TRP Ratings: ಕನ್ನಡದ ಯಾವ ಧಾರಾವಾಹಿ ನಂಬರ್ 1
ಜೀ ಕನ್ನಡದಲ್ಲಿ ಪ್ರಸಾರವಾಗುವ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಕಳೆದುಕೊಂಡಿದ್ದ ಟಾಪ್ ಒನ್ ಸ್ಥಾನವನ್ನು ಮತ್ತೆ ಪಡೆದುಕೊಂಡಿದೆ. ಪುಟ್ಟಕ್ಕನ ದೊಡ್ಡ ಮಗಳು ಸಹನಾಳ ಮದುವೆ ಸಂಭ್ರಮ ಇಡೀ ಹಳ್ಳಿಯ ತುಂಬಾ ಮನೆ ಮಾಡಿದೆ. ಹಣ ಹೊಂದಿಸಲು ಹೆಣಗಾಡುತ್ತಿದ್ದ ಪುಟ್ಟಕ್ಕನಿಗೆ ಆಸರೆಯಾಗಿ ಬಂಗಾರಮ್ಮ ನಿಂತಿದ್ದಾಳೆ.
ರಾಜೇಶ್ವರಿ ಮಾಡುತ್ತಿರುವ ಕುತಂತ್ರಕ್ಕೆ ಬಂಗಾರಮ್ಮ ಸರಿಯಾದ ಪೆಟ್ಟುಕೊಡಲು ಸಿದ್ದಳಾಗಿ ಪುಟ್ಟಕ್ಕನ ಜೊತೆಗೆ ನಿಂತು ನನ್ನ ಮಗಳ ಮದುವೆ ಎಂದು ಮಾಡುತ್ತೇನೆ ನಿರಾಳವಾಗಿರು ಎಂದು ಧೈರ್ಯವನ್ನು ತುಂಬಿದ್ದಾಳೆ. ಈ ಕಡೆ ಕಂಠಿ ಸ್ನೇಹಾಳಿಗೆ ತನ್ನ ಪ್ರೀತಿಯನ್ನು ಹೇಳಲು ಚಡಪಡಿಸುತ್ತಿದ್ದಾನೆ. ಟಿಆರ್‌ಪಿಯಲ್ಲಿ 10.5 ಸ್ಥಾನವನ್ನು ಪುಟ್ಟಕ್ಕನ ಮಕ್ಕಳು ಪಡೆದುಕೊಂಡಿದೆ.
ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಗಟ್ಟಿಮೇಳ ಸೀರಿಯಲ್ ಮೊದಲ ಸ್ಥಾನದಿಂದ ಎರಡನೇ ಸ್ಥಾನಕ್ಕ ಬಂದಿದೆ. ಈಗ ವೇದಾಂತ್ ಅನ್ನು ಕಿಡ್ನ್ಯಾಪ್ ಮಾಡಿ ಮರ್ಡರ್ ಮಾಡಲು ಪ್ಲ್ಯಾನ್ ನಡೆಯುತ್ತಿದೆ. ಆದರೆ ಅಮೂಲ್ಯ ಮನಸನ್ನು ಡೈವೋರ್ಟ್ ಮಾಡಲು ಅಮೂಲ್ಯ ಫ್ಯಾಮಿಲಿ ಮೇಲೆ ಕಣ್ಣು ಬಿದ್ದಿದೆ. ಇನ್ನು ಧ್ರುವ ಸಹ ಹುಷಾರಾಗುತ್ತಿದ್ದು, ಕಥೆಗೆ ಹೊಸ ಟ್ವಿಸ್ಟ್ ಸಿಗಲಿದೆ ಈ ಧಾರಾವಾಹಿ 10.3 ಟಿಆರ್‌ಪಿ ಪಡೆದಿದೆ.

