Don't Miss!
- Finance
ಫೆಬ್ರವರಿ 1ರಿಂದ ಟಾಟಾ ಮೋಟರ್ಸ್ ಕಾರು ದುಬಾರಿ, ಯಾಕೆ, ಇಲ್ಲಿದೆ ಕಾರಣ?
- News
ಹಾಸನ ಟಿಕೆಟ್ ಬಗ್ಗೆ ಮಾತನಾಡಲು ರೇವಣ್ಣ ಬಿಟ್ಟರೆ ಯಾರಿಗೂ ಅವಕಾಶವಿಲ್ಲ; HDKಗೆ ಸೂರಜ್ ಟಾಂಗ್
- Technology
ಭಾರತದಲ್ಲಿ ಹೊಸ ಸಂಚಲನ ಸೃಷ್ಟಿಸಿದ ಫೈರ್ಬೋಲ್ಟ್ ಕಂಪೆನಿ!..ಪ್ರತಿಸ್ಫರ್ಧಿಗಳು ಕಂಗಾಲು!
- Lifestyle
ಬಿಪಿ ಸಮಸ್ಯೆಯೇ? ಪಿಜ್ಜಾ, ಮಜ್ಜಿಗೆ ಈ ಬಗೆಯ ಅಧಿಕ ಸೋಡಿಯಂ ಆಹಾರ ಸೇವಿಸಲೇಬೇಡಿ
- Sports
Women's Premier League : ಫೆಬ್ರವರಿ 2ನೇ ವಾರ ಆಟಗಾರರ ಹರಾಜು: ದೆಹಲಿಯಲ್ಲಿ ಹರಾಜು ಪ್ರಕ್ರಿಯೆ
- Automobiles
ಬಾಕ್ಸ್ ಆಫೀಸ್ನಲ್ಲಿ 'ಪಠಾಣ್' ಅಬ್ಬರ: ಈ ಚಿತ್ರದಲ್ಲಿ ಕಾಣಿಸಿಕೊಂಡ ಆಕರ್ಷಕ ಕಾರುಗಳಿವು...
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಗಟ್ಟಿಮೇಳ'ದಲ್ಲಿ ಮತ್ತೆ ಬದಲಾದ ವಿಲನ್ ಪಾತ್ರಧಾರಿ..?!!
ಧಾರಾವಾಹಿಗಳಲ್ಲಿ ಪಾತ್ರಗಳು ಬದಲಾಗುವುದು ಸರ್ವೇ ಸಾಮಾನ್ಯ. ಎಲ್ಲಾ ಧಾರಾವಾಹಿಗಳಲ್ಲೂ ಪಾತ್ರಗಳು ಬದಲಾಗುತ್ತವೆ. ಯಾಕೆಂದರೆ, ಒಂದೇ ಪಾತ್ರವನ್ನು ವರ್ಷಾನು ಗಟ್ಟಲೆ ಮುಂದುವರೆಸಿಕೊಂಡು ಹೋಗಲು ಕೆಲ ನಟ-ನಟಿಯರಿಗೆ ಸಾಧ್ಯವಾಗುವುದಿಲ್ಲ.
ವೈಯಕ್ತಿಕ ಕಾರಣಗಳಿಂದಲೋ, ಇಲ್ಲವೇ ಬೇರೆ ಕಾರಣಗಳಿಂದಾಗಿ ಪಾತ್ರಧಾರಿಗಳು ಬದಲಾಗಬೇಕಾಗುತ್ತದೆ. ಒಬ್ಬರು ಬಿಟ್ಟ ಪಾತ್ರವನ್ನು ಮತ್ತೊಬ್ಬರು ಮುಂದುವರೆಸುತ್ತಾರೆ. ಈ ರೀತಿ ಕಲಾವಿದರು ಬದಲಾದರೆ ಮೊದಲಿಗೆ ಪ್ರೇಕ್ಷಕರಿಗೆ ಬೇಸರವಾಗುತ್ತದೆ. ಆದರೆ, ಪಾತ್ರಧಾರಿ ತನ್ನ ಪಾತ್ರಕ್ಕೆ ಹೊಂದಿಕೊಳ್ಳುತ್ತಿದ್ದಂತೆ ಜನರು ಹಳೆಯ ಪಾತ್ರಧಾರಿಯನ್ನು ಮರೆತೇ ಬಿಡುತ್ತಾರೆ.
