ಶಿಲ್ಪಾ ಟು ರುಹಾನಿ; ಮಾಯಾಳ ಬಣ್ಣದ ಬದುಕು ಹೇಗಿದೆ ಗೊತ್ತಾ?

By ಪ್ರಿಯಾ ದೊರೆ

'ನಾ ನಿನ್ನ ಬಿಡಲಾರೆ' ಧಾರಾವಾಹಿಯನ್ನು ಎಲ್ಲರೂ ಇಷ್ಟಪಟ್ಟು ನೋಡುತ್ತಾರೆ. ಯಾಕೆಂದರೆ ಈ ಧಾರಾವಾಹಿಯಲ್ಲಿ ಪುಟಾಣಿ ಪ್ರತಿಭೆ ಬಾಲನಟಿ ಮಹಿತಾ ನಟಿಸುತ್ತಿದ್ದು, ಜೊತೆಗೆ ದೆವ್ವದ ಕಥೆ ಇದಾಗಿದೆ. ಅಂದರೆ ಕೇವಲ ದೆವ್ವ ಮಾತ್ರವಲ್ಲ. ಒಳ್ಳೆಯ ದೆವ್ವ ಹಾಗೂ ಇತರೆ ಶಕ್ತಿಗಳ ಬಗ್ಗೆ ಈ ಧಾರಾವಾಹಿಯಲ್ಲಿ ಕುತೂಹ ಭರಿತವಾಗಿ ತೋರಿಸಲಾಗಿದೆ. ಹಾಗಾಗಿ ಧಾರಾವಾಹಿಯನ್ನು ಎಲ್ಲರೂ ನೋಡಲು ಬಯಸುತ್ತಾರೆ.

ಇನ್ನು ಈ ಧಾರಾವಾಹಿಯಲ್ಲಿ ಪಕ್ಕಾ ವಿಲನ್ ರೋಲ್‌ನಲ್ಲಿ ನಟಿ ರುಹಾನಿ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ನೋಡಲು ಕೊಂಚ ನಟಿ ಸಾರಾ ಅಣ್ಣಯ್ಯ ಅವರನ್ನು ಈಕೆ ಹೋಲುತ್ತಾರೆ. ರುಹಾನಿ ಶೆಟ್ಟಿ ಯಾರು, ಅವರ ಹಿನ್ನೆಲೆ ಏನು ಎಂಬುದು ಹಲವರಿಗೆ ಗೊತ್ತಿಲ್ಲ. ಅದರ ಬಗ್ಗೆ ಕಂಪ್ಲೀಟ್ ಮಾಹಿತಿ ಈ ಲೇಖನದಲ್ಲಿ ಸಿಗಲಿದೆ.

Kannada Tv Actress Ruhani shetty biography serials and more

ಕೊಡಗಿನ ಬೆಡಗಿ

'ನಾ ನಿನ್ನ ಬಿಡಲಾರೆ' ಧಾರಾವಾಹಿಯಲ್ಲಿ ನಾಯಕ ಶರತ್ ಪಾತ್ರದಲ್ಲಿ ನಟ ಶರತ್ ಪದ್ಮನಾಭ ನಟಿಸುತ್ತಿದ್ದರೆ, ನಾಯಕಿ ಅಂಬಿಕಾ ಆಗಿ ನಟಿ ನೀತಾ ಅಶೋಕ್ ಅಭಿನಯಿಸುತ್ತಿದ್ದಾರೆ. ಖಳನಾಯಕಿ ಮಾಯಾ ಪಾತ್ರದಲ್ಲಿ ನಟಿ ರುಹಾನಿ ಶೆಟ್ಟಿ ಕಾಣಿಸಿಕೊಂಡಿದ್ದಾರೆ. 'ಎರಡು ಕನಸು' ಧಾರಾವಾಹಿ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ರುಹಾನಿ ಶೆಟ್ಟಿ ಅವರು ಮೂಲತಃ ಕೂರ್ಗ್ ಬೆಡಗಿ. ಈಗಾಗಲೇ ತುಳು ಸಿನಿರಂಗದಲ್ಲಿ ಫೇಮಸ್ ಕೂಡ ಆಗಿದ್ದು, ಹಲವು ಸಿನಿಮಾಗಳಿಗೂ ಬಣ್ಣ ಹಚ್ಚಿದ್ದಾರೆ.

