ್ಯೆ ಕೊಂಚ ಕಡಿಮೆಯೇ. ಡ್ಯಾನ್ಸರ್ ಆಗಿರುವ ರಮೋಲಾ ಅವರು ಬೆಲ್ಲಿ ಡ್ಯಾನ್ಸ್ ಅನ್ನೂ ಕಲಿತಿದ್ದಾರೆ.

ರಮೋಲಾ ಅವರು ಸೋಶಿಯಲ್ ಮೀಡಿಯಾದಲ್ಲಿ ಆಗಾಗ ರೀಲ್ಸ್ ಗಳನ್ನು ಹಾಕುತತಿರುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ಇನ್ ಸ್ಟಾ ಗ್ರಾಂನಲ್ಲಿ ಫುಲ್ ಆಕ್ಟೀವ್ ಆಗಿರುವ ರಮೋಲಾ ಅವರು ಆಗಾಗ ಡಿಫರೆಂಟ್ ಲುಕ್ಸ್ ನಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ. ರಮೋಲಾ ಅವರು ಮಾಡೆಲ್ ಆಗಿದ್ದು, ಇದರ ಜೊತೆಗೆ ನಟನೆಯನ್ನೂ ಮಾಡಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಅದ್ಭುತವಾಗಿ ಮೂಡಿ ಬರುತ್ತಿದ್ದ 'ಕನ್ನಡತಿ' ಧಾರಾವಾಹಿಯಲ್ಲಿ ನಟಿಸಿದ್ದರು.
ಈ ಧಾರಾವಾಹಿಯಲ್ಲಿ ರಮೋಲಾ ಅವರು ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಪಾತ್ರವೂ ಕೊಂಚ ಡಿಫರೆಂಟ್ ಆಗಿಯೇ ಇತ್ತು. ಫ್ಯಾಷನ್ ಡಿಸೈನಿಂಗ್ ಶಿಕ್ಷಣ ಪೂರೈಸಲು ಧಾರಾವಾಹಿಯನ್ನು ಅರ್ಧಕ್ಕೆ ಕೈ ಬಿಟ್ಟಿದ್ದರು. ಆದರೆ ಪುನಃ ಕಿರುತೆರೆಯಲ್ಲಿ ಎಲ್ಲೂ ಕಾಣಿಸಿಕೊಳ್ಳಲಿಲ್ಲ. ಕೆಲ ಜಾಹೀರಾತುಗಳಲ್ಲಿ ಮಾತ್ರವೇ ಕಾಣಿಸಿಕೊಂಡರು. ಸಿನಿಮಾ ಕ್ಷೇತ್ರದಲ್ಲೂ ಕಾಣಿಸಿಕೊಂಡ ನಟಿ ರಮೋಲಾ ಅವರು ಕೆಲ ಚಿತ್ರಗಳಲ್ಲಿ ನಟಿಸಿದ್ದಾರೆ.
'ರಿಚ್ಚಿ' ಎಂಬ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ಬಿಗ್ ಬಾಸ್ ಮಿನಿ ಸೀಸನ್‌ನಲ್ಲೂ ಭಾಗವಹಿಸಿದ್ದರು. ರಮೋಲಾ ಅವರನ್ನು ವಿಲನ್ ಆಗಿ ಟ್ರೀಟ್ ಮಾಡುತ್ತಿದ್ದವರು, ಬಿಗ್‌ಬಾಸ್‌ನಲ್ಲಿ ಆಕೆಯನ್ನು ಕಂಡು ಮೆಚ್ಚಿಕೊಂಡಿದ್ದರು. ಯಾಕೆಂದರೆ, ರಮೋಲಾ ಅವರ ನಿಜವಾದ ಗುಣಗಳಿಗೆ ಅಭಿಮಾನಿಗಳು ಫಿದಾ ಆಗಿದ್ದರು. ಫ್ಯಾಷನ್ ಡಿಸೈನಿಂಗ್ ಮಾಡುತ್ತಿರುವ ರಮೋಲಾ ಅವರಿಗೆ ಆಫರ್‌ಗಳಿಗೇನು ಕಡಿಮೆ ಇಲ್ಲ.

ತಮ್ಮ ಗುರಿ ಸಾಧನೆಗಾಗಿ ರಮೋಲಾ ಅವರು ತಾಳ್ಮೆ ಇಂದ ಕಾಯುತ್ತಿದ್ದಾರೆ. ಆದರೆ ರಮೋಲಾ ಅವರನ್ನು ನೋಡಲು ಅಭಿಮಾನಿಗಳು ವೇಟ್ ಮಾಡುತ್ತಿದ್ದಾರೆ. ರಮೋಲಾ ಅವರಿಗೆ ನಟನೆ ಎಂದರೆ ಒಲವು, ಫ್ಯಾಷನ್ ಡಿಸೈನಿಂಗ್ ಎಂದರೆ ಬ್ಯುಸಿನೆಸ್ ಅಂತೆ. ಹೀಗಾಗಿ ತಮ್ಮ ಆರ್ಥಿಕ ಪರೀಸ್ಥಿತಿಯನ್ನು ಸ್ಥಿರವಾಗಿಡಲು ಸದ್ಯ ಕಿರುತೆರೆಯಿಂದ ಬ್ರೇಕ್ ಪಡೆದಿದ್ದಾರೆ. ಇನ್ನು 2017 ರಿಲಾಯನ್ಸ್ ಜ್ಯುವೆಲ್ಸ್ ಮಿಸ್ ಇಂಡಿಯಾ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದರು.
ಯಾವಾಗಲೂ ಹಾಟ್ ಲುಕ್ ನಲ್ಲಿ ಕಾಣಿಸಿಕೊಳ್ಳುವ ರಮೋಲಾ ಅವರು ಮೊದಲ ಬಾರಿಗೆ ಹಸಿರು ಸೀರೆಯಲ್ಲಿ ಮಿಂಚಿದ್ದಾರೆ. ಈ ಹೊಸ ಫೋಟೋಗಳನ್ನು ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಯುಗಾದಿ ಹಬ್ಬಕ್ಕೆ ಹಸಿರು ಸೀರೆ, ಕೆಂಪು ರವಿಕೆ ತೊಟ್ಟು ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.


Click it and Unblock the Notifications











