Kannada Serials TRP Ratings : ಕನ್ನಡದ ಯಾವ ಧಾರಾವಾಹಿ ಟಾಪ್‌ನಲ್ಲಿದೆ? ಯಾವುದಕ್ಕೆ ಎರಡನೇ ಸ್ಥಾನ?

By ಶೃತಿ ಹರೀಶ್ ಗೌಡ

ಟಿವಿ ಚಾನೆಲ್‌ಗಳ ಹಾಗೂ ಚಾನೆಲ್‌ಗಳಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳ ಜನಪ್ರಿಯತೆ ಅಳೆಯಲು ಟಿಆರ್‌ಪಿ ಅನ್ನು ಮಾಪನವಾಗಿ ಬಳಸಲಾಗುತ್ತಿದ್ದು, ಪ್ರತಿ ವಾರವೂ ಈ ಟಿಆರ್‌ಪಿ ಸಂಖ್ಯೆಗಳು ಬಿಡುಗಡೆ ಆಗುತ್ತವೆ.

ಈ ವಾರದ ಟಿಆರ್‌ಪಿ ಪ್ರಕಾರ, ಯಾವ ಕನ್ನಡ ಚಾನೆಲ್‌ನ ಯಾವ ಧಾರಾವಾಹಿ ಮೊದಲ ಸ್ಥಾನದಲ್ಲಿ ಯವುದು ಎರಡನೇ ಸ್ಥಾನದಲ್ಲಿದೆ ಎಂಬ ಲೆಕ್ಕಾಚಾರ ಇಲ್ಲಿದೆ. ನೆನಪಿರಲಿ ಇದು ಒಂದು ವಾರದ ಟಿಆರ್‌ಪಿ ಮಾತ್ರವೇ ಆಗಿದೆ.

ಜೀ ಕನ್ನಡ ಚಾನೆಲ್‌ನ 'ಗಟ್ಟಿಮೇಳ' ಧಾರಾವಾಹಿ ತನ್ನ ಸ್ಥಾನವನ್ನು ಭದ್ರಮಾಡಿಕೊಂಡು ಟಾಪ್ ಒಂದರಲ್ಲೇ ಮುನ್ನುಗ್ಗಿ ಹೋಗುತ್ತಿದೆ. ಕೌಟುಂಬಿಕ ಧಾರಾವಾಹಿ ಆಗಿರುವ ಕಾರಣ ವೀಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ವೇದಾಂತ್-ಅಮೂಲ್ಯ ಜೋಡಿ ಹಾಗೂ ಧಾರಾವಾಹಿಯಲ್ಲಿ ಬರುತ್ತಿರುವ ವಿವಿಧ ತಿರುವುಗಳು ಈ ಧಾರಾವಾಹಿ ಪ್ರೇಕ್ಷಕರ ಮನಸು ಗೆಲ್ಲಲು ಕಾರಣವಾಗಿದೆ. ಈ ವಾರ 11.2 ಟಿಆರ್‌ಪಿಯನ್ನು ಈ ಧಾರಾವಾಹಿ ಪಡೆದುಕೊಂಡಿದೆ.

