ಬರ್ತಡೇ ಗರ್ಲ್ ಸಾರಾ ಅಣ್ಣಯ್ಯ ಪಾರ್ಟಿ ಜೋರು
ನಟಿ ಸಾರಾ ಅಣ್ಣಯ್ಯ ಈಗ ಜೀ ಕನ್ನಡ ವಾಹಿನಿಯಲ್ಲಿ 'ಅಮೃತಧಾರೆ' ಧಾರಾವಾಹಿ ತಂಡದಲ್ಲಿದ್ದಾರೆ. ಮಹಿಮಾ ಪಾತ್ರವನ್ನು ನಿರ್ವಹಿಸುತ್ತಿರುವ ಸಾರಾ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.
ಮೊದಲು ಮಾಡೆಲಿಂಗ್ ಕ್ಷೇತ್ರದಿಂದ ಕಿರುತೆರೆಗೆ ಧುಮುಕಿದ ನಟಿ ಸಾರಾ ಅಣ್ಣಯ್ಯ ಈಗ ಫುಲ್ ಟೈಂ ಸೀರಿಯಲ್‌ನಲ್ಲಿ ಬ್ಯುಸಿಯಾಗಿಬಿಟ್ಟಿದ್ದಾರೆ.

ಕನ್ನಡ ಕಿರುತೆರೆಯ ಕಲರ್ಸ್ ಕನ್ನಡ, ಜೀ ಕನ್ನಡ ಹಾಗೂ ಸ್ಟಾರ್ ಸುವರ್ಣ ಮೂರು ವಾಹಿನಿಯಲ್ಲಿ ಕೆಲಸ ಮಾಡಿದ್ದಾರೆ. ಶ್ರೀಮಂತ ಮನೆಯ ಹುಡುಗಿ ಪಾತ್ರದಲ್ಲೇ ಕಾಣಿಸಿಕೊಳ್ಳುತ್ತಿರುವುದು ಮತ್ತೊಂದು ಆಶ್ಚರ್ಯಕರವಾದ ವಿಚಾರ.
ಮಹಿಮಾ ಪಾತ್ರದಲ್ಲಿ ನಟನೆ
ಸಾರಾ ಅಣ್ಣಯ್ಯ ಮೊದಲು ಕನ್ನಡತಿ ಧಾರಾವಾಹಿಯಲ್ಲಿ ಪಾಸಿಟಿವ್ ಹಾಗೂ ನೆಗೆಟಿವ್ ಎರಡೂ ರೋಲ್‌ನಲ್ಲಿ ಮಿಂಚಿದ್ದರು. ವರೂಧಿನಿ ಎಂಬ ಪಾತ್ರದಲ್ಲಿ ನಟಿಸಿದ್ದರು. ನಂತರ 'ನಮ್ಮ ಲಚ್ಚಿ' ಧಾರಾವಾಹಿಯಲ್ಲಿ ನಾಯಕ ಸಂಗಮ್ ಪತ್ನಿ ದೀಪಿಕಾ ಪಾತ್ರದಲ್ಲಿ ನಟಿಸಿದ್ದರು. ಶ್ರೀಮಂತಿಕೆ, ರಾಯಲ್ ಜೀವನ ನಡೆಸುವ ಪಾತ್ರಗಳೇ ಸಾರಾಗೆ ಹೆಚ್ಚಾಗಿ ಒಲಿದು ಬರುತ್ತಿದೆ. 'ಕನ್ನಡತಿ' ಧಾರಾವಾಹಿಲ್ಲಿ ವಿಲನ್ ಕಮ್ ಸ್ನೇಹಿತೆ ಪಾತ್ರ ಮಾಡಿದ್ದರು. 'ನಮ್ಮ ಲಚ್ಚಿ'ಧಾರಾವಾಹಿಯಲ್ಲಿ ಕಂಪ್ಲೀಟ್ ವಿಲನ್ ಆಗಿದ್ದರು. ಆದರೆ ಈಗ ಜೀ ಕನ್ನಡದಲ್ಲಿ ಮೂಡಿ ಬರುತ್ತಿರುವ 'ಅಮೃತಧಾರೆ' ಧಾರಾವಾಹಿಯಲ್ಲಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್
