ರಾಮಾಚಾರಿ ತುಣುಕಿಗೆ ಬಣ್ಣ ಹಚ್ಚಿದ ಮಕ್ಕಳು: ಅಭಿನಯ ಕಂಡು ಕ್ರೇಜಿಸ್ಟಾರ್ ಭಾವುಕ
ಮಕ್ಕಳಿಂದ ಹಿರಿಯರ ತನಕ ಮನರಂಜನೆಯ ರಸದೌತಣ ನೀಡುತ್ತದೆ ಡ್ರಾಮಾ ಜ್ಯೂನಿಯರ್ ಸೀಸನ್ 4. ಮಕ್ಕಳ ಡ್ರಾಮಾ ನೋಡಲು ಜನ ತುದಿ ಗಾಲಿನಲ್ಲಿ ನಿಂತಿರುತ್ತಾರೆ. ಮಕ್ಕಳಲ್ಲಿ ಮಕ್ಕಳಾಗಿ ಬೆರೆತು ಡ್ರಾಮಾ ನೋಡುತ್ತಾರೆ ಮನೆ ಮಂದಿ. ಇದೀಗ ಡ್ರಾಮಾ ಜ್ಯೂನಿಯರ್ ಸೀಸನ್ 4 ಗ್ರಾಂಡ್ ಫಿನಾಲೆ ಶುರುವಾಗಿದೆ. ಅದೆಷ್ಟು ಮಕ್ಕಳು ಪ್ರೇಕ್ಷಕರನ್ನು ಹೊಟ್ಟೆ ಹುಣ್ಣಾಗಿಸುವ ಹಾಗೆ ನಗಿಸಿದ್ದಾರೆ, ಅಳಿಸಿದ್ದಾರೆ.
ಕಾರ್ಯಕ್ರಮದ ಜಡ್ಜ್‌ಗಳಲ್ಲಿ ಒಬ್ಬರಾದ ಹಿರಿಯ ನಟಿ ಲಕ್ಷ್ಮಿ ಹೇಳಿದ ಹಾಗೆಯೇ "ನಾವು ಎಷ್ಟೇ ಆಕ್ಟಿಂಗ್ ಮಾಡಿದರು ಈ ಶೋ ಗೆ ಬಂದಾಗ ಅಯ್ಯೋ ನಾನೇನು ಮಾಡೆ ಇಲ್ಲ ಇಲ್ವಾ. ಇನ್ನೂ ನಟನೆಯಲ್ಲಿ ಏಷ್ಟು ಕಲಿಯೋದು ಬಾಕಿ ಇದೆ ಎನಿಸುತ್ತದೆ ನಾವು ಜಂಭ ಪಡಬಾರದು ಎಂದು ಹೇಳಿದರು. ಜತಿನ್ ಹಾಗೂ ರೀತು ಆಕ್ಟಿಂಗ್ ನೋಡಿದ ಜನ ಫಿದಾ ಆಗಿರುವುದಂತು ಸತ್ಯ. ಈ ಇಬ್ಬರು ಪುಟಾಣಿಯರು ಡ್ರಾಮಾ ಜೂನಿಯರ್ ಶೋನ ಕಣ್ಣುಗಳು ಇದ್ದ ಹಾಗೆ. ತೊದಲು ನುಡಿಗಳಿಂದ ಜನರ ಮನ ಗೆದ್ದ ಜತಿನ್ ನಾನು ಯಾರಿಗೂ ಕಮ್ಮಿ ಇಲ್ಲ ಎಂಬಂತೆ ನಟಿಸಿ ಜನರ ಮನ ಗೆದ್ದ ಹುಡುಗ ಎಂದರೆ ತಪ್ಪಾಗಲ್ಲ.

ಕನ್ನಡಿಗರನ್ನು ನಾಚಿಸುವಂತೆ ಕನ್ನಡ ಮಾತನಾಡುವ ನೇಪಾಳದ ಬೆಡಗಿ
ನೇಪಾಳದಿಂದ ಬೆಂಗಳೂರಿಗೆ ಬಂದು ಕನ್ನಡ ಭಾಷೆಯನ್ನು ಕಲಿತುಕೊಂಡು ಡ್ರಾಮಾ ಜ್ಯೂನಿಯರ್ ನಲ್ಲಿ ಅಭಿನಯ ಮಾಡಬೇಕು ಎಂದು ಮಹದಾಸೆಯನ್ನೂ ಹೊತ್ತು ಬಂದಿದ್ದಳು. ಆದರೆ ಈಕೆ ಸ್ಪರ್ಧಿಯಾಗಿ ಆಯ್ಕೆಯಾಗದೆ ಇದ್ದರೂ ರೀತು ಅಭಿನಯ ಕಂಡು ಕ್ರೇಜಿಸ್ಟಾರ್ ರವಿಚಂದ್ರನ್ ಇವಳನ್ನು ಆಯ್ಕೆ ಮಾಡುತ್ತಾರೆ. ಆವತ್ತಿನಿಂದ ಇವತ್ತಿನವರೆಗೂ ರವಿ ಸರ್ ಅಂದರೆ ರೀತುಗೆ ಅಚ್ಚು ಮೆಚ್ಚು. ಜತಿನ್ ಹಾಗೂ ರೀತು ಇಬ್ಬರು ಕೂಡಿ ರವಿಚಂದ್ರನ್ ಅಭಿನಯದ ಮಹತ್ತರವಾದ ತಿರುವನ್ನು ನೀಡಿದ ರಾಮಾಚಾರಿ ಚಿತ್ರದ ಸಣ್ಣ ತುಣುಕನ್ನು ತೆಗೆದುಕೊಂಡು ಅಭಿನಯ ಮಾಡುತ್ತಾರೆ. ಈ ಅಭಿನಯಕ್ಕೆ ರವಿಚಂದ್ರನ್ ಕುಳಿತಲ್ಲಿಂದ ಇಳಿದು ವೇದಿಕೆ ಮೇಲೆ ಬಂದು ಇಬ್ಬರನ್ನೂ ಮುದ್ದಾಡುತ್ತಾರೆ.

