Kannada Serials TRP : ಈ ವಾರ ನಂಬರ್ ಒನ್ ಸ್ಥಾನದಲ್ಲಿರೋ ಧಾರಾವಾಹಿ ಯಾವುದು?
ಇತ್ತೀಚೆಗಿನ ಧಾರಾವಾಹಿಗಳು ಮನೆ ಮನವನ್ನು ಆವರಿಸಿಕೊಂಡು ಬಿಟ್ಟಿವೆ. ಮನೆಯಲ್ಲಿಯೇ ಇರುವ ವಯಸ್ಸಾದವರು, ಕೆಲಸ ಮುಗಿಸಿ ಸಂಜೆ ಬರುವ ಮಹಿಳೆಯರು, ಮನರಂಜನೆಗಾಗಿ ಧಾರಾವಾಹಿಗಳನ್ನು ನೋಡುವ ಮಹಿಳೆಯರು ಹೀಗೆ ಅನೇಕರ ಪಾಲಿನ ಮಸ್ತ್ ಮನರಂಜನೆ ಎಂದರೆ ಅದು ಧಾರಾವಾಹಿ. ನೋಡುಗರು ಜಾಸ್ತಿಯಾಗಿರುವ ಕಾರಣ ಧಾರಾವಾಹಿಯ ನಿರ್ಮಾಣದಲ್ಲೂ ಕಾಂಪಿಟೇಷನ್ ಆರಂಭವಾಗಿದೆ.
ಒಂದಕ್ಕಿಂತ ಒಂದು ಧಾರಾವಾಹಿಯನ್ನು ಚೆನ್ನಾಗಿಯೇ ನೀಡಬೇಕಾದ ಅನಿವಾರ್ಯತೆ ಚಾನೆಲ್‌ಗಳಿಗಿವೆ. ಹೀಗಾಗಿಯೇ ಜೀ ಕನ್ನಡ, ಸ್ಟಾರ್ ಸುವರ್ಣ, ಉದಯ ಟಿವಿ ಸೇರಿದಂತೆ ದುಬಾರಿ ಮೊತ್ತದಲ್ಲಿಯೇ ಧಾರಾವಾಹಿಗಳನ್ನು ತಯಾರು ಮಾಡುತ್ತಿದೆ. ಧಾರಾವಾಹಿ ದೃಶ್ಯ, ಕಥೆಯಲ್ಲಿ ಟ್ವಿಸ್ಟ್, ಪಾತ್ರಗಳ ಆಯ್ಕೆ ಹೀಗೆ ಯಾವುದರಲ್ಲೂ ಜೀ ಕನ್ನಡ ಕಾಂಪ್ರಮೈಸ್ ಆಗಿಲ್ಲ. ಇದೇ ಕಾರಣಕ್ಕೆ ಟಿಆರ್‌ಪಿಯಲ್ಲಿ ನಂಬರ್ ಒನ್ ಸ್ಥಾನವನ್ನು ಉಳಿಸಿಕೊಂಡು ಬಂದಿದೆ.

ಮತ್ತೆ TRP ಏರಿಸಿಕೊಂಡ 'ಪುಟ್ಟಕ್ಕನ ಮಕ್ಕಳು'
'ಪುಟ್ಟಕ್ಕನ ಮಕ್ಕಳು' ಧಾರಾವಾಹಿ ಆರಂಭ ಆದಾಗಿನಿಂದ ಇಂದಿನವರೆಗೂ ಎಲ್ಲರ ಮನಸ್ಸನ್ನು ಹಿಡಿದಿಟ್ಟುಕೊಂಡಿದೆ. ಬಡತನ, ಸ್ವಾಭಿಮಾನ, ಮಕ್ಕಳ ಭವಿಷ್ಯ, ಗಟ್ಟಿ ಹೆಣ್ಣು ಈ ವಿಚಾರಗಳು ನೋಡುಗರನ್ನು ನಮ್ಮ ಅಕ್ಕ ಪಕ್ಕದ ಮನೆಯವರ ಸಮಸ್ಯೆ ಏನೋ ಎಂಬಂತೆ ಬಿಂಬಿತವಾಗಿ ಬಿಟ್ಟಿದೆ. ಶುರುವಾದಾಗಿನಿಂದ 9.7 TRPಯನ್ನೇ ಉಳಿಸಿಕೊಂಡಿದ್ದ 'ಪುಟ್ಟಕ್ಕನ ಮಕ್ಕಳು' ಅದ್ಯಾಕೋ ಕಳೆದ ಎರಡು ವಾರದಿಂದ 9ರಿಂದ ಕೆಳಗೆ ಕುಸಿತ ಕಂಡಿತ್ತು. ಆದ್ರೀಗ ಮತ್ತೆ ತನ್ನ ಹಳೆಯ ಸ್ಥಾನಕ್ಕೆ ಮರಳಿದೆ. ಈ ವಾರ TRPಯಲ್ಲಿ 9.7 ಅಂಕ ಪಡೆದಿದೆ. ಸದ್ಯ ಸಹನಾ ಮತ್ತು ಮುರುಳಿ ಮೇಷ್ಟ್ರ ಪ್ರೀತಿಗೆ ಪರ್ಮಿಷನ್ ಸಿಕ್ಕಿದ್ದು, ಕಂಠಿ ಮೇಲೆ ಸ್ನೇಹಾಗೂ ಲವ್ವಾಗಿದೆ.

