Shwetha Prasad: ʻರಾಧಾʼ ಮಿಸ್ ಮೈಮೇಲೆ ಎಷ್ಟೆಲ್ಲಾ ಟ್ಯಾಟೂಗಳಿದೆ ಗೊತ್ತಾ?

By ಎಸ್ ಸುಮಂತ್

ರಾಧಾ ಮಿಸ್.. ಈ ಪದ ಇನ್ನು ಯಾರ ಮನಸ್ಸಿನಿಂದಲೂ ಅಳಿಸಿ ಹೋಗುವುದಕ್ಕೆ ಸಾಧ್ಯವಿಲ್ಲ. 'ರಾಧಾ ರಮಣ' ಧಾರಾವಾಹಿಯಲ್ಲಿ ರಾಧಾ ಮಿಸ್ ಪಾತ್ರ ಇನ್ನು ಹಾಗೆ ಕಣ್ಣಿಗೆ ಕಟ್ಟಿದ ಹಾಗೆ ಇದೆ. ಅದಕ್ಕೂ ಮುನ್ನ ಜೀ ಕನ್ನಡ ವಾಹಿನಿಯಲ್ಲಿ 'ಶ್ರೀರಸ್ತು ಶುಭಮಸ್ತು' ಧಾರಾವಾಹಿಯಲ್ಲಿ ಜಾಹ್ನವಿ ಪಾತ್ರ ಮಾಡಿ ಅತ್ತೆಯಂದಿರ ಮುದ್ದಿನ ಸೊಸೆಯಾಗಿದ್ದರು. ರಾಧಾ ಮಿಸ್ ಅಭಿನಯಕ್ಕೆ, ಅಷ್ಟು ಸಾಫ್ಟ್ ನೇಚರ್ ಗೆ ಅದೆಷ್ಟೋ ಜನ ಕ್ಲೀನ್ ಬೋಲ್ಡ್ ಆಗಿದ್ದರು. ಎರಡು ಧಾರಾವಾಹಿ ಆದ ಮೇಲೆ ರಾಧಾ ಮಿಸ್ ನಾಪತ್ತೆಯಾಗಿ ಬಿಟ್ಟಿದ್ದರು.

ಶ್ವೇತಾ ಮಾಡಿದ್ದು ಎರಡೇ ಧಾರಾವಾಹಿಯಾದರೂ ಸಿಕ್ಕಾಪಟ್ಟೆ ಹಿಟ್ ತಂದುಕೊಟ್ಟಿತ್ತು. ಹೆಸರನ್ನು ತಂದುಕೊಟ್ಟಿತ್ತು. ಆದರೆ ಶ್ವೇತಾ ಪ್ರಸಾದ್ ಅದ್ಯಾಕೋ ಮತ್ತೆ ಧಾರಾವಾಹಿಗಳನ್ನು ಒಪ್ಪಿಕೊಂಡಿರಲಿಲ್ಲ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ಹೊಸ ವಿಡಿಯೋವೊಂದನ್ನು ಬಿಟ್ಟು ಹಲ್ ಚಲ್ ಕ್ರಿಯೇಟ್ ಮಾಡಿದ್ದಾರೆ.

ರಾಧಾ ಮಿಸ್ ಈಗ ಫುಲ್ ಗ್ಲಾಮರ್

ರಾಧಾ ಮಿಸ್ ಈಗ ಫುಲ್ ಗ್ಲಾಮರ್

ರಾಧಾ ಮಿಸ್ ನಿಜವಾದ ಹೆಸರು ನಿಮಗೆಲ್ಲಾ ಗೊತ್ತೆ ಇದೆ. ಆದರೂ ನಾವೂ ಒಮ್ಮೆ ನೆನಪು ಮಾಡಿ ಬಿಡುತ್ತೀವಿ. ಶ್ವೇತಾ ಆರ್ ಪ್ರಸಾದ್, ರಾಧಾ ಮಿಸ್ ಎಂದೇ ಸಿಕ್ಕಾಪಟ್ಟೆ ಖ್ಯಾತಿ ಪಡೆದಿರುವವರು. ಮೂಲತಃ ಶಿವಮೊಗ್ಗ ಚೆಲುವೆಯಾದ ಶ್ವೇತಾ ಓದಿದ್ದು, ಇರುವುದು ಎಲ್ಲಾ ಬೆಂಗಳೂರಿನಲ್ಲೆ. ಫೇಮಸ್ ಆರ್ ಜೆ ಪ್ರದೀಪ್ ಅವರ ವೈಫ್ ಇವರು. ಮಾಡೆಲಿಂಗ್ ಕ್ಷೇತ್ರದಲ್ಲಿ ಮಿಂಚುತ್ತಿದ್ದವರು ಈಗ ಧಾರಾವಾಹಿ, ಸಿನಿಮಾ ಅಂತ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಮೊದಲ ಧಾರಾವಾಹಿ 'ಶ್ರೀರಸ್ತು ಶುಭಮಸ್ತು' ಧಾರಾವಾಹಿಯಲ್ಲಿ ಸಿಕ್ಕಾಪಟ್ಟೆ ಸೈಲೆಂಟ್ ಇರುವ ಕ್ಯಾರೆಕ್ಟರ್‌ನಲ್ಲಿ ಎಂಟ್ರಿ ಕೊಟ್ಟಿದ್ದರು. ತೀರಾ ಸಾಂಪ್ರದಾಯಿಕ ಮನೆಯ ಮಗಳಾಗಿ ಕಾಣಿಸಿಕೊಟ್ಟಿದ್ದರು. ಆದರೆ ಈಗ ಕಂಪ್ಲೀಟ್ ಬದಲಾಗಿರುವ ಶ್ವೇತಾ ಆರ್ ಪ್ರಸಾದ್ ಗ್ಲಾಮರ್ ಗೊಂಬೆಯಂತಾಗಿದ್ದಾರೆ.

