ಕಳೆದ ವಾರದ ಟಿಆರ್‌ಪಿ ಹಗ್ಗಜಗ್ಗಾಟದಲ್ಲಿ ಯಾರ ಕೈ ಮೇಲಾಯಿತು?
ಜೀ ಕನ್ನಡದಲ್ಲಿ ಪ್ರಸಾರವಾಗುವ 'ಗಟ್ಟಿಮೇಳ' ಧಾರಾವಾಹಿಯನ್ನ ಯಾವ ಧಾರಾವಾಹಿ ಸಹ ಹಿಂದಿಕ್ಕುವ ಪ್ರಯತ್ನ ಮಾಡ್ತಿಲ್ಲ. ಹಾಗಾಗಿ ಈ ವಾರವು 'ಗಟ್ಟಿಮೇಳ' ಧಾರಾವಾಹಿಯೇ ಟಾಪ್ ಒನ್ ಸ್ಥಾನವನ್ನ ಪಡೆದುಕೊಂಡಿದೆ. ಇತ್ತೀಚೆಗೆ 'ಗಟ್ಟಿಮೇಳ' ಹಾಗೂ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಗಳ ಮಧ್ಯೆ ಭಾರೀ ಪೈಪೋಟಿ ನಡೀತಿದೆ. ಯಾಕೋ ಕಳೆದೆರಡು ವಾರದಿಂದಲೂ 'ಗಟ್ಟಿಮೇಳ' ಧಾರಾವಾಹಿ ತನ್ನ ಸ್ಥಾನವನ್ನ ಭದ್ರಪಡಿಸಿಕೊಂಡಿದೆ.
'ಗಟ್ಟಿಮೇಳ' ಧಾರಾವಾಹಿ 6.9 ಟಿಆರ್‌ಪಿ ಪಡೆದಿದ್ದರೆ 2ನೇ ಸ್ಥಾನದಲ್ಲಿರುವ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿ 6.8 ರೇಟಿಂಗ್ ಪಡೆದುಕೊಂಡಿದೆ. ಸದ್ಯಕ್ಕೆ ಪುಟ್ಟಕ್ಕ ಹೇಗಾದರೂ ಮಾಡಿ ಕಂಠಿಯಿಂದ ಸ್ನೇಹಳನ್ನು ದೂರ ಮಾಡಬೇಕು ಎಂದು ಯೋಚನೆ ಮಾಡಿದ್ದಾಳೆ. ಇದಕ್ಕಾಗಿ ಉದ್ಯಮಿ ಮಗನ ಜೊತೆಗೆ ಮದುವೆ ಮಾಡಲು ಒಪ್ಪಿಗೆ ನೀಡಿದ್ದಾಳೆ. ಈ ಧಾರಾವಾಹಿ ಮೊದಮೊದಲು ಪ್ರಸಾರವಾದಾಗ ಹಿಟ್ ಆಗಿ ಕನ್ನಡ ಕಿರುತೆರೆಯಲ್ಲಿ ನಂಬರ್ ಒನ್ ಸ್ಥಾನ ಪಡೆದುಕೊಂಡಿತ್ತು. ಈಗ 2ನೇ ಸ್ಥಾನದಲ್ಲಿದೆ.

'ಶ್ರೀರಸ್ತು ಶುಭಮಸ್ತು' ಧಾರಾವಾಹಿಯನ್ನು 'ಲಕ್ಷ್ಮೀಬಾರಮ್ಮ' , 'ಭಾಗ್ಯಲಕ್ಷ್ಮೀ' ಎರಡು ಧಾರಾವಾಹಿಗಳು ಹಿಂದಿಕ್ಕಿ ಮೂರು ಮತ್ತು ನಾಲ್ಕನೇ ಸ್ಥಾನ ಪಡೆದುಕೊಂಡಿವೆ. 'ಭಾಗ್ಯಲಕ್ಷ್ಮಿ' ಧಾರಾವಾಹಿಯ ಕಥೆಯು ಎಲ್ಲರಿಗೂ ಇಷ್ಟವಾಗಿದೆ. ಈ ಧಾರಾವಾಹಿಯ ಕಥಾನಾಯಕಿ ಭಾಗ್ಯಳ ಮುಗ್ಧತೆಗೆ ವೀಕ್ಷಕರು ಮಾರು ಹೋಗಿದ್ಧಾರೆ. ಇದರಿಂದಾಗಿ 'ಭಾಗ್ಯಲಕ್ಷ್ಮೀ' ಧಾರಾವಾಹಿಯನ್ನು ಪ್ರೇಕ್ಷಕರು ಇಷ್ಟಪಟ್ಟು ನೋಡುತ್ತಿದ್ದು 6.0 ಟಿಆರ್‌ಪಿ ಸಿಕ್ಕಿದೆ.
