Don't Miss!
- News
ವಿಜಯಪುರದ ಆಲಮೇಲದಲ್ಲಿ ನೂರಾರು ಮಕ್ಕಳಿಗೆ ದಡಾರ: ಎಚ್ಚರಿಕೆ ವಹಿಸಲು ಜಿಲ್ಲಾಡಳಿತ ಮನವಿ
- Sports
ಆಕ್ಯುಪ್ರೆಶರ್ ಚಿಕಿತ್ಸೆ ಪಡೆಯುತ್ತಿರುವ ಚಿತ್ರವನ್ನು ಹಂಚಿಕೊಂಡ ಶ್ರೇಯಸ್ ಅಯ್ಯರ್
- Technology
ಅತಿ ಕಡಿಮೆ ಬೆಲೆಯಲ್ಲಿ ಹೊಸ ಸ್ಮಾರ್ಟ್ವಾಚ್ ಪರಿಚಯಿಸಿದ ಫೈರ್ಬೋಲ್ಟ್ !
- Lifestyle
ನಿಮ್ಮ ಗಂಡ 'ಅಮ್ಮನ ಮಗ'ವಾಗಿರುವುದರಿಂದ ತುಂಬಾನೇ ಸಮಸ್ಯೆ ಆಗುತ್ತಿದೆಯೇ?
- Finance
ಆಧಾರ್ ಕಾರ್ಡ್ ಸುರಕ್ಷತೆಗಾಗಿ ಯುಐಡಿಎಐ ನೂತನ ನಿಯಮ ತಿಳಿಯಿರಿ!
- Automobiles
ಕೈಗೆಟುಕುವ ಬೆಲೆಯಲ್ಲಿ ಮತ್ತೊಂದು ಎಸ್ಯುವಿ ಬಿಡುಗಡೆಗೊಳಿಸಲು ಸಜ್ಜಾದ ಮಾರುತಿ ಸುಜುಕಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಕನ್ನಡ ಸೀರಿಯಲ್ ನಟಿಯರ ತೆರೆಹಿಂದಿನ ಅವತಾರ ಹೇಗಿದೆ ನೋಡಿ!
ಎಲ್ಲರಿಗೂ ತಿಳಿದಿರುವಂತೆಯೇ ಧಾರಾವಾಹಿಗಳು ಈಗ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿವೆ. ಮುಂಚೆ ಧಾರಾವಾಹಿಗಳು ಕೇವಲ ಮನೆ ಗೃಹಿಣಿಯರಿಗೆ ಮೀಸಲು ಎಂಬಂತಿತ್ತು. ಮನೆ ಕೆಲ ಮುಗಿಸಿ ಗೃಹಿಣಿಯರು ಸೀರಿಯಲ್ ನೋಡುತ್ತಿದ್ದರು. ಒಂದು ದಿನವೂ ಧಾರಾವಾಹಿಯ ಎಪಿಸೋಡ್ ಗಳನ್ನು ಮಿಸ್ ಮಾಡಿಕೊಳ್ಳಲು ಬಯಸುತ್ತಿರಲಿಲ್ಲ.
ಸೀರಿಯಲ್‌ಗಳನ್ನು ನೋಡಲು ಮುದುಕರೂ, ಮಕ್ಕಳು, ಗಂಡಸರೂ ಕೂಡ ನೋಡುತ್ತಾರೆ. ಪ್ರತೀ ದಿನದ ಎಪಿಸೋಡ್‌ನಲ್ಲಿ ಏನಾಗುತ್ತೆ ಎಂದು ಕುತೂಹಲದಿಂದ ಕಾಯುತ್ತಾರೆ. ಮಹಿಳೆಯರಂತೂ ಅಕ್ಕ ಪಕ್ಕದ ಮನೆಯವರ ಬಳಿ ಸೀರಿಯಲ್ ಗಳಲ್ಲಿ ನಡೆಯುವ ಘಟನೆಗಳ ಬಗ್ಗೆ ಗಂಟೆ ಗಟ್ಟಲೆ ಚರ್ಚೆಯನ್ನೂ ಮಾಡುತ್ತಾರೆ.
Comedy
Gang
Reality
Show
ನಟಿ
ಶೃತಿ
ಹರಿಹರನ್ಗೆ
ಕಾಮಿಡಿ
ಗ್ಯಾಂಗ್ನಲ್ಲಿ
ಏನು
ಕೆಲಸ?
