Kannada Reality Shows TRP Rating : ಕನ್ನಡದ ಯಾವ ರಿಯಾಲಿಟಿ ಶೋ ಟಾಪ್ ಒನ್?

By ಶೃತಿ ಹರೀಶ್ ಗೌಡ

ಕನ್ನಡದ ರಿಯಾಲಿಟಿ ಶೋಗಳ ಈ ವಾರದ ಟಿಆರ್‌ಪಿ ರೇಟಿಂಗ್ ಬಂದಿದ್ದು, ಸರಿಗಮಪ‌ ರಿಯಾಲಿಟಿ ಶೋಗಳಲ್ಲಿ ಟಾಪ್ ಒನ್ ಸ್ಥಾನವನ್ನು ಪಡೆದುಕೊಂಡಿದೆ. ಮಕ್ಕಳು ಉಣಬಡಿಸುತ್ತಿರುವ ಸಂಗೀತದ ರಸದೌತಣ ಪ್ರೇಕ್ಷಕರಿಗೆ‌ ಬಹಳ ಇಷ್ಟವಾಗಿದೆ. ಅದರಲ್ಲೂ‌ ವಾರಕ್ಕೊಂದು ವಿಶೇಷತೆಯನ್ನು‌ ಹೊತ್ತು‌ ತಂದು ಜನರ ಮನಸು ಗೆಲ್ಲುವಲ್ಲಿ ಸಫಲವಾಗಿದೆ.

ಹಾಡುವ ಮಕ್ಕಳಲ್ಲಿ ಜಡ್ಜ್‌ಸ್ ತುಂಬುವ ಉತ್ಸಾಹ ಸಹ ಗಮನ ಸೆಳೆದಿದೆ. ಪ್ರತಿಭಾವಂತರನ್ನು ಬೆಳೆಸುವಲ್ಲಿ ಅರ್ಜುನ್ ಜನ್ಯಾ ಅವರ ಪಾತ್ರ ಬಹಳಷ್ಟಿದೆ ಎಂದು ಸ್ವತಃ ಹಂಸಲೇಖ ಅವರೇ ವೇದಿಕೆಯಲ್ಲಿ ಹೇಳಿರುವುದು ಇದಕ್ಕೆ ಸಾಕ್ಷಿ. ಅರ್ಜುನ್ ಜನ್ಯಾ ಸಹ ಸರಿಗಮಪ ವೇದಿಕೆಗೆ ಬಂದ ಸ್ಫರ್ಧಿಗಳಿಗೆ ಹಾಡಲು ಅವಕಾಶವನ್ನು ಕಲ್ಪಿಸಿಕೊಟ್ಟಿದ್ದಾರೆ. ಮೆಂಟರ್ಸ್ ಸಹ ತಮಗೆ ನೀಡುವ ಸ್ಪರ್ಧಿಗಳನ್ನು ತಿದ್ದಿ ತೀಡಿ ಶಿಲ್ಪಿಗಳನ್ನು ಮಾಡುತ್ತಿದ್ದಾರೆ. ಈ ಶೋ ಟಿಆರ್‌ಪಿಯಲ್ಲಿ 11.0 ಸ್ಥಾನವನ್ನು ಪಡೆದುಕೊಂಡಿದೆ.

ಕಾಮಿಡಿ‌ ಕಿಲಾಡಿಗಳು ಪ್ರೇಕ್ಷಕರನ್ನು ಹಲವಾರು ವರ್ಷಗಳಿಂದ ಜನರನ್ನು ರಂಜಿಸುತ್ತಾ ಬಂದಿದೆ. ಕಾಮಿಡಿ ಕಿಲಾಡಿಗಳಾಗಿ ಬಂದವರು ಈಗ ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ.‌ಜೊತೆಗೆ ಹಲವಾರು ಶಾರ್ಟ್ ಫಿಲಂಗಳಲ್ಲಿ ಅಭಿನಯಿಸಿದ್ದಾರೆ. ಹಲವಾರು ಕಾಮಿಡಿಗಳ ಮೂಲಕ‌ ಹಾಗೂ ಸಾಮಾಜಿಕ ಕಳಕಳಿಯನ್ನು ಸಾರುವ ಕಾಮಿಡಿಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಸಹ ಮಾಡುತ್ತಿವೆ. ಇದು ಈ ವಾರದ ಟಿಆರ್‌ಪಿಯಲ್ಲಿ 9.0 ಸ್ಥಾನವನ್ನು ಪಡೆದುಕೊಂಡಿದೆ.