4ನೇ ಸ್ಥಾನದಲ್ಲಿ 'ಲಕ್ಷ್ಮೀ ಬಾರಮ್ಮ'
'ಲಕ್ಷ್ಮೀ ಬಾರಮ್ಮ' ಧಾರಾವಾಹಿಯನ್ನು ಸಹ ಪ್ರೇಕ್ಷಕರು ಇಷ್ಟಪಟ್ಟು ನೋಡುತ್ತಿದ್ದಾರೆ. ಇದರಲ್ಲಿ ಲಕ್ಷ್ಮಿ ಮದುವೆಯಾಗಿದ್ದರು ಸಹ ತನ್ನ ದೊಡ್ಡಮ್ಮ ಲಕ್ಷ್ಮಿಗೆ ನೀಡುತ್ತಿರುವ ಕಾಟ ಹೆಚ್ಚಾಗಿದೆ. ತನ್ನ ಮಗಳನ್ನು ಓದಿಸುತ್ತಿದ್ದು ಲಕ್ಷ್ಮಿಯನ್ನು ಹಣಕ್ಕಾಗಿ ಪೀಡಿಸುತ್ತಿದ್ದಾಳೆ. ಲಕ್ಷ್ಮಿ ಗಂಡ ವೈಷ್ಣವ್ ಸಹ ಲಕ್ಷ್ಮಿಗೆ ಸಪೋರ್ಟ್ ಮಾಡುತ್ತಿದ್ದಾನೆ. ಈ ಧಾರಾವಾಹಿ ನಾಲ್ಕನೇ ಸ್ಥಾನವನ್ನು ಪಡೆದು, ಟಿಆರ್‌ಪಿಯಲ್ಲಿ 5.9 ಪಡೆದುಕೊಂಡಿದೆ.

ಮಾಧವ್-ತುಳಸಿ ಸ್ನೇಹಕಥೆ
'ಶ್ರೀರಸ್ತು ಶುಭಮಸ್ತು' ಧಾರಾವಾಹಿ 5ನೇ ಸ್ಥಾನಕ್ಕೆ ತೃಪ್ತಿ ಪಟ್ಟು ಕೊಂಡಿದೆ. ಆದರೂ ಸಹ ತನ್ನದೇ ಪ್ರೇಕ್ಷಕ ಬಳಗವನ್ನ ಈ ಧಾರಾವಾಹಿ ಹೊಂದಿದೆ. ಯಾಕೆಂದರೆ ಈಗ ಮಾಧವ್ ಹಾಗೂ ತುಳಸಿಯ ನಡುವೆ ಒಂದು ಸುಮಧುರವಾದ ಸ್ನೇಹ ಏರ್ಪಟ್ಟಿದ್ದು ಅದು ಎಲ್ಲರಿಗೂ ಸಹ ಮುದ ನೀಡುತ್ತಿದೆ. ಇದರಿಂದಾಗಿ ಧಾರಾವಾಹಿಯನ್ನು ವೀಕ್ಷಕರು ನೋಡುತ್ತಿದ್ದಾರೆ. ಈ ಧಾರಾವಾಹಿ 5.5ನ್ನು ಟಿಆರ್‌ಪಿ ಪಡೆದುಕೊಂಡಿದೆ.\
6ನೇ ಸ್ಥಾನದಲ್ಲಿ ಸತ್ಯ
'ಸತ್ಯ' ಧಾರಾವಾಹಿಯಲ್ಲಿ ಈಗ ರಿತು ಎಂಗೇಜ್ಮೆಂಟ್ ಮುರಿದುಕೊಂಡು ಮನೆ ಬಿಟ್ಟು ಓಡಿ ಹೋಗಿದ್ದಾಳೆ. ಇದಕ್ಕೆ ಸತ್ಯಳೇ ಕಾರಣ ಎಂದು ಎಲ್ಲರೂ ಅಂದುಕೊಂಡಿದ್ದಾರೆ. ಆದರೆ ರಾಮಚಂದ್ರ ರಾಯರು ಮಾತ್ರ ಸತ್ಯಾಳ ಪರವಹಿಸಿಕೊಂಡಿದ್ದಾರೆ. ಹಾಗೂ ಕಾರ್ತಿಕ್ ಸಹ ಸತ್ಯಾಳಿಗೆ ಸಪೋರ್ಟ್ ಮಾಡುತ್ತಿದ್ದಾನೆ. ಈಗ ಅವರಿಬ್ಬರನ್ನು ಹುಡುಕುವುದು ನಮ್ಮ ಕರ್ತವ್ಯವಾಗಿದೆ ಎಂದು ಸತ್ಯ ಹೇಳಿದ್ದಾಳೆ. ಈ ಧಾರಾವಾಹಿ 6ನೇ ಸ್ಥಾನವನ್ನು ಪಡೆದುಕೊಂಡಿದ್ದು 5.1ಸ್ಥಾನವನ್ನು ಟಿಆರ್‌ಪಿಯನ್ನು ಪಡೆದುಕೊಂಡಿದೆ.