ಹಾಟ್ ಫೋಟೊಗೆ ಶ್ವೇತಾ ಪೋಸ್

ಹಾಟ್ ಫೋಟೊಗೆ ಶ್ವೇತಾ ಪೋಸ್

ಧಾರಾವಾಹಿಯಲ್ಲಿ ತೀರಾ ಮುಗ್ಧೆ, ಸೌಮ್ಯ ಸ್ವಭಾವದಲ್ಲಿ ನೋಡಿರುವ ಶ್ವೇತಾ ನಿಜ ಜೀವನದಲ್ಲಿ ಬೇರೆ ರೀತಿಯಲ್ಲಿಯೇ ಇರುತ್ತಾರೆ. ಸದಾ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಶ್ವೇತಾ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಧಾರಾವಾಹಿಯಲ್ಲಿ ಸೀರೆಯಲ್ಲಿಯೇ ಕಂಗೊಳಿಸುತ್ತಿದ್ದ ಶ್ವೇತಾ ನಿಜ ಜೀವನದಲ್ಲಿ ಸಿಕ್ಕಾಪಟ್ಟೆ ಸ್ಟೈಲಿಶ್. ಅಷ್ಟೇ ಅಲ್ಲ ತುಂಬಾ ಹಾಟ್ ಫೋಟೊಗೆ ಪೋಸ್ ಕೊಡುವುದಕ್ಕೆ ಆರಂಭಿಸಿದ್ದಾರೆ. ಅವರ ಸೋಶಿಯಲ್ ಮೀಡಿಯಾವನ್ನೊಮ್ಮೆ ನೋಡಿದರೆ ಗೊತ್ತಾಗುತ್ತೆ. ರಾಧಾ ಮಿಸ್ ಗೂ ಶ್ವೇತಾ ಪ್ರಸಾದ್‌ಗೂ ಅಜಗಜಾಂತರ ವ್ಯತ್ಯಾಸವಿದೆ ಎಂಬುದು. ಧಾರಾವಾಹಿಯಿಂದ ಬ್ರೇಕ್ ತೆಗೆದುಕೊಂಡಿರುವ ನಟಿ ಹೊಸ ಹೊಸ ಫೋಟೊಶೂಟ್ ಮಾಡಿಸುತ್ತಲೇ ಇರುತ್ತಾರೆ. ಅದರಲ್ಲೂ ಹಾಟ್ ಫೋಟೊಶೂಟ್‌ಗಳಿಗೆ ಪೋಸ್ ನೀಡುತ್ತಿದ್ದಾರೆ. ತುಂಡುಡುಗೆ ತೊಟ್ಟು, ಬ್ಲಾಕ್ ಡ್ರೆಸ್‌ನಲ್ಲಿ ಎಂತವರು ಮರುಳಾಗುವಂತೆ ಪೋಸ್ ಕೊಟ್ಟಿದ್ದಾರೆ.

