ಕನ್ನಡ ಕಿರುತೆರೆ ಪ್ರಿಯರನ್ನು ರಂಜಿಸಿ ಅದ್ಭುತವಾಗಿ ಕೊನೆ ಕಂಡ ಟಾಪ್ ಧಾರಾವಾಹಿಗಳಿವು
ಕಿರುತೆರೆ ಪ್ರೇಕ್ಷಕರಿಗಂತೂ ಧಾರಾವಾಹಿಗಳು ಒಂದು ರೀತಿ ಅವರ ದಿನನಿತ್ಯ ಜೀವನದ ಅವಿಭಾಜ್ಯ ಅಂಗವಾಗಿರುತ್ತದೆ. ಅದರಲ್ಲೂ ಕೆಲವು ಧಾರಾವಾಹಿಗಳು ಮನಸ್ಸಿಗೆ ಬಹಳ ಹತ್ತಿರವಾಗಿರುತ್ತದೆ. ಕಥೆ, ಕಲಾವಿದರು, ಹಾಗೂ ಭಾವನೆಗಳ ಮೂಲಕ ಈ ಧಾರಾವಾಹಿಗಳು ವೀಕ್ಷಕರ ಮನಸ್ಸಲ್ಲಿ ಮನೆ ಮಾಡುವುದಂತೂ ಹೌದು.
ವೀಕ್ಷಕರನ್ನು ಟಿವಿ ಮುಂದೆ ಕೂರುವಂತೆ ಮಾಡಿದ ಹಲವು ಧಾರಾವಾಹಿಗಳಿವೆ. ಇತ್ತೀಚೆಗೆ ಇಂತಹ ಯಾವೆಲ್ಲ ಧಾರಾವಾಹಿಗಳು ವೀಕ್ಷಕರಿಗೆ ಬಹಳಷ್ಟು ಖುಷಿ ಕೊಟ್ಟು ಕೊನೆಗೆ ಮುಕ್ತಾಯಗೊಂಡಿದೆ ಎಂಬುದನ್ನು ನೋಡೋಣ ಬನ್ನಿ..
ಕನ್ನಡತಿ
ಇದೇ ವರ್ಷದ ಜನವರಿಯಂದು ಕೊನೆ ಕಂಡ ಪಾಪ್ಯುಲರ್ ಧಾರಾವಾಹಿ 'ಕನ್ನಡತಿ'ಯಂತೂ ಬಹಳಷ್ಟು ಹೆಸರು ಮಾಡಿತ್ತು. ಸತತ ಮೂರು ವರ್ಷಗಳ ಕಾಲ ನಡೆದು ಬಂದ ಈ ಧಾರಾವಾಹಿ ಕನ್ನಡ ಭಾಷೆಗೆ ಹೆಚ್ಚು ಪ್ರಶಸ್ತಿಯನ್ನು ಕೊಡುವುದಲ್ಲದೇ ಕಥೆಯನ್ನು ಅದ್ಬುತವಾಗಿ ನಡೆಯುತ್ತಾ ವೀಕ್ಷಕರಿಗೆ ಬಹಳ ಹತ್ತಿರವಾಗಿತ್ತು. ಟಿಆರ್‌ಪಿ ವಿಷಯದಲ್ಲಿಯೂ ಕೊನೆಯವರೆಗೂ ಸಖತ್ ಟಾಪಿನಲ್ಲಿತ್ತು.

ನಾಗಿಣಿ 2
ನಟಿ ನಮೃತಾ ಗೌಡ ಅವರು ನಾಯಕಿ ಆಗಿ ನಟಿಸುತ್ತಿದ್ದ 'ನಾಗಿಣಿ 2' ಧಾರಾವಾಹಿ ಅಂತೂ ಬಹಳಷ್ಟು ಪಾಪ್ಯುಲಾರಿಟಿ ಪಡೆದಿತ್ತು. ನಾಗದೇವತೆಯ ಕಥೆಯಲ್ಲಿಟ್ಟುಕೊಂಡು ಅದ್ಭುತವಾಗಿ ಮೂಡಿ ಬರುತ್ತಿದ್ದ ಈ ಧಾರಾವಾಹಿ ಇತ್ತೀಚೆಗಷ್ಟೇ ಕೊನೆಗೊಂಡಿತು. ಇದನ್ನು ನಟಿ ನಮೃತಾ ಗೌಡ ಅವರೇ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಹಾಕಿಕೊಳ್ಳುವ ಮೂಲಕ ಖಚಿತಪಡಿಸಿದ್ದರು. ಶುರುವಾದಾಗಿನಿಂದಲೂ ಟಿ ಆರ್ ಪಿ ವಿಷಯದಲ್ಲಿ ಟಾಪ್ 5ನೇ ಸ್ಥಾನಗಳೊಂದಾಗಿಯೇ ಇದ್ದ ಈ ಧಾರಾವಾಹಿ ಮುಗಿಯುತ್ತಿರುವುದು ತಿಳಿದು ಪ್ರೇಕ್ಷಕರು ಬಹಳಷ್ಟು ಬೇಸರಗೊಂಡಿದ್ದರು.

ಮರಳಿ ಮನಸಾಗಿದೆ
ಕನ್ನಡದ ಖ್ಯಾತ ಕಿರುತೆರೆ ನಟ ಚಂದನ್ ಗೌಡ ಅವರ ನಾಯಕತ್ವದಲ್ಲಿ ಅದ್ಭುತವಾಗಿ ಮೂಡಿ ಬರುತ್ತಿದ್ದ 'ಮರಳಿ ಮನಸಾಗಿದೆ' ಧಾರಾವಾಹಿ ಒಮ್ಮೆಗೆ ನಿಂತಿದ್ದು ಬಹಳಷ್ಟು ಕಿರುತೆರೆ ಪ್ರೇಕ್ಷಕರಿಗೆ ನಿರಾಸೆ ಮಾಡಿದೆ. ಅಂದ ಹಾಗೆ ಶುರುವಾದಾಗಿನಿಂದಲೂ ಚೆನ್ನಾಗಿಯೇ ಕಥೆ ಹೇಳಿದುಕೊಂಡು ಹೋಗುತ್ತಿದ್ದ ಈ ಧಾರಾವಾಹಿ ಒಮ್ಮೆಗೆ ಟಿಆರ್‌ಪಿನಲ್ಲಿ ಕೆಳಗೆ ಹೋಗುತ್ತಿರುವುದನ್ನು ಗಮನಿಸಿದ ತಂಡ ಧಾರವಾಹಿಯನ್ನು ಮುಗಿಸುವ ಯೋಚನೆ ಮಾಡಿದರು. ಅಂತೆಯೇ ಒಮ್ಮೆಗೆ ಧಾರಾವಾಹಿ ನಿಂತಿದ್ದು ಪ್ರೇಕ್ಷಕರಿಗಂತೂ ಬಹಳ ಬೇಸರ ತಂದಿದೆ.

ಬೆಟ್ಟದ ಹೂ
ಒಳ್ಳೆಯ ಕಥೆಯನ್ನು ಇಟ್ಟುಕೊಂಡು ಮುಂದಕ್ಕೆ ಸಾಗುತ್ತಿದ್ದ ಧಾರಾವಾಹಿ 'ಬೆಟ್ಟದ ಹೂ' ಕೂಡ ಒಮ್ಮೆಗೆ ನಿಂತಿದ್ದು ಪ್ರೇಕ್ಷಕರಿಗೆ ಒಂದು ರೀತಿ ಹತಾಶೆಯನ್ನುಂಟು ಮಾಡಿದೆ. ಹಿಂದಿ ಧಾರಾವಾಹಿಯ ರಿಮೇಕ್ ಆಗಿದ್ದಂತಹ ಈ 'ಬೆಟ್ಟದ ಹೂ' ಧಾರಾವಾಹಿಯು ಒಮ್ಮೆಗೆ ನಿಂತಿದ್ದು ವೀಕ್ಷಕರಿಗೆ ಕೊಂಚ ಬೇಜಾರು ತರಿಸಿದ್ದೂ ಇದೆ.

ಕಮಲಿ
ವರ್ಷಗಳಿಂದ ಪ್ರಸಾರಗೊಳ್ಳುತ್ತಿರುವ 'ಕಮಲಿ' ಧಾರಾವಾಹಿ ಸಾವಿರ ಎಪಿಸೋಡ್‌ಗಳನ್ನು ತಲುಪುವ ಮೂಲಕ ಕೊನೆಗೊಂಡಿದೆ. ಅಂದ್ಹಾಗೆ, ಬಹಳ ತಿಂಗಳುಗಳಿಂದ 'ಕಮಲಿ' ಧಾರಾವಾಹಿ ಮುಗಿಯುವುದರ ಬಗ್ಗೆ ಬಹಳಷ್ಟು ಗಾಸಿಪ್‌ಗಳು ಓಡಾಡುತ್ತಿದ್ದರೂ ಸಾವಿರ ಎಪಿಸೋಡ್‌ಗಳನ್ನು ಯಶಸ್ವಿಯಾಗಿ ಮುಗಿಸುವಲ್ಲಿ ತಂಡ ಜಯಕಂಡಿದೆ. ಕಥೆಯಲ್ಲಿಯೂ ಒಳ್ಳೆಯ ಮುಕ್ತಾಯದೊಂದಿಗೆ ಮುಗಿದಿರುವ ಈ ಧಾರಾವಾಹಿಯ ಧಾರಾವಾಹಿ ತಂಡವು ಖುಷಿಯಿಂದ ಸಂಭ್ರಮಿಸಿದೆ.

