'ಗಟ್ಟಿಮೇಳ' ಧಾರಾವಾಹಿಯಲ್ಲಿ ಮತ್ತೆ ಆರತಿ ಪಾತ್ರಧಾರಿ ಬದಲು: ಈ ಆರತಿ ಬಗ್ಗೆ ನಿಮಗೆಷ್ಟು ಗೊತ್ತು?

By ಪ್ರಿಯಾ ದೊರೆ

'ಗಟ್ಟಿಮೇಳ' ಧಾರಾವಾಹಿಯಲ್ಲಿ ಮತ್ತೆ ಪಾತ್ರಧಾರಿ ಬದಲಾವಣೆಯಾಗಿದೆ. ಗಟ್ಟಿಮೇಳ ಧಾರಾವಾಹಿಯಲ್ಲಿ ಈ ಹಿಂದೆ 2 ಪಾತ್ರಗಳಿಗೆ ಪದೇ ಪದೇ ನಟಿಯರ ಬದಲಾವಣೆ ಆಗಿದೆ. ಒಂದು ಆರತಿ ಹಾಗೂ ಮತ್ತೊಂದು ಸುಹಾಸಿನಿ ಪಾತ್ರ.

ಈ ಧಾರಾವಾಹಿಯಲ್ಲಿ ಮತ್ತೆ ಮತ್ತೆ ಕೆಲ ಪಾತ್ರಗಳು ಬದಲಾಗುತ್ತಿವೆ. 'ಗಟ್ಟಿಮೇಳ' ಧಾರಾವಾಹಿಯಲ್ಲಿ ಸುಹಾಸಿನಿ ಪಾತ್ರ ಹಾಗೂ ಆರತಿ ಪಾತ್ರ ಪದೇ ಪದೇ ಬದಲಾಗುತ್ತಿದೆ.

ಈಗ ಮತ್ತೆ ಪಾತ್ರಧಾರಿ ಬದಲಾವಣೆಯನ್ನು ಆಗಿದೆ. 'ಗಟ್ಟಿಮೇಳ' ಧಾರಾವಾಹಿಯಲ್ಲಿ ಸದ್ಯ ಆರತಿ ಪಾತ್ರಧಾರಿ ಬದಲಾಗಿದ್ದು, ಪ್ರೇಕ್ಷಕರು ಶಾಕ್ ಆಗಿದ್ದಾರೆ. ಆರತಿಗೆ ಸೀಮಂತ ಮಾಡಲಿದ್ದು, ಈ ಸಂದರ್ಭದಲ್ಲಿ ಪಾತ್ರಧಾರಿಯೇ ಬದಲಾಗಿದ್ದಾರೆ.

Kannada Tv serial Gattimela set for a major cast change; See Details inside

ಅರ್ಚನಾ ಕೃಷ್ಣಪ್ಪ ಅವರು ಸುಹಾಸಿನಿ ಪಾತ್ರಕ್ಕೆ ಹೊಂದಿಕೊಂಡಿದ್ದರು. ಕಾರಣಾಂತರಗಳಿಂದ ಎರಡು ಬಾರಿ ಅರ್ಚನಾ ಕೃಷ್ಣಪ್ಪ ಅವರು ಬದಲಾದರು, ಇವರ ಜಾಗವನ್ನು ಮೊದಲು ನಟಿ ಸ್ವಾತಿ ಅವರು ತುಂಬಿದ್ದರು. ಇದೀಗ ಕಳೆದ ಮೂರು ತಿಂಗಳಿಂದ ನಟಿ ಸಿಂಧೂ ಕಲ್ಯಾಣ್ ಮುಂದುವರಿಸಿದ್ದಾರೆ. ಇನ್ನು ಆರತಿ ಪಾತ್ರವನ್ನೂ ಈ ಮೊದಲು ನಟಿ ಅಶ್ವಿನಿ ಅವರು ನಡೆಸಿಕೊಡುತ್ತಿದ್ದರು. ಅವರು ಧಾರಾವಾಹಿಯಿಂದ ಹೊರ ನಡೆದ ಮೇಲೆ ನಟಿ ಗಗನಾ ಅವರು ಪಾತ್ರಕ್ಕೆ ಜೀವ ತುಂಬಿದರು. ಇದೀಗ ಪುನಃ ಆರತಿ ಪಾತ್ರ ಬದಲಾವಣೆ ಆಗಿದೆ. ಆರತಿ ಪಾತ್ರವನ್ನು ಈಗ ನಟಿ ಆರತಿ ಪಡುಬಿದ್ರಿ ಅವರು ನಡೆಸಿಕೊಡುತ್ತಿದ್ದಾರೆ.