ಇಬ್ಬರು ಮಕ್ಕಳನ್ನು ಬಿಗಿದು ತಬ್ಬಿಕೊಂಡ ರವಿಚಂದ್ರನ್
ಈ ಸಂದರ್ಭ ರೀತು ನ ಕಂಡರೆ ನನ್ನ ಅಪ್ಪ ನೆನಪಾಗುತ್ತಾರೆ ಎಂದು ಕ್ರೇಜಸ್ಟಾರ್ ಭಾವುಕರಾಗುತ್ತಾರೆ. ಇದನ್ನು ರವಿಚಂದ್ರನ್ ಬಾವುಕರಾಗಿದ್ದನ್ನು ಕಂಡ ರಚಿತ ರಾಮ್ ಕೂಡ ಬಾವುಕರಾಗಿದ್ದಾರೆ.. ಈ ಇಬ್ಬರು ಮಕ್ಕಳು ಅದ್ಭುತವಾಗಿ ಅಭಿನಯ ಮಾಡಿದರು. ಅವರವರ ಪಾತ್ರಕ್ಕೆ ತಕ್ಕುದಾಗಿ ನಡೆದುಕೊಂಡಿದ್ದಾರೆ. ಇನ್ನೂ ಡ್ರಾಮಾ ಜ್ಯೂನಿಯರ್ ಸೀಸನ್ 4 ಗ್ರ್ಯಾಂಡ್ ಫಿನಾಲೆ ಬಂದೆ ಬಿಟ್ಟಿದೆ. ಮಕ್ಕಳ ಅಭಿನಯ ಒಂದನ್ನು ಒಂದು ಮೀರಿಸುವಂಥೆ ಇದೆ.

ಯಕ್ಷಗಾನದ ಮೂಲಕ ಜನರನ್ನು ರಂಜಿಸುತ್ತಿರುವ ಮಕ್ಕಳು
ಯಕ್ಷಗಾನದ ಮೂಲಕ ಮನರಂಜನೆ ನೀಡಿದ ಮಕ್ಕಳು ಬಳಿಕ ಹೆಣ್ಣು ನೋಡಲು ಬಂದ ಹುಡುಗನ ಪಾಡು ಇದೆಲ್ಲವನ್ನೂ ಅಚ್ಚುಕಟ್ಟಾಗಿ ತೋರಿಸಿದರು. ಇದನ್ನೆಲ್ಲ ನೋಡಿದ ಲಕ್ಷ್ಮಿ ನಿಬ್ಬೆರಗಾಗಿದ್ದಾರೆ. ಡ್ರಾಮಾ ಜೂನಿಯರ್ ಸೀಸನ್ ಶುರು ಆದಾಗಿನಿಂದ ಗ್ರ್ಯಾಂಡ್ ಫಿನಾಲೆವರೆಗೆ ನಡೆದು ಬಂದ ಒಂದು ಸಣ್ಣ ತುಣುಕನ್ನು ದೃಶ್ಯಾವಳಿಯ ಮೂಲಕ ತೋರಿಸಲಾಯಿತು.

ಡ್ರಾಮಾ ಜೂನಿಯರ್ ಸೀಸನ್ 4 ನಡೆದ ಹಾದಿ ಹೇಗಿತ್ತು?
ಜಡ್ಜ್ ಸ್, ಮಕ್ಕಳ ಅಭಿನಯ ನೋಡಿ ಅದೆಷ್ಟು ಖುಷಿ ಆಗಿದ್ದರು ಅಂದರೆ ನಿಜಕ್ಕೂ ಅವರ ಬೇಸರ ಕಷ್ಟ ಎಲ್ಲವನ್ನೂ ಈ ವೇದಿಕೆ ಮರೆಸುತ್ತಿತ್ತು ಎಂದರೆ ತಪ್ಪಾಗದು. ಒಟ್ಟಿನಲ್ಲಿ ಹೇಳುವುದಾದರೆ ಡ್ರಾಮಾ ಜ್ಯೂನಿಯರ್ ಮಕ್ಕಳ ಅಭಿನಯ ಪ್ರದರ್ಶನ ಮಾಡಲು ಸಿಕ್ಕ ದೊಡ್ಡ ವೇದಿಕೆ. ಇದರಿಂದ ಅನೇಕ ಜನ ಮಕ್ಕಳು ಇದೀಗ ಧಾರಾವಾಹಿಗಳ ಮೂಲಕ ಅಭಿನಯ ಮಾಡುತ್ತಿದ್ದಾರೆ. ಚಲನಚಿತ್ರಗಳಲ್ಲಿ ಅವಕಾಶವನ್ನು ಗಿಟ್ಟಿಸಿಕೊಳ್ಳುತ್ತಿದ್ದಾರೆ. ಮುಂದೆಯೂ ಕೂಡಾ ಡ್ರಾಮಾ ಜ್ಯೂನಿಯರ್ ನಂತಹ ಅದ್ಭುತ ಶೋ ಬರಲಿ ಹಾಗೆಯೇ ಒಳ್ಳೆಯ ಕಲಾವಿದರು ಹೊರಬರಲಿ ಎಂಬುವುದು ವೀಕ್ಷಕರ ಆಶಯ.


Click it and Unblock the Notifications