ಕೆಂಪು ಉಡುಗೆಯಲ್ಲಿ ಪಾತರಗಿತ್ತಿಯಂತೆ ಮಿಂಚಿದ ನಟಿ ಚಿನ್ನು ರಶ್ಮಿ ಪ್ರಭಾಕರ್

By ಪ್ರಿಯಾ ದೊರೆ

Article desc: ಕನ್ನಡ ಕಿರುತೆರೆ ನಟಿಯರು ಹೆಚ್ಚಾಗಿ ಪರಭಾಷೆಗಳಲ್ಲಿ ಮಿಂಚುವುದು ಸಹಜ. ಈ ಸಾಲಿಗೆ ಕಿರುತೆರೆ ನಟಿ ರಶ್ಮಿ ಪ್ರಭಾಕರ್ ಹೊರತಾಗೇನೂ ಇಲ್ಲ.

ತಮಿಳಿನ ಧಾರಾವಾಹಿಗಳಲ್ಲಿ ನಟಿಸುತ್ತಲೇ, ಕನ್ನಡ ಕಿರುತೆರೆಯಲ್ಲೂ ಆಗಾಗ ಕಾಣಿಸಿಕೊಳ್ಳುವ ಸೂಪರ್ ಕ್ವೀನ್ ಕಾರ್ಯಕ್ರಮದಲ್ಲಿ ಕಿರೀಟವನ್ನು ಮುಡಿಗೇರಿಸಿಕೊಂಡು ಸಂಭ್ರಮಿಸಿದ್ದರು.

Kannada TV actress Rashmi Prabhakar Looks Gorgeous In A Red gown

ಈಗ ಜೀ ಕನ್ನಡ ವಾಹಿನಿಯ ಜೀ ಕುಟುಂಬ ಕಾರ್ಯಕ್ರಮದಲ್ಲಿ ಕೆಂಪು ಗೌನ್ ಧರಿಸಿ ಮಿಂಚಲು ಸಜ್ಜಾಗಿದ್ದಾರೆ. ಈಗಾಗಲೇ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ರಶ್ಮಿ ಕಿರುತೆರೆ ಜರ್ನಿ

ಕನ್ನಡ ಕಿರುತೆರೆಯಲ್ಲಿ 'ಲಕ್ಷ್ಮೀ ಬಾರಮ್ಮ' ಸಿರಿಯಲ್ ಮೂಲಕ ರಶ್ಮಿ ಪ್ರಭಾಕರ್ ಚಿನ್ನು ಆಗಿ ವೀಕ್ಷಕರ ಮನ ಗೆದ್ದಿದ್ದರು. ಇದಲ್ಲದೇ, ಕನ್ನಡದಲ್ಲಿ ಮೂಡಿ ಬಂದ 'ಶುಭ ವಿವಾಹ', 'ಮಹಾಭಾರತ', 'ದರ್ಪಣ', 'ಜೀವನ ಚೈತ್ರ', 'ಮನಸೆಲ್ಲಾ ನೀನೇ', 'ಲಕ್ಷ್ಮೀ ಬಾರಮ್ಮ' ಸೇರಿದಂತೆ ಕೆಲ ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿದ್ದಾರೆ. ತಮಿಳು, ತೆಲುಗು ಕಿರುತೆರೆಯಲ್ಲೂ ಹಲವು ಧಾರಾವಾಹಿಗಳಲ್ಲಿ ನಟಿಸಿ ಅಲ್ಲಿಯೂ ಅಭಿಮಾನಿಗಳನ್ನು ಗಳಿಸಿದ್ದಾರೆ. ತಮಿಳಿನ 'ಅರುಂಧತಿ', ತೆಲುಗಿನ 'ಪೌರ್ಣಮಿ' ಹಾಗೂ 'ಕಾವ್ಯಾಂಜಲಿ' ಧಾರಾವಾಹಿಗಳಲ್ಲಿ ನಟಿಸಿದ್ದರು. ಈಗಲೂ ಕೂಡ ತಮಿಳಿನ 'ಕಣ್ಣೇ ಕಲೈಮಾನೆ' ಧಾರಾವಾಗಿಯಲ್ಲಿ ಬ್ಯುಸಿಯಾಗಿದ್ದಾರೆ. ಕೆಲ ಸಿನಿಮಾಗಳಿಗೂ ಬಣ್ಣ ಹಚ್ಚಿರುವ ರಶ್ಮಿ 'ಮಹಾಕಾವ್ಯ' ಮತ್ತು 'ಬಿಬಿ5' ಚಿತ್ರಗಳಲ್ಲಿ ಮಿಂಚಿದ್ದಾರೆ.