ಹೌದು.. ಈಗ ಆರತಿ ಪಾತ್ರಕ್ಕೆ ಆರತಿಯೇ ಬಂದಿದ್ದಾರೆ. ನಟಿಯ ಪೂರ್ತಿ ಹೆಸರು ಆರತಿ ಪಡುಬಿದ್ರಿ. ಡಾಕ್ಟರ್ ಆಗಿದ್ದ ಆರತಿ ಅವರು ಆರ್ತೋ ಫಿಸಿಯೋಥೆರಪಿಸ್ಟ್ ಆಗಿದ್ದರು. ಇದರ ಜೊತೆಗೆ ಮಾಡೆಲಿಂಗ್ ಕೂಡ ಮಾಡುತ್ತಿದ್ದರು. ನಟಿಸುವ ಆಸೆಯಿಂದಾಗಿ ಈಗ ಕಿರುತೆರೆಯಲ್ಲೂ ನಟಿಸುತ್ತಿದ್ದಾರೆ. 2019ರಲ್ಲಿ ಮಿಸ್ ಕರ್ನಾಟಕ ಕಿರೀಟವನ್ನು ಮುಡಿಗೇರಿಸಿಕೊಂಡ ಆರತಿ ಅವರ ಮೊದಲ ಧಾರಾವಾಹಿ ಹೂ ಮಳೆ. ಈ ಧಾರಾವಾಹಿಯಲ್ಲಿ ಆರತಿ ಪಡುಬಿದ್ರಿ ಅವರು ಅಂಬಿಕಾ ಎಂಬ ಪಾಸಿಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ವೈದ್ಯೆ ಆಗಿದ್ದ ಆರತಿ ಅವರಿಗೆ ನಟಿಸುವ ಆಸೆಯಿಂದಾಗಿ ಆಡಿಷನ್‌ನಲ್ಲಿ ಭಾಗವಹಿಸುತ್ತಿದ್ದರಂತೆ. ಆಡಿಷನ್ ಕೊಟ್ಟು ಎರಡು ತಿಂಗಳ ಬಳಿಕ ಹೂ ಮಳೆ ಧಾರಾವಾಹಿ ತಂಡದಿಂದ ಕರೆಯನ್ನು ಸ್ವೀಕರಿಸಿದರಂತೆ.

Kannada Tv serial Gattimela set for a major cast change; See Details inside

ಆರತಿ ಅವರಿಗೆ ಕಿರುತೆರೆಯಲ್ಲಿ ಮೊದಲ ಬಾರಿಗೆ ಕ್ಯಾಮರಾ ಎದುರಿಸಿದಾಗ ಕಷ್ಟವಾಗಿತ್ತಂತೆ. ಆರತಿ ಅವರು ಸೋಶಿಯಲ್ ಮೀಡಿಯಾದಲ್ಲೂ ಆಕ್ಟೀವ್ ಆಗಿದ್ದಾರೆ. ಈಗ 'ಗಟ್ಟಿಮೇಳ' ಧಾರಾವಾಹಿಯಲ್ಲಿ ಆರತಿ ಪಾತ್ರಕ್ಕೆ ಜೀವ ತುಂಬಲು ಬಂದಿದ್ದಾರೆ. ಧಾರಾವಾಹಿಯಲ್ಲಿ ಈಗ ಆರತಿ ಗರ್ಭಿಣಿಯಾಗಿದ್ದು, ಸದ್ಯ ಆರತಿಯ ಸೀಮಂತಕ್ಕೆ ತಯಾರಿ ನಡೆಯುತ್ತಿದೆ. ಸುಹಾಸಿನಿ ಆರತಿ ಅವರ ತಂದೆ ತಾಯಿಗೆ ಸೀಮಂತಕ್ಕೆ ಬರಬಾರದು ಎಂದು ವಾರ್ನಿಂಗ್ ಮಾಡಿದ್ದಾಳೆ.

ಪರಿಮಳ, ಮಂಜುನಾಥ್ ಆರತಿಯ ಸೀಮಂತವನ್ನು ನೋಡುವ ಸಲುವಾಗಿ ಅಡುಗೆ ಭಟ್ಟರ ಕೆಲಸಕ್ಕೆ ಬಂದಿದ್ದಾರೆ. ಆದರೆ. ಆರತಿಗೆ ತನ್ನ ತಂದೆ-ತಾಯಿ ಬಂದಿಲ್ಲ ಎಂದು ಬೇಸರವಾಗಿದೆ. ಸೀಮಂತವೂ ಬೇಡ ಎಂದು ಬೇಸರದಲ್ಲಿದ್ದಾಳೆ. ಆದರೆ, ಅಮೂಲ್ಯ, ಆದ್ಯ, ವೇದಾಂತ್ ಎಲ್ಲರೂ ಆರತಿಗೆ ಸಮಾಧಾನ ಮಾಡುತ್ತಿದ್ದಾರೆ. ನಾಳೆಯಾದರೂ ಆರತಿಯ ಸೀಮಂತವಾಗುತ್ತೋ ಇಲ್ಲವೋ ಕಾದು ನೋಡಬೇಕಿದೆ. ಇನ್ನು ಸುಹಾಸಿನಿಯ ಆಟ ಈಗಲಾದರೂ ವೇಂದಾತ್ ಗೆ ತಿಳಿಯುತ್ತಾ ..?

More from Filmibeat

English summary
Kannada Tv serial Gattimela set for a major cast change; See Details inside. Gagana, who plays Arathi's character, is being replaced by Arathi Padubidri from this week. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X