For Quick Alerts
  ALLOW NOTIFICATIONS  
  For Daily Alerts

  Kannada TV Serials TRP Rating 'ಪುಟ್ಟಕ್ಕನ ಮಕ್ಕಳಿ'ಗೆ ಸರಿ ಸಮನವಾಗಿ ಸವಾಲೊಡ್ಡುತ್ತಿದೆ 'ಗಟ್ಟಿಮೇಳ'!

  By ಎಸ್ ಸುಮಂತ್
  |

  ದಿನೇ ದಿನೇ ಧಾರಾವಾಹಿಗಳಲ್ಲಿಯೂ ಕಾಂಪಿಟೇಷನ್ ಶುರುವಾಗಿದೆ. ಜೀ ಕನ್ನಡ, ಕಲರ್ಸ್ ಕನ್ನಡ, ಉದಯ ಟಿವಿ, ಸ್ಟಾರ್ ಸುವರ್ಣ ಹೀಗೆ ಇರುವ ಮನರಂಜನಾ ಧಾರಾವಾಹಿಗಳು ಕೂಡ ಜನರನ್ನು ಹಿಡಿದಿಟ್ಟುಕೊಳ್ಳುವುದಕ್ಕೆ ಸಾಕಷ್ಟು ಪ್ರಯತ್ನ ನಡೆಸುತ್ತಿವೆ. ಅದಕ್ಕೆ ಆಗಾಗ ಧಾರಾವಾಹಿಯಲ್ಲಿ ಕಥೆಯನ್ನೇ ಬದಲಾವಣೆ ಮಾಡಿಕೊಳ್ಳುತ್ತಾರೆ.

  ಈಗಂತು ಸೋಶಿಯಲ್ ಮೀಡಿಯಾ ಹಾವಳಿ ಜೋರಾಗಿದೆ. ರೀಲ್ಸ್ ನಂತ ಮನರಂಜನೆಯ ಕ್ಷೇತ್ರದಿಂದ ಜನರನ್ನು ಟಿವಿಯತ್ತ ಸೆಳೆಯುವುದು ಸುಲಭದ ಕೆಲಸವೇನು ಅಲ್ಲ. ಹೀಗಾಗಿ ಒಂದಷ್ಟು ಇಂಟ್ರೆಸ್ಟಿಂಗ್ ಎನಿಸುವಂತಹ ಧಾರಾವಾಹಿಗಳನ್ನೇ ನೀಡುತ್ತಾ, ಚಾನೆಲ್‌ಗಳು ಸ್ಪರ್ಧೆಯೊಡ್ಡುತ್ತಾ ಬಂದಿವೆ.

  ಮದುವೆಯಾಗುವುದು ನನ್ನ ದೊಡ್ಡ ಕನಸು, ಅದನ್ನು ನನಸು ಮಾಡಿಕೊಳ್ಳುತ್ತೇನೆ; ಕಾಂಟ್ರವರ್ಸಿಗೆ ಬ್ರೇಕ್ ಹಾಕಿದ ವೈಷ್ಣವಿ!ಮದುವೆಯಾಗುವುದು ನನ್ನ ದೊಡ್ಡ ಕನಸು, ಅದನ್ನು ನನಸು ಮಾಡಿಕೊಳ್ಳುತ್ತೇನೆ; ಕಾಂಟ್ರವರ್ಸಿಗೆ ಬ್ರೇಕ್ ಹಾಕಿದ ವೈಷ್ಣವಿ!

