Don't Miss!
- Lifestyle
2023ರಲ್ಲಿ ರಾಜಯೋಗದಿಂದಾಗಿ ಈ 4 ರಾಶಿಯವರಿಗೆ ಮುಟ್ಟಿದ್ದೆಲ್ಲಾ ಚಿನ್ನವಾಗಲಿದೆ
- News
Assembly elections: ಚುನಾವಣೆಯಲ್ಲಿ ಜೆಡಿಎಸ್ 20 ರಿಂದ 22 ಸ್ಥಾನ ಗೆಲ್ಲಬಹುದು; ಸಿದ್ದರಾಮಯ್ಯ ಭವಿಷ್ಯ
- Sports
Ind vs NZ 1st ODI: ಟೀಮ್ ಇಂಡಿಯಾಗೆ ಗೆಲ್ಲಲು ಸವಾಲಿನ ಗುರಿ ನೀಡಿದ ನ್ಯೂಜಿಲೆಂಡ್
- Automobiles
ಬೆಲೆ ಏರಿಕೆ ಪಡೆದುಕೊಂಡ ಜನಪ್ರಿಯ ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್
- Finance
7th Pay Commission: ನೌಕರರಿಗೆ ಸಿಹಿ ಸುದ್ದಿ: ಬಾಕಿ DA ಹಣ ನೀಡಲು ಕೇಂದ್ರ ಸರ್ಕಾರ ನಿರ್ಧಾರ, ಹೇಗೆ?
- Technology
ವಾಟ್ಸಾಪ್ನ ಈ ಹೊಸ ಫೀಚರ್ಸ್ನಲ್ಲಿ ಏನೆಲ್ಲಾ ಅನುಕೂಲ ಇದೆ ಗೊತ್ತಾ!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Kannada TV Serials TRP: 'ಗಟ್ಟಿಮೇಳ' ನಂ 1.. ಉಳಿದ ಸ್ಥಾನದಲ್ಲಿರೋ ಧಾರಾವಾಹಿಗಳಾವುವು?
ವಾರಕ್ಕೊಮ್ಮೆ ಧಾರಾವಾಹಿಗಳ ರೇಟಿಂಗ್ ಹೆಚ್ಚು ಕಡಿಮೆ ಆಗುತ್ತಲೇ ಇರುತ್ತದೆ. ಮೊದ ಮೊದಲಿಗೆ ಲೈಕ್ ಆದ ಧಾರಾವಾಹಿಯ ಕಥೆಗಳು ಆಮೇಲೆ ಆಮೇಲೆ ಬೋರ್ ಹೊಡೆಸುವುದಕ್ಕೂ ಆರಂಭಿಸುತ್ತವೆ. ಕಥೆ ಸ್ಟ್ರಾಂಗ್ ಇದ್ದು, ಒಳ್ಳೆ ತಿರುವಿನಲ್ಲಿ, ನೋಡುಗರನ್ನು ಕರೆದುಕೊಂಡು ಹೋಗುತ್ತಾ ಇದ್ದರೆ ವರ್ಷವಲ್ಲ ಎರಡು ವರ್ಷವಾದರೂ ರಿಮೋಟ್‌ನಲ್ಲಿ ನಂಬರ್ ಬದಲಾಗುವುದಿಲ್ಲ.
ಹೀಗೆ ಪ್ರೇಕ್ಷಕನ ಮನಸ್ಥಿತಿ ಅರಿತು ಕಥೆ ಹೆಣೆಯುವವನೇ ಜಾಣ. ಆದರೆ ಈಗಂತೂ ಕಾಂಪಿಟೇಷನ್ ಯುಗವಾದ್ದರಿಂದ ಇದು ಕೊಂಚ ಕಷ್ಟವೇ. ಆದರೂ ಇರುವ ಮನರಂಜನೆಯ ಚಾನೆಲ್‌ಗಳು ಆದಷ್ಟು ಜನರ ಮನಸ್ಸಿಗೆ ಹತ್ತಿರವಾದ ಧಾರಾವಾಹಿಗಳನ್ನು ನೀಡುವುದಕ್ಕೆ ಪ್ರಯತ್ನ ನಡೆಸುತ್ತಿವೆ. ಈ ವಾರದ ಟಿಆರ್‌ಪಿ ಬಂದಿದ್ದು, ಕೊಂಚ ಆ ಕಡೆ ಈ ಕಡೆ ವಾಲಿದೆ.