ಕೋವಿಡ್ ಸಂಕಷ್ಟ ಕಾಲದಲ್ಲಿ ಸೀರಿಯಲ್ ನೋಡುವವರ ಸಂಖ್ಯೆ ಡಬಲ್ ಆಗಿದೆ ಎಂದರೆ ತಪ್ಪಾಗಲಾರದು. ಮನೆಯವರೆಲ್ಲರೂ ಸೀರಿಯಲ್ ನೋಡುವ ಅಭ್ಯಾಸ ರೂಢಿಸಿಕೊಂಡಿದ್ದಾರೆ. ಈ ಸಮಯದಲ್ಲೇ ಸೀರಿಯಲ್ ನಟಿಯರಿಗೆ ಹೆಚ್ಚಿನ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಸಾಮಾನ್ಯವಾಗಿ ಧಾರಾವಾಹಿಗಳಲ್ಲಿ ನಟಿಯರನ್ನು ಭಾರತೀಯ ಸಾಂಪ್ರದಾಯಿಕ ಉಡುಗೆಗಳಲ್ಲಿ ಕಾಣಬಹುದು. ಅದರೆ ಅವರು ತೆರೆ ಹಿಂದೆ ಹೇಗೆ ಇರುತ್ತಾರೆ ಎನ್ನುವುವದನ್ನು ಇಲ್ಲಿ ನೋಡಿ.

ಹೆಚ್ಚಾಗಿ ತೆರೆಮೇಲೆ ಗೌರಮ್ಮನಂತೆ ಕಾಣುವ ನಟಿಯರು!
ಕನ್ನಡದ ಟಾಪ್ ಮೋಸ್ಟ್ ಸೀರಿಯಲ್ ಗಳಲ್ಲಿ ನಾಯಕಿಯರು ಸೀರೆ, ಲಂಗ ದಾವಣಿ ಹಾಗೂ ಕುರ್ತಾಗಳನ್ನು ಧರಿಸುತ್ತಾರೆ. ಆದರೆ, ವಾಸ್ತವದಲ್ಲಿ ಈ ನಟಿಯರು ಮಾಡರ್ನ್ ಬಟ್ಟೆಗಳನ್ನು ಕೂಡ ಹಾಕಿಕೊಳ್ಳುತ್ತಾರೆ. ಆಯಾ ಧಾರಾವಾಹಿಯ ಪಾತ್ರಗಳಿಗೆ ತಕ್ಕಂತೆ ನಟಿಯರು ಉಡುಗೆಗಳನ್ನು ತೊಟ್ಟಿರುತ್ತಾರೆ. ಹಾಗಾದರೆ ಸಂಪ್ರದಾಯಿಕ ಉಡುಗೆಗಳಲ್ಲಿ ತೆರೆ ಮೇಲೆ ಕಾಣುವ ನಿಮ್ಮ ನೆಚ್ಚಿನ ನಟಿ ಮಾಡರ್ನ್ ಬಟ್ಟೆಯಲ್ಲಿ ಹೇಗೆ ಕಾಣಿಸುತ್ತಾರೆ.? ಪಶ್ಚಿಮಾತ್ಯ ಧಿರಿಸು ನಿಮ್ಮ ಫೇವರಿಟ್ ನಟಿಗೆ ಸೂಟ್ ಆಗುತ್ತಾ ಎನ್ನುವುದನ್ನು ಮುಂದೆ ಓದಿ...

ರೌಡಿ ಬೇಬಿ ಅಮೂಲ್ಯ ಸ್ಟೈಲಿಶ್ ಅವತಾರ!
ಜೀ ಕನ್ನಡದಲ್ಲಿ ಮೂಡಿ ಬರುವ 'ಗಟ್ಟಿಮೇಳ' ಧಾರಾವಾಹಿಯ ನಾಯಕಿ ರೌಡಿ ಬೇಬಿ ಅಮೂಲ್ಯ ಅವರು ಧಾರಾವಾಹಿಯಲ್ಲಿ ವೇದಾಂತ್ ಅನ್ನು ಮದುವೆಯಾಗುವ ಮುನ್ನ ಲಂಗಾ ದಾವಣಿ ಧರಿಸುತ್ತಿದ್ದರು. ಈಗ ವೇದಾಂತ್ ಜೊತೆ ಮದುವೆಯಾದ ಮೇಲೆ ನಿಶಾ ರವೀಂದ್ರ ಅವರು ಸೀರೆ ಉಡುತ್ತಿದ್ದಾರೆ. ಇದು ಕೇವಲ ಧಾರಾವಾಹಿಯಲ್ಲಿ ಬರುವ ಪಾತ್ರಕ್ಕಾಗಿ. ಆದರೆ ನಿಶಾ ನಿಜ ಜೀವನದಲ್ಲಿ ವೆಸ್ಟರ್ನ್ ಬಟ್ಟೆಗಳನ್ನು ಕೂಡ ಧರಿಸುತ್ತಾರೆ. ರಿಯಲ್ ಲೈಫ್ ನಲ್ಲೂ ಜಾಲಿಯಾಗಿರುವ ನಿಶಾ ಮಾಡರ್ನ್ ಬಟ್ಟೆಯಲ್ಲಿ ಗ್ಲಾಮರಸ್ ಆಗೇ ಕಾಣುತ್ತಾರೆ.

