Amruthadhaare: ನೂರು ಎಪಿಸೋಡ್ ಪೂರೈಸಿದ ಅಮೃತಧಾರೆ: ಭೂಮಿಕಾ-ಗೌತಮ್ ಜೋಡಿ ಮೋಡಿಗೆ ಪ್ರೇಕ್ಷಕರು ಪಿಧಾ

By Shruthi Harish Gowda

ಮೇ 29, 2023ರಿಂದ 'ಅಮೃತಧಾರೆ' ಧಾರಾವಾಹಿ ಜೀ ಕನ್ನಡದಲ್ಲಿ ಪ್ರಸಾರ ಆರಂಭಿಸಿತ್ತು. ಈಗ ನೂರು ಎಪಿಸೋಡ್‌ಗಳ ಸಂಭ್ರಮ ಆಚರಣೆ ಮಾಡುತ್ತಿದೆ ಧಾರಾವಾಹಿ ತಂಡ. ಹಿಂದಿಯ "ಬಡೆ ಅಚ್ಚೆ ಲಗ್ತಾ‌" ಧಾರಾವಾಹಿ ರೀಮೆಕ್ ಇದಾಗಿದ್ದು ಕನ್ನಡ ವೀಕ್ಷಕರ ಮನಗೆದ್ದಿದೆ. ರಾಜೇಶ್ ನಟರಂಗ ಹಾಗೂ ಛಾಯಾಸಿಂಗ್ ಅವರು ನಟನೆ ನೋಡಲು ಅವರ ಅಭಿಮಾನಿಗಳು ಕಾಯುತ್ತಾ ಇದ್ದರು.

ಅಮೃತಧಾರೆ ಧಾರಾವಾಹಿ ಇಬ್ಬರಿಗೂ ಸಹ ಒಂದು ಉತ್ತಮ ಫ್ಲಾಟ್‌ಫಾರ್ಮ್‌ನ್ನು ಕೊಟ್ಟಿತ್ತು. ಹೆಸರಾಂತ ಕಲಾವಿದರ ದಂಡೇ ಈ ಧಾರಾವಾಹಿಯಲ್ಲಿ ಇದ್ದು, ಗೌತಮ್ ದಿವಾನ್ ಆಗಿ ರಾಜೇಶ್ ನಟರಂಗ, ಭೂಮಿಕಾ ಪಾತ್ರದಲ್ಲಿ ಛಾಯಾಸಿಂಗ್ ಅಭಿನಯಿಸಿದ್ದಾರೆ. ಸಿಹಿಕಹಿ ಚಂದ್ರು, ಅಮೃತ ನಾಯಕ್, ವನಿತಾ ವಾಸು, ಚೈತ್ರಾ ಶೆಣೈ, ಶಶಿ ಹೆಗ್ಡೆ ಹೀಗೆ ಹಲವಾರು ಕಲಾವಿದರು ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ತಮ್ಮ ತಮ್ಮ ಕುಟುಂಬಕ್ಕಾಗಿ ಭೂಮಿಕಾ ಹಾಗೂ ಗೌತಮ್ ತಮ್ಮ ಬದುಕನ್ನೇ ತ್ಯಾಗ ಮಾಡುವುದೇ ಕಥೆಯ ವೈಶಿಷ್ಟ್ಯವಾಗಿದೆ.

amruthadhaare-crosses-100-episode

ಈ ಧಾರಾವಾಹಿಯ ನಿರ್ಮಾಣವನ್ನು ಕೀರ್ತಿ ಅಕ್ಷಯ್ ಸಂಸ್ಥೆ ಮಾಡುತ್ತಿದ್ದು, ಮಹೇಶ್ ರಾವ್ ನಿರ್ವಹಣೆ ಜವಾಬ್ದಾರಿ ಹೊತ್ತಿದ್ದಾರೆ. ಉತ್ತಮ್ ಮಧು ಅವರ ನಿರ್ದೇಶನದಲ್ಲಿ 'ಅಮೃತಧಾರೆ' ಧಾರಾವಾಹಿ ಉತ್ತಮವಾಗಿ ಮೂಡಿಬರುತ್ತಿದ್ದು, ಪ್ರೇಕ್ಷಕರ ಮನಸು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಅಮೃತಧಾರೆಯ ಶೀರ್ಷಿಕೆ ಗಾಯನಕ್ಕೆ ಜನರು ಮನಸೋತಿದ್ದಾರೆ.

100 ಎಪಿಸೋಡ್ ಪೂರೈಸಿದ ಅಮೃತಧಾರೆ

ಪ್ರತಿದಿನ ಹೊಸ ಹೊಸ ತಿರುವು ಪಡೆಯುತ್ತಾ ಧಾರಾವಾಹಿ ತನ್ನದೇ ಆದ ಅಭಿಮಾನಿ ಬಳಗವನ್ನ ಸೃಷ್ಟಿ ಮಾಡಿಕೊಂಡಿದೆ. ಧಾರಾವಾಹಿಯನ್ನ ವೀಕ್ಷಕರು ಬಹಳ ಇಷ್ಟಪಟ್ಟು ನೋಡುತ್ತಿದ್ದಾರೆ. ಕಥೆಯು ಕೂಡ ತುಂಬಾ ಚೆನ್ನಾಗಿ ಇದೆ ಎಂದು ಹೇಳುತ್ತಿದ್ದಾರೆ. ಅಮೃತಧಾರೆ ಧಾರಾವಾಹಿ ಪ್ರಸಾರವಾದ ದಿನದಿಂದಲೂ ವೀಕ್ಷಕರನ್ನು ಸೆಳೆಯುತ್ತಿದೆ. ಟಿ ಆರ್ ಪಿ ಯಲ್ಲೂ ಸಹ ಉತ್ತಮ ಸ್ಥಾನ ಗಳಿಸಿ ನೂರು ಎಪಿಸೋಡ್‌ಗಳನ್ನು ಪೂರೈಸಿ ಮುನ್ನುಗ್ಗುತ್ತಿದೆ.