Kannada TV actress Rashmi Prabhakar Looks Gorgeous In A Red gown

ಸೂಪರ್ ಕ್ವೀನ್ ವಿನ್ನರ್

ಇನ್ನು ಜೀ ಕನ್ನಡದ 'ಸೂಪರ್ ಕ್ವೀನ್' ಎಂಬ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ ರಶ್ಮಿ, ಗೆದ್ದು ಕಿರೀಟವನ್ನು ಮುಡಿಗೇರಿಸಿಕೊಂಡಿದ್ದರು. ರಶ್ಮಿ ಲವ್ ಕಮ್ ಅರೇಂಜ್ ಮ್ಯಾರೇಜ್ ಮಾಡಿಕೊಂಡಿದ್ದಾರೆ. ಕೆಲ ವರ್ಷಗಳ ಹಿಂದೆ ನಿಖಿಲ್ ಹಾಗೂ ರಶ್ಮಿ ಪರಿಚಯವಾಗಿದ್ದು, ಪರಿಚಯ ಪ್ರೀತಿಗೆ ತಿರುಗಿದೆ. ಇಬ್ಬರೂ ಒಬ್ಬರನ್ನು ಒಬ್ಬರು ಮೆಚ್ಚಿಕೊಂಡಿದ್ದಾರೆ. ಬಳಿಕ ಇಬ್ಬರ ಮನೆಯಲ್ಲಿ ವಿಷಯ ತಿಳಿಸಿದ್ದಾರೆ. ಎರಡೂ ಮನೆಯವರೂ ಇಬ್ಬರ ಪ್ರೀತಿಯನ್ನು ಒಪ್ಪಿಕೊಂಡು ಮದುವೆಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಎಲ್ಲರ ಸಮ್ಮುಖದಲ್ಲಿ ಈ ಜೋಡಿಗಳು ಸಪ್ತಪದಿ ತುಳಿದಿದ್ದರು. ಇವರ ಪತಿ ನಿಖಿಲ್ ಭಾರ್ಗವ್ ಬೆಂಗಳೂರಿನಲ್ಲೆ ನೆಲೆಸಿದ್ದಾರೆ. ಖಾಸಗಿ ಕಂಪನಿಯಲ್ಲಿ ಉದ್ಯೋಗ ಮಾಡುತ್ತಿರುವ ನಿಖಿಲ್ ಹಾಗೂ ಮನೆಯವರು ರಶ್ಮಿ ನಟನೆಗೆ ಸಪೋರ್ಟ್ ಮಾಡುತ್ತಿದ್ದಾರೆ.

ಕಪಲ್ಸ್ ಕಿಚನ್‌ನಲ್ಲಿ ರಶ್ಮಿ-ನಿಖಿಲ್

ಇತ್ತೀಚೆಗೆ ರಶ್ಮಿ ಮತ್ತು ಪತಿ ನಿಖಿಲ್ ಜೀ ಕನ್ನಡದಲ್ಲಿ ಮೂಡಿ ಬಂದ 'ಕಪಲ್ಸ್ ಕಿಚನ್' ಕಾರ್ಯಕ್ರಮದಲ್ಲೂ ಭಾಗವಹಿಸಿದ್ದರು. ಈ ವೇಳೆ ರಶ್ಮಿ, ನಿಖಿಲ್ ಅವರನ್ನು ನಮ್ಮಿಬ್ಬರ ಬದುಕನ್ನು ಯಾವ ಅಡುಗೆಗೆ ಹೋಲಿಸುತ್ತೀರಾ ಎಂದು ರಶ್ಮಿ ಕೇಳಿದ ಪ್ರಶ್ನೆಗೆ ನಿಖಿಲ್ ಅವರು ರಸಂ ಎಂದು ಹೇಳಿದ್ದರು. ಯಾಕೆ ಎಂದು ಕಾರಣ ಕೇಳಿದ್ದಕ್ಕೆ ಅದರಲ್ಲಿ ಉಪ್ಪು, ಹುಳಿ, ಖಾರ, ಬೆಲ್ಲಾ ಎಲ್ಲವೂ ಇರುತ್ತೆ. ನಮ್ಮಿಬ್ಬರ ಬದುಕಲ್ಲೂ ಇದೆಲ್ಲವೂ ಇದೆ ಎಂದು ಉತ್ತರ ನೀಡಿ, ತಾವಿಬ್ಬರೂ ಬದುಕಲ್ಲಿ ಎಷ್ಟು ಅನ್ಯೂನ್ಯವಾಗಿದ್ದೀವಿ ಎಂಬುದನ್ನು ಸಿಂಪಲ್ ಆಗಿ ಹೇಳಿದ್ದರು.

ಕೆಂಪು ಗೌನ್‌ನಲ್ಲಿ ರಶ್ಮಿ

ರಶ್ಮಿ ಜೀ ಕುಟುಂಬ ಅವಾರ್ಡ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಈ ಕಾರ್ಯಕ್ರಮಕ್ಕಾಗಿ ಆಕೆ ಕೆಂಪು ಬಣ್ಣದ ಗೌನ್ ಅನ್ನು ಧರಿಸಿದ್ದಾರೆ. ಇದರ ಫೋಟೋಶೂಟ್ ಕೂಡ ಮಾಡಿಸಿರುವ ಚೆಲುವೆ ತಮ್ಮ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಹಂಚಿಕೊಂಡಿದ್ದಾರೆ. ಅಭಿಮಾನಿಗಳು ರಶ್ಮಿ ಲುಕ್‌ಗೆ ವಾವ್ ಎಂದಿದ್ದಾರೆ.

More from Filmibeat

English summary
Actress Rashmi Prabhakar new photoshoot goes viral,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X