twitter
    For Quick Alerts
    ALLOW NOTIFICATIONS  
    For Daily Alerts

    Kannada TV Serials TRP: ಒಂದೇ ವಾರಕ್ಕೆ ಧಾರಾವಾಹಿಗಳ ಸ್ಥಾನಪಲ್ಲಟ: 'ಶ್ರೀರಸ್ತು ಶುಭಮಸ್ತು'ಗೆ ಎಷ್ಟನೇ ಸ್ಥಾನ?

    By ಎಸ್ ಸುಮಂತ್
    |

    ಜೀ ಕನ್ನಡದ ಸೋಶಿಯಲ್ ಮೀಡಿಯಾದಲ್ಲಿ ಹಲವು ದಿನಗಳಿಂದ ʻಶ್ರೀರಸ್ತು ಶುಭಮಸ್ತುʼ ಧಾರಾವಾಹಿಯ ಪ್ರೋಮೊ ಓಡಾಡುತ್ತಾ ಇತ್ತು. ಪ್ರೋಮೊದಲ್ಲಿ ಕಂಡ ಕಥೆಯಿಂದಾಗಿ ನೋಡುಗರು ಥ್ರಿಲ್ ಆಗಿದ್ದರು. ಮನೆಯನ್ನೇ ಪ್ರಪಂಚ ಎಂದುಕೊಂಡಿದ್ದ ಮಹಿಳೆಯರಿಗೆ ನಮ್ಮದೇ ಕಥೆ ಏನೋ ಎಂಬಂತೆ ಖುಷಿಯಾಗಿತ್ತು. ನಮ್ಮನ್ನು ಹೊಸ ಪ್ರಪಂಚಕ್ಕೆ ಕರೆದುಕೊಂಡು ಹೋಗುತ್ತಾರೆ ಎಂಬ ಕಾಯುವಿಕೆ ಜಾಸ್ತಿಯಾಗಿತ್ತು. ಇದೀಗ ಆ ಕಾತುರಕ್ಕೆ ಒಂದು ಅರ್ಥ ಸಿಕ್ಕಿದೆ.

    'ಶ್ರೀರಸ್ತು ಶುಭಮಸ್ತು' ಧಾರಾವಾಹಿ ಅಕ್ಟೋಬರ್ 31ರಿಂದಾನೇ ಪ್ರಸಾರವಾಗುತ್ತಿದೆ. ಮನೆಯನ್ನು ಬಿಟ್ಟರೆ ಬೇರೆ ಪ್ರಪಂಚವೇ ಗೊತ್ತಿಲ್ಲದ ತಾಯಿಗೆ ಮಗನೇ ದೊಡ್ಡ ಪ್ರಪಂಚ. ಮಗ ದುಡಿಯುವವನಾಗಿದ್ದರು, ಈಗಲೂ ಪಾಪುನೇ ಆಗಿದ್ದಾನೆ. ಈ ರೀತಿ ಸಾಗುತ್ತಿರುವ ಧಾರಾವಾಹಿ 'ಹಿಟ್ಲರ್ ಕಲ್ಯಾಣ' ಧಾರಾವಾಹಿಗೆ ಟಕ್ಕರ್ ಕೊಟ್ಟಿದೆ.

    ಓಟಿಟಿ ಆಯ್ತು.. ಕಿರುತೆರೆಯಲ್ಲಿ ಅಪ್ಪು ಸಿನಿಮಾ: ಮತ್ತೆ ದೇವರ ದರ್ಶನ!ಓಟಿಟಿ ಆಯ್ತು.. ಕಿರುತೆರೆಯಲ್ಲಿ ಅಪ್ಪು ಸಿನಿಮಾ: ಮತ್ತೆ ದೇವರ ದರ್ಶನ!

    'ಶ್ರೀರಸ್ತು ಶುಭಮಸ್ತು'ಗೆ ಎಷ್ಟನೇ ಸ್ಥಾನ?

    'ಶ್ರೀರಸ್ತು ಶುಭಮಸ್ತು'ಗೆ ಎಷ್ಟನೇ ಸ್ಥಾನ?

