twitter
    For Quick Alerts
    ALLOW NOTIFICATIONS  
    For Daily Alerts

    ತಂಬಾಕು ರಹಿತ ದಿನದ ಪ್ರಯುಕ್ತ ಕನ್ನಡ ಕಣ್ಮಣಿ ಮಕ್ಕಳಿಂದ ಬೀದಿ ನಾಟಕ

    |

    ಇಂದು ವಿಶ್ವ ತಂಬಾಕು ರಹಿತ ದಿನ. ಈ ಪ್ರಯುಕ್ತ ಜಿ ಕನ್ನಡ ವಾಹಿನಿಯೂ ಜನರಲ್ಲಿ ಜಾಗೃತಿ ಮೂಡಿಸಲು ಬೀದಿ ನಾಟಕ ಹಾಗೂ ಬೀದಿ ಭಾಷಣ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಕನ್ನಡ ಕನ್ನಡದ ಕಣ್ಮಣಿಗಳು ಕಾರ್ಯಕ್ರಮದ ಪುಟಾಣಿಗಳು ಮೊಟ್ಟ ಮೊದಲ ಬಾರಿಗೆ ಬೀದಿ ನಾಟಕವನ್ನು ಪ್ರದರ್ಶಿಸಿಸುವ ಮೂಲಕ ಜನರಲ್ಲಿ ಎಚ್ಚರಿಕೆ ಮೂಡಿಸಿದರು.

    ತಂಬಾಕು ಸೇವನೆ ಮಾಡುವುದರಿಂದ ಉಂಟಾಗುವ ತೊಂದರೆಗಳು, ಧೂಮಪಾನ ಮಾಡುವವರಷ್ಟೇ ಅಲ್ಲದೇ ಅದರ ಹೊಗೆಯನ್ನು ಸೇವಿಸುವವರ ಆರೋಗ್ಯದ ಮೇಲೆಯೂ ಯಾವ ರೀತಿ ದುಷ್ಪರಿಣಾಮ ಉಂಟಾಗುತ್ತದೆ, ಮಕ್ಕಳ ಮುಂದೆಯೇ ದೊಡ್ಡವರು ಧೂಮಪಾನ ಮಾಡುವುದು, ಇತ್ತೀಚಿನ ದಿನಗಳಲ್ಲಿ ಹೆಣ್ಣುಮಕ್ಕಳು ಸಹ ಹೆಚ್ಚಾಗಿ ಧೂಮಪಾನ ಮಾಡಲು ಆರಂಭಿಸಿದ್ದಾರೆ.

    ತಮಿಳು 'ಸರಿಗಮಪ'ಗೆ ಆಯ್ಕೆಯಾದ ಕನ್ನಡದ ಐಶ್ವರ್ಯತಮಿಳು 'ಸರಿಗಮಪ'ಗೆ ಆಯ್ಕೆಯಾದ ಕನ್ನಡದ ಐಶ್ವರ್ಯ

    ಇದರಿಂದ ಮುಂದೆ ಅವರ ಆರೋಗ್ಯ ಮೇಲಷ್ಟೇ ಅಲ್ಲದೇ, ಅವರಿಗೆ ಹುಟ್ಟುವ ಮಕ್ಕಳ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತದೆ ಎಂಬ ಸೂಕ್ಷ್ಮ ವಿಷಯಗಳನ್ನು ಬೀದಿ ನಾಟಕದ ಮೂಲಕ ಕಣ್ಣದ ಕಣ್ಮಣಿ ಮಕ್ಕಳು ತೋರ್ಪಡಿಸಿದರು.

    Kannadada Kanmanigalu childrens plaing street play for world tobaco day

    ಸರ್ಕಾರ ಮನುಷ್ಯನ ಭವಿಷ್ಯದ ಬಗ್ಗೆ ಚಿ೦ತಿಸಿ ತ೦ಬಾಕು ನಿಷೇಧವನ್ನು ಮಾಡಬೇಕಿದೆ. ಹೊಗೆ ಸೊಪ್ಪು ಬೆಳೆಯುವ ರೈತರು ಬೇರೆ ದವಸ ಧಾನ್ಯ ಬೆಳೆಯುವಂತೆ ಸರ್ಕಾರ ಪ್ರೋತ್ಸಾಹಿಸಬೇಕು. ಹೊಗೆ ಸೊಪ್ಪು ಮೇಲಿರುವ ತೆರಿಗೆಯನ್ನು ಹೆಚ್ಚಿಸಬೇಕು, ಚಟಕ್ಕೆ ಬಿದ್ದಾಗ ಆ ಕ್ಷಣಕ್ಕೆ ಕಾಣುವ ಪ್ರಪಂಚದ ಹೊರತಾಗಿ ಬೇರೆ ಸುಂದರ ಪ್ರಪಂಚ ಇದೆ ಎಂಬ ಉತ್ತಮ ಸಂದೇಶವನ್ನು ಬೀದಿ ನಾಟಕದ ಮೂಲಕ ಹೇಳಿದರು.

    ಇತ್ತೀಚಿನ ದಿನಗಳಲ್ಲಿ ವಯಸ್ಸಾದವರಿ೦ದ ಹಿಡಿದು ಹದಿಹರೆಯದವರೂ ಹೆಚ್ಚಾಗಿ ತ೦ಬಾಕು ಸೇವಿಸುತ್ತಿದ್ದಾರೆ. ಇದರಿ೦ದ ಆಗುವ ಹಾನಿ, ತೊ೦ದರೆಗಳನ್ನು ಅರ್ಥಮಾಡಿಸಿ ಈ ದಿನ ಮಾಡಿದ ಒ೦ದು ಪುಟ್ಟ ಪ್ರಯತ್ನದಿಂದ ಒಬ್ಬ ಮನುಷ್ಯ ಬದಲಾದರೂ ಸಾರ್ಥಕ ಎನ್ನುವ ಸದುದ್ದೇಶ ಜಿ ಕನ್ನಡ ವಾಹಿನಿಯದ್ದಾಗಿತ್ತು

    Kannadada Kanmanigalu childrens plaing street play for world tobaco day

    ಕನ್ನಡದ ಕಣ್ಮಣಿಗಳು ಕಾರ್ಯಕ್ರಮದ ಮೂಲಕ ಸಮಾಜದ ಓರೆ ಕೋರೆಗಳನ್ನು ಮಕ್ಕಳ ಮೂಲಕ ತಿಳಿಪಡಿಸುವ ಹಾಗೂ ಕನ್ನಡ ಭಾಷಾಭಿಮಾನವನ್ನು ಮಕ್ಕಳಲ್ಲಿ ಜಾಗೃತಗೊಳಿಸುವ ವಿನೂತನ ಕಾರ್ಯಕ್ರಮ. ಇದೇ ದಿಸೆಯಲ್ಲಿ ಮುಂದುವರೆದು ಸಾಮಾಜಿಕ ಜವಾಬ್ದಾರಿ ಹಾಗೂ ಸಮಾಜದ ಹಿತ ಬಯಸುವ ಅನೇಕ ಸಂಚಿಕೆಗಳು ಕನ್ನಡದ ಕಣ್ಮಣಿಗಳು ಕಾರ್ಯಕ್ರಮದಲ್ಲಿ ಪ್ರಸಾರಗೊಂಡಿದ್ದವು.

    Read more about: zee kannada tv ಟಿವಿ
    English summary
    Zee kannada's 'Kannadada Kanmanigalu' childrens plaing street play for world tobaco day.
    Friday, May 31, 2019, 17:31
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X