ನಾಗಿಣಿ ನಟಿಯ ಲುಕ್‌ಗೆ ಜನ ಫಿದಾ!
ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಆಯವರ್ಧನ್ ಪತ್ನಿಯಾಗಿ ಅನು ಸಿರಿಮನೆ ಪಾತ್ರದಲ್ಲಿ ಕಾಣಿಸಿಕೊಂಡಿರುವ ಮೇಘಾ ಶೆಟ್ಟಿ ಹೆಚ್ಚಾಗಿ ಕುರ್ತಾಗಳನ್ನೇ ಬಳಸುತ್ತಾರೆ. ಕುರ್ತಾ ಬಿಟ್ಟರೆ ಸೀರೆಯನ್ನು ಉಡುತ್ತಾರೆ. ಆದರೆ ಇವರು ಕೂಡ ಮಾಡರ್ನ್ ಬಟ್ಟೆಗಳಲ್ಲಿ ಸಖತ್ ಸ್ಟೈಲಿಷ್ ಆಗಿ ಕಾಣುತ್ತಾರೆ. ಇನ್ನು ಕಮಲಿ ಧಾರಾವಾಹಿಯಲ್ಲಿ ಹಳ್ಳಿ ಹುಡುಗಿ ಪಾತ್ರದಲ್ಲಿ ಕಾಣಿಸಿಕೊಳ್ಳುವ ಅಮೂಲ್ಯ ಓಂಕಾರ ಗೌಡ ವೆಸ್ಟರ್ನ್ ಉಡುಗೆಯಲ್ಲಿ ಪಡ್ಡೆ ಹುಡುಗರ ನಿದ್ದೆಗೆಡಿಸುವಂತೆ ಕಾಣುತ್ತಾರೆ. ನಾಗಿಣಿ 2 ಧಾರಾವಾಹಿಯ ನಾಯಕಿ ನಮೃತಾ ಗೌಡ ಅವರ ಮಾಡರ್ನ್ ಲುಕ್ ಗೆ ಫಿದಾ ಆಗದವರಿಲ್ಲ.

ಗ್ಲಾಮರ್ ಗೊಂಬೆಗಳಂತೆ ಕಂಗೊಳಿಸುವ ನಟಿಯರು!
ರಾಧಿಕಾ ಧಾರಾವಾಹಿಯ ಕಾವ್ಯಾ ಶಾಸ್ತ್ರಿ ಅವರು ಗೌನ್, ಸ್ಕರ್ಟ್ಸ್ ಗಳಲ್ಲಿ ತುಂಬಾ ಮುದ್ದಾಗಿ ಕಾಣುತ್ತಾರೆ. ಮಧುಮಗಳು ಧಾರಾವಾಹಿ ರಕ್ಷಿತಾ ಕೂಡ ಮಾಡರ್ನ್ ಧಿರಿಸಿನಲ್ಲಿ ಗ್ಲಾಮರಸ್ ಆಗಿ ಕಾಣುತ್ತಾರೆ. ಇನ್ನು ಪಾರು ಧಾರಾವಾಹಿಯ ಮೋಕ್ಷಿತಾ ಪೈ ವೆಸ್ಟರ್ನ್ ಬಟ್ಟೆಗಳನ್ನು ಧರಿಸಿದಾಗ ಹುಡುಗರ ಕಣ್ಣುಕುಕ್ಕುವಂತೆ ಗ್ಲಾಮರಸ್ ಆಗಿ ಕಾಣುವುದರ ಜೊತೆಗೆ ಸ್ಟೈಲಿಷ್ ಲುಕ್ ನಲ್ಲಿ ಕಾಣುತ್ತಾರೆ.