ಈ
ವರ್ಷ
ಕನ್ನಡ
ಕಿರುತೆರೆಯಲ್ಲಿ
ಸದ್ದು
ಮಾಡಿದ
ವಿವಾದಗಳ
ಮೇಲೊಂದು
ಸುತ್ತು
ಸಾಮಾನ್ಯವಾಗಿ ಧಾರಾವಾಹಿಗಳಲ್ಲಿ ಪಾತ್ರಧಾರಿಗಳು ಬದಲಾದರೆ ಚೆನ್ನಾಗಿರುವುದಿಲ್ಲ. ಕೆಲವರು ಆ ಪಾತ್ರಕ್ಕೆ ಸೂಟ್ ಆಗುವುದಿಲ್ಲ. ಅದು ಹೊರತು ಪಡಿಸಿದರೆ, ಪಾತ್ರಗಳು ಬದಲಾಗುವುದು ಸಹಜವೇ. ಇದೀಗ 'ಗಟ್ಟಿಮೇಳ' ಧಾರಾವಾಹಿಯಲ್ಲಿ ಪಾತ್ರಧಾರಿಯೊಬ್ಬರು ಬದಲಾಗಿದ್ದಾರೆ.

ಮತ್ತೆ ಬದಲಾದ ಸುಹಾಸಿನಿ
'ಗಟ್ಟಿಮೇಳ' ಧಾರಾವಾಹಿಯಲ್ಲಿ ಮತ್ತೆ ಅತ್ತೆ ಬದಲಾಗಿದ್ದಾಳೆ. 'ಗಟ್ಟಿಮೇಳ' ಧಾರಾವಾಹಿಯಲ್ಲಿ ಸುಹಾಸಿನಿ ಪಾತ್ರಧಾರಿ ಪದೇ ಪದೇ ಬದಲಾಗುತ್ತಿದ್ದಾರೆ. ಇಂದಿನ ಸಂಚಿಕೆಯಲ್ಲಿ ಸುಹಾಸಿನಿ ಪಾತ್ರಧಾರಿ ಬದಲಾಗಿದ್ದು, ಪ್ರೇಕ್ಷಕರು ಶಾಕ್ ಆಗಿದ್ದಾರೆ. ಅರ್ಚನಾ ಕೃಷ್ಣಪ್ಪ ಅವರು ಸುಹಾಸಿನಿ ಪಾತ್ರಕ್ಕೆ ಹೊಂದಿಕೊಂಡಿದ್ದರು. ಈಗ ಇದ್ದಕ್ಕಿದ್ದ ಹಾಗೆಯೇ ಬದಲಾಗಿರುವುದು ಪ್ರೇಕ್ಷಕರಿಗೆ ಬೇಸರ ತಂದಿದೆ. 'ಗಟ್ಟಿಮೇಳ' ಧಾರಾವಾಹಿ ಶುರುವಾದಾಗ ಅರ್ಚನಾ ಕೃಷ್ಣಪ್ಪ ಅವರು ಸುಹಾಸಿನಿ ಪಾತ್ರದಲ್ಲಿ ನಟಿಸಿದ್ದರು. ವೈಯಕ್ತಿಕ ಕಾರಣದಿಂದ ಧಾರಾವಾಹಿಯಿಂದ ಹೊರ ನಡೆದರು. ಆಗ ಆ ಜಾಗಕ್ಕೆ ನಟಿ ಸ್ವಾತಿ ಅವರು ಬಂದಿದ್ದರು.

