ಮದುವೆ ಬಳಿಕ ಬಣ್ಣದ ಲೋಕ ಕಿರುತೆರೆಗೆ ಎಂಟ್ರಿ ಕೊಟ್ಟ ನಟಿಯರು
ಕಿರುತೆರೆ ನಟಿಯರು ಮದುವೆ ಬಳಿಕ ನಟನೆಗೆ ಗುಡ್ ಬೈ ಹೇಳುವವರೇ ಹೆಚ್ಚು. ಕೆಲವರು ನಟನೆ ಮತ್ತು ಕುಟುಂಬ ಎರಡನ್ನೂ ಸರಿದೂಗಿಸಿಕೊಂಡು ಜೀವನ ನಡೆಸುತ್ತಿದ್ದಾರೆ. ಮದುವೆ ನಂತರ ಎಲ್ಲವೂ ಬದಲಾಗುತ್ತದೆ. ಯಾಕೆಂದರೆ, ವಿವಾಹದ ಬಳಿಕ ಗಂಡ-ಮಕ್ಕಳು ಅಂತ ಹಲವು ಜವಾಬ್ದಾರಿಗಳಿರುತ್ತವೆ. ಅದೆಷ್ಟೊ ನಟಿಯರು ನಟಿಸುವ ಆಸೆಯಿದ್ದರೂ ಕುಟುಂಬಕ್ಕಾಗಿ ಸಿನಿಜೀವನವನ್ನು ತ್ಯಾಗ ಮಾಡಬೇಕಾಗುತ್ತದೆ.
ಇನ್ನೂ ಕೆಲವರು ಕುಟುಂಬದ ಸಹಕಾರದಿಂದ ಮದುವೆ ಬಳಿಕವಷ್ಟೇ ನಟನೆಗೆ ಎಂಟ್ರಿಕೊಟ್ಟು ಯಶಸ್ಸು ಗಳಿಸಿದ್ದಾರೆ.
ಮದುವೆಯಾದ ಬಳಿತವೂ ಇನ್ನೂ ಯಂಗ್ ಆಗಿರುವುದಲ್ಲದೇ ಪಡ್ಡೆ ಹುಡುಗರ ಮೈ ಜುಮ್ ಎನಿಸುವಂತೆ ಸುಂದರವಾಗಿದ್ದಾರೆ.

ಸ್ವೀಟ್ ಆಂಟಿ ಶರ್ಮಿತಾ
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಗೀತಾ' ಧಾರಾವಾಹಿಯಲ್ಲಿ ಭಾನುಮತಿ ಪಾತ್ರದಲ್ಲಿ ನಟಿಸುತ್ತಿರುವ ನಟಿ ಶರ್ಮಿತಾ ಗೌಡ ಮದುವೆ ಬಳಿಕವೇ ನಟನೆ ಆರಂಭಿಸಿದರು. ಕಿರುತೆರೆಗೆ ಬರುವ ಮುನ್ನ ಅವರು ನ್ಯೂಟ್ರಿಯನಿಷ್ಟ್ ಆಗಿ ಕೆಲಸ ಮಾಡುತ್ತಿದ್ದರು. ಮೂಲತಃ ಕಾಫಿನಾಡು ಚಿಕ್ಕಮಗಳೂರಿನವರಾದ ಇವರಿಗೆ ಈಗ 35 ವರ್ಷ. ಎಂಎಸ್ಸಿ ಪದವಿ ಪಡೆದಿರುವ ಇವರಿಗೆ ಒಂದು ಮಗು ಕೂಡ ಇದೆ. ಮಾಡೆಲಿಂಗ್ ನಲ್ಲಿ ಆಸಕ್ತಿ ಹೊಂದಿರುವ ಇವರು 2016ರಲ್ಲಿ ಮಿಸ್ ಚಿಕ್ಕಮಗಳೂರು ಆಗಿ ಹೊರಹೊಮ್ಮಿದ್ದರು. 2017ಲ್ಲಿ ಮಿಸ್ ಕರ್ನಾಟಕ ಸ್ಪರ್ಧೆಯಲ್ಲಿ ರನ್ನರ್ ಅಪ್ ಆಗಿದ್ದರು. ಸ್ಟೈಲಿಶ್ ವಿಲನ್ ಎಂಬ ಖ್ಯಾತಿ ಪಡೆದಿರುವ ಇವರು ಕನ್ನಡ ಹಾಗೂ ತೆಲುಗು ಕಿರುತೆರೆಯಲ್ಲಿ ಸಕ್ರಿಯರಾಗಿದ್ದಾರೆ.
