Kaustubha Mani: ಸ್ಟೈಲಿಶ್ ಲುಕ್‌ನಲ್ಲಿ ನಟಿ ಕೌಸ್ತುಭಾ ಮಣಿ
'ನನ್ನರಸಿ ರಾಧೆ' ಧಾರಾವಾಹಿ ಮೂಲಕ ಕಿರುತೆರೆಗೆ ಎಂಟ್ರಿಕೊಟ್ಟ ನಟಿ ಕೌಸ್ತುಭ ಮಣಿ ಹೆಚ್ಚು ಕಾಣಿಸಿಕೊಂಡಿದ್ದು, ಟ್ರೆಡಿಷನಲ್ ಉಡುಗೆಯಲ್ಲೇ. ಆದರೆ, ಇದೀಗ ವೆಸ್ಟರ್ನ್ ಬಟ್ಟೆಯನ್ನು ಧರಿಸಿದ್ದು, ಗುರುತೇ ಸಿಗುವುದಿಲ್ಲ.
ಖಾಸಗಿ ಕಂಪನಿಯೊಂದರಲ್ಲಿ ಟೆಕ್ಕಿಯಾಗಿ ಕೆಲಸ ಮಾಡುತ್ತಿದ್ದ ಕೌಸ್ತುಭ ಮಣಿ ಆಕಸ್ಮಿಕವಾಗಿ ಕಿರುತೆರೆಗೆ ಎಂಟ್ರಿ ಕೊಟ್ಟರು. ಮಾನ್ವಿತಾ ಕಾಮತ್ ಅವರು ಕೌಸ್ತುಭಾ ಮಣಿ ಅವರನ್ನು ಬಣ್ಣದ ಲೋಕಕ್ಕೆ ಕರೆದುಕೊಂಡು ಬಂದರು.
ಫ್ಯಾಶನ್ ಶೋ ಒಂದರಲ್ಲಿ ನಟಿ ಕೌಸ್ತುಭ ಮಣಿ ಅವರನ್ನು ಭೇಟಿ ಮಾಡಿದ ನಟಿ ಮಾನ್ವಿತಾ ಕಾಮತ್, ಕೌಸ್ತುಭ ಮಣಿ ಅವರ ವೃತ್ತಿ ಬದುಕನ್ನೇ ಬದಲಾಯಿಸಿ ಬಿಟ್ಟರು.

ಮೊದಲ ಧಾರಾವಾಹಿಯಲ್ಲೇ ಯಶಸ್ಸು
ಕನ್ನಡದ ನಟ- ನಟಿಯರು ಸದ್ಯ ಪರಭಾಷೆಗಳಲ್ಲಿ ಸಖತ್ ಮಿಂಚುತ್ತಿದ್ದಾರೆ. ಎಲ್ಲಿ ನೋಡಿದ್ರೂ ಕನ್ನಡಿಗರ ಹವಾ ಜೋರಾಗಿದೆ. ನಮ್ಮ ಕನ್ನಡದ ಮುದ್ದು ಮುಖದ ಚೆಲುವೆ ಕೌಸ್ತುಭ ಮಣಿ ತೆಲುಗು ಧಾರಾವಾಹಿಯಲ್ಲಿ ಮಿಂಚುತ್ತಿದ್ದಾರೆ. ಕಲರ್ಸ್ ಕನ್ನಡದ 'ನನ್ನರಸಿ ರಾಧೆ' ಧಾರಾವಾಹಿಯಲ್ಲಿ ಇಂಚರಾ ಪಾತ್ರದ ಮೂಲಕ ಕನ್ನಡಿಗರ ಮನೆ ಮನ ಗೆದ್ದಿರುವವರು ನಟಿ ಕೌಸ್ತುಭ ಮಣಿ. ಎರಡು ವರ್ಷ ಪ್ರಸಾರವಾದ ಈ ಧಾರಾವಾಹಿಯಲ್ಲಿ ಕೌಸ್ತುಭ ಮಣಿ ಅವರ ಮುದ್ದು ಮುಖವನ್ನು ನೋಡುವುದಕ್ಕೆ ಜನ ಇಷ್ಟಪಡುತ್ತಿದ್ದರು. ಕಳೆದ ವರ್ಷ ಸೆಪ್ಟೆಂಬರ್ ತಿಂಗಳಿ ಕೊನೆಯ ಸಂಚಿಕೆ ಪ್ರಸಾರವಾಗಿತ್ತು.

