Megha Shenoy: ಖಳನಾಯಕಿಯಾಗೇ ನಟಿಸಿದ್ದ ಮೇಘಾ ಶೆಣೈ ಮೊದಲ ಬಾರಿಗೆ ನಾಯಕಿಯಾಗಿ ಬಡ್ತಿ.. ನಟಿಯ ಹಿನ್ನೆಲೆಯೇನು?

By ಅನಿತಾ ಬನಾರಿ

ಸಿರಿಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹೊಚ್ಚ ಹೊಸ ಧಾರಾವಾಹಿ 'ಬ್ರಾಹ್ಮಿನ್ಸ್ ಕೆಫೆ'ಯಲ್ಲಿ ನಾಯಕಿ ಕರುಣಾ ಆಗಿ ಅಭಿನಯಿಸಿ ವೀಕ್ಷಕರ ಮನ ಸೆಳೆಯುತ್ತಿರುವ ಚೆಲುವೆಯ ಹೆಸರು ಮೇಘಾ ಶೆಣೈ. ಮೊದಲ ಬಾರಿಗೆ ನಾಯಕಿಯಾಗಿ ಕಿರುತೆರೆ ಅಂಗಳದಲ್ಲಿ ಕಾಣಿಸಿಕೊಂಡಿರುವ ಮೇಘಾ ಶೆಣೈ ಖಳನಾಯಕಿಯಾಗಿ ನಟಿಸಿದ್ದೇ ಹೆಚ್ಚು. ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ 'ಸುಂದರಿ' ಧಾರಾವಾಹಿಯ ಮೂಲಕ ನಟನಾ ಪಯಣ ಶುರು ಮಾಡಿದ ಮೇಘಾ ಮತ್ತೆ ಹಿಂತಿರುಗಿ ನೋಡಿದ್ದಿಲ್ಲ.

ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ 'ಸುಂದರಿ' ಧಾರಾವಾಹಿಯಲ್ಲಿ ಖಳನಾಯಕಿಯಾಗಿ ನಟಿಸುವ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟ ಮೇಘಾ ಶೆಣೈ ಕುಮುದಾ ಆಗಿ ವೀಕ್ಷಕರನ್ನು ರಂಜಿಸಿದರು. ಮುಂದೆ 'ಜನುಮದ ಜೋಡಿ' ಧಾರಾವಾಹಿಯಲ್ಲಿ ಅಭಿನಯಿಸಿದ ಈಕೆ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾದರು.

Kannada tv villain Megha Shenoy become lead actress for the first time

ಕಿರುತೆರೆಯ ಮುದ್ದು ಖಳನಾಯಕಿ

ತದ ನಂತರ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ 'ಕಾವೇರಿ' ಧಾರಾವಾಹಿಯಲ್ಲಿ ಹಾಸಿನಿ ಪಾತ್ರಕ್ಕೆ ಜೀವ ತುಂಬಿದ ಮೇಘಾ ಶೆಣೈ ಅಲ್ಲೂ ಕೂಡಾ ಖಳನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. 'ಕಾವೇರಿ' ಧಾರಾವಾಹಿಯ ನಂತರ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಮಹಾದೇವಿ' ಧಾರಾವಾಹಿಯಲ್ಲಿ ಅಧಿಕಾರಿ ರಶ್ಮಿಯಾಗಿ ಮೋಡಿ ಮಾಡಿದ ಮೇಘಾ ಶೆಣೈ ಮೊದಲ ಬಾರಿಗೆ ಪಾಸಿಟಿವ್ ಪಾತ್ರದ ಮೂಲಕ ಕಿರುತೆರೆ ವೀಕ್ಷಕರಿಗೆ ಹತ್ತಿರವಾಗಿದ್ದರು.