    ಆಗಾಗ 'ಹಿಟ್ಲರ್ ಕಲ್ಯಾಣ' ಧಾರಾವಾಹಿ ತನ್ನ ಸ್ಥಾನವನ್ನು ಬದಲಿಸುತ್ತಾ ಇರುತ್ತೆ. ಎಜೆ ಲವ್ವರ್ ಬಾಯ್ ರೀತಿ ಕಾಣಿಸಿಕೊಂಡಾಗ 'ಗಟ್ಟಿಮೇಳ'ವನ್ನೇ ಹಿಂದಿಕ್ಕಿ 'ಹಿಟ್ಲರ್ ಕಲ್ಯಾಣ' ಎರಡನೇ ಸ್ಥಾನಕ್ಕೆ ಬಂದಿತ್ತು. ಆದರೆ, ಈಗ ಹೊಸ ಧಾರಾವಾಹಿ ಕೂಡ 'ಹಿಟ್ಲರ್ ಕಲ್ಯಾಣ'ವನ್ನು ಹಿಂದಿಕ್ಕಿದೆ. ಮೂರನೇ ಸ್ಥಾನಕ್ಕೆ ಕುಳಿತಿದೆ. ಆದರೆ ರೇಟಿಂಗ್ ಪಾಯಿಂಟ್‌ನಲ್ಲಿ 'ಹಿಟ್ಲರ್ ಕಲ್ಯಾಣ' ಹಾಗೂ 'ಶ್ರೀರಸ್ತು ಶುಭಮಸ್ತು' ಒಂದೇ ನಂಬರ್ ನಲ್ಲಿದ್ದು, 8.7 ಪಾಯಿಂಟ್ ತೆಗೆದುಕೊಂಡಿದೆ.

    ಮನೆಗೆ ಬಂದ ಆರಾಧನಾ: ಇನ್ನಾದರೂ ಕಥೆ ಬದಲಾಗುತ್ತಾ?ಮನೆಗೆ ಬಂದ ಆರಾಧನಾ: ಇನ್ನಾದರೂ ಕಥೆ ಬದಲಾಗುತ್ತಾ?

    'ಗಟ್ಟಿಮೇಳ'ವನ್ನು ಮೆಚ್ಚಿದ ಪ್ರೇಕ್ಷಕರು

    'ಗಟ್ಟಿಮೇಳ'ವನ್ನು ಮೆಚ್ಚಿದ ಪ್ರೇಕ್ಷಕರು

    'ಗಟ್ಟಿಮೇಳ' ಧಾರಾವಾಹಿ ಪ್ರಸಾರವಾದ ಬಳಿಕ ಮೊದಲ ಸ್ಥಾನವನ್ನು ವರ್ಷಗಟ್ಟಲೇ ಕಾಪಾಡಿಕೊಂಡು ಬಂದಿತ್ತು. ಬಳಿಕ 'ಪುಟ್ಟಕ್ಕನ ಮಕ್ಕಳು' ಬಂದ ಮೇಲೆ ಆ ಧಾರಾವಾಹಿ ತನ್ನ ಮೊದಲ ಸ್ಥಾನವನ್ನು ಅಲಂಕರಿಸಿತ್ತು. ಬಳಿಕ ಹಿಂದಿರುಗಿ ನೋಡಲೇ ಇಲ್ಲ. ಆದರೆ, ಈಗ ವೇದಾಂತ್‌ಗೆ ಜೀವ ಬೆದರಿಕೆ, ತಾಯಿಯಾಗಿ ಬಂದಿರುವ ಚಂದ್ರಾಳ ನಿಜವಾದ ಮುಖ ಬಯಲಾಗುವ ಸಾಧ್ಯತೆ ಇದೆ. ಹೀಗಾಗಿ ಈ ಎಲ್ಲಾ ಸವಾಲುಗಳಿಂದ 'ಗಟ್ಟಿಮೇಳ', 'ಪುಟ್ಟಕ್ಕನಿಗೆ ಸರಿಸಮನಾಗಿ ಬರುತ್ತಿದೆ. ಇನ್ನು ಪುಟ್ಟಕ್ಕನ ಮಕ್ಕಳಲ್ಲಿ ಬಂಗಾರಮ್ಮನಿಗೆ ಸೊಸೆಯಾಗಿ ಬರುವುದು ಗಟ್ಟಿಗಿತ್ತಿ ಎಂಬುದು ಪ್ರೂವ್ ಆಗಿದೆ.