ಸೀರೆಯಲ್ಲೇ ಹೆಚ್ಚು ಕಾಣಿಸಿಕೊಂಡ ಮಣಿ
ಇದಾದ ಬಳಿಕ ತೆಲುಗು ಕಿರುತೆರೆಗೆ ಕೌಸ್ತುಭ ಮಣಿ ಪಾದಾರ್ಪಣೆ ಮಾಡಿದರು. ತೆಲುಗಿನ 'ಕೋಡಲು ಮೀಕು ಜೋಹರ್ಲು' ಎಂಬ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಕನ್ನಡ ಕಿರುತೆರೆಯ ಸಾಕಷ್ಟು ನಟ-ನಟಿಯರು ತೆಲುಗು ಅಂಗಳದಲ್ಲಿ ಸೆಟ್ಲ್ ಆಗಿದ್ದಾರೆ. ಈ ಲಿಸ್ಟ್‌ನಲ್ಲಿ ಕೌಸ್ತುಭ ಮಣಿ ಕೂಡ ಇದ್ದಾರೆ. ಧಾರಾವಾಹಿಗಳಲ್ಲಿ ಸಿಕ್ಕಾಪಟ್ಟೆ ಡೀಸೆಂಟ್ ಆಗಿ ಸೀರೆ ಉಟ್ಟು, ಇಲ್ಲವೇ ಲಂಗ ದಾವಣಿ, ಸಲ್ವಾರ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದ ನಟಿ, ವೆಸ್ಟರ್ನ್ ಉಡುಗೆ ತೊಟ್ಟಿದ್ದು ತೀರಾ ಕಡಿಮೆ.

'ರಾಮಾಚಾರಿ 2.0' ಚಿತ್ರದಲ್ಲಿ ನಟನೆ
ಕೌಸ್ತುಭ ಮಣಿ ಸ್ಯಾಂಡಲ್‌ವುಡ್‌ಗೂ ಎಂಟ್ರಿ ಕೊಟ್ಟಿದ್ದು, ಬೆಳ್ಳಿತೆರೆ ಮೇಲೂ ತಮ್ಮ ಛಾಪು ಮೂಡಿಸಲು ಕೌಸ್ತುಭ ಮಣಿ ಸಜ್ಜಾಗಿದ್ದಾರೆ. ಯುವ ಪ್ರತಿಭೆ ತೇಜ್ ನಟಿಸಿ, ನಿರ್ದೇಶನ ಮಾಡುತ್ತಿರುವ ಬಹುನಿರೀಕ್ಷಿತ ಚಿತ್ರದಲ್ಲಿ ಕೌಸ್ತುಭ ಮಣಿ ನಾಯಕಿಯಾಗಿದ್ದಾರೆ. 'ರಾಮಾಚಾರಿ 2.0' ಚಿತ್ರದಲ್ಲಿ ಕೌಸ್ತುಭ ಮಣಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು, ಮತ್ತೊಬ್ಬರು ನಟಿ ಚಂದನಾ. ಸದ್ಯ ಈ ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು, ಏಪ್ರಿಲ್ 7 ರಂದು ಸಿನಿಮಾ ಬಿಡುಗಡೆ ಆಗುತ್ತಿದೆ.

ಆಶ್ಚರ್ಯ ಪಟ್ಟ ಅಭಿಮಾನಿಗಳು
ಸೋಶಿಯಲ್ ಮೀಡಿಯಾದಲ್ಲಿ ದೇಸಿ ಧಿರಿಸಿನಲ್ಲೇ ಕಾಣಿಸಿಕೊಳ್ಳುತ್ತಿದ್ದ ನಟಿ ಕೌಸ್ತುಭ ಮಣಿ. ಈಗ ಇದ್ದಕ್ಕಿದ್ದ ಹಾಗೆಯೇ ಸ್ಟೈಲಿಶ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಹೊಸ ಫೋಟೋಗಳನ್ನು ಹಂಚಿಕೊಂಡಿರುವ ಕೌಸ್ತುಭ ಮಣಿ ಅವರುನ್ನು ನೋಡಿದ ಅಭಿಮಾನಿಗಳು ಯಾರಿವರು ಎಂದು ಶಾಕ್ ಆಗಿದ್ದಾರೆ. ವೆಸ್ಟರ್ನ್ ಉಡುಗೆಯಲ್ಲಿ ಕೌಸ್ತುಭ ಮಣಿ ಸಿಕ್ಕಾಪಟ್ಟೆ ಡಿಫರೆಂಟ್ ಆಗಿ ಕಾಣುತ್ತಿದ್ದು, ಅವರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.


Click it and Unblock the Notifications