  ಇದ್ದಕ್ಕಿದ್ದ ಹಾಗೇ ಏರಿಕೆ ಕಂಡ ಪುಟ್ಟಕ್ಕನ ಟಿಆರ್‌ಪಿ

  ಇದ್ದಕ್ಕಿದ್ದ ಹಾಗೇ ಏರಿಕೆ ಕಂಡ ಪುಟ್ಟಕ್ಕನ ಟಿಆರ್‌ಪಿ

  'ಪುಟ್ಟಕ್ಕನ ಮಕ್ಕಳು' ಧಾರಾವಾಹಿ ಶುರುವಾದಾಗಿನಿಂದ ಮೊದಲ ಸ್ಥಾನದಲ್ಲಿಯೇ ನಿಂತಿದೆ. ಆರಂಭದಿಂದ ಇಂದಿನವರೆಗೆ ಎಲ್ಲೋ ಒಂದು ವಾರವಷ್ಟೇ 1 ಪಾಯಿಂಟ್ ಕೆಳಗೆ ಇಳಿದಿದ್ದದ್ದು. ಈಗ ಮತ್ತೆ ಏರಿಕೆ ಕಂಡಿದೆ. 10.7 ಪಾಯಿಂಟ್ ರೇಟಿಂಗ್‌ನಲ್ಲಿ ಕೂತಿದೆ ಪುಟ್ಟಕ್ಕನ ಮಕ್ಕಳು. ಸ್ನೇಹಾ ಮತ್ತು ಕಂಠಿ ಪ್ರೀತಿ, ಕಂಠಿ ಮೇಲೆ ಅಟ್ಯಾಕ್ ಮಾಡಿದ ಕಾಳಿ, ಕಂಠಿಯ ಹಾರೈಕೆಯಲ್ಲಿ ಕಾಳಜಿ ತೋರಿಸಿದ ಸ್ನೇಹಾ, ಸುಮಾಳ ಖೋ ಖೋ ಪಂದ್ಯ, ಸಹನಾಳ ಮದುವೆ ಹೀಗೆ ನಾನಾ ಕಾರಣದಿಂದ 'ಪುಟ್ಟಕ್ಕನ ಮಕ್ಕಳು' ಮೊದಲ ಸ್ಥಾನವನ್ನು ಉಳಿಸಿಕೊಂಡಿದೆ.

  ಕುತೂಹಲ ಕೆರಳಿಸಿದ್ದ ವೇದಾಂತ್ ಕಿಡ್ನ್ಯಾಪ್

  ಕುತೂಹಲ ಕೆರಳಿಸಿದ್ದ ವೇದಾಂತ್ ಕಿಡ್ನ್ಯಾಪ್

  ಜೀ ಕನ್ನಡದಲ್ಲಿ 'ಪುಟ್ಟಕ್ಕನ ಮಕ್ಕಳು' ಹಾಗೂ 'ಗಟ್ಟಿಮೇಳ' ಧಾರಾವಾಹಿ ಸಮಾನವಾಗಿವೆ. ಎರಡು ಧಾರಾವಾಹಿಯನ್ನು ಜನ ಹೆಚ್ಚು ಮೆಚ್ಚಿಕೊಂಡಿದ್ದಾರೆ. 'ಗಟ್ಟಿಮೇಳ' ಧಾರಾವಾಹಿ ಕೂಡ 10.1 ಪಾಯಿಂಟ್ ಪಡೆದುಕೊಂಡಿದೆ. ಎರಡು ವರ್ಷಗಳಿಗಿಂತ ಹೆಚ್ಚಿನ ಸಮಯದಿಂದಾನು ಈ ಧಾರಾವಾಹಿ ಮೂಡಿ ಬರುತ್ತಿದೆ. ಈ ಮೂಲಕ ವೇದಾಂತ್ ಕಿಡ್ನ್ಯಾಪ್ ಆದ ದಿನಗಳು, ಅಮೂಲ್ಯ ಮತ್ತು ವೇದಾಂತ್ ವಿವಾಹ ವಾರ್ಷಿಕೋತ್ಸವ ಹೀಗೆ ಹಲವು ಇಂಟ್ರೆಸ್ಟಿಂಗ್ ಕಥೆಯಿಂದ ಜನರ ಗಮನ ಸೆಳೆದಿದೆ. ಇನ್ನು ಈ ವಾರದಿಂದ ನಿಜವಾದ ವೈದೇಹಿ ಯಾರು ಎಂಬ ಕಥೆಗೂ ಟ್ವಿಸ್ಟ್ ಸಿಗುವ ಸಾಧ್ಯತೆ ಇದೆ. ಹೀಗಾಗಿ ಈ ವಾರವೂ ತನ್ನ ಟಿಆರ್‌ಪಿಯನ್ನು ಉಳಿಸಿಕೊಳ್ಳಲಿದೆ 'ಗಟ್ಟಿಮೇಳ'.