BBK9
:
ಬಿಗ್
ಬಾಸ್ನಲ್ಲಿ
ಹಳೆ
ಫರೆಂಡ್
ಕಂಡು
ಫುಲ್
ಖುಷಿಯಾದ
ದಿವ್ಯಾ
ಉರುಡುಗ!

ಪುಟ್ಟಕ್ಕ ಹಿಂದೆ ಬಿದ್ದಿದ್ದೇಕೆ?
'ಪುಟ್ಟಕ್ಕನ ಮಕ್ಕಳು' ಧಾರಾವಾಹಿ ಆರಂಭವಾಗಿ ವರ್ಷಗಳು ತುಂಬಿವೆ. ಆದರೂ ಯಾವತ್ತಿಗೂ ನಂಬರ್ ಒನ್ ಸ್ಥಾನವನ್ನು ಬಿಟ್ಟುಕೊಟ್ಟ ಉದಾಹರಣೆಯೇ ಇಲ್ಲ. ಆದರೆ ಅದ್ಯಾಕೋ ಏನೋ ಈ ವಾರ ತನ್ನ ನಂಬರ್ ಸ್ಥಾನದಿಂದ ಕೆಳಗೆ ಇಳಿದು ಬಿಟ್ಟಿದೆ. ದೊರೆ ಯಾರು ಎಂದು ಸ್ನೇಹಾಗೆ ಗೊತ್ತಾಗಿದೆ. ಆದರೂ ಕಂಠಿಯನ್ನು ಆಟವಾಡಿಸುತ್ತಿದ್ದಾಳೆ. ಇನ್ನು ಸಹನಾ ಮತ್ತು ಮುರುಳಿ ಮೇಷ್ಟ್ರ ಮದುವೆಗೆ ಮನೆಯವರು ಒಪ್ಪದೆ ಒದ್ದಾಡುತ್ತಿದ್ದಾರೆ. ಕಥೆ ಹೀಗೆ ಸಾಗುತ್ತಿದ್ದು, ಈ ವಾರ 9.4 ಪಾಯಿಂಟ್ ತೆಗೆದುಕೊಳ್ಳುವ ಮೂಲಕ ಎರಡನೇ ಸ್ಥಾನಕ್ಕೆ ಬಂದು ನಿಂತಿದೆ.

ಇದ್ದಕ್ಕಿದ್ದ ಹಾಗೇ ಮೇಲೆರಿದ 'ಗಟ್ಟಿಮೇಳ'
'ಗಟ್ಟಿಮೇಳ' ಧಾರಾವಾಹಿ ಆರಂಭವಾಗಿ ಮೂರು ವರ್ಷ. ಆದರೂ ತನ್ನ ವರ್ಚಸ್ಸನ್ನು ಕಡಿಮೆ ಮಾಡಿಕೊಂಡಿಲ್ಲ ಎಂಬುದೇ ಖುಷಿಯ ವಿಚಾರ. 'ಪುಟ್ಟಕ್ಕನ ಮಕ್ಕಳು' ಬರುವುದಕ್ಕೂ ಮುನ್ನ ಮೊದಲ ಸ್ಥಾನದಲ್ಲಿಯೇ ಇದ್ದ 'ಗಟ್ಟಿಮೇಳ' ಬಳಿಕ ಎರಡನೇ ಸ್ಥಾನಕ್ಕೆ ಹೋಗಿತ್ತು. ಆಗಾಗ ಕಥೆಯ ಬದಲಾವಣೆಯಿಂದ ಮೂರನೇ ಸ್ಥಾನಕ್ಕೂ ಹೋಗುತ್ತಾ ಇತ್ತು. ಆದರೆ ದಿಢೀರ್ ಬೆಳವಣಿಗೆ ಎಂಬಂತೆ ಮೊದಲ ಸ್ಥಾನವನ್ನು ಅಲಂಕರಿಸಿ ಬಿಟ್ಟಿದೆ. ಸದ್ಯಕ್ಕೆ ಅಮೂಲ್ಯ ಮುನಿಸಿಕೊಂಡು ತವರು ಮನೆ ಸೇರಿದ್ದಾರೆ. ವೇದಾಂತ್, ಅಮೂಲ್ಯ ಮನವೊಲಿಕೆ ಹರಸಾಹಸ ಪಡುತ್ತಿದ್ದಾರೆ. ಈ ಕಥೆಯೇ ಪ್ರೇಕ್ಷಕರನ್ನು ಹಿಡಿದಿಟ್ಟಿದೆ. ಹೀಗಾಗಿ 9.6 ಅಂಕ ಪಡೆದಿದೆ. ಉಳಿದಂತೆ 'ಶ್ರೀರಸ್ತು ಶುಭಮಸ್ತು' 8.6 ಪಡೆದು ಮೂರನೇ ಸ್ಥಾನದಲ್ಲಿದೆ.

ಭಕ್ತಿಗೆ ಜೈ ಎಂದ ನೋಡುಗರು
ಇನ್ನು ಸ್ಟಾರ್ ಸುವರ್ಣದಲ್ಲಿ ಪ್ರತಿ ವಾರದಂತೆ ಈ ವಾರವೂ ಭಕ್ತಿ ಪ್ರಧಾನ ಧಾರಾವಾಹಿಗೆ ನೋಡುಗರು ಜೈ ಎಂದಿದ್ದಾರೆ. 'ಎಡಿಯೂರು ಶ್ರೀ ಸಿದ್ದಲಿಂಗೇಶ್ವರ' ಧಾರಾವಾಹಿಗೆ 3.4 ಅಂಕ ಬಂದಿದೆ. ಅದರ ಜೊತೆಗೆ 'ಮುದ್ದುಮಣಿಗಳು', 'ಮನಸೆಲ್ಲಾ ನೀನೆ', 'ಮರಳಿ ಮನಸಾಗಿದೆ' ಧಾರಾವಾಹಿಯನ್ನು ಮೆಚ್ಚಿಕೊಂಡಿದ್ದಾರೆ. ಇನ್ನು ಹೊಸದಾಗಿ ಶುರುವಾಗಿರುವ 'ಕಥೆಯೊಂದು ಶುರುವಾಗಿದೆ' ಧಾರಾವಾಹಿಗೂ ಜನರ ಆಶೀರ್ವಾದ ಸಿಕ್ಕಿದೆ.

'ರಾಧಿಕಾ' ಈಗ ಅಚ್ಚು ಮೆಚ್ಚು
ಮಗಳು ಎಂದರೆ 'ರಾಧಿಕಾ' ರೀತಿ ಇರಬೇಕು ಅಂತ ಅದೆಷ್ಟು ತಾಯಂದಿರು ಅಂದುಕೊಳ್ಳುತ್ತಾರೋ ಏನೋ. ಧಾರಾವಾಹಿ ಕೂಡ ಅದೇ ರೀತಿಯಲ್ಲಿ ಇದೆ. ಹೀಗಾಗಿ ಮೊದಲಿನಿಂದಾನೂ 'ರಾಧಿಕಾ' ಧಾರಾವಾಹಿ ಉದಯ ಟಿವಿಯಲ್ಲಿ ನಂಬರ್ ಒನ್ ಸ್ಥಾನವನ್ನು ಭದ್ರ ಮಾಡಿಕೊಂಡು ಬಂದಿದೆ. ಅದರ ಜೊತೆಗೆ ತಂದೆ ಮಗಳ ಬಾಂಧವ್ಯ ಸಾರುವ 'ಜನನಿ'ಯನ್ನು ಜನ ಮೆಚ್ಚಿಕೊಂಡಿದ್ದಾರೆ.