ಆ ವಿಡಿಯೋ ರಿಲೀಸ್ ಆಗುವ ಆತಂಕ: ಕನ್ನಡ ಕಿರುತೆರೆಯ ಖ್ಯಾತ ನಿರ್ಮಾಪಕ, ನಿರ್ದೇಶಕ ದಿಢೀರ್ ನಾಪತ್ತೆ!
ಖ್ಯಾತ ಕಿರುತೆರೆ ನಿರ್ಮಾಪಕ ನಾಪತ್ತೆ ಆಗಿದ್ದಾರೆ. ಕಿರುತೆರೆ ಆಪ್ತವಲಯದಲ್ಲಿ ನಾನು ಇಂಡಸ್ಟ್ರಿ ಬಿಡುತ್ತೇನೆ ಎಂದು ಹೇಳಿಕೊಂಡಿದ್ದಾರೆ. ಕಳೆದ ಕೆಲ ದಿನಗಳಿಂದ ಯಾರ ಫೋನಿಗೂ ಆತ ಸಿಗುತ್ತಿಲ್ಲ ಕೂಡಾ. ಹಾಗಾದರೆ ಅಸಲಿ ಕಥೆ ಏನು ಅಂತ ವಿಚಾರಿಸಲು ಮುಂದಾದರೆ ಒಂದಷ್ಟು ಕಲರ್ ಕಲರ್ ವಿಚಾರಗಳು ಹೊರಬರುತ್ತಿವೆ.
ಕನ್ನಡ ಕಿರತೆರೆಯಲ್ಲಿ ಕಳೆದ 12 ವರ್ಷಗಳಿಂದ ಅನೇಕ ಸೂಪರ್ ಹಿಟ್ ಧಾರಾವಾಹಿಗಳ ನಿರ್ಮಾಣ ಮಾಡಿದ್ದಾರೆ. ಒಂದು ಕಾಲಕ್ಕೆ ಬಹಳ ಹೆಸರು, ಗೌರವ ಗಳಿಸಿರುವ ನಿರ್ಮಾಪಕರು ಈತ. ಸದ್ಯಕ್ಕೆ ಮಾತ್ರ ಕಿರುತೆರೆಯಲ್ಲಿ ಸಭ್ಯ ಹೆಣ್ಣು ಮಕ್ಕಳು ಕೆಲಸ ಮಾಡಬಾರದು ಎಂಬ ಪರಿಸ್ಥಿತಿ ಇದ್ದರೆ ಅದಕ್ಕೆ ಈ ನಿರ್ಮಾಪಕರರೇ ಕಾರಣ ಅನ್ನುತ್ತಿವೆ ಮೂಲಗಳು. ಅಷ್ಟರ ಮಟ್ಟಿಗೆ ತಮ್ಮ ಬದುಕು ಮತ್ತು ಕೆಲಸ ಎರಡನ್ನೂ ಹಾಳುಮಾಡಿಕೊಂಡಿದ್ದಾರೆ ಈ ನಿರ್ಮಾಪಕರು.

ಹೆಣ್ಣು ಮಕ್ಕಳ ವಿಚಾರದಲ್ಲಿ ತುಂಬ ವೀಕು, ಮೊದಲು ನಟನೆಗೆ ಅವಕಾಶ ಕೊಡ್ತಾರೆ, ನಂತರ ಹಗಲೂ ರಾತ್ರಿ ಬೆನ್ನು ಬಿಡದೆ ಕಾಡ್ತಾರೆ ಇವರು ಎಂಬ ಮಾತುಗಳು ಇವರ ಬಗ್ಗೆ ಮಾಮೂಲಿಯಾಗಿ ಕೇಳಿ ಬರುತ್ತಿತ್ತು. ಅನೇಕ ಸಭ್ಯ ಹುಡುಗಿಯರ ಶಾಪ ಇವರಿಗೆ ತಟ್ಟಿದೆ ಎನ್ನುತ್ತಾರೆ ಕಿರುತೆರೆಯ ಮತ್ತೊಬ್ಬ ಹೆಸರು ಹೇಳಲು ಇಚ್ಚಿಸಿದ ನಿರ್ಮಾಪಕರು. ನಿರ್ಮಾಪಕನಾಗಿ,ನಿರ್ದೇಶಕನಾಗಿ ಇವರ ಧಾರಾವಾಹಿ ಲೋಕದ ಯಶಸ್ಸಿನ ಮುಂದೆ ಇವರ ನೆಗಿಟಿವ್ ವಿಚಾರಗಳನ್ನು ಇಷ್ಟು ದಿನ ಅಷ್ಟಾಗಿ ಯಾರೂ ತಲೆಕೆಡಿಸಿಕೊಂಡಿರಲಿಲ್ಲ. ಆದರೆ ಯಾವಾಗ ಇಂಡಸ್ಟ್ರಿ ಬಿಡುವೆ ಎನ್ನುವ ಮಾತು ಹೇಳಿದ್ರೋ ಆಗ ಗೊಂದಲ ಶುರುವಾಗಿದೆ.