Kannada Tv Reality Shows BARC TRP Ratings of This Week 02th February 2023

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಸೂಪರ್ ಕ್ವೀನ್ಸ್ ಟಿಆರ್‌ಪಿಯಲ್ಲಿ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ. ಸೂಪರ್ ಕ್ವೀನ್ಸ್ ಧಾರಾವಾಹಿಯಲ್ಲಿ ಬರುವ ಮಹಿಳೆಯರು ತಮ್ಮದೇ ಆದ ಟ್ಯಾಲೆಂಟ್‌ ಮೂಲಕ ಜನರಿಗೆ ಮನರಂಜನೆಯನ್ನು ನೀಡುತ್ತಿದ್ದಾರೆ. ಇಲ್ಲಿ ಸಹ ಹೊಸ ಹೊಸ ಪ್ರಯೋಗಗಳನ್ನು ಮಾಡಲಾಗುತ್ತಿದೆ. ಪ್ರತಿ ವಾರವೂ ಸಹ ಒಂದೊಂದು ಟಾಸ್ಕ್‌ಗಳನ್ನು ನೀಡಲಾಗುತ್ತದೆ. ಅದನ್ನು ಸೂಪರ್ ಕ್ವೀನ್ಸ್ ಮಾಡಿ ಗೆಲುವು ಪಡೆಯುತ್ತಾರೆ. ಇದು ಟಿಆರ್‌ಪಿಯಲ್ಲಿ 4.9 ಸ್ಥಾನವನ್ನು ಪಡೆದುಕೊಂಡಿದೆ.

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಗಿಚ್ಚಿ ಗಿಲಿಗಿಲಿ ಸೀಸನ್ 2 ನಾಲ್ಕನೇಯ ಸ್ಥಾನವನ್ನು ಪಡೆದುಕೊಂಡಿದೆ. ಶೃತಿ ಹಾಗೂ ಸಾಧುಕೋಕಿಲ ಅವರು ಸಹ ಭಾಗವಹಿಸುವ ಸ್ಪರ್ಧಿಗಳಿಗೆ ಹಲವಾರು ಸಹಾಯವನ್ನು ಮಾಡುತ್ತಾ ಒಳ್ಳೆಯ ಫ್ಲಾಟ್ ಫಾರಂನ್ನು ನೀಡುತ್ತಾ ಬಂದಿದ್ದಾರೆ. ಜೊತೆಗೆ ನಿರಂಜನ್ ದೇಶಪಾಂಡೆಯವರ ನಿರೂಪಣೆ ಸಹ ಚನ್ನಾಗಿ ಮೂಡಿ ಬರುತ್ತಿದೆ. ಹೊಸ ಸೀಸನ್‌ನಲ್ಲಿ ಹೊಸ ಹೊಸ ಸ್ಪರ್ಧಿಗಳು ತಮ್ಮ ಅದೃಷ್ಟವನ್ನು ಪರೀಕ್ಷೆಗೆ ಇಟ್ಟು ಭವಿಷ್ಯ ರೂಪಿಸಿಕೊಳ್ಳಲು ಬಂದಿದ್ದಾರೆ. ಅವರಿಗೆ ಮೆಂಟರ್ಸ್ ಆಗಿ ಗಿಚ್ಚಗಿಲಿಗಿಲಿಯಲ್ಲಿ ಸ್ಫರ್ಧಿಗಳಾಗಿದ್ದವರೇ ಮೆಂಟರ್ಸ್ ಆಗಿ ತಿದ್ದಿ ತೀಡಲಿದ್ದಾರೆ‌. ಇದು ಟಿಆರ್‌ಪಿಯಲ್ಲಿ 4.1 ಸ್ಥಾನವನ್ನು ಪಡೆದುಕೊಂಡಿದೆ.

ಪ್ರತಿಯೊಂದು ರಿಯಾಲಿಟಿ ಶೋಗಳು ಜನರನ್ನು ನಕ್ಕುನಗಿಸುವಲ್ಲಿ ಬಹಳಷ್ಟು ಶ್ರಮ ವಹಿಸಿ ಹೊಸ ಹೊಸ ಸ್ಕ್ರಿಪ್ಟ್‌ಗಳನ್ನು ಮಾಡಿ ಜನರಿಗೆ ಹೊಸ ಹೊಸ ಪ್ರಯೋಗಗಳನ್ನು ಮಾಡುವ ಮೂಲಕ ಮನರಂಜನೆಯನ್ನು ನೀಡುತ್ತಿವೆ.

More from Filmibeat

English summary
Kannada Tv Reality Shows BARC TRP Ratings of This Week 02th February 2023. Which reality show is in top, which is last.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X