ಅಂದಗಾತಿ ಶ್ವೇತಾ ಪ್ರಸಾದ್
ನಟಿ ಶ್ವೇತಾ ಪ್ರಸಾದ್ ಅಂದದ ಬಗ್ಗೆ ಯಾರಿಗೂ ಹೇಳಬೇಕಿಲ್ಲ. 'ಶ್ರೀರಸ್ತು ಶುಭಮಸ್ತು' ಧಾರಾವಾಹಿಯಲ್ಲಿ ಜಾಹ್ನವಿಯಾಗಿ ಹಾಗೂ 'ರಾಧಾ ರಮಣ' ಧಾರವಾಹಿಯ ರಾಧಾ ಮಿಸ್ ಆಗಿ ಕನ್ನಡಿಗರ ಮನೆಗೆದ್ದಿದ್ದಾರೆ. ಶಿವಮೊಗ್ಗದ ಆರ್.ವಿ.ಇಂಜಿನಿಯರಿಂಗ್ ಕಾಲೇಜಿನಲ್ಲಿ ಆರ್ಕಿಟಿಕ್ಚೆರ್ ವಿಭಾಗದಲ್ಲಿ ಪದವಿ ಪಡೆದಿದ್ದಾರೆ. ಕನ್ನಡದ ಪ್ರಮುಖ ರೇಡಿಯೋ ಜಾಕಿ ಆರ್.ಜೆ ಪ್ರದೀಪ್ ಅವರನ್ನು ಮದುವೆಯಾದರು. ಫೇಸ್ ಬುಕ್‌ನಲ್ಲಿ ಶ್ವೇತಾರ ಪೋಟೋ ನೋಡಿದ ನಿರ್ಮಾಪಕಿ ಶ್ರುತಿ ನಾಯ್ಡು, ತಮ್ಮ ಮುಂದಿನ ಸೀರಿಯಲ್‌ನಲ್ಲಿ ನಟಿಸಲು ಆಫರ್ ನೀಡಿದರು. ಮೊದಮೊದಲು ನಟಿಸಲು ನಿರಾಕರಿಸಿದ ಈ ನಟಿ ನಂತರ ಪತಿಯ ಸಹಕಾರದಿಂದ ನಟನೆಗೆ ಎಂಟ್ರಿಕೊಟ್ಟರು.

