ಮಹಾನಟಿಯರಿಗಾಗಿ ಕಾಯುತ್ತಿರುವ ಹೊಸ ವೇದಿಕೆ

By ಪ್ರಿಯಾ ದೊರೆ

ಜನವರಿ ಮಾಸಾಂತ್ಯದಲ್ಲಿರುವಾಗ ಹೊಸ ಧಾರಾವಾಹಿಗಳು ಹಾಗೂ ರಿಯಾಲಿಟಿ ಶೋಗಳು ಕನ್ನಡ ಕಿರುತೆರೆಯಲ್ಲಿ ಕಮಾಲ್ ಮಾಡಲು ಮುಂದಾಗಿವೆ.

ಕನ್ನಡದ ಎಲ್ಲಾ ವಾಹಿನಿಗಳಲ್ಲೂ ಹೊಸ ಹೊಸ ಧಾರಾವಾಹಿಗಳು ಪ್ರಸಾರ ಕಾಣಲು ಸಜ್ಜಾಗಿದ್ದು, ವೀಕ್ಷಕರಿಗೆ ಕುತೂಹಲವನ್ನು ಹೆಚ್ಚು ಮಾಡಲಾಗಿದೆ.

ಈಗಾಗಲೇ ಕಲರ್ಸ್ ಕನ್ನಡ ವಾಹಿನಿಯಲ್ಲಿ ಬಿಗ್ ಬಾಸ್ ಅಂತ್ಯವಾಗಿದ್ದು, ಆ ಸ್ಲಾಟ್ ಫಿಲ್ ಮಾಡಲು ಹೊಸ ಧಾರಾವಾಹಿ ಹಾಗೂ ರಿಯಾಲಿಟಿ ಶೋಗಳು ಕಾಯುತ್ತಿವೆ.

Kannada TV show mahanati to go on-air soon

ಹೊಸ ರಿಯಾಲಿಟಿ ಶೋಗಳ ಸರಮಾಲೆ

ಕಲರ್ಸ್ ಕನ್ನಡವಾಹಿನಿಯಲ್ಲಿ ಈ ವಾರ 'ಶ್ರೀಗೌರಿ' ಎಂಬ ಹೊಸ ಧಾರಾವಾಹಿ ಪ್ರಾರಂಭವಾಗಿದೆ. ಇನ್ನು 'ಕರಿಮಣಿ' ಎಂಬ ಮತ್ತೊಂದು ಧಾರಾವಾಹಿ ಪ್ರಸಾರವಾಗಲು ಸಜ್ಜಾಗಿದೆ. ವೀಕೆಂಡ್‌ನಲ್ಲಿ ವೀಕ್ಷಕರಿಗೆ ಮಸ್ತಿ ಕೊಡಲು ಒಂದೇ ಸಲಕ್ಕೆ ಎರಡು ಶೋಗಳು ಪ್ರಾರಂಭವಾಗುತ್ತಿವೆ. 'ನಮ್ಮಮ್ಮ ಸೂಪರ್ ಸ್ಟಾರ್' ರಿಯಾಲಿಟಿ ಶೋನಲ್ಲಿ ಮಕ್ಕಳ ಜೊತೆಗೆ ಆಡಿ ಗೆಲ್ಲಲು ಅಮ್ಮಂದಿರು ರೆಡಿಯಾಗಿದ್ದಾರೆ. ಎಲ್ಲರನ್ನು ನಕ್ಕು ನಲಿಸುವ 'ಗಿಚ್ಚಿಗಿಲಿಗಿಲಿ ಸೀಸನ್- 3' ಕೂಡ ಆರಂಭವಾಗಲಿದೆ. ಇದೆರಡರ ಪ್ರೊಮೋ ನೋಡಿದ ವೀಕ್ಷಕರು ಫುಲ್ ಖುಷಿ ಆಗಿದ್ದಾರೆ. ಕಲರ್ಸ್ ಕನ್ನಡ ವಾಹಿನಿ ಏನೋ ಬಿಗ್ ಬಾಸ್ ಮುಗಿದ ಬಳಿಕ ಪ್ರಸಾರ ಮಾಡಲು ಎರಡು ರಿಯಾಲಿಟಿ ಶೋ ಹಾಗೂ ಸೀರಿಯಲ್‌ಗಳನ್ನು ಹೊತ್ತು ತಂದಿದೆ. ಆದರೆ, ಜೀ ಕನ್ನಡ ವಾಹಿನಿ ಇನ್ನೂ ಡಿಫರೆಂಟ್ ಆಗಿ ಆಲೋಚಿಸಿದೆ.