  ರಾಧಿಕಾಳನ್ನು ಮೆಚ್ಚಿಕೊಂಡ ಪ್ರೇಕ್ಷಕ

  ರಾಧಿಕಾಳನ್ನು ಮೆಚ್ಚಿಕೊಂಡ ಪ್ರೇಕ್ಷಕ

  ಉದಯ ಟಿವಿಯಲ್ಲಿ ರಾಧಿಕಾ ಧಾರಾವಾಹಿ ಮೊದಲಿನಿಂದಾನು ಒಂದೊಳ್ಳೆ ಸ್ಥಾನ ಉಳಿಸಿಕೊಂಡಿದೆ. ಹಾಗೋ ಹೀಗೋ ಕಷ್ಟಪಟ್ಟು ತಂಗಿ ಘಮ್ಯ ಮದುವೆಯನ್ನು ರಾಧಿಕಾ ಮಾಡಿ ಆಗಿದೆ. ಆದ್ರೆ ಅತ್ತೆಯ ಡಿಮ್ಯಾಂಡ್ ಸ್ವಲ್ಪ ಜಾಸ್ತಿಯೇ ಇದೆ. ಚಿನ್ನ ತರಲು ಆಗದೆ ಇತ್ತ ರಾಧಿಕಾ ಕೂಡ ಒದ್ದಾಡುತ್ತಿದ್ದಾಳೆ. ರಾಧಿಕಾಳ ಪ್ರೀತಿ ಸಿಗದೆ ಆ ಕಡೆ ಚಿರಂತ್ ಕೂಡ ಒದ್ದಾಡುತ್ತಿದ್ದಾನೆ. ಈ ಎಲ್ಲಾ ಸಮಸ್ಯೆಗಳ ಜೊತೆಗೆ ಚಿಕ್ಕಪ್ಪ ಮತ್ತು ಆಸ್ಪತ್ರೆಯ ಸೀನಿಯರ್ ಡಾಕ್ಟರ್ ಕೂಡ ರಾಧಿಕಾಳಿಗೆ ಟಾರ್ಚರ್ ಕೊಡುತ್ತಿದ್ದಾನೆ.

  'ಕಥೆಯೊಂದು ಶುರುವಾಗಿದೆ' ಧಾರಾವಾಹಿಗೆ ಫಿದಾ ಆದ ಜನ

  'ಕಥೆಯೊಂದು ಶುರುವಾಗಿದೆ' ಧಾರಾವಾಹಿಗೆ ಫಿದಾ ಆದ ಜನ

  ಸ್ಟಾರ್ ಸುವರ್ಣ ಧಾರಾವಾಹಿಯಲ್ಲಿ ಈಗಾಗಲೇ ಸಾಕಷ್ಟು ಮನ ಮುಟ್ಟುವಂತ ಧಾರಾವಾಹಿಗಳು ಮೂಡಿ ಬರುತ್ತಿವೆ. 'ಯಡೆಯೂರು ಶ್ರೀ ಸಿದ್ದಲಿಂಗೇಶ್ವರ' ಧಾರಾವಾಹಿ ನಂಬರ್ ಒನ್ ಸ್ಥಾನ ಉಳಿಸಿಕೊಂಡಿದ್ದು, ಅದರ ಜೊತೆಗೆ 'ಮನಸೆಲ್ಲಾ ನೀನೆ' ಧಾರಾವಾಹಿ ಎಲ್ಲರ ಅಚ್ಚುಮೆಚ್ಚಾಗಿದೆ. 'ಬೆಟ್ಟದ ಹೂ', 'ಜೇನುಗೂಡು' ಹೀಗೆ ಹಲವು ಹಿಟ್ ಧಾರಾವಾಹಿಗಳು ಇರುವಾಗಲೇ 'ಕಥೆಯೊಂದು ಶುರುವಾಗಿದೆ' ಧಾರಾವಾಹಿ ಇತ್ತೀಚೆಗೆ ಆರಂಭವಾಗಿದೆ. ಮೂವರು ಹೆಣ್ಣು ಮಕ್ಕಳು. ಬಡತನವಿದ್ದರು ಮಕ್ಕಳನ್ನು ರಾಣಿಯರಂತೆ ಬೆಳೆಸಿದ್ದಾರೆ. ಅದರಲ್ಲಿ ಮೊದಲ ಮಗಳಿಗೆ ಯುವರಾಜನ ಜೊತೆಗೆ ಪ್ರೀತಿಯಾಗಿದೆ. ಅದೇ ಎರಡನೇ ಮಗಳಿಗೆ ಯುವರಾಜನನ್ನು ಕಂಡರೆ ಯಾವಾಗಲೂ ಜಗಳ. ಈ ರೀತಿ ಸಾಗುವ ಧಾರಾವಾಹಿಯೇ 'ಕಥೆಯೊಂದು ಶುರುವಾಗಿದೆ'. ಇದು ಶುರುವಾದ ಮೊದಲ ವಾರಕ್ಕೆ 2.1 ಪಾಯಿಂಟ್ ಗಳನ್ನು ಪಡೆದಿದೆ.

  English summary
  Kannada TV Serials BARC TRP Ratings Of This Week 8th December 2022, Know More
  Thursday, December 8, 2022, 20:12
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X