ಪುನಃ ಬಂದಿದ್ದ ಅರ್ಚನಾ
ಈಗ ಮತ್ತೆ ಕೆಲ ತಿಂಗಳ ಹಿಂದೆ ಅರ್ಚನಾ ಕೃಷ್ಣಪ್ಪ ಅವರೇ ಮರಳಿದ್ದರು. ಸುಹಾಸಿನಿ ಪಾತ್ರ ಅರ್ಚನಾ ಅವರಿಗೆ ಸೂಟ್ ಆಗಿದ್ದು, ಬೇರೆಯವರನ್ನು ಒಪ್ಪಲು ಪ್ರೇಕ್ಷಕರಿಗೂ ಇಷ್ಟವಿಲ್ಲ. ಆದರೆ ಈಗ ಮತ್ತೆ ಬದಲಾವಣೆ ಆಗಿದೆ. ಈ ಬಾರಿ ಅರ್ಚನಾಕೃಷ್ಣಪ್ಪ ಅವರ ಜಾಗಕ್ಕೆ ನಟಿ ಸಿಂಧೂ ಕಲ್ಯಾಣ್ ಬಂದಿದ್ದಾರೆ. ಅರ್ಚನಾ ಅವರು ಮತ್ತೆ ಧಾರಾವಾಹಿಯಿಂದ ಹೊರ ನಡೆದಿರುವುದರ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆದರೆ, ಸಿಂಧೂ ಅವರನ್ನು ನೋಡಿದ ಪ್ರೇಕ್ಷಕರು ಶಾಕ್ ಆಗಿದ್ದಾರೆ. ಈ ಹೊಸ ನಟಿಯನ್ನು ಪ್ರೇಕ್ಷಕರು ಹೇಗೆ ಸ್ವಾಗತಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಸಿನಿಮಾದಲ್ಲೂ ನಟನೆ
ಸುಹಾಸಿನಿ ಪಾತ್ರ ಮಾಡಿದ್ದ ಅರ್ಚನಾ ಕೃಷ್ಣಪ್ಪ ಅವರು ಈಗಾಗಲೇ ಸಾಕಷ್ಟು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ತಮಿಳಿನ 'ಊರ್ವುಗಲ್' ಎಂಬ ಧಾರಾವಾಹಿಯಲ್ಲಿ ಲೀಡ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದರು. ಸುಮಾರು 3 ವರ್ಷಕ್ಕೂ ಹೆಚ್ಚು ಕಾಲ ಈ ಧಾರಾವಾಹಿ ಪ್ರಸಾರವಾಗಿತ್ತು. ಅರ್ಚನಾ ಕೃಷ್ಣಪ್ಪ ಅವರು ಹೆಚ್ಚು ನೆಗೆಟಿವ್ ರೋಲ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡದ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಇನ್ನು ಡಾ.ವಿಷ್ಣುವರ್ಧನ್ ಅವರ ನಟನೆಯ 'ಕೋಟಿಗೊಬ್ಬ' ಚಿತ್ರದಲ್ಲಿ ದಾದಾ ಸಹೋದರಿ ಪಾತ್ರದಲ್ಲಿ ಅರ್ಚನಾ ನಟಿಸಿದ್ದರು.

'ಪುಟ್ಟ ಗೌರಿ' ನಟಿ ಸಿಂಧೂ ಕಲ್ಯಾಣ್
ಇನ್ನು ಈಗ ಸುಹಾಸಿನಿ ಪಾತ್ರಕ್ಕೆ ಬಂದಿರುವ ಸಿಂಧೂ ಕಲ್ಯಾಣ್ ಕನ್ನಡ ಕಿರುತೆರೆಯ ಸಕ್ರಿಯ ನಟಿ. 'ಪುಟ್ಟಗೌರಿ' ಧಾರಾವಾಹಿ ಮೂಲಕ ಜನಪ್ರಿಯತೆಯನ್ನು ಗಳಿಸಿದವರು. 'ಅರಮನೆ ಗಿಳಿ', 'ರಾಮಾಚಾರಿ' ಧಾರಾವಾಹಿಗಳಲ್ಲಿ ಸಿಂಧೂ ಕಲ್ಯಾಣ್ ಅವರು ನಟಿಸಿದ್ದಾರೆ. 'ಅರಮನೆ ಗಿಳಿ' ಧಾರಾವಾಹಿ ಬಳಿಕ 2 ವರ್ಷ ಬ್ರೇಕ್ ಪಡೆದಿದ್ದರು. ಇದೀಗ 'ಗಟ್ಟಿಮೇಳ' ತಂಡದ ಭಾಗವಾಗಿದ್ದು, ಸುಹಾಸಿನಿ ಪಾತ್ರವನ್ನು ಮುಂದುವರಿಸಲಿದ್ದಾರೆ. ಪ್ರೇಕ್ಷಕರು ಸಿಂಧೂ ಕಲ್ಯಾಣ್ ಅವರನ್ನು ಅರ್ಚನಾ ಕೃಷ್ಣಪ್ಪ ಅವರಂತೆಯೇ ಸ್ವಾಗತಿಸಬೇಕಿದೆ.