ನನ್ನಮ್ಮ ಸೂಪರ್ ಸ್ಟಾರ್ ಸೀಸನ್- 3 ಶುರುವಾಗಲು ಕೆಲವೇ ಸಮಯ ಬಾಕಿ
'ನನ್ನಮ್ಮ ಸೂಪರ್ ಸ್ಟಾರ್' ಕಾರ್ಯಕ್ರಮಕ್ಕೆ ಸಾಕಷ್ಟು ಜನ ಫ್ಯಾನ್ಸ್ ಫಾಲೋವರ್ಸ್ ಇದ್ದಾರೆ. ಯಾಕಂದರೆ ಆ ಕಾರ್ಯಕ್ರಮ ಎಂಥವರನ್ನು ಸೆಳೆಯುವ ಕಾನ್ಸೆಪ್ಟ್ ಹೊಂದಿದೆ.
ಮಕ್ಕಳ ಮುದ್ದು ಮುದ್ದು ಮಾತುಗಳು, ತಲೆ ಹರಟೆ, ಚೂಟಿಯಾಗಿ ಆಡುವ ರೀತಿ ಎಲ್ಲವೂ ಕೂಡ ಜನರನ್ನು ಅತಿ ಹೆಚ್ಚಾಗಿ ರಂಜಿಸುತ್ತಿತ್ತು. ಇದಕ್ಕಾಗಿಯೇ ಒಂದಷ್ಟು ವೀಕ್ಷಕರನ್ನು 'ನನ್ನಮ್ಮ ಸೂಪರ್ ಸ್ಟಾರ್' ಶೋ ಸೆರೆ ಹಿಡಿದಿಟ್ಟುಕೊಂಡಿತ್ತು.

'ನನ್ನಮ್ಮ ಸೂಪರ್ ಸ್ಟಾರ್' ಮೊದಲ ಸೀಸನ್ ಹಿಟ್ ಆದ ಬಳಿಕ ಎರಡನೇ ಸೀಸನ್ ಕೂಡ ಪ್ರಸಾರ ಕಂಡಿತ್ತು. ಇದೀಗ ಇದರ ಸೀಸನ್-3 ಆರಂಭವಾಗಲಿದೆ.
ಮಕ್ಕಳೊಂದಿಗೆ ಆಡಿ ನಲಿಯುವ ತಾಯಂದಿರು
ಮಕ್ಕಳ ಜೊತೆ ಜೊತೆಗೆ ತಾಯಂದಿರು ಮಸ್ತ್ ಮಜಾ ಮಾಡುವ ಈ ಶೋನಲ್ಲಿ ಮಕ್ಕಳ ಜೊತೆಗೆ ಮಕ್ಕಳಾಗಿ ತಾಯಂದಿರು ಪಡುವ ಆನಂದ, ಖುಷಿ ಅಷ್ಟಿಷ್ಟಲ್ಲ. ಡಾನ್ಸ್, ಡ್ರಾಮಾ ಅಂತ ಫುಲ್ ಟೈಮ್ ಈ ಶೋಗಾಗಿ ಮಕ್ಕಳ ಜೊತೆಗೆ ಸಮಯ ಕಳೆಯುತ್ತಾರೆ. ಮಕ್ಕಳ ಆಟ-ಪಾಠದ ಜೊತೆಗೆ ಈ ಶೋನಲ್ಲಿ ಗೆಲ್ಲಲೇಬೇಕೆಂಬುದು ಆಸೆ ಖಂಡಿತವಾಗಿಯೂ ಎಲ್ಲರಿಗೂ ಇದ್ದೇ ಇರುತ್ತದೆ. ಅದೇ 'ನನ್ನಮ್ಮ ಸೂಪರ್ ಸ್ಟಾರ್' ಕಾರ್ಯಕ್ರಮದ ವಿಶೇಷತೆ.
ಮೊದಲ ಸೀಸನ್‌ನಲ್ಲಿ ವಂಶಿಕಾ
ಈ ರಿಯಾಲಿಟಿ ಶೋ ಶುರುವಾದ ಮೊದಲ ಸೀಸನ್‌ನಲ್ಲಿ ವಂಶಿಕಾ ಇಡೀ ಟೀಂನಲ್ಲಿ ಆಕರ್ಷಣೆಯ ಕೇಂದ್ರ ಬಿಂದುವಾಗಿ ಹೋಗಿದ್ದಳು. ಎಲ್ಲಾ ಮಕ್ಕಳು ಒಂದು ರೀತಿಯಾಗಿದ್ದರೆ ವಂಶಿಕಾ ಬೇರೆ ರೀತಿಯಾಗಿಯೇ ಇರುತ್ತಿದ್ದಳು. ಪ್ರಾಕ್ಟೀಸ್ ಮಾಡಿ ಎಷ್ಟೇ ಸುಸ್ತಾಗಿದ್ದರು, ನೆಗಡಿ ಆಗಿ ಮೂಗಲ್ಲಿ ಸೋರುತ್ತಿದ್ದರು ಇದ್ಯಾವುದಕ್ಕೂ ಗಮನ ಕೊಡುತ್ತಿರಲಿಲ್ಲ. ಎಲ್ಲದಕ್ಕೂ ಡೋಂಟ್ ಕೇರ್ ಎನ್ನುತ್ತಿದ್ದಳು. ವೇದಿಕೆ ಮೇಲೆ ತಾನು ಮಾಡಬೇಕಾದ ಕೆಲಸಕ್ಕೆ ಗಮನ ಕೊಡುತ್ತಿದ್ದಳು. ಆಕೆಯ ಆಟ, ತುಂಟಾಟ ನೋಡುತ್ತಿದ್ದವರಿಗೆ ಈಕೆಯೇ ಸೀಸನ್ ಒಂದರಲ್ಲಿ ವಿನ್ನರ್ ಆಗಿ, ಐದು ಲಕ್ಷ ರೂಪಾಯಿ ಬಹುಮಾನ ಪಡೆದಿದ್ದಳು.