ಕನ್ಯಾಕುಮಾರಿ
'ಕನ್ಯಾಕುಮಾರಿ' ಎಂಬ ಧಾರಾವಾಹಿ ಬಹಳಷ್ಟು ಕಲಾವಿದರಿಗೆ ಕಿರುತರೆಯಲ್ಲಿ ಒಂದು ವೇದಿಕೆ ಮಾಡಿಕೊಟ್ಟಿದ್ದು ಸುಳ್ಳಲ್ಲ. ಆದರೆ ವಾರ ಕಳೆದಂತೆ ಟಿಆರ್‌ಪಿಯನ್ನು ಕಳೆದುಕೊಳ್ಳುತ್ತಾ ಬಂದ ಈ ಧಾರಾವಾಹಿ ಅನಿವಾರ್ಯವಾಗಿ ಕೊನೆಗೊಳ್ಳಬೇಕಾಯಿತು. ಕಥೆ ಚೆನ್ನಾಗಿದ್ದರೂ ಟಿಆರ್‌ಪಿಯಿಂದ ಮುಗಿಸಬೇಕಾಗಿ ಬಂದ ಕಾರಣ ಈ ಧಾರಾವಾಹಿ ಪ್ರಿಯರಿಗೆ ತುಸು ಹತಾಶೆಯಾಗಿದೆ ಆದರೂ ಬಹಳಷ್ಟು ಹೊಸ ಕಲಾವಿದರನ್ನು ಕ್ಷೇತ್ರಕ್ಕೆ ಪರಿಚಯಿಸಿರುವ ಹೆಗ್ಗಳಿಕೆ 'ಕನ್ಯಾಕುಮಾರಿ' ಧಾರಾವಾಹಿಗೆ ಇದೆ ಎಂದರೆ ತಪ್ಪಾಗಲಾರದೆನೋ!

ನನ್ನರಸಿ ರಾಧೆ
ಅಗಸ್ತ್ಯ ಹಾಗೂ ಇಂಚರ ಅವರ ಜೋಡಿ ಅದ್ಭುತವಾಗಿ ತೆರೆಮೇಲೆ ಕಾಣಿಸಿಕೊಳ್ಳುತ್ತಾ ಚೆನ್ನಾಗಿ ನಡೆಯುತ್ತಿದ್ದ ಈ ಧಾರಾವಾಹಿಯೂ ಒಮ್ಮೆಗೆ ನಿಂತಂತೆ ಎನಿಸಿತು. ರಾಥೋಡ್ ಕುಟುಂಬದ ಸದಸ್ಯರೆಲ್ಲರೂ ಒಂದಾಗುವ ಮೂಲಕ ಕತೆ ಮುಕ್ತಾಯಗೊಂಡಿದ್ದು, ಧಾರಾವಾಹಿ ಪ್ರೇಕ್ಷಕರಿಗೆ ತುಸು ಸಮಾಧಾನ ಜೊತೆ ಜೊತೆಗೆ ಹತಾಶೆಯನ್ನು ಉಂಟು ಮಾಡಿದೆ.

ಮಂಗಳ ಗೌರಿ ಮದುವೆ
ದಶಕದ ಹಿಂದೆ ಆರಂಭಗೊಂಡ 'ಪುಟ್ಟಗೌರಿ' ಮದುವೆಯ ಪಾರ್ಟ್ 2 ರೀತಿಯಲ್ಲಿ ಮುಂದುವರೆದ ಧಾರಾವಾಹಿ 'ಮಂಗಳ ಗೌರಿ ಮದುವೆ'. ಬರೋಬ್ಬರಿ 3000 ಎಪಿಸೋಡ್ ಗಳನ್ನು ಮುಗಿಸುವ ಮೂಲಕ ಕೊನೆಗೂ ಕೊನೆಗೊಂಡಿದೆ.

ನಮ್ಮನೆ ಯುವರಾಣಿ
ಸತತ ಏಳು ವರ್ಷಗಳ ಕಾಲ ಕಿರುತೆರೆಪ್ರಿಯರನ್ನು ರಂಜಿಸಿದ ಧಾರಾವಾಹಿ 'ನಮ್ಮನೆ ಯುವರಾಣಿ'. ಒಂದು ಭಾವನಾತ್ಮಕ ಎಪಿಸೋಡ್ ಮೂಲಕ ಅದ್ಭುತವಾಗಿ ಕೊನೆಗೊಂಡಿದ್ದು, ಧಾರವಾಹಿ ವೀಕ್ಷಕರಿಗೆ ಬಹಳಷ್ಟು ಸಮಾಧಾನ ತಂದಿದೆ.



Click it and Unblock the Notifications