ಭೂಮಿಕಾ-ಗೌತಮ್ ನಟನೆಗೆ ಪ್ರೇಕ್ಷಕರು ಪಿಧಾ

ಈ ಧಾರಾವಾಹಿ ಕಥೆಯು ಶುರುವಾಗುವ ಮೊದ್ಲೆ ನೆಗೆಟಿವ್ ಶುರುವಾಗಿತ್ತು. ಜೀ ಕನ್ನಡದಲ್ಲಿ ಯಾವಾಗಲೂ ಸಹ ಇದೇ ರೀತಿ ಧಾರಾವಾಹಿ ಮಾಡ್ತಾರೆ ಎಂದು ಕೆಲವರು ಹೇಳಿದ್ದರು. ಜೊತೆ ಜೊತೆಯಲಿ ಧಾರಾವಾಹಿ ಕೂಡ ಇದೇ ರೀತಿ ಇತ್ತು.‌ ತದನಂತರ ಅದು ಬೇರೆ ರೀತಿಯಾಯಿತು ಎಂದೆಲ್ಲಾ ಮಾತನಾಡಿದರು . ಆದರೆ ಕಥೆ ಶುರುವಾದ ಮೇಲೆ ಪ್ರೇಕ್ಷಕರೇ ಫಿದಾ ಆಗಿದ್ದಾರೆ. ಗೌತಮ್ ದಿವಾನ್ ಹಾಗೂ ಭೂಮಿಕಾ ಇಬ್ಬರ ನಟನೆಗೂ ಕೂಡ ಒಳ್ಳೆಯ ಅಂಕ ಸಿಗುತ್ತಿದೆ.

ಗೌತಮ್- ಭೂಮಿಕಾ ಮದುವೆ ಕುತೂಹಲ

ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ದಿವಾನ್ ಹಾಗೂ ಭೂಮಿಕಾ ಇವರಿಬ್ಬರು ಯಾವ ರೀತಿ ಮದುವೆಯಾಗುತ್ತಾರೆ, ಯಾವ ರೀತಿ ಪರಿಚಯವಾಗುತ್ತದೆ ಎಂಬುದನ್ನೇ ಕುತೂಹಲವಾಗಿ ಇಡಲಾಗಿತ್ತು. ಎಲ್ಲದಕ್ಕೂ ಕೂಡ ಅತಿ ಬೇಗನೆ ಧಾರಾವಾಹಿ ತಂಡ ತಿರುವನ್ನು ಕೊಟ್ಟಿತು. ಗೌತಮ್ ದಿವಾನ್ ಹಾಗೂ ಭೂಮಿಕಾ ಇಬ್ಬರ ಮದುವೆಯೂ ಕೂಡ ತಮ್ಮ ತಮ್ಮ ಕುಟುಂಬದವರ ಆಸೆಯಂತೆ ನೆರವೇರಿತು. ಕುಟುಂಬಕ್ಕಾಗಿ ತಮ್ಮ ಜೀವನವನ್ನೇ ಗೌತಮ್ ಹಾಗೂ ಭೂಮಿಕಾ ಮುಡಿಪಾಗಿಟ್ಟು ಮದುವೆ ಆಗಿ ಎಲ್ಲರಿಗೂ ಸಂತಸ ತಂದಿದ್ದಾರೆ.

ಕಥೆ ಎಳೆಯಲಿಲ್ಲ ಎಂದ್ರು ವೀಕ್ಷಕರು

ಇನ್ನು ಈಗ ಗೌತಮ್ ಹಾಗೂ ಭೂಮಿಕಾ ಇಬ್ಬರು ಪರಸ್ಪರ ಗಂಡ ಹೆಂಡತಿಯಂತೆ ಇಲ್ಲ. ಕೇವಲ ಮನೆಯವರ ಒತ್ತಾಯಕ್ಕೆ ಮದುವೆಯಾದವರಂತೆ ಇದ್ದಾರೆ. ಮುಂದೆ ಕಥೆ ಯಾವ ರೀತಿ ತಿರುವನ್ನು ಪಡೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಇಬ್ಬರ ಅಭಿರುಚಿಗಳು ಬೇರೆ ಬೇರೆಯಾಗಿದ್ದು. ಗೌತಮ್ ಅವರ ಅಜ್ಜಿ ಇಬ್ಬರನ್ನು ಆದಷ್ಟು ಒಂದು ಮಾಡಬೇಕು ಎಂದು ಪ್ರಯತ್ನ ಮಾಡುತ್ತಿದ್ದಾರೆ.ಅಜ್ಜಿಗಾಗಿ ಗೌತಮ್ ಭೂಮಿಕಾ ಜೊತೆಯಲ್ಲಿ ತುಂಬಾ ಚೆನ್ನಾಗಿ ಇರುವಂತೆ ನಡೆದುಕೊಳ್ಳುತ್ತಿದ್ದಾನೆ. ಮುಂದೆ ಕಥೆ ಯಾವ ರೀತಿ ಸಾಗುತ್ತದೆ? ಇದೇ ರೀತಿಯ ಮೆಚ್ಚುಗೆ ಸಿಗುತ್ತಾ?ಕಾದು ನೋಡಬೇಕಿದೆ.

More from Filmibeat

English summary
Zee Kannada amruthadare serial completes 100 Episode;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X