ಸುದ್ದಿಯಾಗಿದ್ದ ದಿವ್ಯ ಶ್ರೀಧರ್
ದಿವ್ಯಾ ಶ್ರೀಧರ್ ನಟನೆಗೆ ಬರುವ ಮುನ್ನ ಕರ್ನಾಟಕ ಮೂಲದ ವ್ಯಕ್ತಿಯೊಬ್ಬರನ್ನು ವಿವಾಹವಾಗಿದ್ದರು. ಈ ದಂಪತಿಗೆ ಒಂದು ಹೆಣ್ಣು ಮಗು ಜನಿಸಿತ್ತು. ಆದರೆ, ನಂತರದಲ್ಲಿ ದಿನಗಳಲ್ಲಿ ಇವರಿಬ್ಬರು ಡಿವೋರ್ಸ್ ಪಡೆದರು. ಬಳಿಕ ಕಿರುತೆರೆಗೆ ಎಂಟ್ರಿಕೊಟ್ಟ ದಿವ್ಯಾ, ಆಕಾಶ ದೀಪ ಸೀರಿಯಲ್ ಮೂಲಕ ಖ್ಯಾತಿ ಪಡೆದರು. ಜೊತೆಗೆ ಸನಿಹ ಎಂಬ ಸಿನಿಮಾದಲ್ಲಿಯೂ ನಾಯಕಿಯಾಗಿ ನಟಿಸಿದರು. ನಂತರ ಪರಭಾಷಾ ಧಾರವಾಹಿಗಳಲ್ಲಿ ಸಕ್ರಿಯರಾದ ದಿವ್ಯಾ, ಸಹನಟ ಆರ್ನವ್ ಅಲಿಯಾಸ್ ಅಮ್ಝಾದ್ ಖಾನ್ ಜೊತೆ ಕೆಲ ವರ್ಷಗಳ ಕಾಲ ಲಿವ್ ಇನ್ ರಿಲೇಶನ್ಶಿಪ್ನಲ್ಲಿದ್ದರು. ಬಳಿಕ ಈ ಜೋಡಿ ಮದುವೆ ಕೂಡ ಆಗಿತ್ತು. ಆದರೆ, ದಿವ್ಯಾ ಗರ್ಭಿಣಿಯಾಗುತ್ತಿದ್ದಂತೆ ಇಬ್ಬರ ನಡುವೆ ಮನಸ್ತಾಪ ಶುರುವಾಗಿತ್ತು. ದಿವ್ಯಾ ಆರ್ನವ್ ವಿರುದ್ಧ ಆರೋಪ ಮಾಡಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಇದೀಗ ಈ ನಟಿಗೆ ಮತ್ತೆ ಹೆಣ್ಣು ಮಗು ಜನಿಸಿದ್ದು, ತಂದೆ-ತಾಯಿ ಸ್ಥಾನದಲ್ಲಿ ನಿಂತು ಮಗು ನೋಡಿಕೊಳ್ಳುತ್ತಿದ್ದಾರೆ.
40ಯಲ್ಲಿ ಹಾಟ್ ಜ್ಯೋತಿ ರೈ
ಕನ್ನಡದ ಹಲವು ಹಿಟ್ ಸೀರಿಯಲ್‌ಗಳಲ್ಲಿ ನಟಿಸಿರುವ ಜ್ಯೋತಿ ರೈ ಕೂಡ ಮದುವೆ ಬಳಿಕವೇ ಬಣ್ಣದ ಲೋಕಕ್ಕೆ ಕಾಲಿಟ್ಟರು. ಸದ್ಯ ಈ ನಟಿ ತಮ್ಮ ಮೊದಲ ಪತಿಯಿಂದ ವಿಚ್ಛೇದನ ಪಡೆದಿದ್ದಾರೆ. ಇವರಿಗೆ ಓರ್ವ ಪುತ್ರನಿದ್ದಾನೆ. ಸದ್ಯ ತಮಿಳು, ತೆಲುಗು ಭಾಷೆಯ ಸಿನಿಮಾ, ವೆಬ್ ಸೀರಿಸ್‌ಗಳಲ್ಲಿ ಬ್ಯುಸಿಯಾಗಿರುವ ಜ್ಯೋತಿ ರೈ, ಪರಭಾಷಾ ನಿರ್ದೇಶಕ ಸುಕುಪೂರ್ವಜ್ ಅವರೊಂದಿಗೆ ಎರಡನೇ ಮದುವೆಯಾಗಿ ಸದ್ಯ 'ಕಿಲ್ಲರ್' ಎಂಬ ಸಿನಿಮಾದಲ್ಲಿ ನಟಿಸಿದ್ದಾರೆ. 40ರ ಬಳಿಕ ಸಿಕ್ಕಾಪಟ್ಟೆ ಹಾಟ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.


Click it and Unblock the Notifications