ಹೊಸ ರಿಯಾಲಿಟಿ ಶೋ ಸಿದ್ಧ

ಪ್ರತಿ ಸಲವೂ ವೀಕ್ಷಕರಿಗೆ ಇಷ್ಟವಾಗುವಂತೆ ಹೊಸ ಹೊಸ ಆಲೋಚನೆಗಳೊಂದಿಗೆ ಮುಂದೆ ಬರುವ ಜೀ ಕನ್ನಡ ವಾಹಿನಿ, ಈಗಲೂ ಮತ್ತದೇ ಹೊಸ ಆಲೋಚನೆಯನ್ನು ಹೊತ್ತು ತಂದಿದೆ. ಸರಿಗಮಪ, ಡ್ರಾಮಾ ಜ್ಯೂನಿಯರ್ಸ್, ಡ್ಯಾನ್ಸ್ ಶೋ, ಕಾಮಿಡಿ ಶೋಗಳ ಮೂಲಕ ರಾಜ್ಯವನ್ನು ಮೀರಿ ಹೊರ ದೇಶಗಳಿಂದಲೂ ಹೊಸ ಹೊಸ ಪ್ರತಿಭೆಗಳಿಗೆ ಜೀ ಕನ್ನಡ ವಾಹಿನಿ ವೇದಿಕೆಯಾಗಿದೆ. ಈಗಾಗಲೇ ಸಾಕಷ್ಟು, ನಟ-ನಟಿಯರು, ಹಾಸ್ಯ ನಟರು, ಬಾಲ ನಟರನ್ನು ಪರಿಚಯಿಸಿದೆ. ಕನ್ನಡದ ಸಾಕಷ್ಟು ನಟ-ನಟಿಯರಿಗೆ ಪರಭಾಷೆಗಳಲ್ಲೂ ಹೆಚ್ಚಿನ ಬೇಡಿಕೆ ಇದೆ.

Kannada TV show mahanati to go on-air soon

ಮಹಾನಟಿಯಾಗಲು ಅವಕಾಶ

ಜೀ ಕನ್ನಡ ವಾಹಿನಿಯಲ್ಲಿ ಇತ್ತೀಚೆಗಷ್ಟೇ ಹೊಸ ಧಾರಾವಾಹಿ ಪ್ರಾರಂಭವಾಗಿದೆ. 'ಲಕ್ಷ್ಮೀ ನಿವಾಸ' ಧಾರಾವಾಹಿ ತುಂಬು ಕುಟುಂಬದ ಕಥೆಯನ್ನು ಹೊತ್ತು ಬಂದಿದೆ. ಇದೀಗ ವಾಹಿನಿಯು ಮತ್ತೊಂದು ಸಾಹಸಕ್ಕೆ ಕೈ ಹಾಕಿದೆ. ಹಲವಾರು ಮಹಾನಟಿಯರನ್ನು ನೀಡಿದ ಬಣ್ಣದ ಲೋಕಕ್ಕೆ ಮತ್ತಷ್ಟು ಹೊಸ ನಟಿಯರನ್ನು ಪರಿಚಯಿಸಲು ಮುಂದಾಗಿದೆ. ಈ ಬಗ್ಗೆ ವಾಹಿನಿ ಹೊಸ ಪ್ರೋಮೋವನ್ನು ರಿಲೀಸ್ ಮಾಡಿದೆ. ಈ ಹೊಸ ರಿಯಾಲಿಟಿ ಶೋ ಮೂಲಕ ನಟನಾ ಕ್ಷೇತ್ರಕ್ಕೆ ಕಾಲಿಡಬೇಕು ಎಂದುಕೊಂಡಿರುವ ಸಾಕಷ್ಟು ಪ್ರತಿಭೆಗಳಿಗೆ ವೇದಿಕೆಯಾಗಲಿದೆ. ಈ ಹೊಸ ರಿಯಾಲಿಟಿ ಶೋಗೆ 'ಮಹಾನಟಿ' ಎಂದು ಕರೆದಿದ್ದು, ಶೀಘ್ರದಲ್ಲೇ ಆಡಿಷನ್ ನಡೆಸುವುದಾಗಿ ಹೇಳಿದೆ.

ಆಡಿಷನ್ ನೀಡಲು ಹೆಚ್ಚಿದ ಕಾತುರ

ಸಾಮಾನ್ಯರು ಕೂಡ ನಾಯಕಿಯಾಗಲು ಇಚ್ಛಿಸಿದರೆ, 'ಮಹಾನಟಿ' ರಿಯಾಲಿಟಿ ಶೋಗೆ ಆಡಿಷನ್ ನೀಡಬಹುದಾಗಿದೆ. ಇದಕ್ಕೆ ಈಗಾಗಲೇ ಹಲವರು ಕಮೆಂಟ್ ಮಾಡಿದ್ದು, ನಮಗೂ ಚಾನ್ಸ್ ಕೊಡಿ ಎಂದು ಕೇಳಿಕೊಂಡಿದ್ದಾರೆ. ಕೆಲವರು ರೀಲ್ಸ್ ರಾಣಿಯರಿಗೆ ಸರಿಯಾದ ವೇದಿಕೆ ಎಂದಿದ್ದು, ಮತ್ತು ಕೆಲವರು ಕಿರುತೆರೆ ನಟಿಯರು ಭಾಗವಹಿಸಬಹುದಾ ಎಂದು ಪ್ರಶ್ನಿಸಿದ್ದಾರೆ. ಇನ್ನೂ ಕೆಲವರು ತಮಗೆ ಮಹಾನಟಿ ಯಾರಾಗಬೇಕು ಎಂದು ಬಯಸಿದ್ದಾರೆ. ಕೆಲ ಧಾರಾವಾಹಿಗಳ ನಟಿಯರಲ್ಲಿರುವ ಟ್ಯಾಲೆಂಟ್ ಬಗ್ಗೆ ಹೇಳಿಕೊಂಡಿದ್ದಾರೆ. ಈ ಹೊಸ ರಿಯಾಲಿಟಿ ಶೋನಲ್ಲಿ ಆಡಿಷನ್ ನೀಡಲು ಈಗಾಗಲೇ ಹಲವರು ಕಾತುರರಾಗಿದ್ದಾರೆ.

More from Filmibeat

English summary
Zee kannada planned new reality show called mahanati for youngsters;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X