7ನೇ ಸ್ಥಾನದಲ್ಲಿ 2 ಧಾರಾವಾಹಿಗಳು
'ಕೆಂಡಸಂಪಿಗೆ' ಹಾಗೂ 'ತ್ರಿನಯನಿ' ಈ ಎರಡು ಧಾರವಾಹಿ ಏಳನೇ ಸ್ಥಾನವನ್ನು ಪಡೆದುಕೊಂಡಿದೆ. 'ಕೆಂಡಸಂಪಿಗೆ' ಕಲರ್ಸ್ ಕನ್ನಡದಲ್ಲಿ ಪ್ರಸಾರ ಕಾಣುವ ಧಾರಾವಾಹಿಯಾಗಿದ್ದು, 'ತ್ರಿನಯನಿ' ಜೀ ಕನ್ನಡದಲ್ಲಿ ಮಧ್ಯಾಹ್ನದ ವೇಳೆ ಪ್ರಸಾರ ಕಾಣುತ್ತಿದೆ. ಈ ಎರಡು ಧಾರಾವಾಹಿಗಳಿಗೆ ಕಳೆದ ವಾರ ಸಿಕ್ಕಿದ್ದು 4.7 ರೇಟಿಂಗ್.
9ನೇ ಸ್ಥಾನಕ್ಕೆ ಏಜೆ- ಲೀಲಾ ಕಥೆ
'ಹಿಟ್ಲರ್ ಕಲ್ಯಾಣ'ವನ್ನು ಹಿಂದಿಕ್ಕಿರುವ 'ಪುನರ್ ವಿವಾಹ' ಹಾಗೂ 'ಮನೆಮಗಳು' 8ನೇ ಸ್ಥಾನಕ್ಕೇರಿವೆ. ಮಹಿಳೆಯರು ಈ ಎರಡು ಧಾರಾವಾಹಿಗಳಿಗೆ ಫಿದಾ ಆಗಿದ್ದಾರೆ. ಈ ಧಾರಾವಾಹಿಗಳಿಗೆ 4.5 ರೇಟಿಂಗ್ ಸಿಕ್ಕಿದ್ದು 'ಹಿಟ್ಲರ್ ಕಲ್ಯಾಣ' 9ನೇ ಸ್ಥಾನಕ್ಕೆ ಕುಸಿದಿದೆ. ಹೊಸ ಹೊಸ ಧಾರಾವಾಹಿಗಳು ಶುರುವಾದ ಮೇಲೆ ಹಳೆಯ ಧಾರಾವಾಹಿಗಳನ್ನು ನೋಡುವ ವೀಕ್ಷಕರ ಸಂಖ್ಯೆ ಸ್ವಲ್ಪ ಪ್ರಮಾಣದಲ್ಲಿ ಕುಗ್ಗಿದಂತೆ ಆಗಿದೆ. ಈ ಧಾರಾವಾಹಿಗೆ ಸಿಕ್ಕಿರೋದು 4.3ರಷ್ಟು ರೇಟಿಂಗ್.
ಇನ್ನು ಕ್ರಮೇಣವಾಗಿ 10ನೇ ಸ್ಥಾನದಲ್ಲಿ 'ಭೂಮಿಗೆ ಬಂದ ಭಗವಂತ' , 'ಉಧೋ ಉಧೋ ರೇಣುಕಾ ಎಲ್ಲಮ್ಮ', 'ವೈದೇಹಿ ಪರಿಣಯ', 'ಗೀತಾ', 'ಅಂತರಪಟ' ಹಾಗೂ 'ರಾಮಾಚಾರಿ' ಧಾರಾವಾಹಿಗಳು ಕಾಣಿಸಿಕೊಂಡಿವೆ.


Click it and Unblock the Notifications