ಎರಡನೇ ಸ್ಥಾನದಲ್ಲಿ ಪುಟ್ಟಕ್ಕನ ಮಕ್ಕಳು

ಎರಡನೇ ಸ್ಥಾನದಲ್ಲಿ ಪುಟ್ಟಕ್ಕನ ಮಕ್ಕಳು

ಟಾಪ್ 2 ಸ್ಥಾನದಲ್ಲಿ ಮತ್ತೆ ಜೀ ಕನ್ನಡದ ಧಾರಾವಾಹಿಯೇ ಇದೆ. ಜೀ ಕನ್ನಡದ 'ಪುಟ್ಟಕ್ಕನ ಮಕ್ಕಳು' ಎರಡನೇ ಸ್ಥಾನದಲ್ಲಿದೆ. ಮಗಳ ಮದುವೆ ಮಾಡಲು ಪುಟ್ಟಕ್ಕ ಪಡಬಾರದ ಕಷ್ಟವನ್ನು ಪಡುತ್ತಿದ್ದಾಳೆ. ರಾಜಿಯ ಕುತಂತ್ರಕ್ಕೆ ಪುಟ್ಟಕ್ಕ ಸಿಲುಕಿದ್ದಾಳೆ. ಬೀಗರಿಗೆ ಹಣವನ್ನು ಹೊಂದಿಸಿಕೊಡಲು ನಾನಾ ರೀತಿಯ ಕಸರತ್ತು ಮಾಡುತ್ತಿದ್ದಾಳೆ. ಮಗಳ ಮದುವೆ ಮಾಡಿ ಮುಗಿಸಿದರೆ ಸಾಕು ಎಂದು ಪುಟ್ಟಕ್ಕ ದೇವರ ಮೇಲೆ ಭಾರ ಹಾಕಿ ಹಣ ಹೊಂದಿಸಲು ಪರದಾಡುತ್ತಿದ್ದಾಳೆ. ಈ ಧಾರಾವಾಹಿ 10.1 ಟಿಆರ್‌ಪಿಯನ್ನು ಪಡೆದುಕೊಂಡಿದೆ.

ಟಾಪ್ 3ರಲ್ಲಿ 'ಶ್ರೀ ರಸ್ತು ಶುಭಮಸ್ತು'

ಟಾಪ್ 3ರಲ್ಲಿ 'ಶ್ರೀ ರಸ್ತು ಶುಭಮಸ್ತು'

ಮತ್ತೊಂದು ಜೀ ಕನ್ನಡ ಧಾರಾವಾಹಿ 'ಶ್ರೀರಸ್ತು ಶುಭಮಸ್ತು' ಟಾಪ್ 3 ಸ್ಥಾನವನ್ನು ಹಾಗೆಯೇ ಉಳಿಸಿಕೊಂಡು ಮುಂದೆ ಸಾಗುತ್ತಿದೆ. ದತ್ತ ಅಜ್ಜ ಮನೆಯಲ್ಲಿ ಮನೆಯ ಸದಸ್ಯರಿಗೆ ಮಾಡುವ ರೂಲ್ಸ್ ಪ್ರೇಕ್ಷಕರ ಮನವನ್ನು ಗೆದ್ದಿದೆ. ಅತ್ತೆ ಸೊಸೆ ಮಗನ ನಡುವಿನ ಭಾಂದವ್ಯ ನೋಡುಗರಿಗೆ ಬಹಳ ಇಷ್ಟವಾಗಿದೆ. ಇದು ಟಿಆರ್‌ಪಿಯಲ್ಲಿ 8.6 ಪಡೆದುಕೊಂಡಿದೆ.

'ಸತ್ಯ'ಳನ್ನು ಹಿಂದೆ ಹಾಕಿದ 'ಹಿಟ್ಲರ್ ಕಲ್ಯಾಣ'

'ಸತ್ಯ'ಳನ್ನು ಹಿಂದೆ ಹಾಕಿದ 'ಹಿಟ್ಲರ್ ಕಲ್ಯಾಣ'