'ಹಿಟ್ಲರ್ ಕಲ್ಯಾಣ' ಹಿಂದಿಕ್ಕಿದ 'ಗಟ್ಟಿಮೇಳ'
ಕಳೆದ ಎರಡು ವಾರದಿಂದ 'ಗಟ್ಟಿಮೇಳ' ಧಾರಾವಾಹಿ ತನ್ನ ಎರಡನೇ ಸ್ಥಾನದಿಂದ ಕುಸಿದು ಮೂರನೇ ಸ್ಥಾನಕ್ಕೆ ಬಂದಿತ್ತು. ಇದೀಗ 'ಗಟ್ಟಿಮೇಳ'ದಲ್ಲಿ ಹಲವು ಟ್ವಿಸ್ಟ್ ಅಂಡ್ ಟರ್ನಿಂಗ್ ಪಾಯಿಂಟ್‌ಗಳು ಬಂದಿದ್ದು, ಮತ್ತೆ ತನ್ನ ಸ್ಥಾನವನ್ನು ಕಬಳಿಸಿಕೊಂಡಿದೆ. ಈ ವಾರ 8.7 ಪಾಯಿಂಟ್ ತೆಗೆದುಕೊಳ್ಳುವ ಮೂಲಕ ಮತ್ತೆ ಎರಡನೇ ಸ್ಥಾನಕ್ಕೆ ಮರಳಿದೆ. ಸದ್ಯ ನಕಲಿ ಅಮ್ಮ ಹಾಗೂ ಅಸಲಿ ಅಮ್ಮನ ಗುರುತು ಪತ್ತೆ ಹಚ್ಚಬೇಕಿದೆ. ಅಜ್ಜಿಗೆ ಕಣ್ಣು ಬಂದಿದೆ. ಈಗ ಸತ್ಯ ಗೊತ್ತಾದರೆ ಯಾರ ಪ್ರಾಣಕ್ಕೆ ಅಪಾಯವಿದೆ ಎಂಬ ಕುತೂಹಲ ನೋಡುಗರನ್ನು ಕಾಡುತ್ತಿದೆ. ಇನ್ನು ಲವ್ವರ್ ಬಾಯ್ ಆಗಿ ಕಾಣಿಸಿಕೊಂಡಿದ್ದ ಎಜೆಯನ್ನು ಮೆಚ್ಚಿಕೊಂಡಿದ್ದ ಜನ ಎರಡನೇ ಸ್ಥಾನ ನೀಡಿದ್ದರು. ಆದರೆ, ಈ ವಾರ 'ಹಿಟ್ಲರ್ ಕಲ್ಯಾಣ' ಸೀರಿಯಲ್ ಮೂರನೇ ಸ್ಥಾನಕ್ಕೆ ಇಳಿದಿದೆ.

ಸ್ಟಾರ್ ಸುವರ್ಣದಲ್ಲಿ ನಂ 1 ಧಾರಾವಾಹಿ ಯಾವುದು?
ಸ್ಟಾರ್ ಸುವರ್ಣದಲ್ಲೂ ಬೆಳಗ್ಗೆಯಿಂದ ಸಂಜೆವರೆಗೂ ಅದ್ಭುತ ಧಾರಾವಾಹಿಗಳು ಮೂಡಿ ಬರುತ್ತಿವೆ. ಒಂದೊಂದು ಧಾರಾವಾಹಿಯೂ ಒಂದೊಂದು ರೀತಿಯ ಕಥೆಯನ್ನು ಹೊಂದಿವೆ. ಅದರಲ್ಲಿ 'ಯಡಿಯೂರು ಶ್ರೀ ಸಿದ್ದಲಿಂಗೇಶ್ವರ' ಧಾರಾವಾಹಿಯನ್ನು ಜನ ಭಕ್ತಿಯಿಂದ ನೋಡುತ್ತಿದ್ದಾರೆ. ಅದರ ಜೊತೆಗೆ ಈ ವಾರ 'ಜೇನುಗೂಡು', 'ಬೆಟ್ಟದ ಹೂ' ಧಾರಾವಾಹಿಗೂ ಫಿದಾ ಆಗಿದ್ದಾರೆ.

ತಂಗಿಯ ಮದುವೆಗಾಗಿ ರಾಧಿಕಾ ಪರದಾಟ
ಉದಯ ಟಿವಿಯಲ್ಲಿ ಮೂಡಿ ಬರುತ್ತಿರುವ ರಾಧಿಕಾ ಧಾರಾವಾಹಿ ಮಹಿಳಾ ಪ್ರಧಾನವಾದ ಧಾರಾವಾಹಿ. ಇದರಲ್ಲಿ ರಾಧಿಕಾ ಛಲಗಾತಿ. ಸ್ವಂತ ದುಡಿಮೆಯಲ್ಲಿ ತನ್ನ ಮನೆ ನಿಭಾಯಿಸುತ್ತಿದ್ದಾಳೆ. ಇದು ದೊಡ್ಡಪ್ಪನಿಗೆ ಕೋಪ. ತನ್ನ ಬಳಿ ಸಹಾಯಕರಾಗಿ ಇರಬೇಕು ಎಂದು ಬಯಸುವ ದೊಡ್ಡಪ್ಪ, ಹಠದಿಂದ ತಂಗಿ ಮದುವೆಯನ್ನು ಮಾಡಲು ಹೊರಟಿರುವ ರಾಧಿಕಾಳಿಗೆ ತೊಂದರೆ ಕೊಡುತ್ತಲೆ ಇದ್ದಾನೆ. ಈ ವಾರ ರಾಧಿಕಾಳ ಈ ಸಂಕಟಕ್ಕೆ ಜನರ ಬೆಂಬಲ ಸಿಕ್ಕಿದೆ.


Click it and Unblock the Notifications