ಸಿನಿಮಾಗಳಲ್ಲಿ ಮಿಂಚಿರುವ ರುಹಾನಿ

'ಗಿರ್ ಗಿಟ್', 'ನ್ಯೂರಾನ್' ಎಂಬ ತುಳು ಸಿನಿಮಾಗಳಲ್ಲಿ ಬಣ್ಣ ಹಚ್ಚಿರುವ ರುಹಾನಿ ಶೆಟ್ಟಿ ಅವರು ಎವರ್ ಗ್ರೀನ್ ನಟ ರಮೇಶ್ ಅರವಿಂದ್ ನಿರ್ದೇಶನದ '100' ಚಿತ್ರದಲ್ಲಿಯೂ ನಟಿಸಿದ್ದಾರೆ. ಅಲ್ಲದೇ, ಡಾರ್ಲಿಂಗ್ ಕೃಷ್ಣ ಅಭಿನಯದ 'ಶುಗರ್ ಫ್ಯಾಕ್ಟರಿ' ಸಿನಿಮಾದಲ್ಲಿ ಬಹಳ ಬೋಲ್ಡ್ ಹಾಗೂ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ. ಪಾತ್ರಕ್ಕೆ ತಕ್ಕಂತೆ ಕಾಣಿಸಿಕೊಳ್ಳುವ ನಟಿ ರುಹಾನಿ ಶೆಟ್ಟಿ ಅವರ ಸ್ಟೈಲಿಷ್ ಲುಕ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ಶಿಲ್ಪಾ ಶೆಟ್ಟಿ ಈಗ ರುಹಾನಿ ಶೆಟ್ಟಿ

ಇನ್ನು ನಟಿ ರುಹಾನಿ ಶೆಟ್ಟಿ ಅವರು ಫಿಲ್ಮ್ ಡ್ಯಾನ್ಸ್ ಮತ್ತು ಸುಗಮ ಸಂಗೀತವನ್ನು ಕಲಿತಿದ್ದು, ಬಾಲ್ಯದಿಂದಲೇ ನಟನೆಯಲ್ಲಿ ತೊಡಗಿ ಕೊಂಡವರು. ಶಾಲಾ ದಿನಗಳಲ್ಲಿ ನಾಟಕಗಳಲ್ಲಿ ಭಾಗವಹಿಸುತ್ತಿದ್ದರು. ಈಗ ಮಾಡೆಲಿಂಗ್ ಜಗತ್ತಿನಲ್ಲೂ ತಮ್ಮನನ್ನು ತಾವು ತೊಡಗಿಸಿಕೊಂಡಿದ್ದಾರೆ. ಬಣ್ಣದ ಪಯಣ ಆರಂಭಿಸಿದಾಗ ರುಹಾನಿ ಶೆಟ್ಟಿ ಅವರು ಗುರುತಿಸಿಕೊಂಡಿದ್ದು, ಶಿಲ್ಪಾ ಶೆಟ್ಟಿ ಹೆಸರಿನಲ್ಲಿ. ಆದರೆ, ಎಲ್ಲೆಡೆ ಕನ್ನಡದ ಶಿಲ್ಪಾ ಶೆಟ್ಟಿ ಎಂದು ರುಹಾನಿ ಅವರನ್ನು ಗುರುತಿಸಲಾಗುತ್ತಿತ್ತು. 'ಮರಳಿ ಮನಸಾಗಿದೆ' ಧಾರಾವಾಹಿಯಲ್ಲಿ ನಟಿಸುವಾಗಲೂ ಶಿಲ್ಪಾ ಶೆಟ್ಟಿ ಹೆಸರಿನ ಮೂಲಕವೇ ಗುರುತಿಸಿಕೊಂಡಿದ್ದರು.

ಮಾಯಾ ಪಾತ್ರದಲ್ಲಿ ರುಹಾನಿ ಶೆಟ್ಟಿ

ಅದು ಯಾವಾಗ ರುಹಾನಿ ಶೆಟ್ಟಿ ಎಂದು ಹೆಸರು ಬದಲಿಸಿಕೊಂಡರೋ ಯಾರಿಗೂ ಗೊತ್ತೇ ಆಗಲಿಲ್ಲ. ಸದ್ಯ ರುಹಾನಿ ಶೆಟ್ಟಿ ಎಂದು ಗುರುತಿಸಿಕೊಳ್ಳುತ್ತಿರುವ ನಟಿ ಮಾಯಾ ನಟನೆಯನ್ನು ಎಲ್ಲರೂ ಇಷ್ಟಪಟ್ಟಿದ್ದಾರೆ. ವಿಲನ್ ಪಾತ್ರವೇ ಆದರೂ ರುಹಾನಿ ಶೆಟ್ಟಿ ಅವರ ನಟನೆಯ ಬಗ್ಗೆ ಮಾತನಾಡುವಂತಿಲ್ಲ. ಮಾಯಾ ಆಗಿ ಕಿರುತೆರೆಯಲ್ಲಿ ಬ್ರೇಕ್ ಪಡೆದಿರುವ ರುಹಾನಿ ಶೆಟ್ಟಿ ಮೊದಲ ಬಾರಿಗೆ ಖಳನಾಯಕಿಯಾಗಿ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಬೋಲ್ಡ್ ಲುಕ್‌ನಲ್ಲಿ ಕಾಣಿಸಿಕೊಳ್ಳುವ ನಟಿ ರುಹಾನಿ ಶೆಟ್ಟಿ ಅವರು ಆಗಾಗ ರೀಲ್ಸ್ ಮಾಡುತ್ತಿರುತ್ತಾರೆ.

More from Filmibeat

English summary
Naa ninna bidalaare serial Actress Ruhani shetty small screen details;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X