ಜೀ ಕನ್ನಡದ್ದೇ ಆದ 'ಸತ್ಯ' ಧಾರಾವಾಹಿಯ ಸ್ಥಾನವನ್ನು 'ಹಿಟ್ಲರ್ ಕಲ್ಯಾಣ' ಬಾಚಿಕೊಂಡು ಟಾಪ್ ನಾಲ್ಕರ ಸ್ಥಾನವನ್ನು ಪಡೆದುಕೊಂಡಿದೆ. ಟಾಪ್ ಆರರಲ್ಲಿ ಇದ್ದ 'ಹಿಟ್ಲರ್ ಕಲ್ಯಾಣ', 'ಭಾಗ್ಯಲಕ್ಷ್ಮೀ' ಹಾಗೂ 'ಸತ್ಯ' ಧಾರಾವಾಹಿಯನ್ನು ಹಿಂದೆ ಹಾಕಿದೆ. ಈಗ ಏಜೆಗೆ ಕಾಟ ಕೊಡುವ ಕಾಲ‌ ಲೀಲಾಗೆ ಬಂದಿದ್ದು, ಧಾರಾವಾಹಿ ಕಥೆ ಪ್ರೇಕ್ಷಕರಿಗೆ ಇಷ್ಟವಾಗಿದೆ. ಈ ವಾರ ಇದು 7.7 ಟಿಆರ್‌ಪಿಯನ್ನು ಪಡೆದು ಎರಡು ಧಾರಾವಾಹಿಗಳನ್ನು ಕೆಳಗಡೆ ಹಾಕಿದೆ. ಪ್ರತಿಸಲವೂ ನಾಲ್ಕನೇ ಸ್ಥಾನದಲ್ಲಿಯೇ ಇರುತ್ತಿದ್ದ ಸತ್ಯ ಕೊಂಚ ಕೆಳಗಡೆ ಬಂದಿದೆ. ಟಾಮ್ ಬಾಯ್ ಸತ್ಯ ಟಾಪ್ 5ರಲ್ಲಿ ಸತ್ಯ ತನ್ನ ಸ್ಥಾನವನ್ನು ಪಡೆದುಕೊಂಡಿದೆ. ಇದರಲ್ಲಿ ಸತ್ಯ‌ ಪಾತ್ರ ಎಲ್ಲರಿಗೂ ಇಷ್ಟವಾಗಿದೆ ಇದು ಟಿಆರ್‌ಪಿಯಲ್ಲಿ 7.4ಸ್ಥಾನವನ್ನು ಪಡೆದುಕೊಂಡು ಸ್ಲಾಟ್ ಲೀಡರ್ ಆಗಿದೆ.

ಈ ವಾರವೂ ಕೆಳಗೆ ಬಿದ್ದ ಭಾಗ್ಯಲಕ್ಷ್ಮೀ

ಈ ವಾರವೂ ಕೆಳಗೆ ಬಿದ್ದ ಭಾಗ್ಯಲಕ್ಷ್ಮೀ

ಟಾಪ್ 3ರಲ್ಲಿ ಭಾಗ್ಯಲಕ್ಷ್ಮೀ ಸ್ಥಾನವನ್ನು ಪಡೆದುಕೊಂಡಿತ್ತು ಆದರೆ ಟಿಆರ್‌ಪಿಯಲ್ಲಿ 6ನೇ ಸ್ಥಾನವನ್ನು ಪಡೆದಿದೆ. ಅಕ್ಕ ತಂಗಿಯ ಭಾಂದವ್ಯವನ್ನು ನೋಡುವಂತೆ ಮಾಡುವಲ್ಲಿ‌ ಭಾಗ್ಯಲಕ್ಷ್ಮೀ ಧಾರಾವಾಹಿ ಹಿಡಿದಿಟ್ಟುಕೊಂಡಿದೆ. ಲಡ್ಡು ಮದುವೆಯನ್ನು ಮಾಡಲು ಭಾಗ್ಯ ನಿರಾಕರಿಸಿದ್ದು ಮುಂದೇನು ತಿರುವು ಪಡೆಯಲಿದೆ ಎಂಬುದೇ‌ ಕುತೂಹಲಕಾರಿಯಾಗಿದೆ ಇದು 7.0 ಟಿಆರ್‌ಪಿಯನ್ನು ಪಡೆದುಕೊಂಡಿದೆ. ಟಾಪ್‌ 7ರಲ್ಲಿ ಕೆಂಡಸಂಪಿಗೆ ಧಾರಾವಾಹಿ ಸ್ಥಾನವನ್ನು ಪಡೆದುಕೊಂಡಿದೆ. ಕಾರ್ಪೊರೇಟರ್ ತೀರ್ಥ ಬಡ ಹುಡುಗಿಯನ್ನು ಮದುವೆಯಾಗಿ ಹೇಗೆ ಎಂಎಲ್‌ಎ ಪಟ್ಟ ಅಲಂಕರಿಸುವ ರೀತಿ ಧಾರಾವಾಹಿ ಕಥೆಯಾಗಿದೆ. ಈಗ ಸುಮನಾ ಕ್ಷಣಕ್ಷಣಕ್ಕೂ ಸವಾಲುಗಳನ್ನು ಎದುರಿಸುತ್ತಿರುವ ರೀತಿಯ ಕಥೆ ಎಲ್ಲರಿಗೂ ಇಷ್ಟವಾಗಿದೆ. ಇದು ತನ್ನ ಟಾಪ್ 7 ಸ್ಥಾನವನ್ನು ಹಾಗೇ ಉಳಿಸಿಕೊಂಡಿದೆ. 5.1 ಟಿಆರ್‌ಪಿಯನ್ನು ಪಡೆದುಕೊಂಡಿದೆ.