ಶ್ರೀ ರಸ್ತು ಶುಭಮಸ್ತುಗೆ ಎಷ್ಟನೇ ಸ್ಥಾನ?
ಜೀ ಕನ್ನಡದಲ್ಲಿ ಪ್ರಸಾರವಾಗುವ ಶ್ರೀರಸ್ತು ಶುಭಮಸ್ತು ಧಾರಾವಾಹಿ ಟಾಪ್ 3 ಸ್ಥಾನವನ್ನು ಹಾಗೇ ಉಳಿಸಿಕೊಂಡು ಮುಂದೆ ಸಾಗುತ್ತಿದೆ. ದತ್ತ ಅಜ್ಜನಿಗೆ ಬರ್ಡ್ ಡೇ ಸೆಲೆಬ್ರೆಷನ್ ಈ ಬಾರೀ ತುಂಬಾ ಸ್ಪೆಷಲ್ ಅನಿಸಿದೆ. ಮನೆಯವರೆಲ್ಲರೂ ತುಂಬಾ ಖುಷಿಯಿಂದ ದತ್ತ ಅಜ್ಜನ ಬರ್ಡ್ ಡೇ ಸೆಲೆಬ್ರೇಷನ್ ಮಾಡಿದ್ದಾರೆ. ಟಿಆರ್‌ಪಿಯಲ್ಲಿ 8.0ವನ್ನು ಪಡೆದುಕೊಂಡಿದೆ.

'ಹಿಟ್ಲರ್ ಕಲ್ಯಾಣ'ಕ್ಕೆ ಎಷ್ಟನೇ ಸ್ಥಾನ?
ಜೀ ಕನ್ನಡದಲ್ಲಿ ಪ್ರಸಾರವಾಗುವ ಹಿಟ್ಲರ್ ಕಲ್ಯಾಣ ನಾಲ್ಕರಲ್ಲಿ ಸ್ಥಾನವನ್ನು ಪಡೆದುಕೊಂಡಿದೆ. ಲೀಲಾ ಮನೆಯಲ್ಲಿ ಚನ್ನಾಗಿ ಇಲ್ಲ ಪ್ರತಿ ಕ್ಷಣವೂ ಕಣ್ಣೀರು ಹಾಕುತ್ತಿದ್ದಾಳೆ ಎಂದು ಎಜೆ ಸೊಸೆಯರು ಅವರ ಅಪ್ಪನಿಗೆ ಕಿವಿ ಊದಿದ್ದಾರೆ. ಆದರಎ ಅವರು ಹೇಳುವುದನ್ನು ನಂಬದ ಲೀಲಾ ಅಪ್ಪ ಸ್ವತಃ ಕಣ್ಣಾರೆ ಪರೀಕ್ಷೆ ಮಾಡಲು ಹೊರಟಿದ್ದಾರೆ. 7.8 ಟಿಆರ್‌ಪಿಯನ್ನು ಪಡೆದು

ಐದನೇ ಸ್ಥಾನ ಪಡೆದ ಸತ್ಯ
ಟಾಮ್ ಬಾಯ್ ಸತ್ಯ ಟಾಪ್ 5ರಲ್ಲಿ ತನ್ನ ಸ್ಥಾನವನ್ನು ಪಡೆದುಕೊಂಡಿದೆ. ಈ ಕಡೆ ಕಾರ್ತೀಕ್ ಅಕ್ಕ ಅಮ್ಮನ ಬಳಿ ಬಂದು ಸತ್ಯಳಿಗೆ ಕೊಟ್ಟಿದ್ದ ಆರು ತಿಂಗಳ ಅಗ್ರಿಮೆಂಟ್ ಬಗ್ಗೆ ನೆನಪಿಸುತ್ತಿದ್ದಾಳೆ. ಆದರೆ ಸತ್ಯ ಮತ್ತು ಕಾರ್ತಿಕ್ ನಡುವೆ ಈಗ ಅರ್ಥ ಮಾಡಿಕೊಳ್ಳುವ ಕಾಲ ಬಂದಿದೆ ಎಂದು ಹೇಳುತ್ತಿದ್ದರು. ಸತ್ಯಳನ್ನು ಮನೆಯಿಂದ ಹೊರಗಡೆ ಹಾಕಲು ಯೋಜನೆ ಸಿದ್ದಮಾಡಲಾಗುತ್ತಿದೆ. ಇದು ಟಿಆರ್‌ಪಿಯಲ್ಲಿ 7.1ಸ್ಥಾನವನ್ನು ಪಡೆದುಕೊಂಡಿದೆ.