ಸಾಮಾನ್ಯರಿಗಾಗಿ ನಡೆಸಿಕೊಟ್ಟಿದ್ದ ಸೀಸನ್- 2
ಕೆಲ ಸಮಯವಾದ ಬಳಿಕ ವಾಹಿನಿಯೂ ಎರಡನೇ ಸೀಸನ್ ಅನ್ನು ಪ್ರಸಾರ ಮಾಡಿತು. ಎರಡನೇ ಸೀಸನ್‌ನಲ್ಲಿ ಸೆಲಬ್ರಿಟಿಗಳ ಮಕ್ಕಳ ಬದಲು ಸಾಮಾನ್ಯರು ಭಾಗವಹಿಸಿದ್ದರು. ಚೂಟಿಯಾಗಿ ಆಡಿದ ಮಕ್ಕಳಿಗೆ ವಂಶಿಕಾ ಆಂಕರ್ ಆಗಿಯೂ ಬಂದಿದ್ದಳು. ಸೀಸನ್ ಎರಡರಲ್ಲೂ ವಂಶಿಕಾ ವೇದಿಕೆಯನ್ನು ತನ್ನದಾಗಿಸಿಕೊಂಡಿದ್ದಳು. ಮಂಡ್ಯ ಮೂಲದ ಚೈತ್ರಾ ಮ್ಮ ಅವಳಿ ಮಕ್ಕಳು ಚಿನ್ಮಯ್ ಹಾಗೂ ಚಿರಂತ್ ಜೊತೆಗೆ ಭಾಗವಹಿಸಿ ಗೆಲುವು ಕಂಡಿದ್ದರು.
ಪ್ರಾರಂಭವಾಗಲಿದೆ ಮೂರನೇ ಸೀಸನ್
ಇನ್ನು ಬಹಳ ದಿನಗಳಿಂದ 'ನನ್ನಮ್ಮ ಸೂಪರ್ ಸ್ಟಾರ್' ಕಾರ್ಯಕ್ರಮದ ಬಗ್ಗೆ ಯಾವುದೇ ಮಾಹಿತಿ ನೀಡಿರದ ಕಲರ್ಸ್ ಕನ್ನಡ ವಾಹಿನಿ ಈಗ ಹೊಸ ಸೀಜನ್‌ಗೆ ಸಜ್ಜಾಗಿದೆ. ಸೀಸನ್- 3ರ ಹೊಸ ಪ್ರೋಮೋ ವಾಹಿನಿಯೂ ಬಿಡುಗಡೆಗೊಳಿಸಿದೆ. ಆದರೆ, ಕಾರ್ಯಕ್ರಮ ಯಾವಾಗಿನಿಂದ ಪ್ರಸಾರವಾಗುತ್ತದೆ ಎಂಬುದನ್ನು ಮಾತ್ರ ತಿಳಿಸಿಲ್ಲ. ಆದರೆ, ಇಷ್ಟರಲ್ಲೇ 'ನನ್ನಮ್ಮ ಸೂಪರ್ ಸ್ಟಾರ್' ಶೋ ಮಕ್ಕಳೊಂದಿಗೆ ತಾಯಂದಿರುವ ವೀಕ್ಷಕರನ್ನು ವೀಕೆಂಡ್‌ಗಳಲ್ಲಿ ರಂಜಿಸಲು ಬರುವುದಂತೂ ಪಕ್ಕಾ ಆಗಿದೆ. ವೀಕ್ಷಕರು ಮಾತ್ರ ನನ್ನಮ್ಮ ಸೂಪರ್ ಸ್ಟಾರ್ ಸೀಸನ್- 3 ನೋಡಿ ಎಂಜಾಯ್ ಮಾಡಲು ಬಹಳ ಕಾತುರದಿಂದ ಕಾಯುತ್ತಿದ್ದಾರೆ.


Click it and Unblock the Notifications