ಎಂಟು ಮತ್ತು ಒಂಬತ್ತನೇ ಸ್ಥಾನದಲ್ಲಿ ಯಾವ ಧಾರಾವಾಹಿ?

ಎಂಟು ಮತ್ತು ಒಂಬತ್ತನೇ ಸ್ಥಾನದಲ್ಲಿ ಯಾವ ಧಾರಾವಾಹಿ?

ಜೀ ಕನ್ನಡದಲ್ಲಿ ಪ್ರಸಾರವಾಗುವ ಜೊತೆ ಜೊತೆಯಲ್ಲಿ ಸೀರಿಯಲ್ ತನ್ನದೇ ಅದ ಪ್ರೇಕ್ಷಕರ ಬಳಗವನ್ನು ಹೊಂದಿದೆ. ಟಾಪ್ 6ರಲ್ಲಿ ಇದ್ದ ಜೊತೆ ಜೊತೆಯಲ್ಲಿ ಸೀರಿಯಲ್ ಟಾಪ್ 8ರ ಸ್ಥಾನವನ್ನು ಪಡೆದಿದೆ. ಇದು 5.0ಟಿಆರ್‌ಪಿಯನ್ನು ಪಡೆದುಕೊಂಡಿದೆ. ಟಾಪ್ 9ರಲ್ಲಿ ಕನ್ನಡತಿ ಮತ್ತು ರಾಮಾಚಾರಿ ಧಾರಾವಾಹಿ ಸ್ಥಾನವನ್ನು ಪಡೆದುಕೊಂಡಿದೆ. ಕನ್ನಡತಿಯಲ್ಲಿ ಒಂದೊಂದೇ ಸತ್ಯ ಭುವಿಯ ಮುಂದೆ ಬಯಲಾಗುತ್ತಾ ಹೋಗುತ್ತಿದೆ. ರಾಮಾಚಾರಿ ಚಾರುಲತಾಗೆ ಕಣ್ಣು ಬರಲು ಕಠಿಣ ವ್ರತ ಮಾಡುತ್ತಿದ್ದಾನೆ ಇವೆರಡು ಧಾರಾವಾಹಿ ಪ್ರೇಕ್ಷಕರ ಮೆಚ್ಚುಗೆಗೆ ಕಾರಣವಾಗಿದೆ. ಈ ವಾರ 4.9 ಟಿಆರ್‌ಪಿಯನ್ನು ಈ ಎರಡು ಧಾರಾವಾಹಿ ಪಡೆದಿವೆ. ಜೊತೆ ಜೊತೆಯಲ್ಲಿ, ಪಾರು, ಲಕ್ಷಣ ಗೀತಾ ತಮ್ಮ ಸ್ಥಾನವನ್ನು ಟಾಪ್ ಹತ್ತರಲ್ಲಿ ಪಡೆದುಕೊಂಡಿವೆ. ಇವು ಸಹ ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡಿದೆ.

More from Filmibeat

English summary
Top Kannada serials, Here is the TRP rating of Kannada tv serials of this week. Which tv serial is on top.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X