'ರಕ್ಷಾಬಂಧನ' ಧಾರಾವಾಹಿಯಲ್ಲಿ ನಟನೆ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ರಕ್ಷಾಬಂಧನ' ಧಾರಾವಾಹಿಯಲ್ಲಿ ನಟಿಸಿದ ಈಕೆ ನಾಯಕ ಕಾರ್ತಿಕ್ ಪ್ರೇಯಸಿ ರಮ್ಯಾ ಆಗಿ ಕಾಣಿಸಿಕೊಂಡಿದ್ದರು. ನಾಯಕನನ್ನು ತನ್ನ ಪ್ರಾಣಕ್ಕಿಂತಲೂ ಜಾಸ್ತಿ ಪ್ರೀತಿಸುವಂತಹ ಪಾತ್ರ ಇದಾಗಿದ್ದು ವೀಕ್ಷಕರು ಕೂಡಾ ಪಾತ್ರವನ್ನು ಮೆಚ್ಚಿಕೊಂಡಿದ್ದರು. ಆದರೆ, ಟಿಆರ್‌ಪಿ ಕಾರಣದಿಂದ ಈ ಧಾರಾವಾಹಿ ತನ್ನ ಪ್ರಸಾರ ನಿಲ್ಲಿಸಿತ್ತು. ಸುಖಾಂತ್ಯದ ಮೂಲಕ ಧಾರಾವಾಹಿ ಮುಕ್ತಾಯಗೊಂಡಿದ್ದು ವೀಕ್ಷಕರಿಗೆ ಸಂತಸ ತಂದಿತ್ತು.

ನಟನೆ ಮೂಲಕ ಮನ ಸೆಳೆದ ಬೆಡಗಿ

'ರಕ್ಷಾಬಂಧನ' ಧಾರಾವಾಹಿಯ ನಂತರ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಆರತಿಗೊಬ್ಬ ಕೀರ್ತಿಗೊಬ್ಬ' ಧಾರಾವಾಹಿಯಲ್ಲಿ ಕೀರ್ತಿ ಆಗಿ ಕಾಣಿಸಿಕೊಂಡಿದ್ದರು ಮೇಘಾ ಶೆಣೈ. ರಗಡ್ ಲುಕ್ ಮೂಲಕ ವೀಕ್ಷಕರ ಮನ ಸೆಳೆಯುವಲ್ಲಿ ಈಕೆ ಯಶಸ್ವಿಯಾಗಿದ್ದರೂ ಮುಂದೆ ಕೊರೊನಾ ಕಾರಣದಿಂದಾಗಿ ಈ ಧಾರಾವಾಹಿ ಅರ್ಧದಲ್ಲಿಯೇ ತನ್ನ ಪ್ರಸಾರ ನಿಲ್ಲಿಸಿತ್ತು.

Kannada tv villain Megha Shenoy become lead actress for the first time

ಕರುಣಾ ಆಗಿ ಕಿರುತೆರೆಗೆ ಎಂಟ್ರಿ

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಜೀವ ಹೂವಾಗಿದೆ' ಧಾರಾವಾಹಿಯಲ್ಲಿ ನಾಯಕ ವಿಶಾಲ್‌ನನ್ನು ಪ್ರೀತಿಸುವ ಹುಡುಗಿಯಾಗಿ ಈಕೆ ಕಾಣಿಸಿಕೊಂಡಿದ್ದು ಅಲ್ಲಿಯೂ ಖಳನಾಯಕಿಯಾಗಿಯೇ ಈಕೆ ಮಿಂಚಿದ್ದರು. ಇದೀಗ ಮೊದಲ ಬಾರಿಗೆ ನಾಯಕಿಯಾಗಿ ನಟಿಸಿರುವ ಮೇಘಾ ಶೆಣೈ ಮನೋಜ್ಞ ನಟನೆಯ ಮೂಲಕ ಮನ ಸೆಳೆಯುತ್ತಿದ್ದಾರೆ.

More from Filmibeat

English summary
Kannada tv villain Megha Shenoy become lead actress for the first time
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X