Recommended Video

KGF ಬಗ್ಗೆ ಪುನೀತ್ ಹೇಳಿದ್ದು ಏನು, ವೀಡಿಯೊ ವೈರಲ್ ಆಗ್ತಿರೋದು ಯಾಕೆ | KGF 2 | Yash | Puneeth Rajkumar
ಟ್ಯಾಟೋ ಪ್ರಿಯೆ ಶ್ವೇತಾ

ಟ್ಯಾಟೋ ಪ್ರಿಯೆ ಶ್ವೇತಾ

ಒಬ್ಬೊಬ್ಬರಿಗೆ ಒಂದೊಂದು ಕ್ರೇಜ್ ಇರುವಂತೆ ನಟಿ ಶ್ವೇತಾ ಪ್ರಸಾದ್‌ಗೆ ಟ್ಯಾಟೂ ಕ್ರೇಜ್ ಇದೆ. ಅವರ ಮೈಮೇಲೆ ಹುಡುಕಿದರೆ ಸಿಕ್ಕಾಪಟ್ಟೆ ಟ್ಯಾಟೂಗಳೇ ಕಣ್ಣಿಗೆ ಬೀಳುತ್ತವೆ. ಅದರಲ್ಲೂ ಅಟ್ರಾಕ್ಟ್ ಮಾಡುವಂತ ಟ್ಯಾಟೂಗಳು ಕಣ್ಣಿಗೆ ರಾರಾಜಿಸುತ್ತವೆ. ಸೊಂಟದ ಮೇಲೆ ಟ್ಯಾಟೂ ಹಾಕಿಸಿಕೊಂಡಿರುವ ನಟಿ ಮೂರು ಸಾಲುಗಳನ್ನು ಜೀವನದ ಬಗ್ಗೆ ಬರೆಸಿಕೊಂಡಿದ್ದಾರೆ. ಹಾಗೇ ಬೆನ್ನಿನ ಹಿಂಭಾಗವೂ ಒಂದು ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಕೈ ಮೇಲೆ ಒಂದು ಹೊಸ ಟ್ಯಾಟೂ ಹಾಕಿಸಿಕೊಂಡಿರುವ ಶ್ವೇತಾ, ಜೀವನವು ಸಮತೋಲನ ಕಲೆಯಾಗಿದೆ ಮತ್ತು ನಾವು ಅದರ ದ್ವಂದ್ವಗಳನ್ನು ಅಳವಡಿಸಿಕೊಳ್ಳಲು ಕಲಿತಾಗ ಹೆಚ್ಚು ಪೂರೈಸುತ್ತದೆ. ಏರಿಳಿತಗಳು, ಒಳ್ಳೆಯ ಸಮಯಗಳು ಮತ್ತು ಕೆಟ್ಟ ಸಮಯಗಳು, ಸಂತೋಷ ಮತ್ತು ಸವಾಲುಗಳು. ಇಲ್ಲಿ ಒಳ್ಳೆಯದು, ಇಲ್ಲಿ ಕೆಟ್ಟದು, ಕತ್ತಲೆ ಮತ್ತು ಬೆಳಕನ್ನು ಸ್ವೀಕರಿಸಲು, ಇಲ್ಲಿ ಜೀವನವಿದೆ ಎಂದು ತಮ್ಮ ಟ್ಯಾಟೂ ಬಗೆಗಿನ ಪ್ರೀತಿಯ ಬಗ್ಗೆ ಬರೆದುಕೊಂಡಿದ್ದಾರೆ.

ವಿಡಿಯೋದಲ್ಲಿ ಏನಿದೆ?

ಮೊದಲೇ ಹೇಳಿದಂತೆ ಶ್ವೇತಾ ಪ್ರಸಾದ್ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್. ಈಗ ಅಂತಾನೆ ಅಲ್ಲ ಧಾರಾವಾಹಿಗೆ ಬರುವುದಕ್ಕೂ ಮೊದಲಿನಿಂದಲೂ ಆಕ್ಟಿವ್ ಆಗಿದ್ದಾರೆ. ಸಿನಿಮಾ ಅಂತ ಬ್ಯುಸಿಯಾಗಿರುವ ನಟಿ ಸದ್ಯ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಅದರಲ್ಲಿ ಬಿಳಿ ಬಣ್ಣದ ಡ್ರೆಸ್ ತೊಟ್ಟು, ಹಾಡೊಂದಕ್ಕೆ ಮ್ಯಾಚ್ ಮಾಡಿರೋ ವಿಡಿಯೋ ಅದು. ಆ ವಿಡಿಯೋದಲ್ಲಿ ಕೊಂಚ ವೈಯಾರ, ಶೃಂಗಾರವೂ ಎದ್ದು ಕಾಣುತ್ತಿದೆ. ಮೋಹಕ ಅವತಾರದಲ್ಲಿ ಅವರ ದೇಹದಲ್ಲಿ ಅಡಗಿರುವ ಟ್ಯಾಟೂಗಳು ಹೆಚ್ಚು ಆಕರ್ಷಣೆಯ ಕೇಂದ್ರ ಬಿಂದುವಾಗಿದೆ.

More from Filmibeat

English summary
zee kannada serial Shrirastu shubamastu Written Update on Shwetha Prasad story. Here is the details about Shwetha Prasad new photoshoot story.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X