3 ಧಾರಾವಾಹಿಗಳು
ಒಂದು ಕಾಲದಲ್ಲಿ ಯಾವ ಚಾನಲ್ ನೋಡಿದರೂ ಅಲ್ಲಿ ಇವರ ನಿರ್ಮಾಣದ ಒಂದಲ್ಲ ಒಂದು ಧಾರಾವಾಹಿ ಇರುತ್ತಿತ್ತು. ಇವತ್ತು ಇವರ ಶೋಕಿಲಾಲ ವ್ಯಕ್ತಿತ್ವದಿಂದಾಗಿ ಜೀ ಕನ್ನಡ ಮತ್ತು ಸ್ಟಾರ್ ಸುವರ್ಣ ಚಾನಲ್‌ನವರು ಇವರಿಂದ ದೂರ ಉಳಿದಿದ್ದಾರೆ. ಯಾವಾಗ ನಿರ್ದೇಶನ ಮತ್ತು ನಿರ್ಮಾಣದ ಪ್ಯಾಶನ್ ಕಡಿಮೆ ಆಗಿ ಹೆಣ್ಣು ಮಕ್ಕಳ ವಿಚಾರಕ್ಕೆ ಆದ್ಯತೆ ಸಿಕ್ಕಿತೋ ಇವರ ಧಾರಾವಾಹಿಗಳ ಕಂಟೆಂಟ್ ಕೂಡಾ ಅಷ್ಟಕಷ್ಟೇ ಆಗಿ ಇವತ್ತು. ಇವರೇ ಕಟ್ಟಿದ ಮನೆ ಸೋರುತ್ತಿದೆ. ಸದ್ಯ ಒಂದೇ ಒಂದು ವಾಹಿನಿಯಲ್ಲಿ ಮಾತ್ರ ಇವರ 3 ಧಾರಾವಾಹಿಗಳು ಪ್ರಸಾರ ಆಗುತ್ತಿದೆ. ಅದರಲ್ಲೂ ಎರಡು ಫ್ಲಾಪು. ಇನ್ನೊಂದು ಅಷ್ಟಕಷ್ಟೆ ಅನ್ನೊ ತರ ಇದೆ. ಚಾನಲ್‌ನವರು ಯಾವಾಗ ಬೇಕಾದರೂ ಈ ಧಾರಾವಾಹಿಗಳನ್ನು ಮುಗಿಸೋ ಯೋಚನೆಯಲ್ಲಿ ಇದ್ದಾರಂತೆ.
ಇಂಡಸ್ಟ್ರಿ ಬಿಡುತ್ತೇನೆ
ಎಲ್ಲಾ ಸರಿ ಆದರೆ ಈ ನಿರ್ಮಾಪಕ ಕಿರುತೆರೆ ಸಾಕು, ನಾನು ಇಂಡಸ್ರ್ಟಿ ಬಿಡ್ತೇನೆ ಅಂತ ನಿರ್ಧಾರ ಮಾಡಿರೋದು ಯಾಕೆ ? ಈ ವಿಚಾರದ ಬೆನ್ನು ಹತ್ತಿದರೆ ಒಂದಷ್ಟು ಸತ್ಯಗಳು ಬಯಲಿಗೆ ಬರುತ್ತಿದೆ. ಇತ್ತೀಚೆಗೆ ಇವರ ನಿರ್ಮಾಣದ ಹೊಸ ಧಾರಾವಾಹಿಯ ಚಿತ್ರೀಕರಣ ಹೈದರಾಬಾದ್‌ನಲ್ಲಿ ನಡೆದಿತ್ತು. ಅಲ್ಲಿ ಪಾತ್ರವೊಂದಕ್ಕೆ ಹೊಸ ನಟಿಯೊಬ್ಬರನ್ನ ಆಯ್ಕೆ ಮಾಡಿ ಆಕೆಯೊಂದಿಗೆ ಸರಸ ಸಲ್ಲಾಪ ನಡೆದಿದೆ. ನಂತರ ಆ ನಟಿಯನ್ನ ಆ ಪಾತ್ರಕ್ಕೆ ಆಯ್ಕೆ ಮಾಡಿಲ್ಲ. ಅದು ಯಾಕೆ ಅನ್ನೋದು.ಇನ್ನೂ ಗೊತ್ತಾಗಿಲ್ಲ. ಇದರಿಂದ ಸಿಟ್ಟಿಗೆದ್ದ ನಟಿ ನಿರ್ಮಾಪಕರ ಹೆಂಡತಿಗೆ ಇವರ ಸರಸದ ಆಡಿಯೋ ಮತ್ತು ವಿಡಿಯೋ ಕಳಿಸಿದ್ದಾರೆ.