'ಭಾಗ್ಯಲಕ್ಷ್ಮಿ'ಗೆ ಎಷ್ಟನೇ ಸ್ಥಾನ?
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಭಾಗ್ಯಲಕ್ಷ್ಮೀ ಧಾರಾವಾಹಿ 6ನೇ ಸ್ಥಾನವನ್ನು ಪಡೆದಿದೆ. ಭಾಗ್ಯಳ ಅಮ್ಮ ತನ್ನ ಎರಡನೇ ಮಗಳನ್ನು ವೈಷ್ಣವ್‌ಗೆ ಕಟ್ಟಲು ನೋಡುತ್ತಿದ್ದಾಳೆ. ಈ ಕಡೆ ವೈಷ್ಣವ್ ಅತ್ತೆ ಕೀರ್ತಿಯನ್ನೇ ಮದುವೆಯಾಗಬೇಕು ಎಂದು ಅಡ್ಡಗಾಲು ಹಾಕುತ್ತಿದ್ದಾಳೆ.ಇದು ಯಾವುದು ಸಹ ಲಕ್ಷ್ಮೀಗೆ ಗೊತ್ತಿಲ್ಲ ಯಾವುದೋ ಮಾತಿಗೆ ಕಟ್ಟುಬಿದ್ದು ವೈಷ್ಣವ್ ಮದುವೆಯಾಗಲು ಒಪ್ಪಿಗೆ ನೀಡಿದ್ದಾಳೆ. ಟಿಆರ್‌ಪಿಯಲ್ಲಿ 6.6 ಸ್ಥಾನವನ್ನು ಪಡೆದುಕೊಂಡಿದೆ.

ಏಳನೇ ಸ್ಥಾನಕ್ಕೆ ಬಂದ ಪಾರು
ಹತ್ತರಲ್ಲಿ ಸ್ಥಾನವನ್ನು ಪಡೆದಿದ್ದ ಪಾರು ಏಳರಲ್ಲಿ ಸ್ಥಾನವನ್ನು ಪಡೆದುಕೊಂಡಿದೆ. ಇನ್ನೂ ಪಾರು ಮನೆಯಿಂದ ಹೊರಗೆ ಹೋಗಿದ್ದು, ಅಖಿಲಾಂಡೇಶ್ವರಿ ತನ್ನ ಎರಡನೇ ಸೊಸೆ ಪ್ರಗ್ನೆಂಟ್ ಎನ್ನುವ ಸಂಭ್ರಮದಲ್ಲಿದ್ದಾಳೆ. ಅದನ್ನು ಕೇಳಿಸಿಕೊಂಡ ಪಾರ್ವತಿಗೆ ಬಹಳ ಸಂತಸವಾಗಿದೆ. ಇದು ಟಿಆರ್‌ಪಿಯಲ್ಲಿ 5.7 ಸ್ಥಾನವನ್ನು ಪಡೆದಿದೆ. ಜೀ ಕನ್ನಡದಲ್ಲಿ ಪ್ರಸಾರವಾಗುವ ಜೊತೆ ಜೊತೆಯಲ್ಲಿ ಸೀರಿಯಲ್ ತನ್ನದೇ ಅದ ಪ್ರೇಕ್ಷಕರ ಬಳಗವನ್ನು ಹೊಂದಿದೆ. ಈಗ ಆರ್ಯನಿಗೆ ಮರೆತು ಹೋಗಿರುವ ಹಳೆಯದ್ದನ್ನು ನೆನಪಿಗೆ ತರುವ ಪ್ರಯತ್ನವನ್ನು ಅನು ಮಾಡುತ್ತಾ ಇದ್ದಾಳೆ ಜೊತೆ ಜೊತೆಯಲ್ಲಿ ಸೀರಿಯಲ್ ಟಾಪ್ 8ರ ಸ್ಥಾನವನ್ನು ಪಡೆದಿದೆ. ಇದು 5.3 ಟಿಆರ್‌ಪಿಯನ್ನು ಪಡೆದುಕೊಂಡಿದೆ. ಟಾಪ್ 9ರಲ್ಲಿ ಗೀತಾ ತನ್ನ ಸ್ಥಾನವನ್ನು ಪಡೆದುಕೊಂಡಿದೆ. ಇದು 4.8 ಸ್ಥಾನವನ್ನು ಪಡೆದುಕೊಂಡಿದೆ. ಟಾಪ್ 10ರಲ್ಲಿ ಸ್ಥಾನಪಡೆದಹಲವು ಧಾರಾವಾಹಿಗಳು ಟಾಪ್10ರಲ್ಲಿ ರಾಮಾಚಾರಿ, ಕನ್ನಡತಿ, ಲಕ್ಷಣ, ಕೆಂಡಸಂಪಿಗೆ, ತ್ರಿಪುರ ಸುಂದರಿ ಸ್ಥಾನವನ್ನು ಪಡೆದಿವೆ.


Click it and Unblock the Notifications