ಬೋಲ್ಡ್ ನಟಿ ಸಾರಾ ಅಣ್ಣಯ್ಯ ಈಗ ಜೀ ಕನ್ನಡ ವಾಹಿನಿಯಲ್ಲಿ ಮಿಂಚುತ್ತಿದ್ದಾರೆ. ಸಾರಾ ಸಿಕ್ಕಾಪಟ್ಟೆ ಫೋಟೋಶೂಟ್ ಅನ್ನು ಮಾಡಿಸುತ್ತಿರುತ್ತಾರೆ. ಮಾಡರ್ನ್ ಹಾಗೂ ಟ್ರೆಡಿಷನಲ್ ಲುಕ್‌ನಲ್ಲಿ ಫೋಟೊ ಕ್ಲಿಕ್ಕಿಸಿಕೊಳ್ಳುತ್ತಿರುತ್ತಾರೆ. ಹುಡುಗಿಯರು ಇಷ್ಟ ಪಟ್ಟು ಫಾಲೋ ಮಾಡುತ್ತಾರೆ. ಹುಟ್ಟುಹಬ್ಬ ಹಿನ್ನೆಲೆ ಶೂಟಿಂಗ್‌ನಿಂದ ಬಿಡುವು ಪಡೆದುಕೊಂಡು ಸ್ನೇಹಿತರ ಜೊತೆಗೆ ಸಂಭ್ರಮಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಎಂದಿನಂತೆ ಆಕ್ಟೀವ್ ಆಗಿರುತ್ತಾರೆ. ಹುಟ್ಟುಹಬ್ಬ ಹಿನ್ನೆಲೆ ಹೊಸ ಲುಕ್‌ನಲ್ಲಿ ಕಾಣಿಸಿಕೊಳ್ಳಬಹುದು ಎಂದು ಊಹಿಸಲಾಗಿದೆ.
ಟ್ರಾವೆಲಿಂಗ್ ಇಷ್ಟಪಡುವ ನಟಿ
ಮೂಲತಃ ಹುಣಸೂರಿನವರಾದ ಸಾರಾ ಅಣ್ಣಯ್ಯ ಮಾಡೆಲಿಂಗ್ ಮಾಡುತ್ತಿದ್ದರು. ಆಕಸ್ಮಿಕವಾಗಿ 'ಕನ್ನಡತಿ' ಧಾರಾವಾಹಿಗೆ ನಟಿಸಲು ಒಪ್ಪಿಕೊಂಡರು. ಈಗ ಸಾರಾ ಅಭಿನಯಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಆಕೆಗೆ ಪರಭಾಷೆಯಲ್ಲಿ ನಟಿಸುವ ಅವಕಾಶಗಳು ಒದಗಿ ಬರುತ್ತಿದೆ. ಸಾರಾಗೆ ಟ್ರಾವೆಲಿಂಗ್ ಮಾಡುವುದೆಂದರೆ ಬಹಳ ಇಷ್ಟವಂತೆ. ಆಗಾಗ ಟ್ರಿಪ್ ಹೋಗುತ್ತಿರುತ್ತಾರೆ.
ಹುಟ್ಟುಹಬ್ಬದ ಸೆಲಬ್ರೇಷನ್‌ನಲ್ಲಿ ಸಾರಾ
ಹುಟ್ಟುಹಬ್ಬ ಹಿನ್ನೆಲೆ ಸ್ನೇಹಿತರು, ಕಲಾವಿದರು ಸೇರಿದಂತೆ ಎಲ್ಲರೂ ವಿಶ್ ಮಾಡಿದ್ದಾರೆ. ಶೂಟಿಂಗ್‌ಗೆ ಬ್ರೇಕ್ ಕೊಟ್ಟಿರುವ ಸಾರಾ, ತಮ್ಮ ಆತ್ಮೀಯ ಗೆಳೆಯರ ಜೊತೆಗೆ ಪಾರ್ಟಿ ಮಾಡಿದ್ದಾರೆ. ಪಾರ್ಟಿ ಮಾಡಿರುವ ರೀಲ್ಸ್ ಅನ್ನು ಕೂಡ ತಮ್ಮ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಶೇರ್ ಮಾಡಿದ್ದಾರೆ. ಆಕೆ ಇದುವರೆಗೂ ತಮ್ಮ ಇನ್ಸ್ಟಾಗ್ರಾಂ ಪೇಜ್ ನಲ್ಲಿ ಕೇವಲ 156 ಪೋಸ್ಟ್ ಗಳನ್ನು ಹಾಕಿದ್ದು, 255K ಫಾಲೋವರ್ಸ್ ಇದ್ದಾರೆ.


Click it and Unblock the Notifications











