For Quick Alerts
  ALLOW NOTIFICATIONS  
  For Daily Alerts

  ಅರ್ಧಕ್ಕೆ ಪ್ರಸಾರ ನಿಲ್ಲಿಸಿದ 'ರುಕ್ಕು' ಧಾರಾವಾಹಿ: ಕಾರಣವೇನು?

  |

  ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದ್ದ ರುಕ್ಕು ಧಾರಾವಾಹಿ ಅರ್ಧಕ್ಕೆ ಪ್ರಸಾರ ನಿಲ್ಲಿಸಿದೆ. ಕೊರೊನಾ ಲಾಕ್ ಡೌನ್ ನಿಂದ ಕಳೆದ ವರ್ಷ ಅನೇಕ ಧಾರಾವಾಹಿಗಳು ಅರ್ಧಕ್ಕೆ ನಿಂತಿದ್ದವು. ಈ ವರ್ಷವೂ ಕೆಲವು ಧಾರಾವಾಹಿಗಳು ಪ್ರಸಾರ ನಿಲ್ಲಿಸುವ ಸಾಧ್ಯತೆ ಇದೆ.

  ಇದೀಗ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ರುಕ್ಕು ಧಾರಾವಾಹಿ ತನ್ನ ಪ್ರಸಾರವನ್ನು ಮುಕ್ತಾಯಗೊಳಿಸಿದೆ. ರುಕ್ಕ ಧಾರಾವಾಹಿ ಪ್ರಾರಂಭದಲ್ಲಿ ಉತ್ತಮ ಪ್ರದರ್ಶನ ನೀಡುತ್ತಾ ಟಿ ಆರ್ ಪಿಯಲ್ಲೂ ಉತ್ತಮವಾಗಿತ್ತು.

  ರುಕ್ಕು ಧಾರಾವಾಹಿ ಪ್ರಾರಂಭವಾಗಿ ಬಹಳ ದಿನವಾಗಿರಲಿಲ್ಲ. ಇತ್ತೀಚಿಗಷ್ಟೆ 100 ದಿನಗಳನ್ನು ಪೂರೈಸಿತ್ತು ರುಕ್ಕು. ಆದರೆ ಆಗಲೇ ಪ್ರಸಾರ ನಿಲ್ಲಿಸಿ ಪ್ರೇಕ್ಷಕರಿಗೆ ನಿರಾಸೆ ಮೂಡಿಸಿದೆ. ಅಷ್ಟಕ್ಕೂ ರುಕ್ಕು ಪ್ರಸಾರ ನಿಲ್ಲಿಸಲು ಕಾರಣ ಟಿ ಆರ್ ಪಿ. ಧಾರಾವಾಹಿ ಪ್ರೇಕ್ಷಕರನ್ನು ಸೆಳೆಯುವಲ್ಲಿ ವಿಫಲವಾಗಿದೆ. ಹಾಗಾಗಿ ಟಿ ಆರ್ ಪಿಯೂ ಇರಲಿಲ್ಲ. ಹಾಗಾಗಿ ಧಾರಾವಾಹಿಯನ್ನು ಅರ್ಧಕ್ಕೆ ನಿಲ್ಲಿಸುವ ನಿರ್ಧಾರ ಮಾಡಿದೆ ಆಯೋಜಕರು.

  ಜೀ ಕನ್ನಡದಲ್ಲಿ ಈ ವಾರ ಡಬಲ್ ಧಮಾಕ: ಎರಡು ಹಿಟ್ ಚಿತ್ರಗಳು ಪ್ರಸಾರಜೀ ಕನ್ನಡದಲ್ಲಿ ಈ ವಾರ ಡಬಲ್ ಧಮಾಕ: ಎರಡು ಹಿಟ್ ಚಿತ್ರಗಳು ಪ್ರಸಾರ

  ರುಕ್ಕು ಪ್ರೋಮೋ ಮೂಲಕವೇ ಪ್ರೇಕ್ಷಕರ ಮನ ಸಳೆದಿತ್ತು. ಅಕ್ಕ-ತಂಗಿಯರ ನಡುವಿನ ಪ್ರೀತಿ, ಬಾಂಧವ್ಯದ ಬಗ್ಗೆ ಇದ್ದ ಕಥಾವಸ್ತು ಹೊಂದಿದ್ದ ರುಕ್ಕು ಪ್ರಾರಂಭದಲ್ಲಿ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಗ್ಲಾಮರಸ್ ಪಾತ್ರದ ಕಿರುತೆರೆಯಲ್ಲಿ ಗಮನ ಸೆಳೆದಿದ್ದ ನಟಿ ಶೋಭಾ ಶೆಟ್ಟಿ ರುಕ್ಕು ಮೂಲಕ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಂಡಿದ್ದರು.

  ಆದರೆ ಶೋಭಾ ಕಾರಣಾಂತರಗಳಿಂದ ಧಾರಾವಾಹಿಯಿಂದ ಹೊರಬಂದಿದ್ದರು. ಶೋಭ ಜಾಗಕ್ಕೆ ರಚನಾ ಗೌಡ ಆಯ್ಕೆಯಾಗಿದ್ದರು. ಸಹೋದರಿ ರಾಧಿಕಾ ಪಾತ್ರದಲ್ಲಿ ವರ್ಷಿಕಾ ನಟಿಸಿದ್ದಾರೆ. ನಾಯಕ ಮುರಳಿ ಪಾತ್ರದಲ್ಲಿ ಆರ್ಯನ್ ಕಾಣಿಸಿಕೊಂಡಿದ್ದರು. ಮೊದಲ ಬಾರಿಗೆ ಆರ್ಯನ್ ಕಿರುತೆರೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ಪ್ರೇಕ್ಷಕರ ಹೃದಯ ಗೆದ್ದಿದ್ದರು.

  English summary
  Kannada TV serial Rukku to go off air. Makers to decide to end serial because of TRP.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X