    ರಾಧಿಕಾಗೆ ಉಘೇ ಉಘೇ

    ರಾಧಿಕಾಗೆ ಉಘೇ ಉಘೇ

    ಮಹಿಳಾ ಪ್ರಧಾನ ಧಾರಾವಾಹಿಗಳು ಎಂದರೆ ಎಲ್ಲರಿಗೂ ಇಷ್ಟವಾಗುತ್ತದೆ. ಇದೀಗ ಉದಯ ಟಿವಿಯಲ್ಲಿ ಮೂಡಿ ಬರುತ್ತಿರುವ ರಾಧಿಕಾ ಧಾರಾವಾಹಿಯನ್ನು ಅಷ್ಟೇ ಮನಸ್ಸಾರೆ ನೋಡಿ ಹರಸಿ, ಹಾರೈಸುತ್ತಿದ್ದಾರೆ. ಮನೆಗಾಗಿ ದುಡಿಯುವ ಮಗಳು, ತಂಗಿಯ ಮದುವೆಗಾಗಿ ತನ್ನೆಲ್ಲಾ ಆಸೆಯನ್ನು ಕಳೆದುಕೊಳ್ಳುತ್ತಾಳೆ. ಇಷ್ಟೆಲ್ಲಾ ಇದ್ದಾಗಲೂ ಚಿಕ್ಕಪ್ಪನಾದವನು ಹೇಗೆಲ್ಲಾ ತೊಂದರೆ ಕೊಡುತ್ತಾನೆ ಎಂಬುದೇ ಸಿನಿಮಾದಲ್ಲಿ ಇರುವ ಕಥೆಯಾಗಿದೆ. ಹೀಗಾಗಿ ರಾಧಿಕಾಳನ್ನು ನೋಡುವಾಗ ಅದೆಷ್ಟೋ ಮಂದಿ ತಮ್ಮ ಕಷ್ಟವನ್ನು ನೆನೆದು ನೋಡುತ್ತಾರೆ.

    'ಜೇನುಗೂಡು' ಮನೆಯವರಿಗೆ ಮನಸೋತ ಮಂದಿ

    'ಜೇನುಗೂಡು' ಮನೆಯವರಿಗೆ ಮನಸೋತ ಮಂದಿ

    ಸ್ಟಾರ್ ಸುವರ್ಣದಲ್ಲಿಯೂ ಹಲವು ಧಾರಾವಾಹಿಗಳು ಇದೆ. ಅದರಲ್ಲಿ ಭಕ್ತಿ ಭಾವದಿಂದ ಮೂಡಿ ಬರುತ್ತಿರುವ 'ಯಡಿಯೂರು ಶ್ರೀ ಸಿದ್ದಲಿಂಗೇಶ್ವರ' ಧಾರಾವಾಹಿಯನ್ನು ಜನ ಈಗಲೂ ನೋಡುತ್ತಿದ್ದಾರೆ. ಮೊದಲಿನಿಂದಲೂ ಸ್ಟಾರ್ ಸುವರ್ಣ ಧಾರಾವಾಹಿಗಳಿಗೆ ಹೋಲಿಸಿಕೊಂಡರೆ ಅದೇ ಮೊದಲ ಸ್ಥಾನದಲ್ಲಿದೆ. ಇನ್ನು 'ಜೇನುಗೂಡು' ಎರಡನೇ ಸ್ಥಾನದಲ್ಲಿದ್ದು, 'ಬೆಟ್ಟದ ಹೂ'ಗೂ ಮನಸೋತಿದ್ದಾರೆ.

    English summary
    Kannada TV Serials BARC TRP Ratings Of This Week 10th November 2022, Know More.
    Thursday, November 10, 2022, 23:11
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X