ನಿರ್ಮಾಪಕರ ಪತ್ನಿಗೆ ಶಾಕ್
ಇಷ್ಟು ದಿನ ಗಂಡನ ಬಗ್ಗೆ ಅವರಿವರ ಬಳಿ ಮಾತಲ್ಲಿ ಕೇಳಿ ಅಷ್ಟು ತಲೆಕೆಡಿಕೊಂಡಿರದ ನಿರ್ಮಾಪಕರ ಪತ್ನಿಗೆ ಇದರಿಂದ ಶಾಕ್ ಆಗಿದೆ. ಅವರು ದೊಡ್ಡ ರಂಪಾಟ ಮಾಡಿದ್ದಾರೆ. ಆ ಕಡೆಯಿಂದ ನಟಿ ಕೆಲ ನ್ಯೂಸ್ ಚಾನಲ್‌ಗಳಿಗೆ ಓಡಾಡಿ ನನ್ನ ಬಳಿ ಸಾಕ್ಷಿ ಇದೆ ಎನ್ನುತ್ತಿದ್ದಾರೆ ಕೂಡಾ. ಈ ಎಲ್ಲಾ ಘಟನೆಗಳ ನಂತರ ನಿರ್ಮಾಪಕರು ಹೆದರಿದ್ದಾರೆ. ಸದ್ಯಕ್ಕೆ ಹೇಗಾದರೂ ಮಾಡಿ ಆಡಿಯೋ ಹಾಗೂವಿಡಿಯೋ ಹೊರಗೆ ಬರದೇ ಇರಲಿ ಎಂದು ಶತ ಪ್ರಯತ್ನ ಮಾಡುತ್ತಿದ್ದಾರೆ.
ಡ್ಯಾಮೇಜ್ ಕಂಟ್ರೊಲ್ ಪ್ಲ್ಯಾನ್
ಕಿರುತೆರೆಯಲ್ಲೇ ಆಕ್ಟಿವ್ ಆಗಿದ್ದು ಆಗ ನ್ಯೂಸ್ ಚಾನಲ್‌ಗಳು ಮುಗಿಬಿದ್ದರೆ ನಿಭಾಯಿಸುವುದು ಕಷ್ಟ ಕಷ್ಟ ಎಂಬ ಸಂಗತಿ ಮನವರಿಕೆ ಮಾಡಿಕೊಂಡಿರುವ ನಿರ್ಮಾಪಕರು ಎಲ್ಲಾ ಬಿಟ್ಟು ಬೇರೆ ಉದ್ಯಮ ಶುರು ಮಾಡಿದರೆ ಹೇಗೆ ? ಎಂದು ಯೋಚಿಸಿದ್ದಾರೆ. ಒಂದು ವೇಳೆ ಏನಾದರೂ ಯಡವಟ್ಟಾದರೂ ತಾನು ಇಂಡಸ್ಟ್ರಿ ಬಿಟ್ಟೆ ಎಷ್ಟು ಕಾಲವಾಯ್ತು ಗೊತ್ತಾ ? ಅಂತ ಹೇಳಿಕೊಂಡು ಡ್ಯಾಮೇಜ್ ಕಂಟ್ರೊಲ್ ಮಾಡಬಹುದು. ಜತೆಗೆ ಈಗಿನಿಂದಲೇ ಕಿರುತೆರೆಗೆ ದೂರಾದರೆ ಮುಂದಿನ ಪರಿಣಾಮ ಕಡಿಮೆ ಮಟ್ಟದ್ದಾಗಿರುತ್ತೆ ಎಂಬ ಮುಂದಾಲೋಚನೆ ಅವರದ್ದು.
ಮುಂದೇನು ಮಾಡ್ತಾರೆ ನಿರ್ಮಾಪಕರು?
ಆಡಿಯೋ, ವಿಡಿಯೋ ನಟಿ ಬಿಟ್ಟು ಬೇರೆ ಒಂದಷ್ಟು ಜನ ಹುಡುಗಿಯರು ಇವರ ಕಾಂಪ್ರೂಮೈಸ್ ಹೇಳಿಕೆಗೆ ಬೇಸತ್ತವರೆಲ್ಲ ಈ ನಿರ್ಮಾಕರ ವಿರುದ್ಧ ಒಂದಾಗಿದ್ದಾರೆ ಎನ್ನುತ್ತಿವೆ ಕಿರುತೆರೆ ಮೂಲಗಳು. ಒಂದೋ ಈ ನಿರ್ಮಾಪಕರು ಶತ ಪ್ರಯತ್ನ ಪಟ್ಟು ಇದನ್ನೆಲ್ಲ ಸಪ್ರೆಸ್ ಮಾಡಬಹದು. ಅಥವಾ ಇವರ ವಿಚಾರ ನ್ಯೂಸ್ ಚಾನಲ್‌ನಲ್ಲಿ ವೈರಲ್ ಆಗಿ ಎಡವಟ್ಟಾಗಬಹುದು. ಚಾನಲ್‌ನವರು ಇವರನ್ನೇ ಕೇಂದ್ರವಾಗಿಸಿಕೊಂಡು ಇವರ ಮೇಲೆಯೇ ಧಾರಾವಾಹಿ ಮಾಡಿದರೂ ಮಾಡಬಹುದು. ನಿರ್ಮಾಕರ ಪಾಲಿನ ಮುಂದಿನ ಜೀವನ ಇವರ ಧಾರಾವಾಹಿ ಕಥೆಗಿಂತ ಟ್ವಿಸ್ಟ್ ಆಗುವುದಂತೂ ನಿಜ.


Click it and Unblock the Notifications









